ಮಾಜಿ ಪ್ರೇಯಸಿಯ ಚಲನವಲನಗಳ ಮೇಲೆ ಕಣ್ಣಿಡಲು ಫುಡ್ ಡೆಲಿವರಿ ಆಪ್ ಬಳಸಿದ ಬೆಂಗಳೂರು ವ್ಯಕ್ತಿ
ಪ್ರೇಮ ಸಂಬಂಧ ಕಡಿದುಕೊಂಡ ಬಳಿಕ ತನ್ನ ಮಾಜಿ ಪ್ರೇಯಸಿಯ ಚಲನವಲನಗಳ ಮೇಲೆ ಕಣ್ಣೀಡಲು ಫುಡ್ ಡೆಲಿವರಿ ಅಪ್ಲಿಕೇಷನ್ ಅನ್ನೇ ವ್ಯಕ್ತಿಯೊಬ್ಬ ದುರುಪಯೋಗಪಡಿಸಿಕೊಂಡ ಕುರಿತು ವ್ಯಕ್ತಿಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು ಮೂಲದ ವೃತ್ತಿಪರರೊಬ್ಬರು ತನ್ನ ಸ್ನೇಹಿತೆಯೊಬ್ಬಳಿಗೆ ಆದ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಸ್ನೇಹಿತೆಯ ಮಾಜಿ ಬಾಯ್‌ಫ್ರೆಂಡ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈತ ತನ್ನ ಮಾಜಿ ಪ್ರೇಯಸಿ ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ ಎಂದು ತಿಳಿದುಕೊಳ್ಳಲು ಈತ ಡೆಲಿವರಿ ಆಪ್ ಅನ್ನೇ ಬಳಸಿಕೊಂಡ ವಿವರವನ್ನು ಹಂಚಿಕೊಂಡಿದ್ದಾರೆ.
ರೂಪಾಲ್ ಮಧೂಪ್ ಎಂಬವರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಆಕೆಯ ಗೆಳತಿಗೆ ಒಬ್ಬ ಲವರ್ ಇದ್ದ. ವೈಯಕ್ತಿಕ ಕಾರಣಗಳಿಂದ ಅವರಿಬ್ಬರ ಸಂಬಂಧ ಹಾಳಾಗಿತ್ತು. ಇಬ್ಬರೂ ದೂರವಾಗಿದ್ದರು. ಈಕೆ ಆತನನ್ನು ಬಿಟ್ಟರೂ ಆತ ಆಕೆಯನ್ನು ಫಾಲೋ ಮಾಡುತ್ತಿದ್ದ. ಅದು ಫುಡ್ ಡೆಲಿವರಿ ಆಪ್‌ನಲ್ಲಿ. ಆತ ಈಕೆಯ ಖಾತೆಯನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಇದರಿಂದ ಆಕೆ ಈಗ ಈ ಕ್ಷಣ ಎಲ್ಲಿದ್ದಾಳೆ (ರಿಯಲ್ ಟೈಮ್) ಇತ್ಯಾದಿ ಮಾಹಿತಿಗಳನ್ನು ಆತ ಪಡೆದುಕೊಳ್ಳುತ್ತಿದ್ದಾಳೆ. ಈ ಮೂಲಕ ಅವಲ ಚಲನವಲನಗಳ ಮೇಲ್ವಿಚಾರಣೆ ಮಾಡುತ್ತಿದ್ದ.
ತನ್ನ ತಡ ರಾತ್ರಿ ಮತ್ತು ವೀಕೆಂಡ್ ಆರ್ಡರ್‌ಗಳ ಕುರಿತು ಫುಡ್ ಡೆಲಿವರಿ ಆಪ್‌ನಿಂದ ಎನ್‌ಕ್ವಯರಿ ಆರಂಭವಾದಗ ಈಕೆಗೆ ಸಂಶಯ ಬಂತು. "ಈಕೆ ಪಿರೆಯಿಡ್ ಸಮಯದಲ್ಲಿ ಚಾಕೋಲೇಟ್ ಆರ್ಡರ್ ಮಾಡುವಾಗ ಮನೆಯಿಂದ ಏಕೆ ಆರ್ಡರ್ ಮಾಡುತ್ತಿಲ್ಲ" ಎಂಬ ರೀತಿಯ ಸಂದೇಶ ಬಂದಾಗ ಇದು ಫುಡ್ ಡೆಲಿವರಿ ಆರ್ಡರ್‌ನ ದುರುಪಯೋಗ ಎಂದು ಕಂಡುಕೊಳ್ಳಲಾಯಿತು ಎಂದು ಆಕೆ ವಿವರಿಸಿದ್ದಾರೆ.
