Karnataka Weather: ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ; ಮುಂದಿನ 24 ಗಂಟೆಗಳಲ್ಲಿ ಒಣಹವೆ ಸಾಧ್ಯತೆ
Karnataka Weather: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಜೊತೆಗೆ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ. ಅತಿ ಕಡಿಮೆ ಕನಿಷ್ಠ ಉಷ್ಣಾಂಶ 13.4 ಡಿಗ್ರಿ ಸೆಲ್ಸಿಯಸ್ ವಿಜಯಪುರದಲ್ಲಿ ದಾಖಲಾಗಿದೆ.
ಬೆಂಗಳೂರು: ಇಂದು ಹೊಸ ವರ್ಷದ ಮೊದಲ ತಿಂಗಳ ಕೊನೆಯ ದಿನ. ಜನವರಿ ಕಳೆದು ಫೆಬ್ರವರಿಗೆ ಕಾಲಿಡುತ್ತಿದ್ದೇವೆ. ಚಳಿಗಾಲ ಕಳೆದು ಬೇಸಿಗೆಯ ಆಗಮನವಾಗುತ್ತಿದೆ. ರಾಜ್ಯದ ಕೆಲವೇ ಕೆಲವು ಕಡೆ ಬೆಳಗಿನ ಜಾವ ಚಳಿಯ ಅನುಭವ ಆಗುತ್ತಿದೆ. ಆದರೆ ಬೆಳಗ್ಗೆ 10 ಗಂಟೆ ಕಳೆಯುತ್ತಿದ್ದಂತೆ ಸೆಕೆಯೂ ಶುರುವಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಕಳೆದ 24 ಗಂಟೆಗಳು ಹಾಗೂ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹವಾಮಾನ ಈ ರೀತಿ ಇದೆ.
ಜನವರಿ 30, ಮಂಗಳವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ಎಲ್ಲಿಯೂ ಮಳೆಯಾದ ವರದಿ ಆಗಿಲ್ಲ. ಮಂಗಳವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿಸೆಗೆ ಗಮನಾರ್ಹವಾಗಿ ಇಳಿಕೆ. ಕರಾವಳಿ ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ 2.1 ಡಿ.ಸೆ. ನಿಂದ 4.0 ಡಿ.ಸೆಗೆ ಗಮನಾರ್ಹವಾಗಿ ಏರಿಕೆ ಆಗಿದೆ. ಹಾಗೇ ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿ ಅತಿ ಕಡಿಮೆ ಕನಿಷ್ಠ ಉಷ್ಣಾಂಶ 13.4 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.
ಫೆಬ್ರವರಿ 1ರ ಹವಾಮಾನ ವರದಿ
ಫೆಬ್ರವರಿ 1 ಹಾಗೂ 2 ರಂದು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ. ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳು ಮಳೆಯ ಮುನ್ಸೂಚನೆ ಅಥವಾ ಗುಡುಗು ಮುನ್ನೆಚರಿಕೆ ನೀಡಿಲ್ಲ. ಮೀನುಗಾರರಿಗೆ ಕೂಡಾ ಯಾವುದೇ ರೀತಿ ಮುನ್ನೆಚರಿಕೆ ನೀಡಿಲ್ಲ.
ಬೆಂಗಳೂರು ಹವಾಮಾನ
ಮುಂದಿನ 24 ಗಂಟೆಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜುಮುಸುಕುವ ಬಹಳಷ್ಟು ಸಾಧ್ಯತೆಗಳಿರುತುದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಲಿಯಸ್ ಇರುವ ಸಾಧ್ಯತೆಗಳಿವೆ.