Viral News: ಶಾಲೆಗೆ ಹೊರಟ ಬಾಲಕಿ ಮೇಲೆ ಬಿತ್ತು ಕಾರಿನ ಕೆಸರು, ನೆಟ್ಟಿಗರ ಆಕ್ರೋಶ ಹೀಗಿತ್ತು
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಶಾಲೆಗೆ ಹೊರಟ ಬಾಲಕಿ ಮೇಲೆ ಬಿತ್ತು ಕಾರಿನ ಕೆಸರು, ನೆಟ್ಟಿಗರ ಆಕ್ರೋಶ ಹೀಗಿತ್ತು

Viral News: ಶಾಲೆಗೆ ಹೊರಟ ಬಾಲಕಿ ಮೇಲೆ ಬಿತ್ತು ಕಾರಿನ ಕೆಸರು, ನೆಟ್ಟಿಗರ ಆಕ್ರೋಶ ಹೀಗಿತ್ತು

Social Concern ಶಾಲೆಗೆ ಮಕ್ಕಳು ಹೋಗುವಾಗ ಗುಂಡಿ ಇದ್ದರೆ ವಾಹನ ಸವಾರರು ನಿಧಾನಕ್ಕೆ ಹೋಗುವುದು ಒಳ್ಳೆಯದು. ಏಕೆಂದರೆ ಎಷ್ಟೋ ಮಕ್ಕಳಿಗೆ ಕೆಸರು ಸಿಡಿದು ತೊಂದರೆಯೂ ಆಗಬಹುದು. ಇಂತಹುದ್ದೆ ಒಂದು ಫೋಟೋ ವೈರಲ್‌ ಆಗಿದೆ.

ಮಾರ್ಗಮಧ್ಯೆ ಕೆಸರು ಬಿದ್ದ ಸನ್ನಿವೇಶದಲ್ಲಿ ಬಾಲಕಿಯ ದುಃಖ
ಮಾರ್ಗಮಧ್ಯೆ ಕೆಸರು ಬಿದ್ದ ಸನ್ನಿವೇಶದಲ್ಲಿ ಬಾಲಕಿಯ ದುಃಖ

ಆಕೆ ಬೆಳ್ಳಂಬೆಳಗ್ಗೆ ಮಳೆ, ಚಳಿಯ ನಡುವೆಯೂ ಅಚ್ಚುಕಟ್ಟಾಗಿ ಶಾಲೆಗೆ ಹೊರಟಿದ್ದಳು. ಸಮವಸ್ತ್ರ ಧರಿಸಿ ಬ್ಯಾಗು ಏರಿಸಿಕೊಂಡು ಶಾಲೆಗೆ ತಲುಪುವ ಖುಷಿಯಲ್ಲಿದ್ದಳು. ಇನ್ನೇನು ಶಾಲೆ ಮುಟ್ಟುವ ಮುನ್ನ ಮಾರ್ಗಮಧ್ಯೆ ಬಂದ ವಾಹನ ಒಂದು ಹೋಗುವ ರಭಸದಲ್ಲಿ ಕೆಸರು ಚಲ್ಲಿ ಹೋದರೆ ಹೇಗಿರಬೇಡ. ಇಂತಹದೊಂದು ಸನ್ನಿವೇಶದ ಫೋಟೋ ಭಾರೀ ವೈರಲ್‌ ಆಗಿದೆ. ಇದು ಒಬ್ಬ ಯಾವುದೋ ಬಾಲಕಿ ಚಿತ್ರದಂತೆ ಕಾಣಿಸಬಹುದು. ಆದರೆ ಬಹಳಷ್ಟು ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಇಂತಹ ಸಂಕಟ ಅನುಭವಿಸಿಯೇ ಇರುತ್ತಾರೆ. ಇಂತಹ ವೇಳೆ ಅತ್ತ ಶಾಲೆಗೂ ಹೋಗದೇ ಇತ್ತ ಮನೆಗೂ ಬಾರದೇ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಶಾಲೆಗೆ ಹೋದರೆ ಕೊಳೆ ಬಟ್ಟೆ ಹಾಕಿಕೊಂಡ ಅವಮಾನ, ಮನೆಗೆ ಮರಳಿ ಹೋದರೆ ಬೈಗುಳ ತಿನ್ನುವ ಭಯ. ಮಾರ್ಗಮಧ್ಯೆದಲ್ಲೇ ಸ್ವಚ್ಚತೆ ಮಾಡಿಕೊಂಡು ಹೋಗಬೇಕು. ಆ ಹಿಂಸೆ ಯಾರಿಗೂ ಬೇಡ.

ಮಳೆಗೆ ನಮ್ಮ ರಸ್ತೆಗಳು ಗುಂಡಿಗಳಾಗುವುದು ಸಹಜ.. ಹಾಗಾಗಿ ಜಗತ್ತೇನ್ ಮುಳುಗಿ ಹೋಗಲ್ಲ.. ಕೆಸರು, ನೀರು ಇದ್ಕಡೆ ಬೈಕು, ಕಾರು ಇತ್ಯಾದಿ ವಾಹನಗಳನ್ನು ಚೂರು ಮೆಲ್ಲಗೆ ಡ್ರೈವ್ ಮಾಡಿ. ಕೆಸರನ್ನು ಸಿಡಿಸಿ ಮಗುವಿನ ಒಂದು ದಿನದ ಸ್ಕೂಲ್ ಹಾಳ್ ಮಾಡಬೇಡಿ.. ಇಂಥಹ ಸಂದರ್ಭಗಳು ಮಕ್ಕಳನ್ನು ಇನ್ನಿಲ್ಲದ ಕಡುದುಃಖಕ್ಕೆ ಈಡು ಮಾಡುತ್ತವೆ ಎನ್ನುವುದು ನಮ್ಮ ಗಮನಕ್ಕಿರಲಿ ಎಂದು ಬರಹಗಾರ ಅರುಣ್‌ ಜೋಳದಕೂಡ್ಲಿಗಿ ಫೇಸ್‌ಬುಕ್‌ನಲ್ಲಿ ಹಾಕಿರುವ ಫೋಟೋ ಒಂದು ವೈರಲ್‌ ಆಗಿದೆ.

ಈ ದುಃಖವನ್ನು ಅನುಭವಿಸಿದವರು ಮಾತ್ರವೇ ಬಲ್ಲರು. ಅವರು ನಂತರ ವಾಹನಗಳ ಗುಂಡಿಯ ಸಮೀಪ ಬರುವುದನ್ನು ಕಂಡರೆ ಮಹಾವಿಪತ್ತು ಬಂದಂತೆ ದೌಡಾಯಿಸುತ್ತಾರೆ ಎಂದು ನಾಗೇಶಬಿಡಗಲು ಎಂಬುವವರು ಪ್ರತಿಕ್ರಿಯಿಸಿದರೆ, ಕಾರ್ನಲ್ಲಿ ಹೋಗೋರಿಗೆ ಪ್ರಜ್ಞೆಯೇ ಬೇಡವೇ. ಪಾಪ ಮಗುವಿನ ಮುಖ ನೋಡಿದ್ರೆ ಶಾಲೆ ತಪ್ಪಿಹೋಯಿತೆ ಈ ದಿನ ಎನ್ನುವ ದುಃಖ ಕಾಣುತ್ತಿದೆ ಎಂದು ರಮೇಶ್‌ ಗೌಡ ಬೇಸರ ಹೊರ ಹಾಕಿದ್ದಾರೆ. ಒಂದು ಕಾರು ಮಾಲೀಕ ಅನ್ನೋ ಸೊಕ್ಕು ಮತ್ಯೊಂದೆಡೆ ಬೇಜವಾಬ್ದಾರಿತನ ಎಂದು ಸುರೇಂದ್ರ ರಾವ್‌, ಬೇಕಂತಲೇ ನೀರು ಹಾರಿಸುವ ವಿಕೃತ' ಕಾರು'ಬಾರಿಗಳೂ ಇದ್ದಾರೆ ಎಂಬುದು ಗಣೇಶ್‌ ಶೆಣೈ ಎನ್ನುವವರ ಆಕ್ರೋಶದ ನುಡಿ.

ವಾಹನ ಚಾಲಕರು ಈ ವಿಷಯದಲ್ಲಿ ಗಮನ ಹರಿಸಿದರೆ ಇಂಥಹ ಘಟನೆಗಳು ನಡೆಯಲಾರವು. ತಮ್ಮ ಮಕ್ಕಳಿಗೂ ಇಂತಹ ಪರಿಸ್ಥಿತಿ ಬಂದರೆ ಶಾಲೆಯ ಒಂದು ದಿನ ಗೈರು ಹಾಜರಾಗಬೇಕಾದ ಸಂದರ್ಭವನ್ನು ಯಾರೂ ಮರೆಯಬಾರದು ಎಂದು ಮಲ್ಲಿಕಾರ್ಜುನ ಶೆಲ್ಲಿಕೇರಿ, ಮನ ಕಲಕಿದ ಚಿತ್ರವಿದು.ಇದು ಬಹುದೊಡ್ಡ ಸಮಸ್ಯೆಯಾಗಿದೆ. ಬೈಕ್, ಆಟೋ ಹಾಗೂ ಕಾರು ಮತ್ತಿತರ ನಾಲ್ಕು ಚಕ್ರದ ವಾಹನಗಳವರು ಇಂತಹ ಸ್ಥಳಗಳಲ್ಲಿ ಪ್ರಜ್ಞೆ ಇಟ್ಟುಕೊಂಡು ಚಾಲನೆ ಮಾಡಬೇಕು. ಪಾದಚಾರಿಗಳ ಬಗ್ಗೆ ಕಾಳಜಿ ಪ್ರದರ್ಶಿಸಬೇಕು ಎಂದು ಆರ್‌.ಎಸ್.‌ ಅಯ್ಯರ್‌ ಸಲಹೆ ನೀಡಿದ್ದಾರೆ.

ಇದು ಮಗುವನ್ನು ಅವಮಾನಿಸಲು ಹಾಕಿದ ಫೋಟೋವಲ್ಲ, ಬದಲಾಗಿ ಮಕ್ಕಳನ್ನು ಈ ಸ್ಥಿತಿ ತಂದವರಿಗೆ ಚೂರು ಅರಿವಾಗಲಿ ಎಂದು ಹಾಕಿರುವ ಚಿತ್ರ. ಬರಿ ಪದ-ಅಕ್ಷರಗಳಲ್ಲಿ ಹೇಳಿದರೆ ಇದರ ಪರಿಣಾಮವನ್ನು ಹೇಳಲಾಗದ ಕಾರಣಕ್ಕೆ ಈ ಚಿತ್ರ.ಫೋಟೋಸು ಮೂಲ ಯಾರದ್ದೂ ಅಂತ ಗೊತ್ತಾಗದ ಹಾಗೆ ಹಂಚಿಕೆಯಾಗುತ್ವೆ. ಈ ಪಟವೂ ಹಾಗೆಯೇ ಹಂಚಿಕೆಯಾದದ್ದು. ನಾನೇ ತೆಗೆದ ಫೋಟೋ ಆಗಿದ್ದರೆ ಕೇಳಿ ಹಾಕುತ್ತಿದ್ದೆ ಎಂದು ಅರುಣ್‌ ಅವರು ವನಿತಾ ಎಂಬುವವರಆ ಮಗುವಿನ ಫೋಟೋ ಹಾಕಿದ್ದು ಆ ಮಗು ನೋಡಿದರೆ ಇನ್ನಷ್ಟು ದುಃಖಕ್ಕೆ ಈಡಾಗಲ್ವಾ? ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ್ದಾರೆ.

Whats_app_banner