Yadagiri News: ಕೃಷ್ಣಾ ಮೇಲ್ಡಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ; 14 ದಿನ ಚಾಲೂ, 8 ದಿನ ಬಂದ್‌ ಪದ್ಧತಿ ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Yadagiri News: ಕೃಷ್ಣಾ ಮೇಲ್ಡಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ; 14 ದಿನ ಚಾಲೂ, 8 ದಿನ ಬಂದ್‌ ಪದ್ಧತಿ ಜಾರಿ

Yadagiri News: ಕೃಷ್ಣಾ ಮೇಲ್ಡಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ; 14 ದಿನ ಚಾಲೂ, 8 ದಿನ ಬಂದ್‌ ಪದ್ಧತಿ ಜಾರಿ

ಮುಂಗಾರು ಹಂಗಾಮಿಗಾಗಿ ಜಮೀನುಗಳಿಗೆ ನೀರು ಹರಿಸಲು ಹೊಸ ಕ್ರಮ. ಕೃಷ್ಣಾ ಮೇಲ್ಡಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆಯನ್ನು ಅಕ್ಟೋಬರ್‌ 14 ರಿಂದ 14 ದಿನ ಚಾಲೂ, 8 ದಿನ ಬಂದ್‌ ಪದ್ಧತಿ ಜಾರಿ ಮಾಡಲಾಗಿದೆ.

ಕೃಷ್ಣಾ ಮೇಲ್ಡಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ; 14 ದಿನ ಚಾಲೂ, 8 ದಿನ ಬಂದ್‌ ಪದ್ಧತಿ
ಕೃಷ್ಣಾ ಮೇಲ್ಡಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ; 14 ದಿನ ಚಾಲೂ, 8 ದಿನ ಬಂದ್‌ ಪದ್ಧತಿ

ಯಾದಗಿರಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿಗಾಗಿ ನೀರು ಹರಿಸುವ ಚಾಲೂ ಬಂದ್ ಪದ್ಧತಿಯನ್ನು ಪರಿಷ್ಕೃತ ಪ್ರಕಟಣೆ ಮಾಡಲಾಗಿದೆ ಎಂದು ಭೀಮರಾಯನಗುಡ್ಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜೆ.ಬಿ.ಸಿ ವೃತ್ತ ಅಧೀಕ್ಷಕ ಅಭಿಯಂತರು ತಿಳಿಸಿದ್ದಾರೆ.

ಕೃಷ್ಣಾ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಮುಂಗಾರು ಹಂಗಾಮಿಗೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಗಸ್ಟ್ 21 ರಂದು ಜರುಗಿಸಿ ತೆಗೆದುಕೊಂಡ ನಿರ್ಣಯದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಜಲಾಶಯದಲ್ಲಿ ಒಳಹರಿವು ಸ್ಥಗಿತಗೊಂಡ ನಂತರ 14 ದಿನ ಚಾಲೂ ಮತ್ತು 10 ದಿನ ಬಂದ್ ಪದ್ಧತಿಯ ಮೂಲಕ ನೀರನ್ನು ಹರಿಸಲಾಗುತಿತ್ತು. ನೀರಾವರಿ ಸಲಹಾ ಸಮಿತಿ ಜರುಗಿದ ನಂತರ ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಅಚ್ಚುಕಟ್ಟು ಪ್ರದೇಶದ ಶಾಸಕರ ಮತ್ತು ರೈತರ ಬೇಡಿಕೆ ಅನುಸಾರ ಚಾಲೂ ಬಂದ್ ಪದ್ಧತಿಯನ್ನು ಪರಿಷ್ಕರಿಸುವಂತೆ ಕೋರಿರುತ್ತಾರೆ.

