ಕರ್ನಾಟಕ ಹವಾಮಾನ: ಇಂದು ಬೆಂಗಳೂರು, ಮೈಸೂರು, ಬೀದರ್ ಭಾಗದಲ್ಲಿ ಚಳಿ ಹೆಚ್ಚಳ, ರಾಜ್ಯದಲ್ಲಿ ಒಣಹವೆ
Karnataka Weather: ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇಂದು (ಜನವರಿ 22) ಒಣಹವೆ ಇರಲಿದೆ. ಉಳಿದಂತೆ ಇಂದು ಬೆಂಗಳೂರು, ಮೈಸೂರು, ಬೀದರ್ ಭಾಗದಲ್ಲಿ ಚಳಿ ಹೆಚ್ಚಳವಾಗಲಿದ್ದು, ಕರ್ನಾಟಕ ಹವಾಮಾನದ ವಿವರ ಹೀಗಿದೆ.

Karnataka Weather: ಕರ್ನಾಟಕದಲ್ಲಿ ಇಂದು (ಜನವರಿ 22) ಬಹುತೇಕ ಒಣಹವೆ ಇರಲಿದ್ದು, ಚಳಿಗಾಲದ ಚಳಿ ಕಂಡುಬರಲಿದೆ. ಕರಾವಳಿಯಲ್ಲಿ ಕನಿಷ್ಠ ತಾಪಮಾನ ಸಹಜವಾಗಿದ್ದು, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಹಲವೆಡೆ ಕನಿಷ್ಥ ತಾಪಮಾನ ಇಳಿಕೆಯಾಗಿದ್ದು, ಅಂತಹ ಪ್ರದೇಶಗಳಲ್ಲಿ ರಾತ್ರಿ ಮತ್ತು ಮುಂಜಾನೆ ವೇಳೆ ಚಳಿ ಕಾಡಲಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಮತ್ತು ಇಬ್ಬನಿ ಹನಿಯಲಿದೆ. ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದ್ದು, ಚಳಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ಜನವರಿ 21) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಕರ್ನಾಟಕ ಹವಾಮಾನ ಇಂದು; ಒಣಹವೆ, ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಕೆ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ಜನವರಿ 21) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ಇಂದು (ಜನವರಿ 22) ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹಜ ವಾತಾವರಣ ಇರಲಿದೆ. ಒಣಹವೆ ಮುಂದುವರಿಯಲಿದೆ.
ಇನ್ನು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಆದಾಗ್ಯೂ, ಜನವರಿ 27ರ ತನಕ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವಿವಿಧೆಡೆ ಮಂಜು ಕವಿದ ವಾತಾವರಣ ಮತ್ತು ಇಬ್ಬನಿ ಹನಿಯುವ ಸಾಧ್ಯತೆ ಇದೆ. ಬೀದರ್, ಬಾಗಲಕೋಟೆ, ಬಾದಾಮಿ, ಧಾರವಾಡ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆ ಇದ್ದು ಚಳಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳಿದೆ.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಕೂಡ ಕನಿಷ್ಠ ತಾಪಮಾನದಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಆದಾಗ್ಯೂ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಮಡಿಕೇರಿ, ಮಂಡ್ಯ, ಚಿಕ್ಕಮಗಳೂರು ಭಾಗಗಳಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆ ಇದ್ದು ಚಳಿ ಹೆಚ್ಚು ಇರಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಬೆಂಗಳೂರು ಸೇರಿ ನಗರಗಳಲ್ಲಿ ಇಂದಿನ ತಾಪಮಾನ (ಬೆಳಗ್ಗೆ 6 ಗಂಟೆಗೆ) ಮತ್ತು ಆರ್ದ್ರತೆಯ ಮಟ್ಟ
ಬೆಂಗಳೂರು ನಗರ - ತಾಪಮಾನ 17 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 90
ಮಂಗಳೂರು - ತಾಪಮಾನ 22 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 88
ಚಿತ್ರದುರ್ಗ- ತಾಪಮಾನ 28 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 30
ಗದಗ - ತಾಪಮಾನ 15 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 60
ಹೊನ್ನಾವರ- ತಾಪಮಾನ 21.4ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 84
ಕಲಬುರಗಿ - ತಾಪಮಾನ 19.6 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 50
ಬೆಳಗಾವಿ - ತಾಪಮಾನ 20 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 56
ಕಾರವಾರ -ತಾಪಮಾನ 35.6 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 38
ಬೆಂಗಳೂರು ಹವಾಮಾನ ಇಂದು; ಬೆಂಗಳೂರು ನಗರ, ಜಿಕೆವಿಕೆ ಭಾಗದಲ್ಲಿ ಕನಿಷ್ಠ ತಾಪಮಾನ ಇಳಿಕೆ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗಿದ್ದು, ರಾತ್ರಿ ವೇಳೆ ಚಳಿ ಹೆಚ್ಚು ಇರಲಿದೆ. ಒಳನಾಡಲ್ಲಿ ವಿಶೇಷವಾಗಿ ಜಲಾಶಯಗಳು ಇರುವ ಭಾಗದಲ್ಲಿ ಚಳಿ ಹೆಚ್ಚಾಗಲಿದ್ದು, ಮುಂಜಾನೆ ಮಂಜು, ಇಬ್ಬನಿ ಹನಿಯಲಿದೆ. ಬೆಂಗಳೂರು ನಗರ, ಜಿಕೆವಿಕೆ ಭಾಗದಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ಇಂದು (ಜನವರಿ 22) ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್ ಆಗಿರಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ಜನವರಿ 21) ಅಪರಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