ಈ ಪೋಸ್ಟ್‌ಗೆ ಲಿಂಕ್ಡ್‌ಇನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಹೆಚ್ಚಿನ ಟೆಕ್ ಕಂಪನಿಗಳು ಬಳಕೆದಾರರ ಡೇಟಾವನ್ನು ರಕ್ಷಿಸಲು ಕಟ್ಟುನಿಟ್ಟಾದ ಗೌಪ್ಯತೆ ನೀತಿ ಮತ್ತು ಭದ್ರತಾ ಕ್ರಮಗಳನ್ನು ಹೊಂದಿಎ. ಆಂತರಿಕ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದೆ ವೈಯಕ್ತಿಕ ಉದ್ದೇಶಗಳಿಗಾಗಿ ಗ್ರಾಹಕರ ಡೇಟಾ ಪಡೆಯಬಹುದು ಎನ್ನುವುದ ಅಸಂಭವವಾಗಿದೆ. ಬಹುತೇಕ ಇಂತಹ ಕಂಪನಿಗಳಲ್ಲಿ ಡೇಟಾ ವ್ಯವಸ್ಥೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ರೀತಿ ಎಲ್ಲಾದರೂ ಗೌಪ್ಯತೆ ಉಲ್ಲಂಘಿಸಿದರೆ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಅಂತಹ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ, ನೀವು ಹೇಳಿರುವ ಈ ಘಟನೆ ನಿಜವಾಗಿದ್ದರೆ ಆ ವ್ಯಕ್ತಿಯ ವಿರುದ್ಧ ಕಠಿಣ ಶಿಸ್ತಿನ ಕ್ರಮ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈ ಕುರಿತು ದೂರು ನೀಡುವುದು ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದು ಅಗತ್ಯವಾಗಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ, ಡೇಟಾ ವಿಭಾಗದಲ್ಲಿ ಕೆಲಸ ಮಾಡುವ ದೀಕ್ಷಾ ಸಿಂಗ್ ಎಂಬವರು ಮೇಲಿನ ವಾದ ಒಪ್ಪಿಲ್ಲ. "ಕೆಲವರಿಗೆ ಇದು ಕಾಲ್ಪನಿಕ, ಸುಳ್ಳು ಎಂದೆನಿಸಬಹುದು. ಆದರೆ, ಈ ರೀತಿ ಡೇಟಾ ಪಡೆಯುವುದು ಸಾಧ್ಯವಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಡೇಟಾ ತಂಡಗಳು ಸಾಮಾನ್ಯವಾಗಿ ಬಳಕೆದಾರರ ಚಟುವಟಿಕೆಯ ಕುರಿತು ಪ್ರವೇಶ ಹೊಂದಿವೆ" ಎಂದು ಅವರು ಹೇಳಿದ್ದಾರೆ.
ಪ್ರೇಮ ಸಂಬಂಧ ಕಡಿದುಹೋದರೂ ಆಕೆ ಏನು ಮಾಡುತ್ತಿದ್ದಾಳೆ, ಎಲ್ಲಿದ್ದಾಳೆ ಎಂದು ತಿಳಿಯಲು ಫುಡ್ ಡೆಲಿವರಿ ಆಪ್ ಅನ್ನೇ ಬಳಸಿದ ಈ ಘಟನೆ ಕುರಿತು ಸಂಬಂಧಪಟ್ಟ ಫುಡ್ ಡೆಲಿವರಿ ತಾಣಕ್ಕೆ ರಿಪೋರ್ಟ್ ಮಾಡುವುದು ಉತ್ತಮ ಎಂದು ಕೆಲವರು ಹೇಳಿದ್ದಾರೆ. ಪ್ರೇಮ ಕಡಿದುಕೊಂಡರೂ ನಾ ನಿನ್ನ ಬಿಡಲಾರೆ ಎಂದು ಫುಡ್ ಡೆಲಿವರಿ ಆಪ್ ಮೂಲಕವೇ ಆಕೆಯ ಮೇಲೆ ನಿಗಾ ಇಟ್ಟಿರುವುದು ಯಾವುದೇ ಒಟಿಟಿ ವೆಬ್ ಸರಣಿಯಂತೆ ಭಾಸವಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.