Banashankari Expressway: ಬೆಂಗಳೂರಿನ ಬನಶಂಕರಿಯಿಂದ ನೈಸ್‌ರಸ್ತೆಗೆ 10 ಕಿ.ಮೀ. ದೂರದ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯಾಕೆ?
Banashankari Expressway: ಬೆಂಗಳೂರು ಬನಶಂಕರಿ ಮತ್ತು ನೈಸ್ ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಕುರಿತು ಬಿಬಿಎಂಪಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟೂರಾದ ಕನಕಪುರದ ಕಡೆಗೆ ಈ 10 ಕಿ.ಮೀ. ದೂರದ ಯೋಜನೆಗೆ ಸುಮಾರು 1,200 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ.
Banashankari Expressway: ಬನಶಂಖರಿ ಮತ್ತು ನೈಸ್ ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟೂರಾದ ಕನಕಪುರದ ಕಡೆಗೆ ಈ 10 ಕಿ.ಮೀ. ದೂರದ ಯೋಜನೆಗೆ ಸುಮಾರು 1,200 ಕೋಟಿ ರೂ. ಬೇಕಾಗುವ ನಿರೀಕ್ಷೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯಾಕೆ?
ಸಂಚಾರ ದಟ್ಟಣೆಗೆ ಪರಿಹಾರ: ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚಾಗುತ್ತಿದೆ. ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿಯು ಎಲಿವೇಟೆಡ್ ಫ್ಲೈಓವರ್ ನಿರ್ಮಿಸಲು ಮುಂದಾಗಿದೆ. ಈ ಯೋಜನೆಗೆ ಸುಮಾರು 1200 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. "ಕನಕಪುರ ರಸ್ತೆಯಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆಯನ್ನು ಪರಿಹರಿಸಲು ಬನಶಂಕರಿಯಿಂದ ನೈಸ್ ರಸ್ತೆಗೆ ಸಂಪರ್ಕಿಸುವ 10-ಕಿಮೀ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ" ಎಂದು ವರದಿ ತಿಳಿಸಿದೆ.
ಮೆಟ್ರೋ ನಿರ್ಮಾಣದಿಂದ ಪರ್ಯಾಯ ಆಯ್ಕೆಗಳು ಇಲ್ಲದೆ ಇರುವುದು: ಕನಕಪುರ ರಸ್ತೆಯಲ್ಲಿ ಮೆಟ್ರೋ ನಿರ್ಮಾಣದಿಂದ ಸಾಕಷ್ಟು ಅಡೆತಡೆಗಳು ಉಂಟಾಗಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪರ್ಯಾಯ ಮಾರ್ಗದ ಅಗತ್ಯವಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಅವರ ನಿರ್ದೇಶನದ ಮೇರೆಗೆ ಎಕ್ಸ್‌ಪ್ರೆಸ್‌ವೇ ಆರಂಭಿಸಲು ಬಿಬಿಎಂಪಿ ಡಿಪಿಆರ್ ಸಿದ್ಧಪಡಿಸುತ್ತಿದೆ. ಡಿಕೆ ಶಿವಕುಮಾರ್ ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದು "ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಹೊಸ ಮೂಲಸೌಕರ್ಯ ಯೋಜನೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಪೈಪ್‌ಲೈನ್ ರಸ್ತೆಯನ್ನು ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪರ್ಯಾಯ ರಸ್ತೆಯ ಅಗತ್ಯ: ಕನಕಪುರ ರಸ್ತೆಯು ಬೆಂಗಳೂರು ನಗರಕ್ಕೆ ಪ್ರಮುಖ ಕೊಂಡಿಯಾಗಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆಯು ಗಮನಾರ್ಹ ತೊಂದರೆಗಳನ್ನು ಉಂಟುಮಾಡಿದೆ. ಮೆಟ್ರೋ ನಿರ್ಮಾಣವು ಗ್ರೇಡ್ ಸಪರೇಟರ್‌ಗಳು ಹೊಸ ಕಾರ್ಯಸಾಧ್ಯತೆಗೆ ಮಿತಿಗೊಳಿಸುತ್ತಿದೆ. ಹೀಗಾಗಿ, ಪರ್ಯಾಯ ವ್ಯವಸ್ಥೆ ಅಗತ್ಯವಾಗಿದೆ. ಬಿಡಬ್ಲ್ಯುಎಸ್‌ಎಸ್‌ಪಿ ಪೈಪ್‌ಲೈನ್ ರಸ್ತೆಯ ಉದ್ದಕ್ಕೂ ಒಂದು ಫ್ಲೈಓವರ್ ನಿರ್ಮಿಸಿದರೆ ಈ ಒತ್ತಡ ಕಡಿಮೆಯಾಗಲಿದೆ ಎಂದು ಡಿಕೆಶಿ ಹೇಳಿದ್ದಾರೆ. ಹಿರಿಯ ಎಂಜಿನಿಯರ್‌ಗಳು ಈಗಾಗಲೇ ಈ ಎಕ್ಸ್‌ಪ್ರೆಸ್‌ವೇ ಅತ್ಯಂತ ಅಗತ್ಯವೆಂದು ಒತ್ತಿ ಹೇಳಿರುವುದರಿಂದ ಡಿಪಿಆರ್‌ಗೆ ಟೆಂಡರ್ ಕರೆಯಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ದೃಢಪಡಿಸಿದ್ದಾರೆ.
"ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಈಗಾಗಲೇ ರಾಗಿಗುಡ್ಡದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಿದೆ. ಆದರೆ, ಒಂದು ಅಂತ್ಯದಿಂದ ಇನ್ನೊಂದು ಅಂತ್ಯಕ್ಕೆ ಪರ್ಯಾಯ ಸಂಪರ್ಕ ಇಲ್ಲದೆ ಇರುವುದರಿಂದ ಸಂಚಾರ ದಟ್ಟಣೆ ತೊಂದರೆಗಳು ಮುಂದುವರೆದಿದೆ. ಇದ ಕಾರಣಕ್ಕೆ ಎಕ್ಸ್‌ಪ್ರೆಸ್ ವೇ ನಿರ್ಮಿಸಲು ಉದ್ದೇಶಿಸಲಾಗಿದೆ" ಎಂದು ಎಂಜಿನಿಯರ್ ಹೇಳಿದ್ದಾರೆ.