ಸಿಡಿಲ ಮಾಹಿತಿ: ಬೇಸಿಗೆ ಬಿರು ಬಿಸಿಲ ನಡುವೆ ಹಲವೆಡೆ ಗುಡುಗಿನ ಭಾರೀ ಮಳೆ, ಸಿಡಿಲಿನಿಂದ ತಪ್ಪಿಸಿಕೊಳ್ಳಿ ಹೀಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಡಿಲ ಮಾಹಿತಿ: ಬೇಸಿಗೆ ಬಿರು ಬಿಸಿಲ ನಡುವೆ ಹಲವೆಡೆ ಗುಡುಗಿನ ಭಾರೀ ಮಳೆ, ಸಿಡಿಲಿನಿಂದ ತಪ್ಪಿಸಿಕೊಳ್ಳಿ ಹೀಗೆ

ಸಿಡಿಲ ಮಾಹಿತಿ: ಬೇಸಿಗೆ ಬಿರು ಬಿಸಿಲ ನಡುವೆ ಹಲವೆಡೆ ಗುಡುಗಿನ ಭಾರೀ ಮಳೆ, ಸಿಡಿಲಿನಿಂದ ತಪ್ಪಿಸಿಕೊಳ್ಳಿ ಹೀಗೆ

ಮಳೆ ಎಂದರೆ ಗುಡುಗು ಸಿಡಿಲಿನ ಸಂಗಮ. ಆದರೆ ಸಿಡಿಲು ಕೆಲವೊಮ್ಮೆ ಜೀವ ತೆಗೆಯುವ ಸಾಧ್ಯತೆಯೂ ಉಂಟು. ಮಳೆ ವೇಳೆ ಸಿಡಿಲಿನಿಂದ ತಪ್ಪಿಸಿಕೊಳ್ಳಲು ಸಲಹೆ ಇಲ್ಲಿದೆ.

ಸಿಡಿಲಿನಿಂದ ಹೀಗೆ ತಪ್ಪಿಸಿಕೊಳ್ಳಿ
ಸಿಡಿಲಿನಿಂದ ಹೀಗೆ ತಪ್ಪಿಸಿಕೊಳ್ಳಿ

ಕರ್ನಾಟಕದಲ್ಲಿ ಒಂದು ಕಡೆ ಬಿಸಿಲು, ಇನ್ನೊಂದು ಕಡೆ ಭಾರೀ ಮಳೆ. ಅದು ಗುಡುಗು ಸಿಡಿಲಿನ ಸಹಿತ ಭಾರೀ ಮಳೆಯ ಸನ್ನಿವೇಶ. ಯುಗಾದಿ ವೇಳೆ ಸುರಿದ ಭಾರೀ ಮಳೆಯ ಜತೆಗೆ ಸಿಡಿಲು ಕೂಡ ಕಂಡು ಬಂದಿದೆ. ಅದೂ ವಿಜಯಪುರ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಸಿಡಿಲಿನಿಂದ ಸಾವು ನೋವು ಸಂಭವಿಸಿದ ಪ್ರಕರಣಗಳು ಇತ್ತೀಚೆಗೆ ಪ್ರತಿ ಮುಂಗಾರು ಮಳೆಗಳಲ್ಲಿ ಅಧಿಕವಾಗುತ್ತಿದೆ. ಮುಂಗಾರು ಮಳೆ ಸಂಧರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಿಡಿಲಿನ ಅವಘಡಗಳು ಹೆಚ್ಚಾಗಿದೆ. ಸಿಡಿಲಿನಿಂದ ಮನುಷ್ಯರು ಮಾತ್ರವಲ್ಲದೆ ವಿವಿಧ ಪಶು, ಪ್ರಾಣಿಗಳು ಕೂಡ ಸಾಯುತ್ತಿವೆ. ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು, ದನ ಕುರಿ ಕಾಯುವವರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು ನೋವುಗಳನ್ನು ತಪ್ಪಿಸಬಹುದು. ಸಿಡಿಲಿನಿಂದ ರಕ್ಷಣೆ ಹೇಗೆ ಸಾಧ್ಯ, ಈ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ, ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಅದರಲ್ಲೂ ಮುಂದಿನ ಕೆಲವು ದಿನ ಕರ್ನಾಟಕದಲ್ಲಿ ಮಳೆಯಾಗಲಿದ್ದು, ಸಿಡಿಲು ಗುಡುಗು ಕೂಡ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ಈಗಾಗಲೇ ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಬಗ್ಗೆ ನೀವು ತಿಳಿದುಕೊಳ್ಳಿ ಹಾಗೂ ಇನ್ನೊಬ್ಬರಿಗೆ ಮಾಹಿತಿ ನೀಡಿ ಎನ್ನುವ ಕಾರಣದಿಂದ ಈ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

  • ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ, ನಿಲ್ಲಬೇಡಿ.
  • ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.
  • ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.
  • ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ
  • ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ (ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.)
  • ಮಳೆ/ಗುಡುಗು, ಸಿಡಿಲು ಬರುವ ಮುನ್ಸೂಚನೆಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .
  • ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.
  • ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೊರವಿರಿ
  • ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
  • ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
  • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಬಳಕೆ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಾಹಸವೂ ಬೇಡ.
  • ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
  • ಕಂಪ್ಯೂಟರ್ ಗಳಿಂದ ದೂರ ಇರಿ.
  • ಮನೆಯ ಕಾಂಕ್ರೇಟ್ ಗೋಡೆಗಳನ್ನು ಸ್ಪರ್ಶಿಸದೆ.ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.

Whats_app_banner