ಪತ್ರಕರ್ತ ರವಿ ಬೆಳಗೆರೆ ಸ್ಮರಣಾರ್ಥ ಏಪ್ರಿಲ್ 4ಕ್ಕೆ ಆಯೋಜಿಸಿದ್ದ ‘ಖಾಸ್ ಗೀತ್’ ಕಾರ್ಯಕ್ರಮ ಮುಂದೂಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಪತ್ರಕರ್ತ ರವಿ ಬೆಳಗೆರೆ ಸ್ಮರಣಾರ್ಥ ಏಪ್ರಿಲ್ 4ಕ್ಕೆ ಆಯೋಜಿಸಿದ್ದ ‘ಖಾಸ್ ಗೀತ್’ ಕಾರ್ಯಕ್ರಮ ಮುಂದೂಡಿಕೆ

ಪತ್ರಕರ್ತ ರವಿ ಬೆಳಗೆರೆ ಸ್ಮರಣಾರ್ಥ ಏಪ್ರಿಲ್ 4ಕ್ಕೆ ಆಯೋಜಿಸಿದ್ದ ‘ಖಾಸ್ ಗೀತ್’ ಕಾರ್ಯಕ್ರಮ ಮುಂದೂಡಿಕೆ

ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಖಾಸ್ ಗೀತ್‘ ಎಂದೂ ಮರೆಯದ ಹಾಡು ವಿಶೇಷ ಕಾರ್ಯಕ್ರಮ ನಡೆಯಬೇಕಿತ್ತು. ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ರವಿ ಬೆಳಗೆರೆ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ; ಏಪ್ರಿಲ್‌ 4ಕ್ಕೆ ಎಂದೂ ಮರೆಯದ ಹಾಡು ‘ಖಾಸ್ ಗೀತ್
ರವಿ ಬೆಳಗೆರೆ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ; ಏಪ್ರಿಲ್‌ 4ಕ್ಕೆ ಎಂದೂ ಮರೆಯದ ಹಾಡು ‘ಖಾಸ್ ಗೀತ್

ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಸ್ಮರಣಾರ್ಥ ಇದೇ ಏಪ್ರಿಲ್ 4ನೇ ತಾರೀಕಿನಂದು ಆಯೋಜಿಸಿದ್ದ “ಖಾಸ್ ಗೀತ್”- ಎಂದೂ ಮರೆಯದ ಹಾಡು ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಸ್ಮರಣಾರ್ಥ ಏಪ್ರಿಲ್ 4 ರಂದು ‘ಖಾಸ್ ಗೀತ್‘ ಎಂದೂ ಮರೆಯದ ಹಾಡು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪತ್ರಕರ್ತ ಅಜಿತ್ ಹನುಮಕ್ಕನವರ್ ಈ ಕಾರ್ಯಕ್ರಮದ ನಿರೂಪಣೆ ಮಾಡಬೇಕಿತ್ತು. ಹಳೆಯ ಹಿಂದಿ- ಕನ್ನಡ ಇತರ ಪ್ರಾದೇಶಿಕ ಭಾಷೆಯ ಹಾಡುಗಳು ಈ ದಿನ ನಿಮ್ಮ ಕಿವಿಗಳನ್ನು ಇಂಪಾಗಿಸಲಿದ್ದವು. ರಾಮಚಂದ್ರ ಹಡಪದ, ಹರ್ಷ ರಂಜಿನಿ ಹಾಗೂ ಸ್ಪರ್ಶ ಆರ್‌ಕೆ ಹಾಡುಗಳಿಗೆ ಧ್ವನಿಯಾಗಲಿದ್ದರು. ಒಟ್ಟು ಮೂರು ಗಂಟೆಗಳ ಕಾರ್ಯಕ್ರಮ ಇದಾಗಲಿದ್ದು, ಸಂಜೆ 5.30ಕ್ಕೆ ಆರಂಭವಾಗಲಿದೆ. ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಈ ಮೊದಲು ತಿಳಿಸಿದ್ದರು.

ಈ ಕಾರ್ಯಕ್ರಮಕ್ಕೆ ಟಿಕೇಟ್ ಖರೀದಿ ಮಾಡಬೇಕಾಗುತ್ತದೆ. ಬುಕ್‌ಮೈ ಶೋ ಮೂಲಕ ನೀವು ಟಿಕೆಟ್ ಖರೀದಿ ಮಾಡಬಹುದು. ಪ್ರಾರ್ಥನಾ.ವರ್ಲ್ಡ್ ಶಾಲೆ, ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಪರಮಪದ ಈ ಮೂರೂ ಸಹಭಾಗಿತ್ವವನ್ನು ವಹಿಸಿವೆ ಎಂದು ಆಯೋಜಕರು ಹೇಳಿದ್ದರು.

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಕಿರು ಪರಿಚಯ

ರವಿ ಬೆಳಗೆರೆ ಹುಟ್ಟಿದ್ದು 1958ರ ಮಾರ್ಚ್ 15. ಸಂಯುಕ್ತ ಕರ್ನಾಟಕ, ಕರ್ಮವೀರ ಸೇರಿದಂತೆ ವಿವಿಧೆಡೆ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದವರಿಗೆ ದೊಡ್ಡ ಮಟ್ಟದಲ್ಲಿ ಹೆಸರು, ಗುರುತು, ಅಭಿಮಾನಿಗಳು ಎಲ್ಲವನ್ನೂ ದೊರಕಿಸಿಕೊಟ್ಟದ್ದು ಅವರು ಸಂಪಾದಕರಾಗಿ ಹೊರತರುತ್ತಿದ್ದ ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಓ ಮನಸೇ ಎಂಬ ಪಾಕ್ಷಿಕ. ಆ ಖ್ಯಾತಿ ದೊರೆಯುವ ಮುಂಚೆ ‘ಪಾಪಿಗಳ ಲೋಕದಲ್ಲಿ‘ ಸರಣಿ ಲೇಖನ ಹಾಗೂ ಸಣ್ಣ ಕಥೆಗಳ ಮೂಲಕ ಪರಿಚಿತರಾಗಿದ್ದರು.

ರವಿ ಬೆಳಗೆರೆಯವರ ಕಾದಂಬರಿಗಳು ಹಾಗೂ ವಿವಿಧ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಅನುವಾದ ಮಾಡಿರುವಂಥದ್ದು ಹೆಚ್ಚಿನದು. ಕ್ರೈಂ ಡೈರಿ, ಎಂದೂ ಮರೆಯದ ಹಾಡು ಕಾರ್ಯಕ್ರಮಗಳು ಕಿರುತೆರೆಯಲ್ಲೂ ಕೀರ್ತಿ, ಪ್ರಖ್ಯಾತಿಯನ್ನು ತಂದುಕೊಟ್ಟವು. ಇನ್ನು ಬೆಳ್ ಬೆಳಗ್ಗೆ ಬೆಳಗೆರೆ ಎಂಬ ರೇಡಿಯೊ ಕಾರ್ಯಕ್ರಮವನ್ನು ಸಹ ಕೆಲವು ಸಮಯ ಅವರು ನಡೆಸಿಕೊಟ್ಟರು.

ಹೇಳಿ ಹೋಗು ಕಾರಣ, ರವಿ ಬೆಳಗೆರೆ ಒಟ್ಟಾರೆ ಕಥೆಗಳು, ನೀ ಹೀಂಗ ನೋಡಬ್ಯಾಡ ನನ್ನ, ಹಿಮಾಲಯನ್ ಬ್ಲಂಡರ್, ಮಾಂಡೋವಿ, ಮಾಟಗಾತಿ, ಸರ್ಪ ಸಂಬಂಧ ಸೇರಿದಂತೆ ಅನೇಕ ಕಥೆ- ಕಾದಂಬರಿಗಳನ್ನು ಬರೆದಿದ್ದು, ಇವತ್ತಿಗೂ ಅವರ ಕೃತಿಗಳು ಬೆಸ್ಟ್ ಸೆಲ್ಲರ್ ಎನಿಸಿವೆ.

ಮಾಧ್ಯಮ ಅಕಾಡೆಮಿಯಿಂದ ಜೀವಮಾನ ಸಾಧನೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ದೊರಕಿದ್ದವು. ಸಿನಿಮಾಗಳು- ಧಾರಾವಾಹಿಗಳಲ್ಲೂ ನಟಿಸಿದ್ದ ರವಿ ಬೆಳಗೆರೆ ಅವರು ನವೆಂಬರ್ 13, 2020ರಲ್ಲಿ ನಿಧನರಾದರು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner