ಕನ್ನಡ ಸುದ್ದಿ  /  ಕರ್ನಾಟಕ  /  Viral News: ಎಚ್‌ಎಸ್‌ಆರ್ ಬಡಾವಣೆಯ ಅರ್ಬನ್ ವಾಲ್ಟ್‌ ಈಗ ಎಐ ಲ್ಯಾಂಡ್ ಆಫ್ ಇಂಡಿಯಾ, ಒಂದೇ ಕಟ್ಟಡದಲ್ಲಿ 5 ಎಐ ಕಂಪನಿಗಳು

Viral News: ಎಚ್‌ಎಸ್‌ಆರ್ ಬಡಾವಣೆಯ ಅರ್ಬನ್ ವಾಲ್ಟ್‌ ಈಗ ಎಐ ಲ್ಯಾಂಡ್ ಆಫ್ ಇಂಡಿಯಾ, ಒಂದೇ ಕಟ್ಟಡದಲ್ಲಿ 5 ಎಐ ಕಂಪನಿಗಳು

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ರಾಂತಿ ಜಗತ್ತಿನ್ನಾವರಿಸಿದೆ ನಿಜ. ಇದರ ನಿಜವಾದ ಛಾಪು ಸ್ಪಷ್ಟವಾಗಿ ಕಂಡುಬಂದಿರುವುದು ಬೆಂಗಳೂರಿನಲ್ಲಿ ಅಂದ್ರೆ ಅಚ್ಚರಿ ಪಡಬೇಡಿ. ಎಚ್‌ಎಸ್‌ಆರ್ ಲೇಔಟ್‌ನ ಒಂದೇ ಬಿಲ್ಡಿಂಗ್‌ನಲ್ಲಿ 5 ಎಐ ಕಂಪನಿಗಳು ಕೆಲಸ ಮಾಡುತ್ತಿವೆ ನೋಡಿ. ಇಲ್ಲಿದೆ ಈ ಕುರಿತ ವೈರಲ್ ವರದಿ.

ಎಚ್‌ಎಸ್‌ಆರ್ ಬಡಾವಣೆಯ ಅರ್ಬನ್ ವಾಲ್ಟ್‌ ಈಗ ಎಐ ಲ್ಯಾಂಡ್ ಆಫ್ ಇಂಡಿಯಾ, ಒಂದೇ ಕಟ್ಟಡದಲ್ಲಿ 5 ಎಐ ಕಂಪನಿಗಳು
ಎಚ್‌ಎಸ್‌ಆರ್ ಬಡಾವಣೆಯ ಅರ್ಬನ್ ವಾಲ್ಟ್‌ ಈಗ ಎಐ ಲ್ಯಾಂಡ್ ಆಫ್ ಇಂಡಿಯಾ, ಒಂದೇ ಕಟ್ಟಡದಲ್ಲಿ 5 ಎಐ ಕಂಪನಿಗಳು (X/@swamikrish2001)

ಬೆಂಗಳೂರು: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಕ್ರಾಂತಿ ಭಾರತದ ಯಾವುದೇ ನಗರಕ್ಕಿಂತ ಬೆಂಗಳೂರಿನಲ್ಲೇ ಹೆಚ್ಚು ವ್ಯಕ್ತವಾದ ಛಾಪು ಮೂಡಿಸಿದೆ. ಸುಮ್ನೇ ಹೇಳ್ತಾ ಇಲ್ಲ, ಎಚ್‌ಎಸ್‌ಆರ್‌ ಲೇಔಟ್‌ನ ಅರ್ಬಲ್ ವಾಲ್ಟ್‌ ಬಿಲ್ಡಿಂಗ್ ನೋಡಿ, ಇಲ್ಲಿ ಒಂದಲ್ಲ, ಎರಡಲ್ಲ, 5 ಎಐ ನವೋದ್ಯಮಗಳು ಒಂದೇ ಕಟ್ಟಡದಲ್ಲಿವೆ! - ಇದಕ್ಕಿಂತ ವಿರಳ ಕ್ಷಣ (ಪೀಕ್ ಬೆಂಗಳೂರು ಕ್ಷಣ) ಬೇರೆ ಬೇಕಾ!

ಟ್ರೆಂಡಿಂಗ್​ ಸುದ್ದಿ

ಎಚ್‌ಎಸ್‌ಆರ್‌ ಲೇಔಟ್‌ನ ಅರ್ಬನ್ ವಾಲ್ಟ್‌ ಕಟ್ಟಡದಲ್ಲಿರುವ 5 ಎಐ ಕಂಪನಿಗಳ ಪಟ್ಟಿ ಇರುವ ಬಿಳಿ ಬೋರ್ಡ್‌ನ ಫೋಟೋ ಎಕ್ಸ್‌ನಲ್ಲಿ ಗಮನಸೆಳೆದಿದೆ. ಈ ಬಿಲ್ಡಿಂಗ್‌ನ ನೆಲಮಹಡಿಯಲ್ಲಿ ಲೂಪ್ ಎಐ, ಮೊದಲ ಮಹಡಿಯಲ್ಲಿ ಫ್ಯಾಕ್ಟರ್ಸ್ ಎಐ, ಎರಡನೇ ಮಹಡಿಯಲ್ಲಿ ರಾಗ ಎಐ, ಮೂರನೇ ಮಹಡಿಯಲ್ಲಿ ಫ್ರಿಂಕ್ಸ್ ಎಐ ಮತ್ತು ನಾಲ್ಕನೇ ಮಹಡಿಯಲ್ಲಿ ಆಕ್ಟಿವ್ ಎಐ ಕಂಪನಿಗಳು ಕಾರ್ಯಾಚರಿಸುತ್ತಿವೆ ಎಂಬುದನ್ನು ಆ ಬಿಳಿ ಬೋರ್ಡ್ ತೋರಿಸುತ್ತದೆ.

ಈ ವಿಷಯವನ್ನು ಫ್ಯಾಕ್ಟರ್ಸ್ ಎಐನ ಸಹ ಸಂಸ್ಥಾಪಕ ಶ್ರೀಕೃಷ್ಣ ಸ್ವಾಮಿನಾಥನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಎಚ್‌ಎಸ್‌ಆರ್ ವೈಬ್ಸ್ ಎಂಬ ಶೀರ್ಷಿಕೆಯನ್ನು ಕೂಡ ಕೊಟ್ಟಿದ್ದಾರೆ.

ಶ್ರೀಕೃಷ್ಣ ಸ್ವಾಮಿನಾಥನ್ ಅವರ ಎಕ್ಸ್‌ ಪೋಸ್ಟ್ ಹೀಗಿದೆ ನೋಡಿ

ಶ್ರೀಕೃಷ್ಣ ಸ್ವಾಮಿನಾಥನ್ ಅವರ ಎಕ್ಸ್‌ ಪೋಸ್ಟ್ ಮೈಕ್ರೋ ಬ್ಲಾಗಿಂಗ್‌ ಸೈಟ್‌ನಲ್ಲಿ ಬಹಳ ಸಂಚಲನ ಮೂಡಿಸಿದ್ದು, ಹಲವರು ಇದಕ್ಕೆ ಸ್ಪಂದಿಸಿದ್ದಾರೆ. ಅನೇಕರು ಕೃತಕ ಬುದ್ಧಿಮತ್ತೆಯೊಂದಿಗೆ ವ್ಯವಹರಿಸುವ ಹೊಸ ಕಂಪನಿಗಳ ಸಮೃದ್ಧಿಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

"ನಾನು ಎರಡು ಎಐ ಕಂಪನಿಗಳ ನಡುವೆ ಗೊಂದಲಕ್ಕೊಳಗಾಗಿದ್ದೇನೆ. ಇದು ಹಿಮಪಾತ" ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. "ಬಿಲ್ಡಿಂಗ್ ಎಐ ಹೇಗೆ ಕಾಣುತ್ತದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಎಐ ಲ್ಯಾಂಡ್ ಆಫ್ ಇಂಡಿಯಾ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಲೂಪ್ ಎಐನ ಸ್ಥಾಪಕ ಸದಸ್ಯರೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ಫ್ಯಾಕ್ಟರ್ಸ್ ಎಐನ ಸಹ-ಸಂಸ್ಥಾಪಕರನ್ನು ತಮ್ಮ ಕಚೇರಿಗೆ ಆಹ್ವಾನಿಸಿದ್ದಾರೆ. ಪುರಂಜಯ್ ಚಂದೇಲ್ ಸ್ವಾಮಿನಾಥನ್ ಅವರಿಗೆ, "ನಾನು ಸ್ವಲ್ಪ ಸಮಯದ ನಂತರ ನೆಲಮಹಡಿಗೆ ಬರುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಓಪನ್ಎಐ ಚಾಟ್‌ಜಿಪಿಟಿ ಎಂಬ ಎಐ ಚಾಟ್‌ಬಾಟ್‌ ಅನ್ನು ಪ್ರಾರಂಭಿಸುವ ಮೂಲಕ ಎಐ ಕ್ರಾಂತಿ ಶುರುವಾಯಿತು. ಇದು ಮಾಹಿತಿ ತಂತ್ರಜ್ಞಾನ ಜಗತ್ತಲ್ಲಿ ಬಿರುಗಾಳಿ ಎಬ್ಬಿಸಿತು. ತೀರಾ ಇತ್ತೀಚೆಗೆ, ಕ್ಯಾನ್ವಾದ ವಾರ್ಷಿಕ ದೃಶ್ಯ ಆರ್ಥಿಕ ವರದಿಯು ಭಾರತದಲ್ಲಿ 10 ರಲ್ಲಿ 9 ವ್ಯವಹಾರಗಳು ತಮ್ಮ ಕೆಲಸದ ಹರಿವಿನಲ್ಲಿ ಎಐ ಅನ್ನು ಸಂಯೋಜಿಸುತ್ತಿವೆ ಎಂಬುದನ್ನು ಸೂಚಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು.