IAS transfer: ಮತ್ತೆ ಐಎಎಸ್ ಅಧಿಕಾರಿಗಳ ವರ್ಗ, ಕೆಪಿಸಿಎಲ್ ಎಂಡಿಯಾಗಿ ಗೌರವ ಗುಪ್ತ
ಕಾಂಗ್ರೆಸ್ ಚುನಾವಣೆ ವೇಳೆ ಘೋಷಿಸಿರುವ ೫ ಗ್ಯಾರಂಟಿಗಳ ಜಾರಿಗೆ ಸಂಬಂಧ ದಕ್ಷ ಹಾಗೂ ಅನುಭವ ಇರುವ ಅಧಿಕಾರಿಗಳನ್ನು ನಿಯೋಜಿಸುವ ಕಾರ್ಯ ಆರಂಭವಾಗಿದೆ. ಇದರ ಭಾಗವಾಗಿಯೇ ಗೌರವ್ ಗುಪ್ತ ಅವರನ್ನುಮಹತ್ವದ ಇಂಧನ ಇಲಾಖೆಗೆ ನಿಯೋಜಿಸಲಾಗಿದೆ. ಇನ್ನೂ ಹಲವು ಅಧಿಕಾರಿಗಳ ಪಟ್ಟಿ ಮಾಡಲಾಗಿದ್ದು, ಸಂಪುಟ ವಿಸ್ತರಣೆ ಮುಗಿದ ಬಳಿಕ ನೇಮಕ ಆದೇಶ ಹೊರಬೀಳಬಹುದು ಎನ್ನಲಾಗುತ್ತಿದೆ.
ಬೆಂಗಳೂರು: ಕರ್ನಾಟಕ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದ್ದು, ಇಬ್ಬರು ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ.
ಬುಧವಾರವಷ್ಟೇ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದ ಹಿರಿಯ ಅಧಿಕಾರಿ ಗೌರವ ಗುಪ್ತ ಅವರಿಗೆ ಕರ್ನಾಟಕ ವಿದ್ಯುತ್ ನಿಗಮ ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ನೇಮಿಸಲಾಗಿದೆ.
ಅವರು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿಯೂ ಮುಂದುವರೆಯಲಿದ್ದಾರೆ.
ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ, ಕೈಗಾರಿಕೆಗಳ ಇಲಾಖೆ( ಸಣ್ಣ ಹಾಗೂ ಗಣಿ) ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಹುದ್ದೆ ಹೆಚ್ಚುವರಿ ಕಾರ್ಯಭಾರ ನೀಡಲಾಗಿದೆ.
ಈಗಾಗಲೇ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ, ಕಾರ್ಯದರ್ಶಿ ಸಹಿತ ಪ್ರಮುಖ ಹುದ್ದೆಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಜತೆಗೆ ಕಾಂಗ್ರೆಸ್ ಚುನಾವಣೆ ವೇಳೆ ಘೋಷಿಸಿರುವ ೫ ಗ್ಯಾರಂಟಿಗಳ ಜಾರಿಗೆ ಸಂಬಂಧ ದಕ್ಷ ಹಾಗೂ ಅನುಭವ ಇರುವ ಅಧಿಕಾರಿಗಳನ್ನು ನಿಯೋಜಿಸುವ ಕಾರ್ಯ ಆರಂಭವಾಗಿದೆ. ಇದರ ಭಾಗವಾಗಿಯೇ ಗೌರವ್ ಗುಪ್ತ ಅವರನ್ನುಮಹತ್ವದ ಇಂಧನ ಇಲಾಖೆಗೆ ನಿಯೋಜಿಸಲಾಗಿದೆ.
ಇನ್ನೂ ಹಲವು ಅಧಿಕಾರಿಗಳ ಪಟ್ಟಿ ಮಾಡಲಾಗಿದ್ದು, ಸಂಪುಟ ವಿಸ್ತರಣೆ ಮುಗಿದ ಬಳಿಕ ಮುಂದಿನ ವಾರ ನೇಮಕ ಆದೇಶ ಹೊರಬೀಳಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿರಿ…