ಶಾದಿ ಸೈಟಲ್ಲಿ ನಿಮ್ಮ ಮಗಳ ಪ್ರೊಫೈಲ್ ನೋಡಿದೆ, 70 ಲಕ್ಷ ರೂ ವೇತನ ಇದೆ, ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌
ಕನ್ನಡ ಸುದ್ದಿ  /  ಕರ್ನಾಟಕ  /  ಶಾದಿ ಸೈಟಲ್ಲಿ ನಿಮ್ಮ ಮಗಳ ಪ್ರೊಫೈಲ್ ನೋಡಿದೆ, 70 ಲಕ್ಷ ರೂ ವೇತನ ಇದೆ, ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌

ಶಾದಿ ಸೈಟಲ್ಲಿ ನಿಮ್ಮ ಮಗಳ ಪ್ರೊಫೈಲ್ ನೋಡಿದೆ, 70 ಲಕ್ಷ ರೂ ವೇತನ ಇದೆ, ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌

ಬದುಕಿನ ಸಣ್ಣ ಸಣ್ಣ ಘಟನೆಗಳು ಕೆಲವೊಮ್ಮೆ ಸದಾ ನೆನಪಿಸುವಂತೆ ಮಾಡುತ್ತವೆ. ಅಂಥವುಗಳ ಪೈಕಿ ಇದೂ ಒಂದು. ಶಾದಿ ಸೈಟಲ್ಲಿ ನಿಮ್ಮ ಮಗಳ ಪ್ರೊಫೈಲ್ ನೋಡಿದೆ, 70 ಲಕ್ಷ ರೂ ವೇತನ ಇದೆ, ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌. ವಿವರ ಇಲ್ಲಿದೆ.

ಶಾದಿ ಸೈಟಲ್ಲಿ ನಿಮ್ಮ ಮಗಳ ಪ್ರೊಫೈಲ್ ನೋಡಿದೆ, 70 ಲಕ್ಷ ರೂ ವೇತನ ಇದೆ, ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌. ಯುವತಿಯ ಚಿತ್ರ ಸಾಂಕೇತಿಕವಾಗಿ ಬಳಸಲಾಗಿದೆ.
ಶಾದಿ ಸೈಟಲ್ಲಿ ನಿಮ್ಮ ಮಗಳ ಪ್ರೊಫೈಲ್ ನೋಡಿದೆ, 70 ಲಕ್ಷ ರೂ ವೇತನ ಇದೆ, ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌. ಯುವತಿಯ ಚಿತ್ರ ಸಾಂಕೇತಿಕವಾಗಿ ಬಳಸಲಾಗಿದೆ. (@Naina_2728 /Canva)

ನವದೆಹಲಿ: ಬದುಕಿನಲ್ಲಿ ಯಾವುದು ಹೆಚ್ಚು ಪ್ರಾಮುಖ್ಯ. ಜೀವನ ಸಂಗಾತಿ ಹುಡುಕುವುದೋ ಅಥವಾ ಕ್ರಿಕೆಟ್ ಮ್ಯಾಚ್ ನೋಡುವುದೋ? ಎಲ್ಲರ ಬದುಕೂ ಒಂದೇ ರೀತಿ ಇರಲ್ಲ. ಒಬ್ಬೊಬ್ಬರದ್ದು ಒಂದೊಂದು ಅಭಿರುಚಿ. ಹೀಗಾಗಿ, ಕೆಲವೊಂದು ಆದ್ಯತೆಗಳು ಬಹುಬೇಗ ಗಮನಸೆಳೆದುಬಿಡುತ್ತವೆ. ಅಂತಹ ಒಂದು ಪ್ರಸಂಗ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೀವನ ಸಂಗಾತಿಯ ಹುಡುಕಾಟದಲ್ಲಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ವೈವಾಹಿಕ ವೇದಿಕೆಯಲ್ಲಿ ಕಂಡ ಯುವತಿ ಪ್ರೊಫೈಲ್ ನೋಡಿ, ತನ್ನ ಪರಿಚಯ ಮಾಡಿಕೊಂಡು ಎಸ್‌ಎಂಎಸ್ ಒಂದನ್ನು ಕಳುಹಿಸಿದರು. ಅವರಿಗೆ ಆ ಯುವತಿಯ ತಂದೆ ಕೊಟ್ಟ ಉತ್ತರ ಈಗ ಜನಮನ ಸೆಳೆದಿದೆ. ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದು ಬಹಳ ಪ್ರಾಮುಖ್ಯ ವಿಷಯವಾಗಿರಬಹುದು. ಆದರೆ, ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಕ್ರಿಕೆಟ್ ಪಂದ್ಯವೇ ಮುಖ್ಯ. ಅದರ ಪರಿಣಾಮವೇ ಈ ಪ್ರಸಂಗ.

ನೈನಾ ಎನ್ನುವ ಯುವತಿಯೊಬ್ಬರು ಈ ಎಸ್‌ಎಂಎಸ್‌ ಸಂವಹನದ ಫೋಟೋ ತೆಗೆದು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ.

ಜೋಡಿ ಪರ್ಫೆಕ್ಟ್‌ ಎಂದ ಬೆಂಗಳೂರು ಟೆಕ್ಕಿಗೆ ಸಿಕ್ಕ ಉತ್ತರ ಈಗ ವೈರಲ್‌

ನೈನಾ ಎನ್ನುವ ಯುವತಿ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ಫೋಟೋ ಮತ್ತು ಸ್ಟೇಟಸ್ ಅಪ್ಡೇಟ್‌ ಪ್ರಕಾರ, ಆಕೆಯ ಸೋದರ ಸಂಬಂಧಿ ಯುವತಿಗೆ ವೈವಾಹಿಕ ಸಂಬಂಧ ಹುಡುಕುತ್ತಿದ್ದಾರೆ. ಮೊನ್ನೆ ಕ್ರಿಕೆಟ್ ಮ್ಯಾಚ್ ಆಗುತ್ತಿದ್ದಾಗ ಬೆಂಗಳೂರಿನ ಟೆಕ್ಕಿಯೊಬ್ಬ ಯುವತಿಯ ಪ್ರೊಫೈಲ್ ನೋಡಿ, ಅದರಲ್ಲಿದ್ದ ಫೋನ್‌ ನಂಬರ್‌ಗೆ ಸಂದೇಶ ಕಳುಹಿಸಿದ್ದ. ಅದಕ್ಕೆ ಆಕೆ ಕೊಟ್ಟ ಉತ್ತರ ಉಲ್ಲೇಖಿಸಿ, ಬದುಕಿನಲ್ಲಿ ಹೀಗೂ ಆಗುತ್ತೆ ಎಂದು ಅಂಶವಿದೆ.

"ಹಲೋ, ನಾನು ರಾಹುಲ್, ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್. ನಿಮ್ಮ ಮಗಳ ಪ್ರೊಫೈಲ್ ಅನ್ನು ಶಾದಿ ಡಾಟ್ ಕಾಮ್ (Shaadi.com) ನಲ್ಲಿ ನೋಡಿದೆ. ಪ್ರಸ್ತುತ ವರ್ಷಕ್ಕೆ 70 ಲಕ್ಷ ರೂಪಾಯಿ ವೇತನ ಇದೆ. ನಮ್ಮ ಜೋಡಿ ಹೊಂದಿಕೆಯಾಗುತ್ತೆ ಎಂದು ನಾನು ನಂಬುತ್ತೇನೆ" ಎಂಬ ಸಂದೇಶ ಫೋಟೋದಲ್ಲಿದೆ.

ಅದಕ್ಕೆ ಉತ್ತರವಾಗಿ ಅತ್ತ ಕಡೆಯಿಂದ, “ಹಲೋ ಥ್ಯಾಂಕ್ಸ್‌, ನಾನು ಪ್ರಿಯಾಂಕಾಳ ಅಪ್ಪ” ಎಂದು ಕಳುಹಿಸಿದ್ದರು. ಅದಾಗಿ ಮ್ಯಾಚ್ ಮುಗಿದ ಬಳಿಕ ಮಾತನಾಡುತ್ತೇನೆ ಎಂಬ ಸಂದೇಶವನ್ನೂ ರವಾನಿಸಿದ್ದರು.

ಕ್ರಿಕೆಟ್ ನೋಡುವಾಗ ಏನೆಲ್ಲ ಆಗುತ್ತೆ ಎಂಬುದನ್ನು ಉಲ್ಲೇಖಿಸುವ ಟ್ವೀಟ್ ಇಲ್ಲಿದೆ ನೋಡಿ

ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ನೈನಾ ಅವರು ರಾಹುಲ್ ಅವರ ಸೋದರಸಂಬಂಧಿ. ನೈನಾ ಅವ ಎಕ್ಸ್ 7.8 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 6,500ರಷ್ಟು ಮೆಚ್ಚುಗೆಯನ್ನೂ ಗಳಿಸಿದೆ. ಇದು ಎಕ್ಸ್‌ ಪ್ಲಾಟ್‌ಫಾರಂನಲ್ಲಿ ಸಂಚಲನ ಮೂಡಿಸಿದ್ದು, ಉತ್ತಮ ಚರ್ಚೆಗೆ ಒಳಗಾಗಿದೆ.

“ಅಂಕಲ್ ಅವರ ಆದ್ಯತೆಗಳು ಸ್ಪಷ್ಟವಾಗಿವೆ. ಇಂಗ್ಲೆಂಡ್ ಕೊ ಹರಾನೆ ಕೆ ಬಾದ್ ಬಾತ್ ಕರೆಂಗೆ (ಭಾರತವು ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಮಾತನಾಡಬಹುದು) ”ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಇದು 2024 ರ ಟಿ20 ವಿಶ್ವಕಪ್‌ನ ಭಾರತ vs ಇಂಗ್ಲೆಂಡ್ ಸೆಮಿಫೈನಲ್ ಅನ್ನು ಉಲ್ಲೇಖಿಸಿ, ಬರೆದಿದ್ದಾರೆ. ಅಂದು ಭಾರತವು 68 ರನ್‌ಗಳಿಂದ ಪಂದ್ಯದಲ್ಲಿ ವಿಜಯ ಸಾಧಿಸಿತ್ತು.

“ಅಂಕಲ್‌ಗೆ ಆದ್ಯತೆಗಳು ಸಿಕ್ಕಿವೆ” ಎಂದು ಮತ್ತೊಬ್ಬರು ಕಾಲೆಳೆದರೆ, “ಮದುವೆ ನಡೆಯುತ್ತಲೇ ಇರುತ್ತವೆ. ಹಾಗೆಂದು ಪಂದ್ಯಕ್ಕೆ ಯಾವುದೂ ಅಡ್ಡಿಯಾಗಬಾರದು” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಏತನ್ಮಧ್ಯೆ, ಅಜೇಯವಾಗಿ ಫೈನಲ್‌ ತಲುಪಿದ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊನ್ನೆ(ಜೂನ್‌29 ರ) ರಾತ್ರಿ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಗೆಲುವು ಸಾಧಿಸಿದೆ. ವಿಶ್ವಕಪ್ ತನ್ನದಾಗಿಸಿಕೊಂಡಿದೆ. ರಾಹುಲ್ ಮತ್ತು ಪ್ರಿಯಾಂಕಾ ಅವರ ಮದುವೆ ಸಂಬಂಧ ಏನಾಯಿತು ಎಂಬ ಅಪ್ಡೇಟ್ಸ್ ಅನ್ನು ನೈನಾ ಅವರು ಇನ್ನೂ ಕೊಟ್ಟಿಲ್ಲ.

Whats_app_banner