Yadagiri News: ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ 150 ಕೆಜಿ ಶ್ರೀಗಂಧದ ಕಟ್ಟಿಗೆ ವಶ; ವ್ಯಕ್ತಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Yadagiri News: ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ 150 ಕೆಜಿ ಶ್ರೀಗಂಧದ ಕಟ್ಟಿಗೆ ವಶ; ವ್ಯಕ್ತಿ ಬಂಧನ

Yadagiri News: ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ 150 ಕೆಜಿ ಶ್ರೀಗಂಧದ ಕಟ್ಟಿಗೆ ವಶ; ವ್ಯಕ್ತಿ ಬಂಧನ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ದಟ್ಟವಾದ ಅರಣ್ಯವಿದ್ದು, ಶ್ರೀಗಂಧ, ಸಾಗವಾನೆ ಮರಗಳು ಪ್ರಾಕೃತಿಕವಾಗಿ ಬೆಳೆದಿವೆ. ಇದನ್ನು ಅರಿತ ಕೆಲವರು ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಸಾಗಾಟ ಮಾಡುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮ ಸಮೀಪದ ಬಗ್ಗಲಮಡು-ಸೇಡಂ ಹೆದ್ದಾರಿಯಲ್ಲಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, 150 ಕೆಜಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮ ಸಮೀಪದ ಬಗ್ಗಲಮಡು-ಸೇಡಂ ಹೆದ್ದಾರಿಯಲ್ಲಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, 150 ಕೆಜಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ.

ಯಾದಗಿರಿ: ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಗುರುವಾರ ದಾಳಿ ನಡೆಸಿ 15 ಲಕ್ಷ ರೂ. ಮೌಲ್ಯದ 150 ಕೆಜಿ ಗಂಧದ ಗಟ್ಟಿಗೆ ವಶಕ್ಕೆ ಪಡೆದು ವ್ಯಕ್ತಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ದಟ್ಟವಾದ ಅರಣ್ಯವಿದ್ದು, ಶ್ರೀಗಂಧ, ಸಾಗವಾನೆ ಮರಗಳು ಪ್ರಾಕೃತಿಕವಾಗಿ ಬೆಳೆದಿವೆ. ಇದನ್ನು ಅರಿತ ಕೆಲವರು ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಸಾಗಾಟ ಮಾಡುತ್ತಿದ್ದಾರೆ.

ಗುರುವಾರ ತಾಲೂಕಿನ ಹತ್ತಿಕುಣಿ ಗ್ರಾಮ ಸಮೀಪದ ಬಗ್ಗಲಮಡು-ಸೇಡಂ ಹೆದ್ದಾರಿಯಲ್ಲಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. 150 ಕೆಜಿ ಗಂಧದ ಕಟ್ಟಿಗೆ ಅಂದಾಜು 15 ಲಕ್ಷ ರೂ.ಮೌಲ್ಯದ್ದಾಗಿದೆ. ಮಹಾರಾಷ್ಟ್ರ ರಾಜ್ಯದ ನೋಂದಣಿ ಇರುವ 4678 ಬಿಳಿ ಬಣ್ಣದ ಕಾರಿನಲ್ಲಿ ಗಂಧದ ಕಟ್ಟಿಗೆಗಳನ್ನು ವ್ಯವಸ್ಥಿತವಾಗಿ ಶೇಖರಿಸಲಿಡಲಾಗಿತ್ತು. ಸಾಗಾಟಕ್ಕೆ ಬಳಸುತ್ತಿದ್ದ ಬೈಕ್ ಹಾಗೂ ಎರಡು ಕೊಡಲಿಗಳು ಜಪ್ತಿ ಮಾಡಿಕೊಳ್ಳಲಾಗಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಮೂಲದ ಸಚಿನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೈಕ್ ಚಾಲಕ ಪಾಂಡುರಂಗ ಎಂಬಾತ ನಾಪತ್ತೆಯಾಗಿದ್ದು ಆತನ ಪತ್ತೆಗೆ ಜಾಲ ಬೀಸಲಾಗಿದೆ. ಅರಣ್ಯಪ್ರದೇಶಕ್ಕೆ ತೆರಳಿ ಬೆಲೆ ಬಾಳುವ ಶ್ರೀಗಂಧ ಮರ ಕಡಿದು ವಿದೇಶಕ್ಕೆ ವ್ಯವಸ್ಥಿತವಾಗಿ ಮಾರಾಟ ಮಾಡಿ ಲಕ್ಷಾಂತರ ರೂ. ಸಂಪಾದನೆ ಮಾಡುತ್ತಿದ್ದ ಗ್ಯಾಂಗ್ ಇದಾಗಿದೆ ಎಂದು ತಿಳಿದು ಬಂದಿದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner