Kannada News  /  Latest News  /  Karnataka Kannada Live News Updates January 26 2023

ಬಿಲಾವಲ್‌ ಭುಟ್ಟೋ (ಸಂಗ್ರಹ ಚಿತ್ರ)(ANI)

January 26 Kannada News Updates: ಗೋವಾದಲ್ಲಿ ನಡೆಯಲಿರುವ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಗೆ ಬಿಲಾವಲ್‌ ಭುಟ್ಟೋ ಬರುತ್ತಾರಾ?

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Thu, 26 Jan 202316:41 IST

 ಗೋವಾದಲ್ಲಿ ನಡೆಯಲಿರುವ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಗೆ ಬಿಲಾವಲ್‌ ಭುಟ್ಟೋ ಬರುತ್ತಾರಾ?

ಭಾರತದ ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗಸಭೆ(SCO)ಯ ವಿದೇಶಾಂಗ ಸಚಿವರ ಸಭೆಗೆ, ಪಾಕಿಸ್ತಾನದ ವಿದೇಶಾಂಗ ಸಚಿವರ ಬಿಲಾವಲ್‌ ಭುಟ್ಟೋ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ ಬಿಲಾವಲ್‌ ಭುಟ್ಟೋ ಅವರನ್ನು ಈ ಸಭೆಗೆ ಕಳುಹಿಸುವ ಕುರಿತು ಪಾಕಿಸ್ತಾನ ಇದುವರೆಗೂ ಯಾವುದೇ ತೀರ್ಮಾನ ಮಾಡಿಲ್ಲ.

Thu, 26 Jan 202316:44 IST

ಭಾರತದ ಉಪರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್

ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರು, ಗಣರಾಜ್ಯೋತ್ಸವದ ಮುಖ್ಯ ಅತಿಥಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಮಾತುಕತೆ ನಡೆಸಿದರು.

ರಾಜತಾಂತ್ರಿಕ ಮಾತುಕತೆ
ರಾಜತಾಂತ್ರಿಕ ಮಾತುಕತೆ (ANI)

Thu, 26 Jan 202316:25 IST

ಕಣಿವೆಯ ಮಾಜಿ ಶಾಕಸನ ಮನೆಯ ಮುಂಭಾಗ ಗ್ರೆನೇಡ್‌ ಪತ್ತೆ: ಅಲರ್ಟ್‌ ಆದ ಪೊಲೀಸರು!

 ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿರುವ ಮಾಜಿ ಶಾಸಕರ ಮನೆಯ ಬಳಿ, ಗ್ರೆನೇಡ್‌ವೊಂದು ಪತ್ತೆಯಾಗಿದೆ. ಈ ಕುರಿತು ತನಿಖೆ ಕೈಗೆತ್ತಿಕೊಂಡಿರುವುದಾಗಿ ಕಣಿವೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಗ್ರೆನೇಡ್
ಗ್ರೆನೇಡ್ (ANI)

Thu, 26 Jan 202315:53 IST

ಮಂಡ್ಯದಲ್ಲಿ ಹಲವೆಡೆ ಕಾಣಿಸಿಕೊಂಡ ಗೋ ಬ್ಯಾಕ್‌ ಅಶೋಕ್‌' ಪೋಸ್ಟರ್‌!

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕಂದಾಯ ಸಚಿವ ಆರ್.‌ ಅಶೋಕ್‌ ಅವರಿಗೆ,  ಜಿಲ್ಲೆಯಲ್ಲಿ ವಿರೋಧದ ಸ್ವಾಗತ ದೊರೆತಿದೆ. ಮಂಡ್ಯ ನಗರದ ಹಲವೆಡೆ 'ಗೋ ಬ್ಯಾಕ್‌ ಅಶೋಕ್‌' ಪೋಸ್ಟರ್‌ ರಾರಾಜಿಸಿದೆ.

ಮಂಡ್ಯದಲ್ಲಿ ಕಂಡುಬಂದ 'ಗೋ ಬ್ಯಾಕ್‌ ಅಶೋಕ್'‌ ಪೋಸ್ಟರ್
ಮಂಡ್ಯದಲ್ಲಿ ಕಂಡುಬಂದ 'ಗೋ ಬ್ಯಾಕ್‌ ಅಶೋಕ್'‌ ಪೋಸ್ಟರ್ (‌ANI)

Thu, 26 Jan 202313:58 IST

 ಗಣರಾಜ್ಯೋತ್ಸವ ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್‌ ರಿಟ್ರೀಟ್‌ ಸಮಾರಂಭ

ಗಣರಾಜ್ಯೋತ್ಸವ 2023 ಅಂಗವಾಗಿ ಪಂಜಾಬ್‌ನ ಅಮೃತಸರದಲ್ಲಿರುವ ಅಟ್ಟಾರಿ-ವಾಘಾ ಗಡಿಯಲ್ಲಿ, ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯುತ್ತಿದೆ.

ವಾಘಾ ಗಡಿಯಲ್ಲಿ ಬೀಟಿಂಗ್‌ ರಿಟ್ರೀಟ್‌ ಸಮಾರಂಭ
ವಾಘಾ ಗಡಿಯಲ್ಲಿ ಬೀಟಿಂಗ್‌ ರಿಟ್ರೀಟ್‌ ಸಮಾರಂಭ (ANI)

Thu, 26 Jan 202312:35 IST

ಗಣರಾಜ್ಯೋತ್ಸವದ ಮುಖ್ಯ ಅತಿಥಿ ಈಜಿಪ್ಟ್‌ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ

 ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರಿಗೆ, ಪ್ರಧಾನಿ ಮೋದಿ ಕೃತಜ್ಷತೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಈಜಿಪ್ಟ್‌ ಅಧ್ಯಕ್ಷರಿಗೆ ತುಂಬು ಹೃದಯದ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ.

ಈಜಿಪ್ಟ್‌ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ
ಈಜಿಪ್ಟ್‌ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ (ANI)

Thu, 26 Jan 202311:01 IST

ಭಾರತದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್

ಭಾರತದ 74ನೇ ಗಣರಾಜ್ಯೋತ್ಸವ ದಿನಕ್ಕೆ ಶುಭ ಕೋರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಭಾರತ-ರಷ್ಯಾ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಶುಭ ಹಾರೈಸಿದ್ದಾರೆ. ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳು ಅಮೋಘವಾದುದು. ಭಾರತವು ಅಂತರ್‌ರಾಷ್ಟ್ರೀಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯಸೂಚಿಯಲ್ಲಿ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಗಣನೀಯ ಕೊಡುಗೆಯನ್ನು ನೀಡುತ್ತಿದೆ ಎಂದು ಪುಟಿನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವ್ಲಾಡಿಮಿರ್‌ ಪುಟಿನ್‌ (ಸಂಗ್ರಹ ಚಿತ್ರ)
ವ್ಲಾಡಿಮಿರ್‌ ಪುಟಿನ್‌ (ಸಂಗ್ರಹ ಚಿತ್ರ) (via REUTERS)

Thu, 26 Jan 20238:23 IST

ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು: ಎಸ್ ಎಲ್ ಭೈರಪ್ಪ

- ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು.ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ ಎಂದು ಲೇಖಕ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

- ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ ಅಂತ, ಮೋದಿಯವರಂತಹ ಪ್ರಧಾನ ಮಂತ್ರಿಗಳನ್ನು ನಾನು ಹಿಂದೆಂದೂ ನೋಡಿರಲಿಲ್ಲ, 2029ರವರೆಗೂ ಅವರೇ ಪ್ರಧಾನಿಯಾಗಿರಲಿ ಎಂದು ಮನಸಾರೆ ಹೊಗಳಿದ್ದಾರೆ.

Thu, 26 Jan 20236:13 IST

ಕರ್ತವ್ಯಪಥದಿಂದ ಗಣರಾಜ್ಯೋತ್ಸವದ ನೇರ ಪ್ರಸಾರ

Thu, 26 Jan 20236:04 IST

ಗಣರಾಜ್ಯೋತ್ಸವದಲ್ಲಿ ಗಮನಸೆಳೆದ ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ

ಕರ್ತವ್ಯಪಥದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ 'ನಾರಿ ಶಕ್ತಿ' ಸ್ತಬ್ಧಚಿತ್ರವು ನೋಡುಗರ ಗಮನ ಸೆಳೆದಿದೆ. 

