ಕನ್ನಡ ಸುದ್ದಿ  /  Latest News  /  Kannada Live News Updates March 18 03 2023

ಚಾರ್ಟರ್ ವಿಮಾನ ಪತನ: ಇಬ್ಬರು ಪೈಲಟ್ ಗಳು ಮೃತ್ಯು (Twitter screengrab)(HT_PRINT)

March 18 Kannada News Updates: ಚಾರ್ಟರ್ ವಿಮಾನ ಪತನ: ಇಬ್ಬರು ಪೈಲಟ್ ಗಳು ಮೃತ್ಯು

04:51 PM ISTNikhil Kulkarni
  • twitter
  • Share on Facebook
04:51 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Sat, 18 Mar 202304:51 PM IST

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಭವ್‌ ಠಾಕ್ರೆ ಮನೆಗೆ ರಜನಿಕಾಂತ್‌ ಭೇಟಿ

ನಟ ರಜನಿಕಾಂತ್‌ ಇಂದು (ಮಾರ್ಚ್‌ 18) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನಾಯಕ ಉದ್ಭವ್‌ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಮುಂಬೈನಲ್ಲಿರುವ ಠಾಕ್ರೆ ಅವರ ಮನೆಗೆ ಭೇಟಿ ನೀಡಿದ ಸೂಪರ್‌ಸ್ಟಾರ್‌ ರಜನಿ, ಠಾಕ್ರೆ ಕುಟುಂಬದವರನ್ನೂ ಕೂಡ ಸಂಧಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ ಓದಿ

Sat, 18 Mar 202304:41 PM IST

ಚಾರ್ಟರ್ ವಿಮಾನ ಪತನ: ಇಬ್ಬರು ಪೈಲಟ್ ಗಳು ಸಾವು

ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು ವಿಮಾನದ ಪೈಲಟ್ ಮತ್ತು ಟ್ರೈನಿ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ

Sat, 18 Mar 202304:35 PM IST

ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ಕಾರ್ಕಳದ ಕೃಷ್ಣಶಿಲೆ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ಶ್ರೀ ರಾಮಲಲ್ಲಾನ ಮೂರ್ತಿಗೆ ಕರ್ನಾಟಕದ ಕಾರ್ಕಳದ ಕೃಷ್ಣಶಿಲೆ ಆಯ್ಕೆಯಾಗಿದ್ದು, ಅಯೋಧ್ಯೆಗೆ ನಿನ್ನೆ ರವಾನೆ ಮಾಡಲಾಗಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಿಸಲು ವಿವಿಧ ಶಿಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಕಾರ್ಕಳದ ನೆಲ್ಲಿಕಾರು ಮಾದರಿಯ ಕೃಷ್ಣಶಿಲೆಯೂ ಒಂದಾಗಿದೆ. ನಿನ್ನೆ ಬೃಹತ್‌ ಲಾರಿ ಮೂಲಕ ಈ ಕೃಷ್ಣಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ.

Sat, 18 Mar 202304:03 PM IST

ಶ್ರೇಯಸ್​​​​ ಅಯ್ಯರ್​ ಬೆನ್ನಲ್ಲೇ KKRಗೆ ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​​

ಇನ್ನು ಎರಡು ವಾರಗಳಲ್ಲಿ ಆರಂಭವಾಗಲಿರುವ 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್ (Indian Premier League)​ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿ ಬಂದಿದೆ. ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಬೆನ್ನು ನೋವಿನಿಂದ ಟೂರ್ನಿಗೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ. ಇದರ ಬೆನ್ನಲ್ಲೇ ವಿದೇಶಿ ಸ್ಟಾರ್​ ಪ್ಲೇಯರ್ಸ್​​ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಕುರಿತ ವರದಿ ಓದಿ

Sat, 18 Mar 202302:15 PM IST

ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಡಗು ಇವರು ರಾಜಸೀಟ್ ರಸ್ತೆಯ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ಕೇಂದ್ರ ಮತ್ತು ರಾಜ್ಯ ಸಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ” ಹಾಗೂ “ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sat, 18 Mar 202302:15 PM IST

ಮಾರ್ಚ್‌ 26ಕ್ಕೆ ಜೆಡಿಎಸ್‌ ಪಂಚರತ್ನ ಯಾತ್ರೆ ಸಮಾರೋಪ

ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಯು ಸಮಾರೋಪದ ಹಂತದಲ್ಲಿದೆ. ಇದೇ ಮಾರ್ಚ್‌ 26ರಂದು ಜೆಡಿಎಸ್‌ನ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಶಾಸಕರ ಸಲಹೆಯ ಮೇರೆಗೆ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶಕ್ಕೆ ಕುಂಬಳಗೋಡಿನಿಂದ ರೋಡ್ ಬದಲು ಸಮಾವೇಶದ ಸ್ಥಳಕ್ಕೆ ನಾಲ್ಕು ಕೀ.ಮಿ ದೂರ ಮಾತ್ರ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡರನ್ನು ಕರೆದುಕೊಂಡು ಹೋಗಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

Sat, 18 Mar 202312:19 PM IST

2022-23ನೇ ಸಾಲಿನ ಕೊಡವ ಹಾಕಿ ಉತ್ಸವ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಪ್ಪಚೆಟ್ಟೋಳಂಡ ಪ್ರಾಯೋಜಕತ್ವದಲ್ಲಿ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ “2022-23ನೇ ಸಾಲಿನ ಕೊಡವ ಹಾಕಿ ಉತ್ಸವವನ್ನು ಉದ್ಘಾಟಿಸಿದರು.

ಸಚಿವ ಎಸ್.ಟಿ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಕೆ.ಜಿ.ಬೋಪಣ್ಣ, ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಚೈಯಂಡ ಸತ್ಯ, ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Sat, 18 Mar 202311:20 AM IST

ಕೆಎಂಎಫ್ ನೇಮಕಾತಿಗೆ ತಡೆ ನೀಡಿದ ಹೈಕೋರ್ಟ್‌

ಕರ್ನಾಟಕ ಹಾಲು ಮಹಾಮಂಡಳಿ-ಕೆಎಂಎಫ್ ಕೈಗೊಂಡಿದ್ದ ೪೮೭ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದವರೆಗೆ ನೇಮಕಾತಿ ಪಟ್ಟಿ ಪ್ರಕಟಿಸಬಾರದು ಎಂದು ಸೂಚಿಸಿದೆ.

Sat, 18 Mar 202310:18 AM IST

ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ಅವರ ನಿಧನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಶೋಕ

ಬೆಂಗಳೂರು: ಹಿರಿಯ ಪತ್ರಕರ್ತರಾದ ಶ್ರೀ ಪ್ರಸಾದ್ ಹೆಗಡೆ ಅವರ ಅಕಾಲಿಕ ಮರಣಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪ್ರಸಾದ್ ಹೆಗಡೆ ಅವರು ವೃತಿಪರ ಹಾಗೂ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಬಹುಕಾಲದಿಂದ ನಾನು ವೈಯಕ್ತಿಕವಾಗಿ ಬಲ್ಲವರಾಗಿದ್ದ ಪ್ರಸಾದ್ ಹೆಗಡೆ ಅವರು ನಿಧನರಾದ ವಾರ್ತೆ ಕೇಳಿ ಬಹಳ ದುಃಖವಾಯಿತು. ಅವರು ಕಸ್ತೂರಿ ವಾಹಿನಿ ಸೇರಿದಂತೆ ನಾಡಿನ ಹಲವಾರು ಸುದ್ದಿವಾಹಿನಿಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮದಲ್ಲಿ ಅವರು ವೃತ್ತಿ ಬದ್ಧತೆಯ ಜತೆಗೆ, ಅಚಲ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಅದನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Sat, 18 Mar 202309:05 AM IST

2022-23ನೇ ಸಾಲಿನ ಕೊಡವ ಹಾಕಿ ಉತ್ಸವ ಸಮಾರಂಭದ ನೇರ ಪ್ರಸಾರ

Sat, 18 Mar 202309:02 AM IST

ದೇಶದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕೋವಿಡ್ ಕೇಸ್

ದೇಶದಲ್ಲಿ ನಿನ್ನೆ ( ಮಾರ್ಚ್ 17, ಶುಕ್ರವಾರ) ಕಳೆದ 126 ದಿನಗಳಿಗಿಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಶುಕ್ರವಾರ ವರದಿಯಾದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 800 ದಾಟಿದೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 5,389 ಕ್ಕೆ ತಲುಪಿದೆ.

Sat, 18 Mar 202309:01 AM IST

ವಲಸೆ ಕಾರ್ಮಿಕರ ಕುರಿತು ಸುಳ್ಸುದ್ದಿ, ಸರೇಂಡರ್‌ ಆದ ಯೂಟ್ಯೂಬರ್‌ ಮನೀಶ್‌ ಕಶ್ಯಪ್‌

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಯಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಆರೋಪದಡಿ ಪೊಲೀಸರು ಹುಡುಕುತ್ತಿದ್ದ ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ ಇದೀಗ ಬಿಹಾರ ಪೊಲೀಸರ ಮುಂದೆ ಸರೆಂಡರ್‌ ಆಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Sat, 18 Mar 202307:57 AM IST

ತುಮಕೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರೋಡ್‌ ಶೋ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕದ ತುಮಕೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ನಾಯಕ ಹಾಗೂ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಈ ವೇಳೆ ಉಪಸ್ಥಿತರಿದ್ದರು.

Sat, 18 Mar 202307:07 AM IST

ರಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ: ಪ್ರಧಾನಿ ಮೋದಿ ವಿಶ್ವಾಸ

ದೇಶದ 19 ಜಿಲ್ಲೆಗಳಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ರಾಗಿಯನ್ನೂ ಆಯ್ಕೆ ಮಾಡಲಾಗಿದೆ. ಭಾರತವು ಪ್ರಸ್ತುತ G20 ಯ ಅಧ್ಯಕ್ಷತೆಯನ್ನು ವಹಿಸುತ್ತಿದೆ. ಅದರ ಧ್ಯೇಯವಾಕ್ಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಗಿ ಒಂದು ವರ್ಷದಲ್ಲಿ ಪ್ರತಿಫಲಿಸುತ್ತದೆ. ರಾಗಿಯೂ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

Sat, 18 Mar 202306:18 AM IST

ಗ್ಲೋಬಲ್ ಮಿಲೆಟ್ಸ್ ಸಮ್ಮೇಳನ ಉದ್ಘಾಟಿಸಿದ ಪ್ರಧಾನಿ ಮೋದಿ

ರಾಷ್ಟ್ರ ರಾಜಧಾನಿ ನವದೆಹಲಿಯ ಪುಸಾ ಬಳಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಅನ್ನ ಗ್ಲೋಬಲ್ ಮಿಲೆಟ್ಸ್ ಸಮ್ಮೇಳನವನ್ನು ಉದ್ಘಾಟಿಸಿದರು. 

Sat, 18 Mar 202305:12 AM IST

ಪ್ರಧಾನಿ ಮೋದಿ ಅವರಿಗೆ ಭೋಜನಕೂಟ ಏರ್ಪಡಿಸಲಿರುವ ಜೋ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಮುಂಬರುವ ಬೇಸಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೋಜನಕೂಟ ಆಯೋಜಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Sat, 18 Mar 202303:37 AM IST

ಆಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಪ್ರಬಲ ಭೂಕಂಪನ!

ಆಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲವಾದರೂ, ರಕ್ಷಣಾ ಕಾರ್ಯಾಚರಣೆ ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಮೂಲಗಳು ಖಚಿತಪಡಿಸಿವೆ.

Sat, 18 Mar 202301:28 AM IST

ಪೂಜಾ ವಿಧಾನ ಸಮಯದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಬಾರದು: ಮೋಹನ್‌ ಭಾಗವತ್

ವಿವಿಧ ಪೂಜಾ ವಿಧಾನಗಳು ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಸಾಮವೇದದ ಉರ್ದು ಅವತರಣಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇವರನ್ನು ತಲುಪುವ ಹಲವು ಮಾರ್ಗಗಳನ್ನು ವಿವಿಧ ಧರ್ಮಗಳು ತೋರಿಸಿಕೊಟ್ಟಿವೆ ಎಂದು ಅಭಿಪ್ರಾಯಪಟ್ಟರು.

