ತುಳುನಾಡ ವೀರರಾಣಿ ಅಬ್ಬಕ್ಕ ಯಾರು? ಚರಿತ್ರೆಯಲ್ಲಿ ಆಕೆಯ ಕುರಿತು ಏನು ಹೇಳಲಾಗಿದೆ – ಗೊಂದಲ ನಿವಾರಣೆಗೆ ವಿಚಾರಗೋಷ್ಠಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಳುನಾಡ ವೀರರಾಣಿ ಅಬ್ಬಕ್ಕ ಯಾರು? ಚರಿತ್ರೆಯಲ್ಲಿ ಆಕೆಯ ಕುರಿತು ಏನು ಹೇಳಲಾಗಿದೆ – ಗೊಂದಲ ನಿವಾರಣೆಗೆ ವಿಚಾರಗೋಷ್ಠಿ

ತುಳುನಾಡ ವೀರರಾಣಿ ಅಬ್ಬಕ್ಕ ಯಾರು? ಚರಿತ್ರೆಯಲ್ಲಿ ಆಕೆಯ ಕುರಿತು ಏನು ಹೇಳಲಾಗಿದೆ – ಗೊಂದಲ ನಿವಾರಣೆಗೆ ವಿಚಾರಗೋಷ್ಠಿ

ಕರ್ನಾಟಕ ಕಡಲತೀರದಲ್ಲಿ ವಿದೇಶಿಯರ ವಿರುದ್ಧ ಹೋರಾಡಿದ ಪ್ರಮುಖರಲ್ಲಿ ಓರ್ವರಾದ ರಾಣಿ ಅಬ್ಬಕ್ಕನ ಕುರಿತು ಹಲವು ವ್ಯಾಖ್ಯಾನಗಳಿವೆ. ಈ ಹಿನ್ನೆಲೆಯಲ್ಲಿ ವಿಚಾರಸಂಕಿರಣವೊಂದು ನಡೆಯಲಿದ್ದು, ಇದರಲ್ಲಿ ರಾಣಿ ಅಬ್ಬಕ್ಕ ಕುರಿತು ಹಲವು ಚರ್ಚೆ, ವಿಚಾರವಿಮರ್ಶೆಗಳು ನಡೆಯುವ ಸಾಧ್ಯತೆ ಇದೆ (ವರದಿ: ಹರೀಶ ಮಾಂಬಾಡಿ, ಮಂಗಳೂರು)

ವೀರರಾಣಿ ಅಬ್ಬಕ್ಕನ ಕುರಿತು ವಿಚಾರಗೋಷ್ಠಿ ನಡೆಯಲಿದೆ
ವೀರರಾಣಿ ಅಬ್ಬಕ್ಕನ ಕುರಿತು ವಿಚಾರಗೋಷ್ಠಿ ನಡೆಯಲಿದೆ

ಮಂಗಳೂರು: ಕರ್ನಾಟಕ ಕಡಲತೀರದಲ್ಲಿ ವಿದೇಶಿಯರ ವಿರುದ್ಧ ಹೋರಾಡಿದ ಪ್ರಮುಖರಲ್ಲಿ ಓರ್ವರಾದ ರಾಣಿ ಅಬ್ಬಕ್ಕನ ಕುರಿತು ಹಲವು ವ್ಯಾಖ್ಯಾನಗಳಿವೆ. ಈ ಹಿನ್ನೆಲೆಯಲ್ಲಿ ವಿಚಾರಸಂಕಿರಣವೊಂದು ನಡೆಯಲಿದ್ದು, ಇದರಲ್ಲಿ ರಾಣಿ ಅಬ್ಬಕ್ಕ ಕುರಿತು ಹಲವು ಚರ್ಚೆ, ವಿಚಾರವಿಮರ್ಶೆಗಳು ನಡೆಯುವ ಸಾಧ್ಯತೆ ಇದೆ.

ರಾಣಿ ಅಬ್ಬಕ್ಕನ ಸಾಹಸ ಹಾಗೂ ತಾಯ್ನೆಲದ ಪ್ರೀತಿಯನ್ನು ಜಗತ್ತಿಗೆ ಸಾರುವ ಉದ್ದೇಶ ದಿಂದ ಹಾಗೂ ಅಬ್ಬಕ್ಕನ ಕುರಿತಂತೆ ಚರಿತ್ರೆಯಲ್ಲಿರುವ ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯನ್ನು ಒದಗಿಸುವ ಉದ್ದೇಶದೊಂದಿಗೆ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಎಲ್ಲಿ ಕಾರ್ಯಕ್ರಮ? ಏನು ವಿಶೇಷ?

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಬೆಂಗಳೂರಿಗೆ ಸಾಗುವ ರಸ್ತೆಯಲ್ಲಿ ಸುಮಾರು 25 ಕಿ.ಮೀ. ದೂರದಲ್ಲಿರುವ ಬಿ.ಸಿ.ರೋಡ್ ನ ಸಂಚಯಗಿರಿ ಎಂಬಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಏಪ್ರಿಲ್ 18ರಂದು ರಾಣಿ ಅಬ್ಬಕ್ಕ ಬಹುಮುಖ ಚಿಂತನೆ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಮಾಜಿ ಶಾಸಕರು, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ ಶೆಟ್ಟಿ ಮಾಡಲಿದ್ದಾರೆ. ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ಭಾಗವಹಿಸುವರು.

ಪೂರ್ವಾಹ್ನ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ’ಉಳ್ಳಾಲದ ಅಬ್ಬಕ್ಕರಾಣಿಯರು: ಐತಿಹಾಸಿಕ ನೆಲೆ’ ಬೆಳಕು ಹರಿಸಲಿದ್ದಾರೆ ಖ್ಯಾತ ಸಂಶೋಧಕಿ ಡಾ. ಮಾಲತಿ ಕೃಷ್ಣಮೂರ್ತಿ. ಬಳಿಕ ನಡೆಯುವ ಗೋಷ್ಟಿಯಲ್ಲಿ ’ಕಾದಂಬರಿಗಳಲ್ಲಿ ಅಬ್ಬಕ್ಕ’ ಎನ್ನುವ ವಿಚಾರದಲ್ಲಿ ಡಾ.ವಿ.ಕೆ ಯಾದವ, ಸಸಿಹಿತ್ಲು ಪ್ರಬಂಧ ಮಂಡಿಸುವರು. ಅಪರಾಹ್ನದ ಗೋಷ್ಠಿಯಲ್ಲಿ ರಂಗಭೂಮಿಯಲ್ಲಿ ರಾಣಿ ಅಬ್ಬಕ್ಕ ವಿಚಾರದ ಮೇಲೆ ನಾಟಕಕಾರ, ಐ.ಕೆ ಬೊಳುವಾರ್ ಮತ್ತು ಜನಮಾನಸದಲ್ಲಿ ರಾಣಿಅಬ್ಬಕ್ಕ ಎನ್ನುವ ವಿಚಾರದ ಮೇಲೆ ಡಾ. ಆಶಾಲತಾ ಸುವರ್ಣ, ವಿಷಯ ಮಂಡಿಸುವರು.

ಅಬ್ಬಕ್ಕನ ಬಹುಮುಖ ದರ್ಶನ ಮಾಡಿ ಕೊಡಲಿದ್ದಾರೆ ಸಂವಾದದ ಮೂಲಕ ವಿವಿಧ ಕ್ಶೇತ್ರದ ಪರಿಣಿತರುಗಳಾದ ರಾಜಗೋಪಾಲ ಕನ್ಯಾನ, ಡಾ.ರುಡಾಲ್ಫ್ ಜೊಯರ್ ನೊರೊನ್ಹ, ಡಾ. ಯೋಗಿಶ ಕೈರೋಡಿ, ಪ್ರೊ ಚೇತನ್ ಮುಂಡಾಜೆ, ಶಶಿಧರ್ ಪೊಯ್ಯತ್ತಬೈಲು, ಪ್ರೊ ಅಕ್ಷಯಕುಮಾರ್, ಚಂದ್ರಹಾಸ ಕಣಂತೂರು. ವಿಶ್ರಾಂತ ಪ್ರಾಂಶುಪಾಲರಾದ ಪ್ರೊಕೃಷ್ಣಮೂರ್ತಿ ಕಾರ್ಯಕ್ರಮ ನಡೆಸಿಕೊಡುವರು.ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧಕರು, ಆಸಕ್ತರು ಭಾಗವಹಿಸಲಿಕ್ಕಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರದ ಸಂಸ್ಥಾಪಕರಾದ ಡಾ. ತುಕಾರಾಮ ಪೂಜಾರಿ ತಿಳಿಸಿದ್ದಾರೆ.

ರಾಣಿ ಅಬ್ಬಕ್ಕ ಕುರಿತು:

ಬ್ರಿಟೀಷರ ಪ್ರವೇಶದ ಪೂರ್ವದಲ್ಲೆ ಭಾರತವು ವ್ಯಾಪಾರದ ನೆಪದಲ್ಲಿ ಮೋಸ, ವಂಚನೆ ಹಾಗೂ ಕಪಟತನಕ್ಕೆ ಹೆಸರಾದ ಪೋರ್ಚುಗೀಸರ ದುರಾಕ್ರಮಣಕ್ಕೆ ಒಳಗಾಗಿತ್ತು. ಆ ಕಾಲಘಟ್ಟದಲ್ಲಿ ಕರಾವಳಿಯಲ್ಲಿನ ತುಂಡರಸರ ಆಂತರಿಕ ಕಲಹ-ಸಂಘರ್ಷ, ಪೋರ್ಚುಗೀಸರ ವಸಾಹತು ಸ್ಥಾಪನೆಯ ಕನಸು ಚಿಗುರೊಡೆಯಲು ಕಾರಣವಾಯಿತು. ಅಂತಹ ಸಂದರ್ಭದಲ್ಲಿ ತನ್ನ ಕೈ ಹಿಡಿದ ಗಂಡ ಬಂಗಾಡಿಯ ಬಂಗರಸನ ವಿರೋಧವನ್ನೂ ಲೆಕ್ಕಿಸದೆ ಪೋರ್ಚುಗೀಸರ ವಿರುದ್ಧ ಸೆಟೆದು ನಿಂತವಳು ಚೌಟ ಮನೆತನದ ರಾಣಿ ಅಬ್ಬಕ್ಕ. ಕ್ರೂರ ಸ್ವಭಾವದ ಈ ಪೋರ್ಚುಗೀಸರಿಗೆ ಸಿಂಹ ಸ್ವಪ್ನಳಾಗಿ, ಕರಾವಳಿಯಿಂದ ಅವರನ್ನು ಬಡಿದೋಡಿಸುವ ಅಸಾಧ್ಯ ಹೋರಾಟ ನಡೆಸಿದವಳು ಈ ರಾಣಿ. 1618ರ ಸಂಘರ್ಷದಲ್ಲಿ ಪೋರ್ಚುಗೀಸರ ವಿರುದ್ಧದ ಇವಳ ಗೆಲುವಿನಿಂದಾಗಿ ರಾಣಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಳು.

ಅಧ್ಯಯನ ಕೇಂದ್ರದ ಕುರಿತು:

1995ರಲ್ಲಿ ಅಂದರೆ 30 ವರ್ಷಗಳ ಹಿಂದೆಯೇ ’ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ’ಗಳೆಂಬ ಅವಳಿ ಸಂಸ್ಥೆಗಳು ಇತಿಹಾಸ ಪ್ರಾಧ್ಯಾಪಕ ಡಾ. ತುಕಾರಾಮ ಪೂಜಾರಿ ಅವರ ಕನಸಿನ ಕೂಸಾಗಿ ಜನ್ಮತಳೆಯಿತು. ಅಂದಿನಿಂದ ಕೇಂದ್ರವು ನಿರಂತರವಾಗಿ ಪುಸ್ತಕ ಪ್ರಕಟಣೆ, ಕಾರ್ಯಗಾರ, ವಿಚಾರಗೋಷ್ಠಿ, ಐತಿಹಾಸಿಕ ನಿವೇಶನ ದರ್ಶನ, ಶಾಸನ ಸಂರಕ್ಷಣೆ, ವಸ್ತು ಸಂಗ್ರಹಾಕರ ಸಮಾವೇಶ, ಬೆನ್ನಿ ಬೆನ್ಕ, ಸರಣಿ ಉಪನ್ಯಾಸ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತಾ ಬಂದಿದೆ. ೨೦೨೧ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭ ರಾಣಿಯ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಕೇಂದ್ರದ ಅಬ್ಬಕ್ಕ ಕಲಾ ಗ್ಯಾಲರಿಯಲ್ಲಿರುವ ಶ್ರೀ ವಾಸುದೇವ ಕಾಮತ್‌ರ ತೈಲ ಚಿತ್ರದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿತಲ್ಲದೆ, 2023ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿರುವುದು ಕೇಂದ್ರದ ಮಹತ್ವಪೂರ್ಣ ಕೊಡುಗೆ. ನಾಡಿನ ಮೊತ್ತಮೊದಲ ಅಬ್ಬಕ್ಕನಿಗೆ ಸಂಬಂಧಿಸಿದ ಕಲಾಗ್ಯಾರಿಯನ್ನು ನಿರ್ಮಿಸಿದ ಖ್ಯಾತಿ ಈ ಕೇಂದ್ರಕ್ಕೆ ಸಲ್ಲುತ್ತದೆ.

ಕಾರ್ಯಕ್ರಮದ ವಿವರ ಹೀಗಿದೆ:

ರಾಣಿಅಬ್ಬಕ್ಕ - ಬಹುಮುಖ ಚಿಂತನೆ

ವಿಚಾರಗೋಷ್ಠಿ: ದಿನಾಂಕ : 18-04-2025

ಉದ್ಘಾಟನಾ ಸಮಾರಂಭ ಸಮಯ: 9.30

ಉದ್ಘಾಟನೆ: ಶಕುಂತಲಾ ಶೆಟ್ಟಿ, ಮಾಜಿ ಶಾಸಕರು, ಪುತ್ತೂರು

ಮುಖ್ಯಅತಿಥಿ: ಡಾ. ಜಿ. ಸಂತೋಷಕುಮಾರ್, ಕೆ. ಎ.ಎಸ್, ಸಹಾಯಕ ಕಮಿಷನರ್, ಮಂಗಳೂರು

ಮುಖ್ಯಅತಿಥಿ: ತಾರನಾಥಗಟ್ಟಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

ಅಧ್ಯಕ್ಷತೆ: ಡಾ. ಪುಂಡಿಕಾಯ್ ಗಣಪಯ್ಯ ಭಟ್, ಖ್ಯಾತ ಇತಿಹಾಸ ಸಂಶೋಧಕರು, ಮೂಡಬಿದ್ರೆ

ಪೂರ್ವಾಹ್ನ 11.30ರಿಂದ ಗೋಷ್ಠಿ1: ವಿಷಯ: ಉಳ್ಳಾಲದ ಅಬ್ಬಕ್ಕ ರಾಣಿಯರು: ಐತಿಹಾಸಿಕ ನೆಲೆ

ಡಾ. ಮಾಲತಿ ಕೃಷ್ಣಮೂರ್ತಿ, ವಿಶ್ರಾಂತ ಪ್ರಾಧ್ಯಾಪಕರು, ಎಮ್ ಜಿ ಎಮ್‌ ಕಾಲೇಜು, ಉಡುಪಿ

ಗೋಷ್ಟಿ2 : ವಿಷಯ: ಕಾದಂಬರಿಗಳಲ್ಲಿ ಅಬ್ಬಕ್ಕ

ಡಾ. ವಿ.ಕೆ ಯಾದವ, ವಿಶ್ರಾಂತ ಉಪನ್ಯಾಸಕರು, ಸಸಿಹಿತ್ಲು

ಅಪರಾಹ್ನ 2 ರಿಂದ

ಗೋಷ್ಠಿ 3: ರಂಗಭೂಮಿಯಲ್ಲಿ ರಾಣಿ ಅಬ್ಬಕ್ಕ.

ಐ.ಕೆ ಬೊಳುವಾರ್

ಗೋಷ್ಠಿ 4: ವಿಷಯ: ಜನಮಾನಸದಲ್ಲಿ ರಾಣಿ ಅಬ್ಬಕ್ಕ

ಡಾ. ಆಶಾಲತಾ ಸುವರ್ಣ, ವಿಶ್ರಾಂತ ಪ್ರಾಂಶುಪಾಲರು, ಎಸ್.ಜಿ.ಸಿ, ಮಂಗಳೂರು

3ರಿಂದ: ಸಂವಾದ: ರಾಣಿ ಅಬ್ಬಕ್ಕ- ಬಹುಮುಖ ನೋಟ

ನಡೆಸಿ ಕೊಡುವವರು: ಪ್ರೊಕೃಷ್ಣಮೂರ್ತಿ, ವಿಶ್ರಾಂತ ಪ್ರಾಂಶುಪಾಲರು, ಗೋವಿಂದದಾಸ ಕಾಲೇಜು, ಸುರತ್ಕಲ್

ಭಾಗವಹಿಸುವವರು:ರಾಜಗೋಪಾಲ ಕನ್ಯಾನ, ಸಂಸ್ಕ್ರತಿ ಚಿಂತಕರು. ಡಾ.ರುಡಾಲ್ಫ್‌ ಜೊಯರ್‌ನೊರೊನ್ಹ, ಪ್ರಧಾನ ವ್ಯವಸ್ಥಾಪಕರು (ಕಾರ್ಪೊರೆಟ್ ಬ್ರಾಡಿಂಗ್ ಮತ್ತುಕಮ್ಯುನಿಕೇಷನ್ಸ್) ಎಮ್‌ ಆರ್ ಪಿ ಎಲ್

ಡಾ. ಯೋಗಿಶ ಕೈರೋಡಿ, ಕನ್ನಡ ವಿಭಾಗ ಮುಖ್ಯಸ್ಥರು, ಆಳ್ವಾಸ್ ಕಾಲೇಜು, ಮೂಡಬಿದ್ರೆ

ಪ್ರೊ ಚೇತನ್‌ ಮುಂಡಾಜೆ, ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾನಿಲಯ, ಕೇರಳ

ಶಶಿಧರ್ ಪೊಯ್ಯತ್ತಬೈಲು, ನಿರ್ದೇಶಕರು, ಅಬ್ಬಕ್ಕ ಟಿ.ವಿ

ಪ್ರೊ ಅಕ್ಷಯಕುಮಾರ್, ಮಣೇಲ್

ಚಂದ್ರಹಾಸ ಕಣಂತೂರು, ನಿವೃತ್ತ ಲೆಕ್ಕಾಧಿಕಾರಿಗಳು

Suma Gaonkar

eMail
Whats_app_banner