Bangalore News: ಚಾಮರಾಜಪೇಟೆಯಲ್ಲಿ ನೀರು ಹಿಡಿಯಲು ಹೋಗಿದ್ದ ಮಹಿಳೆ ವಿದ್ಯುತ್ ಸ್ಪರ್ಶಿಸಿ ದುರ್ಮರಣ; ಸಚಿವ ಜಮೀರ್ ವಿರುದ್ಧ ಆಕ್ರೋಶ
Bangalore News: ಬೆಂಗಳೂರಿನಲ್ಲಿ ನೀರು ಹಿಡಿಯುವ ವೇಳೆ ಮಹಿಳೆಯೊಬ್ಬರು ಅಕ್ರಮ ವಿದ್ಯುತ್ ಸಂಪರ್ಕದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ.ವರದಿ: ಎಚ್.ಮಾರುತಿ, ಬೆಂಗಳೂರು

Bangalore News: ಚಾಮರಾಜಪೇಟೆಯ ಆನಂದಪುರದ ಮಾರುಕಟ್ಟೆ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರು ಹಿಡಿಯಲು ಹೋದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ಪಪಿದ್ದಾರೆ. 24 ವರ್ಷದ ಸೆಲ್ವಿ ಮೃತ ಮಹಿಳೆ. ಮೋಟಾರ್ ಗೆ ಅಳವಡಿಸಿದ್ದ ವೈರ್ ತಗುಲಿ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮಾರುಕಟ್ಟೆ ರಸ್ತೆಯಲ್ಲಿ ಬಿಬಿಎಂಪಿ ಅವ್ಯವಸ್ಥೆ ವಿರುದ್ಧ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಪರಿಣಾಮ ಮೈಸೂರು ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿತ್ತು. ಇಲ್ಲಿ ಹೆಚ್ಚಾಗಿ ಹಿಂದೂಗಳು ವಾಸ ಮಾಡುತ್ತಿದ್ದಾರೆ. ಪಕ್ಕದಲ್ಲಿರುವ ಟಿಪ್ಪು ನಗರದಲ್ಲಿ ಹೆಚ್ಚಾಗಿ ಮುಸ್ಲಿಮರಿದ್ದಾರೆ. ಅಲ್ಲಿ ಮನೆ ಮನೆಗೂ ನೀರಿನ ಸಂಪರ್ಕ ಇದೆ. ನಾವು ಕೇಳಿದರೆ ಇದು ಸ್ಲಂ ಎಂದು ಸಬೂಬು ಹೇಳುತ್ತಾರೆ. ನಾವು ವೋಟ್ ಹಾಕಿದ್ದೇವೆ. ಇಲ್ಲಿ ನೀರು, ಚರಂಡಿ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಪರದಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರವನ್ನು ಪ್ರತಿನಿಧಿಸುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವರು ಮೃತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ. ಮುಂಜಾನೆ ಬೆಳಗ್ಗೆ 5.30 ಸುಮಾರಿಗೆ ಕಾವೇರಿ ನೀರು ಹಿಡಿಯುವಾಗಈ ದುರಂತ ಸಂಭವಿಸಿದೆ. ಮೇನ್ ಲೈನ್ನಿಂದ ಮೋಟಾರ್ ಆನ್ ಮಾಡುವಾಗ ಅವರು ಶಾಕ್ ಹೊಡೆದು ಅಸು ನೀಗಿದ್ದಾರೆ.
ಮೃತ ಸೆಲ್ವಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡ ಈ ಹಿಂದೆಯೇ ಮೃತಪಟ್ಟಿದ್ದು, ಓರ್ವ ಮಗಳಿಗೆ ಮದುವೆ ಮಾಡಿದ್ದಾರೆ. ಮನೆ ಕೆಲಸ ಮಾಡಿಕೊಂಡು ಈಕೆ ಮಕ್ಕಳನ್ನು ಸಾಕುತ್ತಿದ್ದರು ಎನ್ನಲಾಗಿದೆ.
ಮನೆ ಮನೆಗೆ ಮೋಟರ್ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಅನಧಿಕೃತವಾಗಿ 3 ರಿಂದ 4 ಮಹಡಿಗಳ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ನೀರು ಮೇಲೆ ಹತ್ತದ ಕಾರಣ ಅಕ್ರಮವಾಗಿ ಮೋಟಾರಗಳನ್ನು ಬಳಸಿ ವಿದ್ಯುತ್ ಕಂಬದಿಂದ ಮೋಟಾರುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ. 15 ದಿನದ ಹಿಂದೆ ಬಂದು ಮನೆ ಮನೆಗೆ ಕಾವೇರಿ ನೀರು ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. ಎಂದು ತಿಳಿಸಿದ್ದಾರೆ.
ಮಹಿಳೆ ಮೇಲೆ ಉಗಿದವನ ಸೆರೆ
ತನ್ನ ಪಾಡಿಗೆ ತಾನು ನಡೆದುಕೊಂಡು ಮಹಿಳೆ ಹೋಗುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಪಾನ್ ಮಸಲಾ ತಿಂದು ಉಗಿದು ನಂತರ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ಇಂದಿರಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹರೀಶ್ ಎಂಬಾತ ದೊಮ್ಮಲೂರು ನಿವಾಸಿ ಅರ್ಚನಾ ಅವರನ್ನು ಹರೀಶ್ ಹಿಂಬಾಲಿಸಿಕೊಂಡು ಬಂದು ಪಾನ್ ಮಸಾಲಾ ಉಗಿದು ನಾಪತ್ತೆಯಾಗಿದ್ದ. ಈ ಸಂಬಂಧ ಅರ್ಚನಾ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಹರೀಶ್‌ನನ್ನು ಬಂಧಿಸಿದ್ದಾರೆ. ಫೆಬ್ರವರಿ 25ರಂದು ಈ ಘಟನೆ ನಡೆದಿದ್ದು, ಮಾರ್ಚ್ 13 ರಂದು ಆರೋಪಿ ಬಂಧಿಸಲಾಗಿದೆ.
ರಾತ್ರಿ 9.30ರ ಸುಮಾರಿಗೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಪಾರ್ಕ್ ಬಳಿ ಅರ್ಚನಾ ಅವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಹರೀಶ್ ಅರ್ಚನಾ ಅವರನ್ನು ಹಿಂಬಾಲಿಸಿಕೊಂಡು ಬಂದ ಹರೀಶ್ ಪಾನ್ ಮಸಾಲಾ ಉಗಿದು ಓಡಿ ಹೋಗಿದ್ದ. ನಂತರವೂ ಅದೇ ದಿನ ರಾತ್ರಿ 11 ಗಂಟೆಗೆ ಮತ್ತೆ ಹರೀಶ್ ಅರ್ಚನಾ ಅವರ ಕಣ್ಣಿಗೆ ಬಿದ್ದಿದ್ದ. ಇದರಿಂದ ಭಯಗೊಂಡ ಅರ್ಚನಾ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅರ್ಚನಾ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪೊಲೀಸರು ಬಿಎನ್ಎಸ್ ಸೆಕ್ಷನ್ 78, 79ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ನಡೆದ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಹರೀಶ್‌ನನ್ನು ಬಂಧಿಸಿದ್ದಾರೆ. ತಿಪ್ಪಸಂದ್ರದ ನಿವಾಸಿಯಾಗಿರುವ ಹರೀಶ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕಸ್ಮಿಕವಾಗಿ ಪಾನ್ ಮಸಾಲಾ ಉಗಿದಿದ್ದಾಗಿ ತಿಳಿಸಿದ್ದಾನೆ.
ವರದಿ: ಎಚ್.ಮಾರುತಿ, ಬೆಂಗಳೂರು

ವಿಭಾಗ