ಕನ್ನಡ ಸುದ್ದಿ  /  ಕರ್ನಾಟಕ  /  ಚೆನ್ನೈನಿಂದ 4 ವರ್ಷ ಹಿಂದೆ ನಾಪತ್ತೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ, ಥಾಯ್ಲೆಂಡ್‌ಗೆ ಹೊರಟವ ವಲಸೆ ಅಧಿಕಾರಿಗಳ ಬಲೆಗೆ ಬಿದ್ದ

ಚೆನ್ನೈನಿಂದ 4 ವರ್ಷ ಹಿಂದೆ ನಾಪತ್ತೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ, ಥಾಯ್ಲೆಂಡ್‌ಗೆ ಹೊರಟವ ವಲಸೆ ಅಧಿಕಾರಿಗಳ ಬಲೆಗೆ ಬಿದ್ದ

ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಚೆನ್ನೈನಿಂದ 4 ವರ್ಷ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಲುಕ್‌ಔಟ್ ನೋಟಿಸ್ ಕಾರಣ ಥಾಯ್ಲೆಂಡ್‌ಗೆ ಹೊರಟವ ವಲಸೆ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ.

ಚೆನ್ನೈನಿಂದ 4 ವರ್ಷ ಹಿಂದೆ ನಾಪತ್ತೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ, ಥಾಯ್ಲೆಂಡ್‌ಗೆ ಹೊರಟವ ವಲಸೆ ಅಧಿಕಾರಿಗಳ ಬಲೆಗೆ ಬಿದ್ದ. (ಸಾಂಕೇತಿಕ ಚಿತ್ರ)
ಚೆನ್ನೈನಿಂದ 4 ವರ್ಷ ಹಿಂದೆ ನಾಪತ್ತೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ, ಥಾಯ್ಲೆಂಡ್‌ಗೆ ಹೊರಟವ ವಲಸೆ ಅಧಿಕಾರಿಗಳ ಬಲೆಗೆ ಬಿದ್ದ. (ಸಾಂಕೇತಿಕ ಚಿತ್ರ)

ಬೆಂಗಳೂರು: ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸಿ 4 ವರ್ಷದಿಂದ ಚೆನ್ನೈನಲ್ಲಿ ಕಾಣೆಯಾಗಿದ್ದ ವ್ಯಕ್ತಿ, ಮಂಗಳವಾರ (ಜುಲೈ 2) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಕಾಣಿಸಿಕೊಂಡಿದ್ದಾನೆ. ಭದ್ರತಾ ಅಧಿಕಾರಿಗಳು ವ್ಯಕ್ತಿಯನ್ನು ಗುರುತಿಸಿದ್ದು, ಆತ ವಿಮಾನವೇರದಂತೆ ತಡೆದಿದ್ದಾರೆ.

ಆ ವ್ಯಕ್ತಿ ಥಾಯ್ಲೆಂಡ್‌ನ ಫುಕೆಟ್‌ಗೆ ವಿಮಾನವೇರಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿ ಭದ್ರತಾ ತಪಾಸಣೆ ಸಂದರ್ಭದಲ್ಲಿ ವಲಸೆ ಅಧಿಕಾರಿಗಳು ಕಾಣೆಯಾದ ವ್ಯಕ್ತಿಯನ್ನು ಗುರುತಿಸಿದ್ದು, ಅವರು ವಿಮಾನವೇರದಂತೆ ತಡೆದರು. ಅಲ್ಲದೆ ನಾಪತ್ತೆ ದೂರು ದಾಖಲಾದ ಪೊಲೀಸ್ ಠಾಣೆಗೆ ವಿವರ ನೀಡಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಏನಾಯಿತು

