Mangaluru Water Metro: ವಾಟರ್ ಮೆಟ್ರೋ ಯೋಜನೆ: 2026ಕ್ಕೆ ಮಂಗಳೂರಲ್ಲಿ ಜಲಸಾರಿಗೆ ಆರಂಭವಾಗುವ ನಿರೀಕ್ಷೆ
Mangaluru Water Metro: ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರಲ್ಲಿ ಯಾವುದಾದರೂ ಒಂದು ತಿಂಗಳು ಕಡಲತಡಿಯ ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಘೋಷಣೆ ಮಾಡಿದ್ದರು.(ವರದಿ - ಹರೀಶ್ ಮಾಂಬಾಡಿ, ಮಂಗಳೂರು)

Mangaluru Water Metro: ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಟರ್ ಮೆಟ್ರೊ ಆರಂಭಿಸುವ ಘೋಷಣೆಯನ್ನು ಮಾಡಿದ ಮೇಲೆ ಈ ಕುರಿತು ಎದ್ದಿರುವ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರಲ್ಲಿ ಯಾವುದಾದರೂ ಒಂದು ತಿಂಗಳು ಕಡಲತಡಿಯ ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಬೆಳೆಯುತ್ತಿರುವ ಮಂಗಳೂರಿನ ಸಾರಿಗೆ ನಿಯಂತ್ರಣಕ್ಕೂ ಇದು ಸಹಕಾರಿಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ವಾಟರ್ ಮೆಟ್ರೋ ಜೊತೆಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಯೋಜನೆಯನ್ನು ಘೋಷಿಸಿದ್ದಾರೆ. ಸಮುದ್ರ ಮತ್ತು ರಾಷ್ಟ್ರೀಯ ಜಲಮಾರ್ಗಗಳಲ್ಲಿ ಸರಕು ಮತ್ತು ಪ್ರಯಾಣಿಕರ ಚಲನೆ ಉತ್ತೇಜಿಸುವ ಕೋಸ್ಟಲ್ ಬರ್ತ್ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿನ ಹೊನ್ನಾವರ ಬಳಿಯ ಮಂಕಿಯಲ್ಲಿ ಬಂದರು ನಿರ್ಮಾಣ ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕೃಷಿ ಪ್ರವಾಸೋದ್ಯಮಕ್ಕೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ
ಹೀಗಾಗಿ ಕರ್ನಾಟಕದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿಯಾಗುವ ಸಾಧ್ಯತೆಗಳಿವೆ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಈಗಾಗಲೇ ಕರ್ನಾಟಕ ಜಲ ಸಾರಿಗೆ ನೀತಿಗೆ ಮಂಜೂರಾತಿಯನ್ನು ನೀಡಲಾಗಿದೆ ಕರಾವಳಿಯಲ್ಲಿ ವ್ಯವಸ್ಥಿತ ಮೂಲಸೌಕರ್ಯ ತರಲು ಸರಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ತನ್ನ ಬಜೆಟ್ ಭಾಷಣದಲ್ಲಿ ಹೇಳಿದ್ದರು.
ಭಾರತದ ಮೊದಲ ವಾಟರ್ ಮೆಟ್ರೋ ಕೊಚ್ಚಿನ್
ಕೇರಳ ರಾಜ್ಯದ ಕೊಚ್ಚಿನ್ ಭಾರತದ ಮೊದಲ ವಾಟರ್ ಮೆಟ್ರೋ ಹೊಂದಿರುವ ನಗರವಾಗಿದೆ 2023ರ ಏಪ್ರಿಲ್ 25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದ್ದರು ಕೊಚ್ಚಿ ಜಲಸಾರಿಗೆಯಲ್ಲಿ 78 ಬೋಟ್ ವಾಟರ್ ಮೆಟ್ರೋ ಟರ್ಮಿನಲ್ ಒಳಗೊಂಡಿದ್ದು, ಕೊಚ್ಚಿಯನ್ನು ಆವರಿಸಿರುವ ವೆಂಬನಾಡ್ ಸರೋವರದಲ್ಲಿ ಬರುವ 10 ದ್ವೀಪಗಳನ್ನು ಇದು ಕನೆಕ್ಟ್ ಮಾಡಲಿದೆ. ಒಟ್ಟು 76 ಕಿಲೋಮೀಟರ್ ಉದ್ದಕ್ಕೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಏರ್ ಕಂಡೀಶನ್ ಇರುವ ಈ ಮೆಟ್ರೋ ಸಾರಿಗೆಯು ಕೊಚ್ಚಿ ಮೆಟ್ರೋ ರೈಲು ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು ಬಸ್ ಟರ್ಮಿನಲ್ ಮೆಟ್ರೋ ನೆಟ್‌ವರ್ಕ್ ಮತ್ತು ರೈಲ್ವೆ ಜೊತೆ ಕನೆಕ್ಟ್ ಆಗುವಂತಿದೆ ಕೊಚ್ಚಿ ವಾಟರ್ ಮೆಟ್ರೋದಲ್ಲಿ 100 ಮತ್ತು 50 ಜನರ ಸಾಮರ್ಥ್ಯದ ಎರಡು ಮಾದರಿಯ ಪ್ಯಾಸೆಂಜರ್ ಬೋಟ್ ಅನ್ನು ಅಳವಡಿಸಲಾಗಿದೆ.
ಮಂಗಳೂರಿನ ದಟ್ಟಣೆ ತಪ್ಪಲಿದೆ
ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸ್ಟೇಷನ್ ಸ್ಥಾಪನೆಗೆ ಬೇಕಾದ ಜಾಗ ಕುರಿತು ಸರ್ವೆ ನಡೆಯಬೇಕಾಗಿದೆ. ವಾಟರ್ ಮೆಟ್ರೋ ಸಾರಿಗೆಯಿಂದ ಮಂಗಳೂರಿನ ಹಳೆ ಮೀನುಗಾರಿಕಾ ಬಂದರು ರಸ್ತೆಯಲ್ಲಿ ಅತಿಯಾದ ದಟ್ಟಣೆ ತಪ್ಪಲಿದೆ ಎಂದು ನಂಬಲಾಗಿದೆ. ಸರಕು ಸಾಗಾಣಿಕೆಗಾಗಿ ರೋರು ಸೇವೆಗಳನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ ಎಂಬ ಲೆಕ್ಕಾಚಾರ ಇದೆ ಪ್ರಯಾಣಿಕರ ಸೇವೆ ಮಾದರಿಯಲ್ಲಿಯೇ ಸರಕು ಸಾಗಾಣಿಯ ಉದ್ದೇಶಕ್ಕೂ ಜಲ ಸಾರಿಗೆ ಎಂದು ಬಳಸಿಕೊಳ್ಳುವ ಬಗ್ಗೆ ಚಿಂತನೆಗಳಿವೆ. ಮುಂದಿನ 25 ವರ್ಷಗಳಲ್ಲಿ ಮಂಗಳೂರು ನಗರದ ಬೆಳವಣಿಗೆಯ ಸಾಧ್ಯತೆ ಮತ್ತು ಬೇಡಿಕೆ ಆಧರಿಸಿ ಎಲ್ಲಿ ಸ್ಟೇಷನ್ ಮಾಡಿದರೆ ಒಳ್ಳೆಯದೋ ಅಲ್ಲಿ ಮೆಟ್ರೋ ಸ್ಟೇಷನ್ ನ ಮಾಡುವ ಬಗ್ಗೆ ಸರ್ವೆ ನಡೆಯಲಿದೆ
ಹಾಗೆ ನೋಡಿದರೆ ನೇತ್ರಾವತಿಯಿಂದ ಪಲ್ಗುಣಿ ನದಿಯ ಮರವುರುವರೆಗೆ 30 ಕಿಲೋಮೀಟರ್ ದೂರ ಇದೆ ಸಮುದ್ರದ ಹಿನ್ನಿರಿನಿಂದಾಗಿ ಅಂದರೆ ಸಮುದ್ರದ ಬ್ಯಾಕ್ ವಾಟರ್ ಇಂದಾಗಿ ವರ್ಷಪೂರ್ತಿ ನೀರು ಇರುತ್ತದೆ ಹೀಗಾಗಿ ಬಜಾಜ್ ಪ್ರದೇಶದಿಂದ ತೊಡಗಿ ನೇತ್ರಾವತಿ ನದಿ ಆಗಿ ಬೆಂಗ್ರೆ ಅಳಿವಿನ ಬಾಗಿಲು ಬೇಳೂರು ಸುಲ್ತಾನ್ ಬತ್ತೇರಿ ಕೂಳೂರು ಮರ ಊರು ಗುರುಪುರದವರೆಗೆ ಇಡೀ ಮಂಗಳೂರು ನಗರವನ್ನು ಸುತ್ತು ಹಾಕುವಂತೆ ಜಲ ಸಾರಿಗೆ ತರುವುದಕ್ಕೆ ಪ್ರಸ್ತಾಪ ಮಾಡಲಾಗಿದೆ ಇದರ ಮಧ್ಯೆ 17 ಕಡೆ ಮೆಟ್ರೋ ಸ್ಟೇಷನ್ ಮಾದರಿಯಲ್ಲಿ ಬೋಟ್ ನಿಂದ ಇಳಿದು ಹತ್ತುವುದಕ್ಕೆ ಹಾದಿಯುವುದಕ್ಕೂ ನಿಲ್ದಾಣ ನಿರ್ಮಿಸಲಾಗುವ ಚಿಂತನೆ ಇದೆ.
ವರದಿ - ಹರೀಶ್ ಮಾಂಬಾಡಿ, ಮಂಗಳೂರು