ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ

Yellapura Accident: ಯಲ್ಲಾಪುರ ಸಮೀಪ ಗುಳ್ಳಾಪುರದಲ್ಲಿ ಲಾರಿ ಕಂದಕಕ್ಕೆ ಉರುಳಿ ಭಾರಿ ದುರಂತ ಸಂಭವಿಸಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಯಲ್ಲಾಪುರ ಅಪಘಾತದಲ್ಲಿ ಮೃತಪಟ್ಟವರು ಯಾರು, ಅವರು ಎಲ್ಲಿಯವರು, ಅವರ ಹಿನ್ನೆಲೆ ಏನು ಎಂಬಿತ್ಯಾದಿ ವಿವರ ಇಲ್ಲಿದೆ.

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಅಪಘಾತ ಸ್ಥಳದಲ್ಲಿ ಕಣ್ಣೀರುಹಾಕಿದರು. ಸ್ಥಳದಲ್ಲಿದ್ದವರು ಸಾಂತ್ವನ ಹೇಳಲು ಪ್ರಯತ್ನಿಸಿದರು (ಎಡ ಚಿತ್ರ). ಕತ್ತಲಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಕ್ರೇನ್‌ ಸಿಬ್ಬಂದಿ. (ಬಲ ಚಿತ್ರ)
ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಅಪಘಾತ ಸ್ಥಳದಲ್ಲಿ ಕಣ್ಣೀರುಹಾಕಿದರು. ಸ್ಥಳದಲ್ಲಿದ್ದವರು ಸಾಂತ್ವನ ಹೇಳಲು ಪ್ರಯತ್ನಿಸಿದರು (ಎಡ ಚಿತ್ರ). ಕತ್ತಲಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಕ್ರೇನ್‌ ಸಿಬ್ಬಂದಿ. (ಬಲ ಚಿತ್ರ)

Yellapura Accident: ಯಲ್ಲಾಪುರ ತಾಲೂಕು ಗುಳ್ಳಾಪುರದಲ್ಲಿ ಬುಧವಾರ (ಜನವರಿ 22) ನಸುಕಿನ ವೇಳೆ ತರಕಾರಿ ಲಾರಿ ಕಂದಕಕ್ಕೆ ಪಲ್ಟಿಯಾಗಿ ಸಂಭವಿಸಿದ ಭಾರಿ ದುರಂತದಲ್ಲಿ ಮೃತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಅಪಘಾತ ಸಂಭವಿಸಿ ಬಹಳ ಹೊತ್ತಿನ ಬಳಿಕ ಹೊರಗಿನವರಿಗೆ ಗೊತ್ತಾಗಿದೆ. ಕತ್ತಲು ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆ ತಡವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕ್ರೇನ್ ಸಿಬ್ಬಂದಿ ಸಹಾಯದೊಂದಿಗೆ ಲಾರಿಯನ್ನು ಸರಿ ನಿಲ್ಲಿಸಿ, ಬದುಕಿ ಉಳಿದವರಿಗಾಗಿ ಶೋಧ ನಡೆಸಿದಾಗ 8 ಮೃತದೇಹ ಪತ್ತೆಯಾಗಿತ್ತು. ಉಳಿದ ಗಾಯಾಗಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ದಾರಿ ಮಧ್ಯೆ ಒಬ್ಬರು ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು?

ಸವಣೂರು ತಾಲೂಕಿನ 28 ವ್ಯಾಪಾರಿಗಳು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಕುಮಟಾ ಸಂತೆಗೆ ವ್ಯಾಪಾರಕ್ಕೆ ಹೋಗುತ್ತಿದ್ದ ವೇಳೆಲಾರಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ವಾಸೀಮ್ ವಿರುಲ್ಲಾ ಮುಡಗೇರಿ (35), ಇಜಾಜ್ ಮುಸ್ತಕಾ ಮುಲ್ಲಾ (20), ಸಾದೀಕ್ ಭಾಷ್ ಫಾರಷ್ (30), ಗುಲಾಮ್ಉಷೇನ್ ಜವಳಿ (40), ಇಮ್ತಿಯಾಜ್ ಮಮಜಾಪರ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ( 25), ಅಸ್ಲಂ ಬಾಬುಲಿ ಬೆಣ್ಣಿ (24), ಜಲಾಲ ಬಾಷಾ(26) ಎಂದು ಗುರುತಿಸಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪರಿಸ್ಥಿತಿಯು ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

ಅಸ್ಲಾಂ ಬಾಬುಲಿ ಬೆಣ್ಣಿ ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಅವರ ಮನೆಯ ಪರಿಸ್ಥಿತಿ ಮತ್ತು ಆ ಹೆಣ್ಮಗಳ ಪರಿಸ್ಥಿತಿ ನೋಡಲಾಗುತ್ತಿಲ್ಲ ಎಂದು ಅಸ್ಲಾಂ ಬಾಬುಲಿ ಅವರ ಸಂಬಂಧಿ ದಾದಾ ಪೀರ್ ಕಣ್ಣೀರು ಸುರಿಸಿದ್ದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

ಸವಣೂರಿನಿಂದ ಕುಮಟಾಕ್ಕೆ ಹೋಗುತ್ತಿದ್ದ ಸಣ್ಣ ವ್ಯಾಪಾರಿಗಳು

ಯಲ್ಲಾಪುರದ ಗುಳ್ಳಾಪುರ ಸಮೀಪ ಅಪಘಾತಕ್ಕೀಡಾದ ಲಾರಿಯಲ್ಲಿ ಪ್ರಯಾಣಿಸುತ್ತಿದ್ದವರು ಸವಣೂರು ತಾಲೂಕಿನ ವ್ಯಾಪಾರಿಗಳು. ಇವರೆಲ್ಲ ಸಣ್ಣ ವ್ಯಾಪಾರಿಗಳು. ಹಣಕಾಸು ದೃಷ್ಟಿಯಿಂದ ಸ್ಥಿತಿವಂತರಲ್ಲ. ನಿತ್ಯ ಬದುಕಿಗಾಗಿ ವ್ಯಾಪಾರ ವೃತ್ತಿಯನ್ನು ಅವಲಂಬಿಸಿದ್ದರು. ಕುಮಟಾ ಸಂತೆಗೆ ಹಣ್ಝುಗಳನ್ನು ಲಾರಿಗಳಲ್ಲಿ ತುಂಬಿಸಿ ತಾವು ಕೂಡ ವ್ಯಾಪಾರಕ್ಕೆ ಹೊರಟಿದ್ದರು. ಲಾರಿ ಕೂಡ ಸವಣೂರಿನವರದ್ದೇ ಆಗಿದೆ.

ಕುಮಟಾದಲ್ಲಿ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ ಜಿಲ್ಲೆಗಳ ಸಣ್ಣ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ಮಾಡಿಕೊಂಡು ನಿತ್ಯಬದುಕಿನ ಬುತ್ತಿ ತುಂಬಿಸಿಕೊಳ್ಳುತ್ತಾರೆ. ಅದರಂತೆ, ಈ ವ್ಯಾಪಾರಿಗಳೂ ವಾಡಿಕೆಯಂತೆ ಈ ವಾರದ ಜಾತ್ರೆಗೆ ಹೊರಟಿರುವಾಗ ಈ ದುರಂತ ಸಂಭವಿಸಿದೆ. ದುರಂತದ ಕಾರಣ ವ್ಯಾಪಾರಸ್ಥರ ಕುಟುಂಬಗಳು ಭಾರಿ ಸಂಕಷ್ಟಕ್ಕೆ ಒಳಗಾಗಿವೆ. ಪ್ರತಿ ವಾರದ ಸಂತೆಗೆ ಹೋಗುತ್ತಿದ್ದೆವು. ಈ ಬಾರಿ ಹೀಗಾಗಿದೆ. ಇದನ್ನು ನಿರೀಕ್ಷಿಸಿರಲಿಲ್ಲ ಎಂದು ದಾದಾ ಪೀರ್ ತಿಳಿಸಿದ್ದಾಗಿ ವರದಿ ಹೇಳಿದೆ.

ಪ್ರತಿವಾರವೂ ನಾವು 30- 40 ಜನ ತರಕಾರಿ, ಹಣ್ಣು ಹಂಪಲು ವ್ಯಾಪಾರಕ್ಕೆ ಹೋಗುತ್ತೇವೆ. ತರಕಾರಿ ಮಾಲು ಇಲ್ಲದ ಕಾರಣ ಕುಮಟಾಕ್ಕೆ ಹೋಗಿಲ್ಲ. ಹೀಗೆ ಹೋಗುವಾಗ ನಾವು ಗೋಕರ್ಣ, ಹೊನ್ನಾವರ, ಕಾರವಾರ, ಸದಾಶಿವ ಗುಡಿ ಕಡೆಗೆ ಹೋಗಿ ವ್ಯಾಪಾರ ಮುಗಿಸಿ ವಾಪಸ್ ಬರುತ್ತೇವೆ. ನನ್ನ ವಯಸ್ಸಿನವರೂ ಮೃತಪಟ್ಟಿದ್ದಾರೆ. ನನಗಿಂತ ಸಣ್ಣವರೂ ಮೃತಪಟ್ಟಿದ್ದಾರೆ ಎಂದು ಯುವಕ ಇಮ್ರಾನ್ ದುಃಖ ತೋಡಿಕೊಂಡಿದ್ದಾನೆ.

Whats_app_banner