Sat, 18 Mar 202301:27 AM IST

ರಾಯಲ್ ಮಿಲಿಟರಿ ಅಕಾಡೆಮಿಗೆ ಭೇಟಿ ಇತ್ತ ಭಾರತದ ಹೈಕಮಿಷನರ್

ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ನಿನ್ನೆ ಸ್ಯಾಂಡ್‌ಹರ್ಸ್ಟ್‌ನ ರಾಯಲ್ ಮಿಲಿಟರಿ ಅಕಾಡೆಮಿಗೆ ಭೇಟಿ ನೀಡಿದ್ದರು ಮತ್ತು ಕಮಾಂಡೆಂಟ್ ಮೇಜರ್ ಜನರಲ್ ಝಾಕ್ ಸ್ಟೆನ್ನಿಂಗ್ ಒಬಿಇ ಅವರೊಂದಿಗೆ ವೃತ್ತಿಪರ ಮಿಲಿಟರಿ ಶಿಕ್ಷಣ ಡೊಮೇನ್‌ನಲ್ಲಿ ತೊಡಗಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದರು

Sat, 18 Mar 202301:25 AM IST

19 ಹೊಸ ಜಿಲ್ಲೆಗಳ ಘೋಷಣೆ ಮಾಡಿದ ರಾಜಸ್ಥಾನ ಸರ್ಕಾರ: ಗೆಹ್ಲೋಟ್‌ ಪ್ಲ್ಯಾನ್‌ ಏನು?

ವಿಭಾಗೀಯ ಕೇಂದ್ರ ಕಚೇರಿಯಿಂದ ದೂರದಲ್ಲಿ ವಾಸಿಸುವ ಜನರ ಅಗತ್ಯತೆಗಳನ್ನು ಪೂರೈಸಲು 19 ಹೊಸ ಜಿಲ್ಲೆಗಳು ಮತ್ತು ಮೂರು ವಿಭಾಗೀಯ ಕೇಂದ್ರಗಳನ್ನು ರಚಿಸುವುದಾಗಿ ರಾಜಸ್ಥಾನ ಸರ್ಕಾರ ಘೋಷಿಸಿದೆ.

Sat, 18 Mar 202301:24 AM IST

ಟ್ರಂಪ್‌ ಯುಟ್ಯೂಬ್‌, ಫೇಸ್‌ಬುಕ್‌ ಅಕೌಂಟ್‌ ರಿಆ್ಯಕ್ಟೀವ್:‌ ಮಾಜಿ ಅಧ್ಯಕ್ಷರ ರಿಯಾಕ್ಷನ್‌ ಏನು?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಯುಟ್ಯೂಬ್‌ ಮತ್ತು ಫೇಸ್‌ಬುಕ್‌ ಅಕೌಂಟ್‌ಗಳನ್ನು ರಿಆ್ಯಕ್ಟೀವ್ ಮಾಡಲಾಗಿದ್ದು, 'ಐ ಆ್ಯಮ್‌ ಬ್ಯಾಕ್‌'(ನಾನು ಮರಳಿದ್ದೇನೆ) ಎಂದು ಟ್ರಂಪ್‌ ಪ್ರತಿಕ್ರಿಯೆ ನೀಡಿದ್ದಾರೆ.

Sat, 18 Mar 202301:24 AM IST

ಯಾವ ಅರ್ಥವೂ ಇಲ್ಲ: ಪುಟಿನ್‌ ವಿರುದ್ಧ ಬಂಧನದ ವಾರಂಟ್‌ ಹೊರಡಿಸಿದ ಐಸಿಸಿ ವಿರುದ್ಧ ರಷ್ಯಾ ಕೆಂಡಾಮಂಡಲ!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಬಂಧನದ ವಾರಂಟ್‌ ಹೊರಡಿಸಿದೆ. ಆದರೆ ಈ ಕ್ರಮವನ್ನು ಖಂಡಿಸಿರುವ ರಷ್ಯಾ, ಐಸಿಸಿ ಅರೆಸ್ಟ್‌ ವಾರಂಟ್‌ಗೆ ಯಾವ ಅರ್ಥವೂ ಇಲ್ಲ ಎಂದು ಕಿಡಿಕಾರಿದೆ.

ಹಂಚಿಕೊಳ್ಳಲು ಲೇಖನಗಳು

  • twitter