ಕನ್ನಡ ಸುದ್ದಿ  /  Karnataka  /  Woman From Kerala Raped In Bengaluru By Bike Taxi Driver And Associate

Bengaluru Rape Case: ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಅತ್ಯಾಚಾರ.. ಮೂವರ ಬಂಧನ

ಕೇರಳ ಮೂಲದ 23 ವರ್ಷದ ಯುವತಿ ಮೇಲೆ ಬೈಕ್ ಟ್ಯಾಕ್ಸಿ ಚಾಲಕ ಮತ್ತು ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇರಳ ಮೂಲದ 23 ವರ್ಷದ ಯುವತಿ ಮೇಲೆ ಬೈಕ್ ಟ್ಯಾಕ್ಸಿ ಚಾಲಕ ಮತ್ತು ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕೇರಳದ ಫ್ರೀಲಾನ್ಸ್ ಉದ್ಯೋಗಿಯಾಗಿರುವ ಸಂತ್ರಸ್ತೆ ಕೆಲಸದ ಮೇಲೆ ನಗರಕ್ಕೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿಯ ನಿಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ತೆರಳಲು ಕಳೆದ ಶುಕ್ರವಾರ ರಾತ್ರಿ ಕೇರಳ ಮೂಲದ ಯುವತಿ ಬೈಕ್​ ಟ್ಯಾಕ್ಸಿ ಬುಕ್​ ಮಾಡಿದ್ದಳು.

ಬೈಕ್​ ಟ್ಯಾಕ್ಸಿಯವನು ಆಕೆಯನ್ನು ಪಿಕ್​ ಮಾಡಲು ಬಂದಾಗ ಯುವತಿ ಮದ್ಯಪಾನ ಮಾಡಿದ್ದಳು, ನಿಲಾದ್ರಿ ನಗರ ತಲುಪುವರಷ್ಟರಲ್ಲಿ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು ಎಂದು ಹೇಳಲಾಗಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಬೈಕ್​ನವನು ತನ್ನ ಸ್ನೇಹಿತ ಹಾಗೂ ಸ್ನೇಹಿತೆಯ ಸಹಾಯದಿಂದ ನಿಲಾದ್ರಿ ನಗರದ ರೂಂವೊಂದಕ್ಕೆ ಯುವತಿಯನ್ನು ಕರೆದೊಯ್ದಿದ್ದಾನೆ.

ಅಲ್ಲಿ ಬೈಕ್​ನವನು ಹಾಗೂ ಆತನ ಸ್ನೇಹಿತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಯುವತಿಗೆ ಪ್ರಜ್ಞೆ ಬಂದ ಮೇಲೆ ಮರುದಿನ ಬೆಳಗ್ಗೆ ಆಕೆಯನ್ನು ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿದ ಯುವತಿಯ ಸ್ನೇಹಿತೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ.

ಸಂತ್ರಸ್ತೆಯು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಬುಕಿಂಗ್ ವಿವರಗಳ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಘಟನೆ ವರದಿಯಾದ ಎರಡು ಗಂಟೆಗಳಲ್ಲಿ ಅವರನ್ನು ಬಂಧಿಸಿದ್ದಾರೆ. ಆರೋಪಿಗಳು ಇದೇ ರೀತಿಯ ಅಪರಾಧಗಳಲ್ಲಿ ಈ ಹಿಂದೆ ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಈಗ ಅವರ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.

“ಯಾವುದೇ ಸಾರಿಗೆಯನ್ನು, ವಿಶೇಷವಾಗಿ ತಡರಾತ್ರಿಯಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬುಕ್ ಮಾಡುವಾಗ ಜನರು, ವಿಶೇಷವಾಗಿ ಒಂಟಿಯಾಗಿರುವ ಮಹಿಳೆಯರು ಜಾಗರೂಕರಾಗಿರಲು ನಾವು ಒತ್ತಾಯಿಸುತ್ತೇವೆ. ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಯಾಣದ ವಿವರಗಳನ್ನು ಹಂಚಿಕೊಳ್ಳಬೇಕು" ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಹೇಳಿದ್ದಾರೆ.

ಗಮನಿಸಬಹುದಾದ ಇತರೆ ಸುದ್ದಿಗಳು

ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಪುಟ್ಟ ಮಗಳ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದು ಪ್ರತೀಕಾರ

ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದು ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

ಮಾನಸಿಕ ಅಸ್ವಸ್ಥ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 107 ವರ್ಷಗಳ ಕಠಿಣ ಜೈಲು ಶಿಕ್ಷೆ

ತನ್ನ ಮಾನಸಿಕ ಅಸ್ವಸ್ಥ ಮಗಳ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಕೇರಳದ ಪತ್ತನಂತಿಟ್ಟ ಪೋಕ್ಸೊ ನ್ಯಾಯಾಲಯವು 107 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 4 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಸ್ತರಣೆ ಆಗಲಿದೆ ಎಂದು ಕೋರ್ಟ್​ ಹೇಳಿದೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಸೂಚಿಸಿದೆ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point