Kannada News  /  Nation And-world  /  Woman Survived Suicide Bid, Sexually Assaulted By Hospital Staffer In Ambulance
ಯುವತಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಅಂಬ್ಯುಲೆನ್ಸ್‌ನಲ್ಲಿ ಲೈಂಗಿಕ ದೌರ್ಜನ್ಯ
ಯುವತಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಅಂಬ್ಯುಲೆನ್ಸ್‌ನಲ್ಲಿ ಲೈಂಗಿಕ ದೌರ್ಜನ್ಯ

ವಿಷಕುಡಿದು ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಅಂಬ್ಯುಲೆನ್ಸ್‌ನಲ್ಲಿ ಲೈಂಗಿಕ ದೌರ್ಜನ್ಯ

06 February 2023, 15:28 ISTHT Kannada Desk
06 February 2023, 15:28 IST

Sexually assaulted in Ambulance: ಅಂಬ್ಯುಲೆನ್ಸ್‌ನಲ್ಲಿ ವಿಷ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ಆ ಯುವತಿಯ ಮೇಲೆ ಕೆ. ದಯಾಲಾಲ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಿರುವನಂತಪುರ: ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯೊಬ್ಬಳನ್ನು ಅಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಅಂಬ್ಯುಲೆನ್ಸ್‌ನಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಯು ಜೀವನ್ಮರಣ ಸ್ಥಿತಿಯಲ್ಲಿ ಪರದಾಡುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೌರ್ಯ ಮೆರೆದ ಘಟನೆಯೊಂದು ಕೇರಳದ ತ್ರಿಶೂರು ಜಿಲ್ಲೆಯಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಆ ಯುವತಿಯನ್ನು ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಮೊದಲು ಕೊಡುಂಗಲ್ಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆಕೆಯ ಸ್ಥಿತಿ ಹದಗೆಟ್ಟಾಗ ವೈದ್ಯರು 50 ಕಿಮೀ ದೂರದಲ್ಲಿರುವ ತ್ರಿಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಅಂಬ್ಯುಲೆನ್ಸ್‌ನಲ್ಲಿ ರೋಗಿಯ ಜತೆಗೆ ತಾಲೂಕು ಆಸ್ಪತ್ರೆಯ ಎಲೆಕ್ಟ್ರಿಕಲ್‌ ವಿಭಾಗದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಯನ್ನು ಕಳುಹಿಸಿಕೊಡಲಾಗಿತ್ತು. ಮೆಡಿಕಲ್‌ ಕಾಲೇಜಿಗೆ ವಿಷ ಸೇವಿಸಿದ ಯುವತಿಯನ್ನು ಸಾಗಿಸುವ ಸಮಯದಲ್ಲಿ ಜತೆಗಿರಲೆಂದು ಕೆ. ದಯಾಲಾಲ್‌ ಎಂಬಾತನನ್ನು ಕಳುಹಿಸಲಾಗಿತ್ತು.

ಅಂಬ್ಯುಲೆನ್ಸ್‌ನಲ್ಲಿ ವಿಷ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ಆ ಯುವತಿಯ ಮೇಲೆ ಕೆ. ದಯಾಲಾಲ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ತಲುಪಿದ ಬಳಿಕ ತುಸು ಚೇತರಿಸಿಕೊಂಡ ಬಳಿಕ ಆ ಯುವತಿಯು ಆಸ್ಪತ್ರೆಯ ನರ್ಸ್‌ಗೆ ತನಗಾದ ಲೈಂಗಿಕ ದೌರ್ಜನ್ಯದ ಸಂಗತಿಯನ್ನು ತಿಳಿಸಿದ್ದಾಳೆ. ಆ ಆಸ್ಪತ್ರೆಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ. ಆತನು ಪರಾರಿಯಾಗುವ ಮುನ್ನವೇ ಪೊಲೀಸರು ಬಂಧಿಸಿ ಕೇಸ್‌ ಜಡಿದಿದ್ದಾರೆ.

ಈ ಘಟನೆ ಕುರಿತು ವರದಿ ನೀಡುವಂತೆ ಆಸ್ಪತ್ರೆಯ ಸುಪರಿಟೆಂಡೆಂಟ್‌ ಅವರಿಗೆ ಕೇರಳದ ಆರೋಗ್ಯ ಸಚಿವರು ಸೂಚಿಸಿದ್ದಾರೆ.

2020ರಲ್ಲಿ ಕೊಟ್ಟಾಯಂನಲ್ಲಿ ಆಂಬ್ಯುಲೆನ್ಸ್‌ ಚಾಲಕನೊಬ್ಬ ಕೋವಿಡ್‌ 19 ರೋಗಿಯನ್ನು ಅತ್ಯಾಚಾರ ಮಾಡಿದ್ದ. ಈ ಘಟನೆ ಬೆಳಕಿಗೆ ಬಂದ ಬಳಿಕ ಸರಕಾರವು "ಅಂಬ್ಯುಲೆನ್ಸ್‌ನಲ್ಲಿ ಚಾಲಕನೊಂದಿಗೆ ಮಹಿಳಾ ರೋಗಿಗಳನ್ನು ಒಬ್ಬ

ಈ ಘಟನೆಯ ಬಳಿಕ ಎಚ್ಚೆತ್ತಿರುವ ಕೇರಳ ಸರಕಾರವು, ಅಂಬ್ಯುಲೆನ್ಸ್‌ನಲ್ಲಿ ಮಹಿಳಾ ರೋಗಿಗಳನ್ನು ಚಾಲಕನ ಜತೆಗೆ ಒಂಟಿಯಾಗಿ ಕಳುಹಿಸಬಾರದು ಎಂದು ಆದೇಶ ನೀಡಿತ್ತು. ಆಂಬ್ಯುಲೆನ್ಸ್‌ನಲ್ಲಿ ಯಾರಾದರೂ ಆರೋಗ್ಯ ಕಾರ್ಯಕರ್ತರು ಇರಬೇಕು ಎಂದು ಸೂಚಿಸಿತ್ತು.

(ಯಾರಿಗಾದರೂ ಮಾನಸಿಕ ತೊಂದರೆ ಇದ್ದರೆ, ಆತ್ಮಹತ್ಯೆಯಂತಹ ಯೋಚನೆಗಳು ಬಂದರೆ ತಕ್ಷಣ ಸಹಾಯವಾಣಿ ಸಂಪರ್ಕಿಸಿ. ಐಕಾಲ್‌ ಸಹಾಯವಾಣಿ: 9152987821)

ಕರ್ನಾಟಕದ ವಿವಿಧ ಸಹಾಯವಾಣಿಗಳು

ಸಹಾಯಹಸ್ತ: 080 23535787

ಮಕ್ಕಳ ಸಹಾಯವಾಣಿ: 1098

ಹಿರಿಯ ನಾಗರಿಕರ ಸಹಾಯವಾಣಿ: 1090

ವನಿತಾ ಸಹಾಯವಾಣಿ: 1091

ಆತ್ಮಹತ್ಯೆ ತಡೆ ಸಹಾಯವಾಣಿ: ಸಹಾಯ್‌: 080 25497777

ಇನ್ನಿತರ ಸಹಾಯವಾಣಿಗಳಿಗೆ ಲಿಂಕ್‌ ಇಲ್ಲಿದೆ

ಬಾಲಕನಿಂದ 58 ವರ್ಷದ ಮಹಿಳೆಯ ಅತ್ಯಾಚಾರ-ಕೊಲೆ

16 ವರ್ಷದ ಬಾಲಕನೋರ್ವ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ರೇವಾ ಜಿಲ್ಲೆಯ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಸಪುರಿ ಗ್ರಾಮದಲ್ಲಿ ಜನವರಿ 30 ರಂದು ರಾತ್ರಿ ಈ ಘಟನೆ ನಡೆದಿದೆ.

ಅತ್ಯಾಚಾರ ಎಸಗಿದ ಬಳಿಕ ಬಾಲಕ ಆಕೆಯ ಬಾಯಿಗೆ ಪ್ಲಾಸ್ಟಿಕ್ ಚೀಲ ಮತ್ತು ಬಟ್ಟೆಯನ್ನು ತುಂಬಿ, ಆಕೆಯ ಮನೆಯ ಸಮೀಪದ ನಿರ್ಮಾಣ ಹಂತದ ಕಟ್ಟಡದ ಬಳಿ ಎಳೆದೊಯ್ದಿದ್ದಾನೆ. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆಕೆಯ ಖಾಸಗಿ ಭಾಗಗಳಿಗೆ ಗಾಯಗೊಳಿಸಿದ್ದಾನೆ. ವರದಿಗೆ ಲಿಂಕ್‌ ಇಲ್ಲಿದೆ.