ಅಕ್ಟೋಬರ್ 11 ರಂದು ನೀರಾವರಿ ಸಲಹಾ ಸಮಿತಿ ಕೃಷ್ಣಾ ಮೇಲ್ದಂಡೆ ಯೋಜನೆ ಅಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಜೊತೆ ಸುಧೀರ್ಘವಾಗಿ ಚರ್ಚಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 14 ರಿಂದ ಮುಂಗಾರು ಹಂಗಾಮಿಗೆ ನೀರು ಪೂರೈಸಲು 14 ದಿನ ಚಾಲೂ ಹಾಗೂ 8 ದಿನ ಬಂದ್ ಪದ್ಧತಿಯನ್ನು ಅನುಸರಿಸಲು ಸಹಮತಿ ವ್ಯಕ್ತಪಡಿಸುತ್ತಾ ಅಕ್ಟೋಬರ್ 14 ರಿಂದ ಡಿಸೆಂಬರ್ 10ರ ವರೆಗೆ ಕಾಲುವೆಯಲ್ಲಿ ನೀರು ಹರಿಸಲು ನೀಡಿದ ನಿರ್ದೇಶನದಂತೆ ಕಚೇರಿ ಟಿಪ್ಪಣಿಯನ್ನು ಅಧ್ಯಕ್ಷರು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಈ ಕೆಳಗಿನ ವೇಳಾಪಟ್ಟಿಯ ಪ್ರಕಾರ 2023-24ನೇ ಸಾಲಿನ ಮುಂಗಾರು ಹಂಗಾಮಿನ ಉಳಿದ ಅವಧಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಅನುಮೋದನೆ ಪಡೆಯಲಾಗಿರುತ್ತದೆ.

ಈ ವೃತ್ತದ ಅಡಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಮತ್ತು ಮುಡಬಾಳ ಶಾಖಾ ಕಾಲುವೆಯ ಜಾಲದಡಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿಗಾಗಿ ನೀರನ್ನು ಹರಿಸಲು ಕಾಲುವೆ ಜಾಲಕ್ಕೆ ಚಾಲೂ ಬಂದ್ ಪರಿಷ್ಕರಿಸಿದ ವೇಳಾ ಪಟ್ಟಿ ಕಾಲುವೆ ಚಾಲೂ ಇರುವ ದಿನಾಂಕ ಅಕ್ಟೋಬರ್ 14 ರಿಂದ ಅಕ್ಟೋಬರ್ 27ರ ವರೆಗೆ 14 ದಿನಗಳು ಚಾಲೂ ಇದ್ದು.

ಕಾಲುವೆ ಬಂದ್ ಇರುವ ದಿನಾಂಕ ಅಕ್ಟೋಬರ್ 28 ರಿಂದ ನವೆಂಬರ್ 04ರ ವರೆಗೆ 8 ದಿನಗಳು ಬಂದ್ ಇದ್ದು. ಕಾಲುವೆ ಚಾಲೂ ಇರುವ ದಿನಾಂಕ ನವೆಂಬರ್ 05 ರಿಂದ ನವೆಂಬರ್ 18ರ ವರೆಗೆ 14 ದಿನಗಳ ಚಾಲೂ ಇದ್ದು. ಕಾಲುವೆ ಬಂದ್ ಇರುವ ದಿನಾಂಕ ನವೆಂಬರ್ 19 ರಿಂದ ನವೆಂಬರ್ 26ರ ವರೆಗೆ 8 ದಿನಗಳ ಬಂದ್ ಇದ್ದು. ಕಾಲುವೆ ಚಾಲೂ ಇರುವ ದಿನಾಂಕ ನವೆಂಬರ್ 27 ರಿಂದ ಡಿಸೆಂಬರ್ 10ರ ವರೆಗೆ 14 ದಿನಗಳ ಚಾಲೂ ಇದ್ದು. ಒಟ್ಟು 42 ದಿನಗಳು ಕಾಲುವೆ ಚಾಲೂ ಇರುವ ದಿನಾಂಕ ಕಾಲುವೆ ಬಂದ್ ಇರುವ ದಿನಾಂಕ ಒಟ್ಟು 16 ದಿನಗಳು ಇದ್ದು.

ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ರೈತರು ಬೇಡಿಕೆಯಂತೆ ಚಾಲೂ ಬಂದ್ ಪದ್ಧತಿಯನ್ನು ಪರಿಷ್ಕರಿಸಿ 14 ದಿನ ಚಾಲೂ ಮತ್ತು 8 ದಿನ ಬಂದ್ ಪದ್ಧತಿಯನ್ನು ಅಕ್ಟೋಬರ್ 14 ರಿಂದ ಚಾಲೂ ಮಾಡಿ ಹಾಗೂ ಮುಂಗಾರು ಹಂಗಾಮಿಗೆ ಡಿಸೆಂಬರ್ 10ರ ವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner