February 04 Kannada News Updates: ಅಮೆರಿಕದ ಬೈಡೆನ್, ಬ್ರಿಟನ್‌ನ ರಿಷಿಗಿಂತ ನರೇಂದ್ರ ಮೋದಿ ಜನಪ್ರಿಯ ನಾಯಕ: ಹೊಸ ಸಮೀಕ್ಷೆ
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Sat, 04 Feb 202316:53 IST
ಅಮೆರಿಕದ ಬೈಡೆನ್, ಬ್ರಿಟನ್‌ನ ರಿಷಿಗಿಂತ ನರೇಂದ್ರ ಮೋದಿ ಜನಪ್ರಿಯ ನಾಯಕ: ಹೊಸ ಸಮೀಕ್ಷೆ
- ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರಿಗಿಂತಲೂ ಹೆಚ್ಚು ಪ್ರಭಾವಿ ನಾಯಕ ಎಂದು ನೂತನ ಸಮೀಕ್ಷೆ ತಿಳಿಸಿದೆ.
- ರಾಜಕೀಯ ಬೇಹುಗಾರಿಕೆ ಕಂಪನಿ 'ಮಾರ್ನಿಂಗ್ ಕನ್ಸಲ್ಟ್' ಸಮೀಕ್ಷೆ ಪ್ರಕಾರ 22 ರಾಷ್ಟ್ರಗಳ ನಾಯಕರ ಪೈಕಿ ಮೋದಿಗೆ ಅಗ್ರ ಸ್ಥಾನ ದೊರಕಿದೆ.
Sat, 04 Feb 202311:16 IST
ವಾಣಿ ಜಯರಾಮ್ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ
ಖ್ಯಾತ ಗಾಯಕಿ ವಾಣಿ ಜಯರಾಮ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಾಣಿ ಜಯರಾಮ್ ಅವರ ನಿಧನ ಬಹಳ ನೋವು ತಂದಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳ ಹಿನ್ನೆಲೆ ಗಾಯಕಿಯಾಗಿದ್ದ ವಾಣಿ ಜಯರಾಮ್ ಅವರು 10 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಣಿ ಜಯರಾಮ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ಶಿವಕುಮಾರ್ ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
Sat, 04 Feb 202310:08 IST
ಪಾಕಿಸ್ತಾನದಲ್ಲಿ ವಿಕಿಪೀಡಿಯಗೆ ನಿಷೇಧ
ಪಾಕಿಸ್ತಾನ ಸರಕಾರವು ವಿಕಿಪೀಡಿಯವನ್ನು "ಕಾನೂನುಬಾಹಿರ" ಎಂದು ಪರಿಗಣಿಸಿತ್ತು. ಈ ನಿರ್ಬಂಧವನ್ನು ತೆಗೆದುಹಾಕುವಂತೆ ವಿಕಿಮೀಡಿಯಾ ಫೌಂಡೇಶನ್ ವಿನಂತಿ ಮಾಡಿದ್ದರೂ ವಿಫಲವಾಗಿದೆ. "ಫೆಬ್ರವರಿ 3ರ ಶುಕ್ರವಾರ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟ್‌ಗಳನ್ನು ನಿರ್ಬಂಧಿಸಿದೆ. ಈ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ವಿಕಿಮೀಡಿಯ ಫೌಂಡೇಶನ್ ಪಾಕಿಸ್ತಾನಕ್ಕೆ ಮನವಿ ಮಾಡಿದೆʼʼ ಎಂದು ವೀಕಿಮೀಡಿಯಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
Sat, 04 Feb 20239:52 IST
ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಗಾಯಕಿ ವಾಣಿ ಜೈರಾಮ್ ನಿಧನ
ಹಿರಿಯ ಖ್ಯಾತ ಗಾಯಕಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ವಾಣಿ ಜೈರಾಮ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
Tamil Nadu | Veteran playback singer Vani Jairam found dead at her residence in Chennai, say Thousand Lights Police officials. Details awaited.
— ANI (@ANI) February 4, 2023
She was conferred with the Padma Bhushan award for this year.
(Pic: Vani Jairam's Facebook page) pic.twitter.com/TEMHbHw11s
Sat, 04 Feb 20238:35 IST
ಬಿಜೆಪಿ ಗೆಲುವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ: ಬಿಎಸ್‌ವೈ ಗುಡುಗು!
ಬೆಂಗಳೂರಿನಲ್ಲಿ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ಬಿಜೆಪಿ 130-140 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿರುವ ಬಿಎಸ್‌ವೈ, ಕಾಂಗ್ರೆಸ್‌ನಲ್ಲಿ 'ನಾನೇ ಸಿಎಂ' ಎಂಬ ಸಂಘರ್ಷ ಶುರುವಾಗಿದೆ ಎಂದು ಲೇವಡಿ ಮಾಡಿದರು.
Sat, 04 Feb 20238:36 IST
ಮೋದಿ ಇರುವುದರಿಂದಲೇ ರಾಮ ಮಂದಿರವೂ ಆಯ್ತು, ಹಿಂದೂ-ಮುಸ್ಲಿಂ ಸೌಹಾರ್ದತೆಯೂ ಉಳಿಯಿತು: ಅಸ್ಸಾಂ ಸಿಎಂ
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ನಾವು ಹೇಳಿದ್ದೇವು. ಅದರಂತೆ ಈಗ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ಹುಟ್ಟಿದ ಭೂಮಿಯನ್ನು ಬಾಬರ್ ಆಕ್ರಮಿಸಿಕೊಂಡಿದ್ದ. ಇಂದು ನಾವು ಬಾಬರ್ ಅನ್ನು ಅಲ್ಲಿಂದ ತೆಗೆದು, ಪ್ರಭು ಶ್ರೀರಾಮನನ್ನು ಪ್ರತಿಷ್ಠಾಪಿಸಲಿದ್ದೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಅವರು ತ್ರಿಪುರಾದ ಬನಮಾಲಿಪುರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು.
Sat, 04 Feb 20235:53 IST
ದೇಶದ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ರಿಸರ್ವ್ ಬ್ಯಾಂಕ್ ಹೇಳಿದ್ದೇನು?
ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಸ್ಥಿತಿಸ್ಥಾಪಕತ್ವೆಯನ್ನು ಹೊಂದಿದ್ದು, ಸ್ಥಿರವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಭರವಸೆ ನೀಡಿದೆ. ಬ್ಯಾಂಕ್‌ಗಳು ಆರ್‌ಬಿಐ ನೀಡಿದ ದೊಡ್ಡ ಎಕ್ಸ್‌ಪೋಸರ್ ಫ್ರೇಮ್‌ವರ್ಕ್ ಮಾರ್ಗಸೂಚಿಗಳನ್ನು ಸಹ ಅನುಸರಿಸುತ್ತಿವೆ ಎಂದು ಸ್ಪಷ್ಟಪಡಿಸಲಾಗಿದೆ.
Sat, 04 Feb 20233:49 IST
ವೈಜ್ಞಾನಿಕ ಉದ್ದೇಶದ ವಾಯುನೌಕೆ ಯುಎಸ್ ಏರ್‌ಸ್ಪೇಸ್ ಪ್ರವೇಶಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಚೀನಾ
ಹವಾಮಾನ ಅಧ್ಯಯನ ಹಾಗೂ ವೈಜ್ಞಾನಿಕ ಉದ್ದೇಶಗಳಿಗೆ ಹಾರಿಸಲಾಗಿದ್ದ ವಾಯುನೌಕೆಯನ್ನು, ಅಮೆರಿಕ ಬೇಹುಗಾರಿಕೆ ಬಲೂನ್ ಎಂದು ತಪ್ಪಾಗಿ ಭಾವಿಸಿದೆ ಎಂದಿರುವ ಚೀನಾ, ಈ ವಾಯುನೌಕೆ, ಅಚಾತುರ್ಯದಿಂದ ಅಮರಿಕದ ವಾಯು ಪ್ರದೇಶ ಪ್ರವೇಶಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದೆ.
Fri, 03 Feb 202319:32 IST
ನನಗೆ ಮಂತ್ರಿ ಸ್ಥಾನ ಬೇಡ ಎಂದು ಬೊಮ್ಮಾಯಿಗೆ ಸ್ಪಷ್ಟಪಡಿಸಿದ್ದೇನೆ: ಈಶ್ಚರಪ್ಪ ಅಚ್ಚರಿಯ ಹೇಳಿಕೆ!
ನಾನು ಸಚಿವ ಸ್ಥಾನಮಾನದ ಆಕಾಂಕ್ಷಿಯಲ್ಲ ಎಂದಿರುವ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ, ನನಗೆ ಸಚಿವ ಸ್ಥಾನ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಏಕೈಕ ಗುರಿಯೊಂದಿಗೆ ಕೆಲಸ ಮಾಡುವುದಾಗಿ, ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಈಶ್ವರಪ್ಪ ಹೇಳಿದರು.
Fri, 03 Feb 202319:30 IST
ಮಧ್ಯಮ ಸಾರಿಗೆ ವಿಮಾನಗಳ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ ಭಾರತೀಯ ವಾಯುಸೇನೆ
ಭಾರತೀಯ ವಾಯುಪಡೆಯು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ದೇಶದೊಳಗೆ ತಯಾರಿಸಲು ಮಧ್ಯಮ ಸಾರಿಗೆ ವಿಮಾನಗಳನ್ನು (MTA) ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. MTA ಅನ್ನು 18 ರಿಂದ 30 ಟನ್‌ಗಳಷ್ಟಿ ಸರಕು ಸಾಗಿಸುವ ಸಾಮರ್ಥ್ಯದ ನಡುವಿನ ಸಾರಿಗೆ ವಿಮಾನದ ವಿವಿಧ ಪಾತ್ರಗಳಿಗೆ ಬಳಸಲಾಗುತ್ತದೆ.
Fri, 03 Feb 202319:28 IST
ನವಿ ಮುಂಬೈನ ಟರ್ಭೆಯಲ್ಲಿರುವ ಡಂಪಿಂಗ್ ಗ್ರೌಂಡ್‌ನಲ್ಲಿ ಬೆಂಕಿ ಅವಘಢ!
ನವಿ ಮುಂಬೈನ ಟರ್ಭೆಯಲ್ಲಿರುವ ಡಂಪಿಂಗ್ ಗ್ರೌಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ತುರ್ಭೆ ಪೊಲೀಸ್ ಅಧಿಕಾರಿ ಅನಿಲ್ ಚವಾಣ್, 7 ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿದ್ದು, ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.
Fri, 03 Feb 202319:27 IST
ನೀರಾವರಿ ಇಲಾಖೆಯಲ್ಲಿ 400 ಜನರ ನೇಮಕಕ್ಕೆ ಅನುಮತಿ ಪಡೆಯಲಾಗಿದೆ: ಗೋವಿಂದ ಕಾರಜೋಳ ಸ್ಪಷ್ಟನೆ
ರಾಜ್ಯ ನೀರಾವರಿ ಇಲಾಖೆಯಲ್ಲಿ 400 ಜನರ ನೇಮಕಕ್ಕೆ ಅನುಮತಿ ನೀಡಿದ್ದು, 100 ಜನ ಅಸಿಸ್ಟೆಂಟ್ ಎಂಜಿನಿಯರ್, 300 ಜನ ಜ್ಯೂನಿಯರ್ ಎಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.