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ವಲಸೆ ಅಧಿಕಾರಿಗಳು ಎಂದಿನಂತೆ ನಿಯತವಾಗಿ ಪ್ರಯಾಣಿಕರ ತಪಾಸಣೆ ನಡೆಸಿದ್ದರು. ಆಗ ಅಲ್ಲಿಗೆ ಬಂದ ವ್ಯಕ್ತಿಯ ತಪಾಸಣೆ ನಡೆಸುವಾಗ, ದಾಖಲೆಗಳನ್ನು ಪರಿಶೀಲಿಸಿದಾಗ ಆತ 4 ವರ್ಷ ಹಿಂದೆ ಚೆನ್ನೈನಲ್ಲಿ ಕಾಣೆಯಾದ ವ್ಯಕ್ತಿ ಎಂಬುದು ಮನದಟ್ಟಾಗಿದೆ. ಆತನ ವಿರುದ್ಧ ನಾಪತ್ತೆ ಕೇಸ್ ದಾಖಲಾಗಿದ್ದನ್ನು ಖಾತರಿಪಡಿಸಿಕೊಂಡ ಅಧಿಕಾರಿಗಳು ಆತನನ್ನು ವಿಮಾನವೇರದಂತೆ ತಡೆದರು. ಅಲ್ಲದೆ, ನಾಪತ್ತೆ ಕೇಸ್ ದಾಖಲಾಗಿರುವ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಿರು.

ಆ ವ್ಯಕ್ತಿ ಬೆಂಗಳೂರಿನಿಂದ ಥಾಯ್ಲೆಂಡ್‌ನ ಫುಕೆಟ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಅವರ ವಿರುದ್ಧ ತಮಿಳುನಾಡು ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು. ಅದು ವಲಸೆ ಅಧಿಕಾರಿಗಳಿಗೂ ತಲುಪಿದೆ. ಹೀಗಾಗಿಯೇ ಅವರನ್ನು ವಿಮಾನವೇರದಂತೆ ತಡೆಯಲಾಗಿತ್ತು.

ಏನಿದು ಪ್ರಕರಣ, ತಮಿಳುನಾಡು ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದೇಕೆ

ಆ ವ್ಯಕ್ತಿಯನ್ನು ಪೆರಂಬೂರು ನಿವಾಸಿ ಮೊಹ್ಮಮದ್ ವಾಜಿದ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಭಮಿತಾ 2020ರ ಮಾರ್ಚ್‌ 23 ರಂದು ಚೆನ್ನೈನ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಯಲ್ಲಿ ವಾಜಿದ್ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದರು. ವ್ಯವಹಾರದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ ವಾಜಿದ್ ಯಾರಿಗೂ ತಿಳಿಸದೇ ಮನೆ ತೊರೆದಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ನಾಪತ್ತೆಯಾಗಿದ್ದಾರೆ ಎಂದು ಭಮಿತಾ ದೂರಿನಲ್ಲಿ ತಿಳಿಸಿದ್ದರು. ಇದರಂತೆ, ಪೊಲೀಸರು ಈತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು.

ಬೆಂಗಳೂರು ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ವಾಜಿದ್ ಬಂಧನದ ಬಗ್ಗೆ ಚೆನ್ನೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚೆನ್ನೈ ಪೊಲೀಸರು ಬೆಂಗಳೂರಿಗೆ ಬಂದು ವಾಜಿದ್‌ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಚೆನ್ನೈಗೆ ಹಿಂದಿರುಗಿದರು.

"ಚೆನ್ನೈ ಪೊಲೀಸರು ಬೆಂಗಳೂರಿಗೆ ಬಂದು ವಾಜಿದ್ ಅವರನ್ನು ತಮ್ಮೊಂದಿಗೆ ಕರೆದೊಯ್ದರು. ವಾಜಿದ್ ತನ್ನ ಹೆಚ್ಚಿನ ಸಾಲವನ್ನು ತೀರಿಸಿದ್ದು, ಊರಿಗೆ ಮರಳಲು ಸಮಸ್ಯೆ ಎಂದು ಹೇಳಿದ್ದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)