Udupi Pre Wedding Shooting: ಉಡುಪಿ ಕೃಷ್ಣಮಠದ ರಥ ಬೀದಿಯಲ್ಲಿ ವಿವಾಹ ಪೂರ್ವ, ಬಳಿಕದ ಫೋಟೋ ಶೂಟ್‌ಗೆ ನಿರ್ಬಂಧ
ಕನ್ನಡ ಸುದ್ದಿ  /  ಕರ್ನಾಟಕ  /  Udupi Pre Wedding Shooting: ಉಡುಪಿ ಕೃಷ್ಣಮಠದ ರಥ ಬೀದಿಯಲ್ಲಿ ವಿವಾಹ ಪೂರ್ವ, ಬಳಿಕದ ಫೋಟೋ ಶೂಟ್‌ಗೆ ನಿರ್ಬಂಧ

Udupi Pre Wedding Shooting: ಉಡುಪಿ ಕೃಷ್ಣಮಠದ ರಥ ಬೀದಿಯಲ್ಲಿ ವಿವಾಹ ಪೂರ್ವ, ಬಳಿಕದ ಫೋಟೋ ಶೂಟ್‌ಗೆ ನಿರ್ಬಂಧ

Udupi Pre Wedding Shooting: ಕರ್ನಾಟಕ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಉಡುಪಿಯಲ್ಲಿ ಮದುವೆ ಸಂಬಂಧಿಸಿದ ಫೋಟೋ ಶೂಟಿಂಗ್‌ ಅನ್ನು ನಿಷೇಧಿಸಲಾಗಿದೆ. ಅದರಲ್ಲೂ ಉಡುಪಿ ರಥಬೀದಿಯಲ್ಲಿ ನಿಷೇಧ ಜಾರಿಯಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಉಡುಪಿಯ ರಥಬೀದಿಯಲ್ಲಿ ವಿವಾಹ ಪೂರ್ವ ಹಾಗೂ ನಂತರದ ಫೋಟೋ ಶೂಟಿಂಗ್‌ ನಿಷೇಧಿಸಲಾಗಿದೆ.
ಉಡುಪಿಯ ರಥಬೀದಿಯಲ್ಲಿ ವಿವಾಹ ಪೂರ್ವ ಹಾಗೂ ನಂತರದ ಫೋಟೋ ಶೂಟಿಂಗ್‌ ನಿಷೇಧಿಸಲಾಗಿದೆ.

Udupi Pre Wedding Shooting: ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ನಿಷೇಧಿಸಲಾಗಿದೆ. ಈ ಬಗ್ಗೆ ಪರ್ಯಾಯ ಪುತ್ತಿಗೆ ಮಠ ಪ್ರಕಟಣೆ ಹೊರಡಿಸಿದೆ. ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ಗಳಿಗೆ ನಿಷೇಧ ವಿಧಿಸಿದೆ. ಫೋಟೋ ಶೂಟ್ ನಿಂದಾಗಿ ಸ್ವಾಮೀಜಿಗಳ ಓಡಾಟಕ್ಕೆ ಹಾಗೂ ಮುಂಜಾನೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ. ಶ್ರೀಕೃಷ್ಣಮಠ ಪಾರಂಪರಿಕ ಕಟ್ಟಡಗಳಿರುವ ತಾಣ. ಪ್ರಿ ವೆಡ್ದಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣುತ್ತದೆ. ಫೋಟೋಶೂಠ್ ಹೆಸರಲ್ಲಿ ಮಠದ ರಥಬೀದಿಯಲ್ಲಿ ಸರಸ ಸಲ್ಲಾಪ ನಡೆಯುತ್ತಿದೆ. ಕೇರಳ, ಬೆಂಗಳೂರು ಕಡೆಗಳಿಂದ ಬರುವ ಫೋಟೋಗ್ರಾಫರ್ಸ್ ಹಾವಳಿಯೂ ಹೆಚ್ಚಾಗಿದೆ ಹೀಗಾಗಿ ಮಠದ ರಥಬೀದಿಯಲ್ಲಿ ಫೋಟೋಶೂಟ್ ನಿಷೇಧಿಸಲಾಗಿದೆ.

ಅಷ್ಟ ಮಠಾಧೀಶರು ಓಡಾಡುವ ರಥಬೀದಿ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡುವ ಪವಿತ್ರ ಜಾಗ. ಇದಕ್ಕೆ ಪಾವಿತ್ರ್ಯತೆ ಇದೆ. ಪ್ರತಿದಿನ ರಥಬೀದಿಯಲ್ಲಿ ದೇವರ ಉತ್ಸವ ನಡೆಯುತ್ತಿದೆ. ಇಂತಹ ಪವಿತ್ರ ಸ್ಥಳಗಳಲ್ಲಿ ಫೋಟೋಶೂಟ್, ಜೋಡಿಗಳ ಸರಸ ಸರಿಯಲ್ಲ. ಮುಜುಗರದ ಸನ್ನಿವೇಶ ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ.

ಉಡುಪಿ ರಥಬೀದಿಯಲ್ಲಿ ಪ್ರಿವೆಡ್ಡಿಂಗ್ ಫೊಟೋಶೂಟ್ ನಿಷೇಧ ಕಾರಣವೇನು?

ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಹಾಗೂ ಶ್ರೀಕೃಷ್ಣನ ಸನ್ನಿಧಿ ಉಡುಪಿಯ ಶ್ರೀಕೃಷ್ಣಮಠದ ರಥಬೀದಿಯಲ್ಲಿ ಇನ್ನು ಪ್ರೀವೆಡ್ಡಿಂಗ್ ಸಹಿತ ಫೊಟೋ ಶೂಟ್ ಗೆ ಅವಕಾಶವಿಲ್ಲ.

ಶ್ರೀಕೃಷ್ಣ ಮಠದ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ಪ್ರಿವೆಡ್ ಫೋಟೋ ಶೂಟ್ ಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ನಿರ್ಬಂಧ ಹೇರಲಾಗಿದೆ .ದೇವಸ್ಥಾನದ ಪಾವಿತ್ರ್ಯತೆ ರಕ್ಷಣೆ ಮತ್ತು ಭಕ್ತರಿಗಾಗುವ ಮುಜುಗರದ ಪರಿಸ್ಥಿತಿ ಹಾಗೂ ಸಾರ್ವಜನಿಕರಿಂದ ಬಂದ ದೂರಿನನ್ವಯ ಈ ಕ್ರಮ ಕೈ ಗೊಳ್ಳಲಾಗಿದೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ದೇವಾಲಯದ ಆವರಣಕ್ಕೂ ಕಾಲಿಟ್ಟಿದೆ. ಇದರಿಂದ ಮುಜುಗರದ ಸನ್ನಿವೇಶ ಎದುರಾಗಿದೆ. ಪ್ರೀವೆಡ್ಡಿಂಗ್ ಶೂಟ್, ಇತ್ತೀಚೆಗೆ ಮದುವೆಗೂ ಮುಂಚೆ ಮಾಡಲಾಗುತ್ತದೆ.ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕಗೋಪುರ, ಅಷ್ಟಮಠಗಳ ಎದುರು, ಪವಿತ್ರ ರಥದ ಬಳಿ ಹೀಗೆ ರಥಬೀದಿ ಸುತ್ತಲೂ ಬೆಳ್ಳಂಬೆಳಗ್ಗೆ ಮದುವೆಯಾಗುವ ಜೋಡಿಗಳು ಹಾಜರಾಗ್ತಾರೆ. ಅಷ್ಟಾದರೆ ಸಮಸ್ಯೆ ಇಲ್ಲ, ಕೈ ಕೈ ಹಿಡಿದು ಎತ್ತಿಕೊಂಡು ಮುದ್ದಾಡುವಷ್ಡರ ಮಟ್ಟಿಗೆ ಪ್ರೀವೆಡ್ಡಿಂಗ್ ಫೋಟೋಶೂಟ್ ನಡೆಯುತ್ತದೆ. ಪಾರ್ಕ್, ಬೀಚ್, ಬೆಟ್ಟ ಗುಡ್ಡ, ಫಾಲ್ಸ್ ಬಳಿಯಲ್ಲಿ ಫೋಟೋ ಶೂಟ್ ಮಾಡುವುದು ಈಗ ಸಾಮಾನ್ಯವಾಗಿದೆ. ಅದೀಗ ಮಠದ ರಥಬೀದಿವರೆಗೂ ಬಂದಿದೆ. ಇಲ್ಲಿ ಧಾರ್ಮಿಕ ವಿದ್ವಾಂಸರು, ಅಷ್ಟ ಮಠಾಧೀಶರು, ಭಕ್ತರು, ಮಹಿಳೆಯರು ಆಗಮಿಸುತ್ತಾರೆ. ಅವರಿಗೆ ಇದು ಮುಜುಗರಕ್ಕೀಡು ಮಾಡುತ್ತಿದೆ.

ಇಲ್ಲಿಗೆ ಹೊರರಾಜ್ಯಗಳಾದ ಕೇರಳ, ತಮಿಳುನಾಡಿನಿಂದ ಬರುವ ಜೋಡಿಗಳು ರಥಬೀದಿಯಲ್ಲಿ ಪ್ರೀವೆಡ್ಡಿಂಗ್ ಫೊಟೋಶೂಟ್ ಮಾಡುತ್ತಿದ್ದಾರೆ. ಯಾರೋ ಮಾಡಿದ ತಪ್ಪು ಈಗ ಎಲ್ಲರಿಗೂ ಬಾಧಿಸಿದೆ. ದೂರದ ಊರುಗಳಿಂದ ಬರುವ ಭಕ್ತರು ಈಗ ಫೋಟೋ ತೆಗೆಯಲಾಗದೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಲೇ ಧಾರ್ಮಿ ಮಹತ್ವ ಇರುವ ಉಡುಪಿಯ ಕೃಷ್ಣ ಮಠದ ರಥಬೀದಿಯಲ್ಲಿ ಇಂತಹದೊಂದು ನಿರ್ಧಾರ ಹೊರಬಿದ್ದಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ವರದಿ: ಹರೀಶ ಮಾಂಬಾಡಿ. ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner