ಕನ್ನಡ ಸುದ್ದಿ  /  Karnataka  /  Weather Today March 27 Rainfall Forecast No Rain Till March 30 Bengaluru Weather Today Imd Weather Report Uks

ಕರ್ನಾಟಕ ಹವಾಮಾನ ಮಾರ್ಚ್ 27; ಇನ್ನು ಮೂರು ದಿನ ಮಳೆ ಸುಳಿವು ಇಲ್ಲ; ಬೆಂಗಳೂರಲ್ಲಿ ಮತ್ತೆ ಬಿಸಿಲ ಬೇಗೆ

ಕರ್ನಾಟಕ ಹವಾಮಾನ ಮಾರ್ಚ್ 27: ಕರ್ನಾಟಕದಲ್ಲಿ ಇನ್ನು ಮೂರು ದಿನ ಮಳೆ ಸುಳಿವು ಇಲ್ಲ ಎಂದು ಮಳೆ ಮುನ್ಸೂಚನೆ ವರದಿ ಹೇಳಿದೆ. ಬೆಂಗಳೂರಲ್ಲಿ ಮತ್ತೆ ಬಿಸಿಲ ಬೇಗೆ ಇರಲಿದ್ದು, ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್ ಇರಬಹುದು. ಉಳಿದಂತೆ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ಮಾರ್ಚ್ 27
ಕರ್ನಾಟಕ ಹವಾಮಾನ ಮಾರ್ಚ್ 27

ಬೆಂಗಳೂರು ಹವಾಮಾನ ಕೇಂದ್ರ ನೀಡಿರುವ ನಾಳೆ (ಮಾರ್ಚ್ 28) ಬೆಳಗ್ಗೆ 8.30ರ ತನಕ ಮಳೆ ಮುನ್ಸೂಚನೆ ವರದಿ ಪ್ರಕಾರ, ರಾಜ್ಯದಲ್ಲಿ ಒಣಹವೆ ಇರಲಿದೆ. ಗುಡುಗು, ಮಳೆ, ಭಾರಿ ತಾಪಮಾನಗಳ ಎಚ್ಚರಿಕೆಯೋ, ಮುನ್ನೆಚ್ಚರಿಕೆಯೋ ಇಲ್ಲ. ನಿನ್ನೆ (ಮಾರ್ಚ್ 26) ಸೆಂಟಿ ಮೀಟರ್ ಲೆಕ್ಕಾಚಾರದಲ್ಲಿ ಮಳೆ ಪ್ರಮಾಣ ದಾಖಲಾಗಿಲ್ಲ. 24 ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ, ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶಗಳಲ್ಲಿ ಬದಲಾವಣೆ ಆಗಿರಲಿಲ್ಲ. ಇನ್ನು ತಾಪಮಾನದಲ್ಲಿ ಗಮನಾರ್ಹ ಏರಿಕೆ ದಕ್ಷಿಣ ಒಳನಾಡಿನ ಒಂದೆರಡು ಕಡೆ ಕಂಡುಬಂದಿದೆ. ಅದೇ ರೀತಿ ಒಂದೆರಡು ಕಡೆ ಕನಿಷ್ಠ ತಾಪಮಾನದಲ್ಲಿ ಕೂಡ ಏರಿಕೆ ಕಂಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಯಚೂರು ಜಿಲ್ಲೆಯ ಹಡಗನ್‌ಹಾಳ್ ಹೋಬಳಿಯಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನ 𝟒2.9 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ನಿನ್ನೆ ರಾಜ್ಯದ 38 ಹೋಬಳಿಗಳ ವಿವಿಧ ಗ್ರಾಪಂ ಮಟ್ಟದಲ್ಲಿ 40 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿತ್ತು. 40 ಡಿಗ್ರಿಗಿಂತ ಹೆಚ್ಚಿನ ತಾಪಮಾನದ ಪರಿಸ್ಥಿತಿಯನ್ನು ಶಾಖತರಂಗದ ಪರಿಸ್ಥಿತಿ ಎಂದು ಹೇಳಲಾಗುತ್ತದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ ಭಾಗದಲ್ಲಿ ಹೆಚ್ಚು ಈ ಪರಿಸ್ಥಿತಿ ಕಂಡುಬಂದಿದೆ.

ಬೆಂಗಳೂರು ಹವಾಮಾನ ಇಂದು (ಮಾ.27), ಗರಿಷ್ಠ 35 ಡಿಗ್ರಿ ಸೆಲ್ಶಿಯಸ್, ಕನಿಷ್ಠ 21 ಡಿಗ್ರಿ ಸೆಲ್ಶಿಯಸ್

ಬೆಂಗಳೂರು ನಗರದಲ್ಲಿ ಇಂದು (ಮಾರ್ಚ್ 27) ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಮಳೆ ಇರಲ್ಲ. ತಾಪಮಾನ ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಕನಿಷ್ಠ 21 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.

ಇದೇ ರೀತಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು (ಮಾರ್ಚ್‌ 27) ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಬಹುದು. ನಿನ್ನೆ (ಮಾ.26)ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಮಾರ್ಚ್ 27) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 35.1 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 20.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.

ಪ್ರಮುಖ ನಗರಗಳ ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಮಾರ್ಚ್‌ 27 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು – 25.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 48)

ಮಂಗಳೂರು – 28 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 84)

ಚಿತ್ರದುರ್ಗ – 28.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 32)

ಗದಗ – 29.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 66)

ಹೊನ್ನಾವರ – 28.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 32)

ಕಲಬುರಗಿ – 29.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 66)

ಬೆಳಗಾವಿ – 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 79)

ಕಾರವಾರ – 33 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 68 )

----------------------

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point