Karnataka Weather Today: ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಮುಂದಿನ 24 ಗಂಟೆಗಳು ರಾಜ್ಯದ ಹವಾಮಾನ ಹೇಗಿರಲಿದೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather Today: ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಮುಂದಿನ 24 ಗಂಟೆಗಳು ರಾಜ್ಯದ ಹವಾಮಾನ ಹೇಗಿರಲಿದೆ? ಇಲ್ಲಿದೆ ಮಾಹಿತಿ

Karnataka Weather Today: ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಮುಂದಿನ 24 ಗಂಟೆಗಳು ರಾಜ್ಯದ ಹವಾಮಾನ ಹೇಗಿರಲಿದೆ? ಇಲ್ಲಿದೆ ಮಾಹಿತಿ

Karnataka Weather Today: ಕರ್ನಾಟಕದ ಬಹುತೇಕ ಕಡೆ ಫೆ 10 ರಂದು ಒಣಹವೆ ಇತ್ತು. ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕೆಲವೆಡೆ ಮಂಜು ಮುಸುಕುವ ವಾತಾವರಣವಿರಲಿದೆ.

ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಫೆಬ್ರವರಿ 11ರ ಹವಾಮಾನ ವರದಿ
ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಫೆಬ್ರವರಿ 11ರ ಹವಾಮಾನ ವರದಿ (PC: Unsplash)

ಬೆಂಗಳೂರು: ಭಾನುವಾರ, ಜನರು ವೀಕೆಂಡ್‌ ಮೂಡ್‌ನಲ್ಲಿದ್ಧಾರೆ. ತಮ್ಮ ಪ್ರೀತಿ ಪಾತ್ರರೊಂದಿಗೆ ಟ್ರಿಪ್‌ ಮಾಡಲು ಸಿದ್ಧರಾಗಿದ್ದಾರೆ. ಕೆಲವರಿಗೆ ಶನಿವಾರವೂ ರಜೆ ಇರುವುದರಿಂದ 2 ದಿನಗಳ ಪ್ರವಾಸ ಎಂಜಾಯ್‌ ಮಾಡುತ್ತಿದ್ದಾರೆ. ಮಾಘ ಮಾಸದ ಚಳಿಯೊಂದಿಗೆ ಬಿಸಿಲಿನ ಅನುಭವದೊಂದಿಗೆ ಜನರು ಬೇಸಿಗೆ ಎದುರಿಸಲು ಸನ್ನದ್ಧರಾಗಿದ್ದಾರೆ. ಈ ಮಧ್ಯೆ ಕರ್ನಾಟಕ ಹವಾಮಾನ ವರದಿ ಹೇಗಿದೆ ನೋಡೋಣ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯಾದ್ಯಂತ ಒಣ ಹವೆ

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಫೆಬ್ರವರಿ 10, ಶನಿವಾರ ರಾಜ್ಯಾದ್ಯಂತ ಒಣಹವೆ ಇತ್ತು. ಯಾವುದೇ ಮಳೆಯ ಪ್ರಮಾಣ ವರದಿಯಾಗಿಲ್ಲ. ಕರಾವಳಿ ಒಳನಾಡಿನ ಬಹುತೇಕ ಕಡೆಗಳಲ್ಲಿ ಕನಿಷ್ಠ ಉಷ್ಣಾಂಶ -2.0 ಡಿಗ್ರಿ ಸೆಲ್ಸಿಯಸ್‌ನಿಂದ +2.0 ಡಿಸೆಲ್ಸಿಯಸ್‌ವರೆಗೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ (2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿಅತಿ ಕಡಿಮೆ ಕನಿಷ್ಠ ಉಷ್ಣಾಂಶ 14.6 ಡಿಗ್ರಿ ಸೆಲ್ಸಿಯಸ್‌ ಮಂಡ್ಯದಲ್ಲಿ ದಾಖಲಾಗಿದೆ.

ಫೆ 12 ವರೆಗೆ ಮಳೆಯ ಮುನ್ಸೂಚನೆ

ಫೆ 12 ಹಾಗೂ ಮುಂದಿನ 48 ಗಂಟೆಗಳ ಕಾಲ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಗುಡುಗು ಮುನ್ನೆಚರಿಕೆ ಆಗಲೀ, ಮಳೆಯ ಮುನ್ಸೂಚನೆ ಆಗಲೀ, ಮೀನುಗಾರರಿಗೆ ಯಾವುದೇ ಮುನ್ಸೂಚನೆ ನೀಡಲಾಗಿಲ್ಲ. ಒಳನಾಡಿನ ಹಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.

ಫೆ 12 ಬೆಂಗಳೂರು, ಸುತ್ತಮುತ್ತಲಿನ ಹವಾಮಾನ ಹೇಗಿರಲಿದೆ?

ಫೆ 12 ಹಾಗೂ ಮುಂದಿನ 48 ಗಂಟೆಗಳು ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತವೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಇರುವ ಬಹಳಷ್ಟು ಸಾಧ್ಯತೆಗಳಿವೆ.

Whats_app_banner