ಕನ್ನಡ ಸುದ್ದಿ  /  Karnataka  /  Weather Forecast Upto March 24 Rain Forecast For The Next 2 3 Days In Various Parts Of Karnataka Imd Predictions Uks

ಕರ್ನಾಟಕ ಹವಾಮಾನ: ಮುಂದಿನ 2-3 ದಿನ ಕರ್ನಾಟಕದ ವಿವಿಧೆಡೆ ಮಳೆ ಮುನ್ಸೂಚನೆ, ಯಾವೆಲ್ಲ ಜಿಲ್ಲೆಯಲ್ಲಿ ಇಲ್ಲಿದೆ ವಿವರ

ಕರ್ನಾಟಕ ಹವಾಮಾನ: ಬಿಸಿಲ ಬೇಗೆಯಲ್ಲಿ ಮಿಂದೇಳುತ್ತಿರುವ ಕರ್ನಾಟಕಕ್ಕೆ ತುಸು ನೆಮ್ಮದಿಯ ವಿಚಾರ. ವಿವಿಧೆಡೆ ತಾಪಮಾನ ಇಳಿಕೆಯಾಗುತ್ತಿದ್ದು, ಮುಂದಿನ 2-3 ದಿನ ಕರ್ನಾಟಕದ ವಿವಿಧೆಡೆ ಮಳೆ ಮುನ್ಸೂಚನೆ ನೀಡಿದೆ ಭಾರತದ ಹವಾಮಾನ ಇಲಾಖೆ. ಯಾವೆಲ್ಲ ಜಿಲ್ಲೆಯಲ್ಲಿ, ಎಲ್ಲೆಲ್ಲಿ ಮಳೆ ಎಂಬುದರ ವಿವರ ಇಲ್ಲಿದೆ.

ಕರ್ನಾಟಕ ಹವಾಮಾನ: ಮುಂದಿನ 2-3 ದಿನ ಕರ್ನಾಟಕದ ವಿವಿಧೆಡೆ ಮಳೆ ಮುನ್ಸೂಚನೆ
ಕರ್ನಾಟಕ ಹವಾಮಾನ: ಮುಂದಿನ 2-3 ದಿನ ಕರ್ನಾಟಕದ ವಿವಿಧೆಡೆ ಮಳೆ ಮುನ್ಸೂಚನೆ (IMD)

ಬೆಂಗಳೂರು: ಕರ್ನಾಟಕದ ವಿವಿಧೆಡೆ ಇನ್ನು 2-3 ದಿನ ವಿವಿಧೆಡೆ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಒಂದೆರಡು ಕಡೆ ಮಳೆ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಭಾನುವಾರ (ಮಾರ್ಚ್ 17) ಮಳೆಯಾಗಿತ್ತು. ಭಾನುವಾರ ಬೀದರ್ ಮತ್ತು ಕಲಬುರಗಿಯಲ್ಲಿ ಮಳೆಯಾಗಿದ್ದು, ಸೋಮವಾರ ಬೀದರ್‌ನಲ್ಲಿ ಮಳೆ ಮುಂದುವರಿದಿದೆ. ಮುಂದಿನ 2-3 ದಿನ ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡಿನ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾಗಿರುವ ಮಳೆ ಇದಾಗಿದ್ದು, ಕರ್ನಾಟಕದ ವಿವಿಧ ಪ್ರದೇಶದ ಮೇಲೆ ಮಳೆ ಸುರಿಯುವಂತೆ ಮಾಡಿದೆ. ಹೀಗಾಗಿ ದಕ್ಷಿಣ ಒಳನಾಡು ಮತ್ತು ಮಲೆನಾಡು ಇತರ ಪ್ರದೇಶಗಳಲ್ಲಿ ಮಳೆಯಾಗುವ ಸಂಭವ ಇದೆ ಎಂದು ವರದಿ ಹೇಳಿದೆ.

ಉತ್ತರ ಒಳನಾಡಿನ ಬೀದರ್, ಕೊಪ್ಪಳ, ರಾಯಚೂರುಗಳಲ್ಲಿ ಮಳೆ

ಕರ್ನಾಟಕದ ಉತ್ತರ ಒಳನಾಡಿನ ಕಲಬುರಗಿಯಲ್ಲಿ ಒಂದೆರಡು ಕಡೆ ಭಾನುವಾರ ಮಳೆಯಾಗಿತ್ತು. ಅದು ಬಿಟ್ಟರೆ ಬೀದರ್‌ನಲ್ಲಿ ಭಾನುವಾರ ಶುರುವಾದ ಮಳೆ ಇಂದು ಕೂಡ ಮುಂದುವರದಿದೆ. ನಾಳೆಯೂ ಮಳೆ ಬೀಳಲಿದೆ. ಇನ್ನುಳಿದಂತೆ, ಕೊಪ್ಪಳದಲ್ಲಿ ನಾಳೆ ಮತ್ತು ನಾಡಿದ್ದು (ಮಾರ್ಚ್ 21), ರಾಯಚೂರಿನಲ್ಲಿ ನಾಳೆ (ಮಾರ್ಚ್ 20) ಮಳೆ ಬೀಳಲಿದೆ ಎಂದು ವರದಿ ಹೇಳಿದೆ.

ಇನ್ನುಳಿದಂತೆ ವಾರ ಪೂರ್ತಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಒಣಹವೆ ಮುಂದುವರಿಯಲಿದೆ. ಇಲ್ಲೆಲ್ಲ ಸಾಮಾನ್ಯ ಉಷ್ಣಾಂಶ ಮಳೆಬಿದ್ದ ಕಡೆ ಕಡಿಮೆಯಾದರೂ, ಉಳಿದ ಕೆಲವು ಕಡೆಗೆ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಶಿಯಸ್ ತನಕ ಹೆಚ್ಚಾಗಲಿದೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಒಂದರಡು ಕಡೆಗಳಲ್ಲಿ ಮಾರ್ಚ್‌ 22ರಂದು ಮಳೆ ಬೀಳಲಿದೆ. ಈ ಪೈಕಿ ದಕ್ಷಿಣ ಕನ್ನಡದಲ್ಲಿ ಮಾರ್ಚ್ 22, 23, 24ರಂದು ಒಂದೆರಡು ಕಡೆ ಮಳೆ ಬೀಳಲಿದೆ. ಉಡುಪಿಯಲ್ಲಿ ಮಾರ್ಚ್ 22, 23ರಂದು ಮಳೆ ಬೀಳಲಿದೆ. ಇನ್ನೊಂದೆಡೆ ತಾಪಮಾನ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರಗಳ ಒಂದೆರಡು ಕಡೆಗಳಲ್ಲಿ ಮಾರ್ಚ್ 21ರಂದು ಮಳೆ ಬೀಳುವ ನಿರೀಕ್ಷೆ ಇದೆ. ಮಾರನೇ ದಿನ ಬಳ್ಳಾರಿ, ಚಿಕ್ಕಬಳ್ಳಾಪುರ, ವಿಜಯನಗರ ಬಿಟ್ಟು ಉಳಿದೆಡೆ ಮಳೆ ಇರಲಿದೆ. ಮಾರ್ಚ್ 23 ರಂದು ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು, ಮಾರ್ಚ್ 24ರಂದು ಚಿಕ್ಕಮಗಳೂರು, ಹಾಸನಗಳಲ್ಲಿ ಮಾತ್ರವೇ ಮಳೆ ಬೀಳಲಿದೆ ಎಂದು ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point