ಗಣರಾಜ್ಯೋತ್ಸವದಲ್ಲಿ ಗಮನಸೆಳೆದ ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ
ಗಣರಾಜ್ಯೋತ್ಸವದಲ್ಲಿ ಗಮನಸೆಳೆದ ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರ

Thu, 26 Jan 20235:42 IST

ಪದ್ಮಶ್ರೀ ಪುರಸ್ಕೃತ ಕೊಡಗಿನ ರಾಣಿ ಮಾಚಯ್ಯಗೆ ಸನ್ಮಾನ

ಕಲೆ ಕ್ಷೇತ್ರದಲ್ಲಿ 'ಪದ್ಮಶ್ರೀ' ಪ್ರಶಸ್ತಿಗೆ ಭಾಜನರಾಗಿರುವ ಕೊಡಗಿನ 'ರಾಣಿ ಮಾಚಯ್ಯ' ಅವರನ್ನು‌ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಸನ್ಮಾನಿಸಿ ಗೌರವಿಸಿದರು.‌

ಪದ್ಮಶ್ರೀ ಪುರಸ್ಕೃತ ಕೊಡಗಿನ ರಾಣಿ ಮಾಚಯ್ಯಗೆ ಸನ್ಮಾನ
ಪದ್ಮಶ್ರೀ ಪುರಸ್ಕೃತ ಕೊಡಗಿನ ರಾಣಿ ಮಾಚಯ್ಯಗೆ ಸನ್ಮಾನ

Thu, 26 Jan 20234:50 IST

ಗೂಗಲ್‌ನಿಂದ 74ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್

ಭಾರತದ 74 ನೇ ಗಣರಾಜ್ಯೋತ್ಸವದ ಪ್ರಯುಕ್ತ ಗೂಗಲ್‌ ವಿನೂತನ ಡೂಡಲ್‌ ರಚಿಸಿದೆ.

ಗುಜರಾತ್‌ನ ಅಹಮದಾಬಾದ್‌ನ ಅತಿಥಿ ಕಲಾವಿದ ಪಾರ್ಥ್ ಕೊಥೇಕರ್ ನಿರ್ಮಿಸಿದ ವಿನೂತನ ಡೂಡಲ್‌ ಅನ್ನು ಗೂಗಲ್‌ ಪ್ರಕಟಿಸಿದೆ.

ಗೂಗಲ್‌ನಿಂದ 74ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್
ಗೂಗಲ್‌ನಿಂದ 74ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್

Thu, 26 Jan 20232:09 IST

ಮಂಡ್ಯ ಬೈಪಾಸ್‌ ಸಂಚಾರಕ್ಕೆ ಮುಕ್ತ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಶೀಘ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ನಿನ್ನೆಯಿಂದ ಮಂಡ್ಯ ಬೈಪಾಸ್‌ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದಾಗಿ ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಿದೆ. ಈ ಹಿಂದೆ, ರಾಮನಗರ ಮತ್ತು ಚನ್ನಪಟ್ಟಣದ ಬೈಪಾಸ್‌ಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಒಂದು, ಒಂದೂವರೆ ಗಂಟೆಗೆ ಇಳಿಸುವ ಮಹಾತ್ವಕಾಂಕ್ಷಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣದ ಕೊನೆಹಂತದ ಕೆಲಸ ಕಾರ್ಯಗಳು ಬಿರುಸುಪಡೆದಿದೆ. ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಎಕ್ಸ್‌ಪ್ರೆಸ್‌ವೇಗೆ ಚಾಲನೆ ನೀಡಲಿದ್ದಾರೆ.

Bengaluru–Mysuru Expressway: ಮಂಡ್ಯ ಬೈಪಾಸ್‌ ಸಂಚಾರಕ್ಕೆ ಮುಕ್ತ
Bengaluru–Mysuru Expressway: ಮಂಡ್ಯ ಬೈಪಾಸ್‌ ಸಂಚಾರಕ್ಕೆ ಮುಕ್ತ

Thu, 26 Jan 20232:07 IST

ದೇಶಾದ್ಯಂತ ಇಂದು ಗಣರಾಜ್ಯೋತ್ಸವ ಸಂಭ್ರಮ, ಕರ್ತವ್ಯಪಥ ಸೇರಿದಂತೆ ಎಲ್ಲೆಡೆ ಸಡಗರ

- ಇಂದು ದೇಶದೆಲ್ಲೆಡೆ 74ನೇ ಗಣರಾಜ್ಯೋತ್ಸವದ ಸಂಭ್ರಮ.

- ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌, ದೆಹಲಿಯ ಕರ್ತವ್ಯಪಥ ಸೇರಿದಂತೆ ವಿವಿಧೆಡೆ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

- ದೆಹಲಿಯ ಕರ್ತವ್ಯಪಥದಲ್ಲಿ ಬುಡಕಟ್ಟು ಜನಾಂಗದ ಮೊದಲ ಹಾಗೂ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಈ ಭಾರಿ ಗಣತಂತ್ರ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ.

ದೇಶಾದ್ಯಂತ ಇಂದು ಗಣರಾಜ್ಯೋತ್ಸವ ಸಂಭ್ರಮ, ಕರ್ತವ್ಯಪಥ ಸೇರಿದಂತೆ ಎಲ್ಲೆಡೆ ಸಡಗರ
ದೇಶಾದ್ಯಂತ ಇಂದು ಗಣರಾಜ್ಯೋತ್ಸವ ಸಂಭ್ರಮ, ಕರ್ತವ್ಯಪಥ ಸೇರಿದಂತೆ ಎಲ್ಲೆಡೆ ಸಡಗರ (ANI/PIB)

Thu, 26 Jan 20232:07 IST

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಗಣ್ಯರ ಅಭಿನಂದನೆ

2023ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿ,  ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, " ದೇಶಕ್ಕೆ ನೀಡಿರುವ ಶ್ರೀಮಂತ ಮತ್ತು ವೈವಿಧ್ಯಮಯ ಕೊಡುಗೆಗಳು ಮತ್ತು ನಮ್ಮ ಬೆಳವಣಿಗೆಯ ಹಾದಿ ಹೆಚ್ಚಿಸಲು ಅವರ ಪ್ರಯತ್ನಗಳನ್ನು ದೇಶ ಗೌರವಿಸುತ್ತದೆ" ಎಂದಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

Thu, 26 Jan 20232:07 IST

ನ್ಯೂಜಿಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕ್ರಿಸ್‌ ಹಿಪ್‌ಕಿನ್ಸ್‌ ಆಯ್ಕೆ

ನ್ಯೂಜಿಲ್ಯಾಂಡ್‌ನ‌ 41ನೇ ಪ್ರಧಾನಿಯಾಗಿ ಕ್ರಿಸ್‌ ಹಿಪ್‌ಕಿನ್ಸ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೇಶದ ಆರ್ಥಿಕತೆಯನ್ನು ಸ್ಥಿರತೆಗೆ ತರುವ ಮತ್ತು ಹಣದುಬ್ಬರವನ್ನು ಸಮರ್ಥವಾಗಿ ಎದುರಿಸುವ ವಾಗ್ಧಾನವನ್ನು 44 ವರ್ಷ ವಯಸ್ಸಿನ ಹಿಪ್‌ಕಿನ್ಸ್‌ ಮಾಡಿದ್ದಾರೆ.

ನ್ಯೂಜಿಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕ್ರಿಸ್‌ ಹಿಪ್‌ಕಿನ್ಸ್‌ ಆಯ್ಕೆ
ನ್ಯೂಜಿಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕ್ರಿಸ್‌ ಹಿಪ್‌ಕಿನ್ಸ್‌ ಆಯ್ಕೆ

Thu, 26 Jan 20232:07 IST

ಅಮೆರಿಕದಲ್ಲಿ ಭಾರತೀಯನ ಹತ್ಯೆ

- ಅಮೆರಿಕಾದ ಜಾರ್ಜಿಯಾದಲ್ಲಿ 52 ವರ್ಷದ ಭಾರತೀಯ ಅಮೆರಿಕನ್ ವ್ಯಕ್ತಿಯೊಬ್ಬನನ್ನು ಮೂರು ಮುಸುಕುಧಾರಿ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.

- ಈ ಘಟನೆಯಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- ಒಂದು ವಾರದೊಳಗೆ ಅಮೆರಿಕದಲ್ಲಿ ಭಾರತೀಯರನ್ನು ಕೊಂದ ಎರಡನೇ ಘಟನೆ ಇದಾಗಿದೆ.

ಅಮೆರಿಕದಲ್ಲಿ ಭಾರತೀಯನ ಹತ್ಯೆ
ಅಮೆರಿಕದಲ್ಲಿ ಭಾರತೀಯನ ಹತ್ಯೆ

ಹಂಚಿಕೊಳ್ಳಲು ಲೇಖನಗಳು