ಕರ್ನಾಟಕದಲ್ಲಿ ಇನ್ನೆರೆಡು ದಿನ ಭರ್ಜರಿ ಮಳೆ ಸಾಧ್ಯತೆ, ಬಹುತೇಕ ಡ್ಯಾಮ್‌ಗಳು ಈಗಾಗಲೇ ಭರ್ತಿ, ಬೆಂಗಳೂರಿನಲ್ಲಿಯೂ ಮುಂದುವರಿಯಲಿದೆ ಮಳೆ
Karnataka Weather Update: ಕರ್ನಾಟಕದಲ್ಲಿ ಕಳೆದ ಜೂನ್ ತಿಂಗಳಿನಿಂದಲೂ ಉತ್ತಮ ಮಳೆಯಾಗುತ್ತಿದೆ. ಸದ್ಯಕ್ಕೆ ಮಳೆ ನಿಲ್ಲುವ ಸಾಧ್ಯತೆಯೂ ಇಲ್ಲ ಎಂದು ಹವಾಮಾನ ಇಲಾಖೆಯು ಹೇಳಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮೋಡಗಳು ದಟ್ಟೈಸಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೆರೆಡು ದಿನ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಬಹುದು. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ತಾಪಮಾನದ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಷಿಯಸ್, ಕನಿಷ್ಠ 21 ಡಿಗ್ರಿ ಸಿಲ್ಷಿಯಸ್ ಇರಬಹುದು ಎಂದು ಅಂದಾಜಿಸಲಾಗಿದೆ. ಮಡಿಕೇರಿಯಲ್ಲಿ ಶೀತಗಾಳಿ ಬೀಸುತ್ತಿದ್ದು, ಕನಿಷ್ಠ ತಾಪಮಾನ 17 ಡಿಗ್ರಿಗೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನವು 21 ಡಿಗ್ರಿ ಸೆಲ್ಷಿಯಸ್ ಇರಲಿದೆ. ಆಗಸ್ಟ್ 12 ರ ವರೆಗೂ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿಯೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಳೆದ ಜೂನ್ ತಿಂಗಳಿನಿಂದಲೂ ಉತ್ತಮ ಮಳೆಯಾಗುತ್ತಿದೆ. ಸದ್ಯಕ್ಕೆ ಮಳೆ ನಿಲ್ಲುವ ಸಾಧ್ಯತೆಯೂ ಇಲ್ಲ ಎಂದು ಹವಾಮಾನ ಇಲಾಖೆಯ ಹೇಳಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.
ಲಿಂಗನಮಕ್ಕಿ ಸೇರಿ ಬಹುತೇಕ ಜಲಾಶಯಗಳು ಭರ್ತಿ, ಹೆಚ್ಚಿದ ಹೊರಹರಿವು
(ಆಗಸ್ಟ್ 8, 9 ರ ಮಾಹಿತಿ)
1) ಕೆಆರ್‌ಎಸ್ ಜಲಾಶಯ (ಕಾವೇರಿ)
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 124.70 ಅಡಿ
ಒಳ ಹರಿವು: 12,757 ಲಕ್ಷ ಕ್ಯೂಸೆಕ್
ಹೊರ ಹರಿವು: 6,665 ಲಕ್ಷ ಕ್ಯೂಸೆಕ್
2) ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 2,859 ಅಡಿ
ಇಂದಿನ ಮಟ್ಟ: 2,856.97 ಅಡಿ
ಒಳ ಹರಿವು: 3,542 ಕ್ಯೂಸೆಕ್
ಹೊರ ಹರಿವು: 2,883 ಕ್ಯೂಸೆಕ್
3) ಕಬಿನಿ ಜಲಾಶಯ
ಗರಿಷ್ಠ ಮಟ್ಟ: 2,284 ಅಡಿ
ಇಂದಿನ ಮಟ್ಟ: 2,283.40
ಒಳ ಹರಿವು: 6,471 ಕ್ಯೂಸೆಕ್
ಹೊರ ಹರಿವು: 6,350
4) ಹೇಮಾವತಿ ಜಲಾಶಯ (ಗೊರೂರು)
ಗರಿಷ್ಠ ಮಟ್ಟ: 2,922
ಇಂದಿನ ಮಟ್ಟ: 2,922
ಒಳ ಹರಿವು: 12,619 ಕ್ಯೂಸೆಕ್
ಹೊರ ಹರಿವು: 12,675 ಕ್ಯೂಸೆಕ್
5) ಲಿಂಗನಮಕ್ಕಿ ಜಲಾಶಯ (ಶರಾವತಿ)
ಗರಿಷ್ಠ ಮಟ್ಟ: 1,819 ಅಡಿ
ಇಂದಿನ ಮಟ್ಟ: 1,816.35
ಒಳ ಹರಿವು: 15,360 ಕ್ಯೂಸೆಕ್
ಹೊರ ಹರಿವು: 14,056 ಕ್ಯೂಸೆಕ್
6) ಸೂಪಾ ಜಲಾಶಯ (ಕಾಳಿ)
ಗರಿಷ್ಠ ಮಟ್ಟ: 564 ಮೀಟರ್
ಇಂದಿನ ಮಟ್ಟ: 558.30 ಮೀಟರ್
ಒಳ ಹರಿವು: 11,431 ಕ್ಯೂಸೆಕ್
ಹೊರ ಹರಿವು: 4,629.61 ಕ್ಯೂಸೆಕ್
7) ಮಾಣಿ ಜಲಾಶಯ (ವರಾಹಿ)
ಗರಿಷ್ಠ ಮಟ್ಟ: 595 ಅಡಿ
ಇಂದಿನ ಮಟ್ಟ: 588.50
ಒಳ ಹರಿವು: 1,442 ಕ್ಯೂಸೆಕ್
ಹೊರ ಹರಿವು: ---
8) ತುಂಗಭದ್ರಾ ಡ್ಯಾಂ (ಹೊಸಪೇಟೆ)
ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,632.45
ಒಳ ಹರಿವು: 57,819 ಕ್ಯೂಸೆಕ್
ಹೊರ ಹರಿವು: 59,839 ಕ್ಯೂಸೆಕ್
9) ಮಲಪ್ರಭಾ
ಗರಿಷ್ಠ ಮಟ್ಟ: 2,079.5 ಅಡಿ
ಇಂದಿನ ಮಟ್ಟ: 2,076.85
ಒಳ ಹರಿವು: 6,250 ಕ್ಯೂಸೆಕ್
ಹೊರ ಹರಿವು: 3,194 ಕ್ಯೂಸೆಕ್
10) ಘಟಪ್ರಭಾ
ಗರಿಷ್ಠ ಮಟ್ಟ: 2,175 ಅಡಿ
ಇಂದಿನ ಮಟ್ಟ: 2,173.50
ಒಳ ಹರಿವು: 10,138 ಕ್ಯೂಸೆಕ್
ಹೊರ ಹರಿವು: 8,225 ಕ್ಯೂಸೆಕ್
11) ಭದ್ರಾ ಡ್ಯಾಂ
ಗರಿಷ್ಠ ಮಟ್ಟ: 186 ಅಡಿ
ಇಂದಿನ ಮಟ್ಟ: 180.03 ಅಡಿ
ಒಳ ಹರಿವು: 9,114 ಕ್ಯೂಸೆಕ್
ಹೊರ ಹರಿವು: 8,225 ಕ್ಯೂಸೆಕ್
12) ಆಲಮಟ್ಟಿ (ಕೃಷ್ಣಾ)
ಗರಿಷ್ಠ ಮಟ್ಟ: 519.6 ಮೀಟರ್
ಇಂದಿನ ಮಟ್ಟ: 518.22 ಮೀಟರ್
ಒಳ ಹರಿವು: 2.78 ಲಕ್ಷ ಕ್ಯೂಸೆಕ್
ಹೊರ ಹರಿವು: 2.02 ಲಕ್ಷ ಕ್ಯೂಸೆಕ್
13) ನಾರಾಯಣಪುರ (ಕೃಷ್ಣಾ)
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ಮಟ್ಟ: 490.87 ಮೀಟರ್
ಒಳ ಹರಿವು: 2 ಲಕ್ಷ ಕ್ಯೂಸೆಕ್
ಹೊರ ಹರಿವು: 2.06 ಲಕ್ಷ ಕ್ಯೂಸೆಕ್