ಕನ್ನಡ ಸುದ್ದಿ  /  Latest News  /  Karnataka Kannada Live News Updates November 24 11 2022

Mangalore Blast Case: ಕರಾವಳಿಯ ಪ್ರಮುಖ ದೇಗುಲಗಳು ಶಾರೀಕ್‌ ಟಾರ್ಗೆಟ್‌ ಆಗಿತ್ತೆ?

November 24 Kannada News Updates: ಎನ್‌ಐಎಯಿಂದ ಮಂಗಳೂರು ಬಾಂಬ್‌ ಸ್ಫೋಟದ ಮುಂದಿನ ತನಿಖೆ

02:48 PM ISTJayaraj
  • twitter
  • Share on Facebook
02:48 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Thu, 24 Nov 202202:48 PM IST

ಎನ್‌ಐಎಯಿಂದ ಮಂಗಳೂರು ಬಾಂಬ್‌ ಸ್ಫೋಟದ ಮುಂದಿನ ತನಿಖೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಕಂಕನಾಡಿ ಸಮೀಪ, ಇತ್ತೀಚೆಗೆ ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIAಗೆ ವರ್ಗಾಯಿಸಲು ರಾಜ್ಯ ಸರಕಾರ ನಿರ್ಧರಿಸಿ ಆಜ್ಞೆ ಹೊರಡಿಸಿದೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆ ಯಲ್ಲಿ, ಸಂಗ್ರಹಿಸಲಾದ, ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ, ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು, UAPA ಕಾಯಿದೆ ಅನ್ವಯ ತನಿಖೆಯನ್ನು ನಡೆಸಲು, ಶಿಫಾರಸು ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು, UAPA ಕಾಯಿದೆ ಅನ್ವಯ ತನಿಖೆಯನ್ನು ನಡೆಸಲು ಶಿಫಾರಸು ಮಾಡಿದೆ.

<p>ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ&nbsp;</p>
ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ&nbsp; (HT_PRINT)

Thu, 24 Nov 202202:47 PM IST

ಕಾಂಗ್ರೆಸ್‌ ಬಲವರ್ಧನೆಗೆ ಮಲ್ಲಿಕಾರ್ಜುನಾ ಖರ್ಗೆ ಭಾರತ ಯಾತ್ರೆ

2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿ ಮಲ್ಲಿಕಾರ್ಜುನಾ ಖರ್ಗೆಯವರು ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸ ಆರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಸಲುವಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸುವುದು, ಚುನಾವಣಾ ಕ್ಷೇತ್ರಗಳು ಮತ್ತು ಭಾರತ ಜೋಡೊ ಯಾತ್ರೆಯ ಜತೆ ಕೆಲಸ ಮಾಡುವುದು ಸೇರಿದಂತೆ ಮೂರು ಪ್ರಮುಖ ಅಂಶಗಳ ಮೇಲೆ ಕಾರ್ಯತಂತ್ರ ರೂಪಿಸಲು ಆರಂಭಿಸಿದ್ದಾರೆ. "ಖರ್ಗೆ ಅವರ ವಿವಿಧ ರಾಜ್ಯಗಳ ಭೇಟಿಯು ಈ ಮೂರು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನಾ ಖರ್ಗೆ
ಮಲ್ಲಿಕಾರ್ಜುನಾ ಖರ್ಗೆ (HT_PRINT)

Thu, 24 Nov 202202:47 PM IST

ಬಿಎಂಟಿಸಿ ಬಸ್‌ನಲ್ಲಿ ಗೂಗಲ್‌ ಪೇ, ಫೋನ್‌ ಪೇ, ಯುಪಿಐ ಪಾವತಿ ಮೂಲಕ ಟಿಕೆಟ್‌

ಬಿಎಂಟಿಸಿ ಬಹುತೇಕ ಬಸ್‌ ನಿರ್ವಾಹಕರಿಗೆ ಆ್ಯಂಡ್ರಾಯ್ಡ್‌ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ (ETM) ನೀಡಲಾಗುತ್ತಿದ್ದು, ಇದಕ್ಕೆ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ ಇತ್ಯಾದಿ ಯುಪಿಐ ಮೂಲಕ ಸ್ಕ್ಯಾನ್‌ ಮಾಡಬಹುದಾದ ಯುಪಿಐ ವ್ಯವಸ್ಥೆ ಅಳವಡಿಸಲಾಗುತ್ತಿದೆ.

"ಈಗಾಗಲೇ ಪ್ರಾಯೋಗಿಕವಾಗಿ 1,500 ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಎಂಟು ಸಾವಿರ ಹೊಸ ಇಟಿಎಂಗಳನ್ನು ಅಳವಡಿಸಿಕೊಳ್ಳಲಿದೆʼʼ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ ಸೂರ್ಯ ಸೇನ್ ಹೇಳಿದ್ದಾರೆ.

Thu, 24 Nov 202210:16 AM IST

ಕರಾವಳಿಯ ಪ್ರಮುಖ ದೇಗುಲಗಳು ಶಾರೀಕ್‌ ಟಾರ್ಗೆಟ್‌

ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಪೋಟದ ಮೂಲಕ ಸುದ್ದಿಯಲ್ಲಿರುವ ಶಾರೀಕ್‌ ಕುರಿತು ದಿನದಿಂದ ದಿನಕ್ಕೆ ಹೊಸ ಸುದ್ದಿಗಳು ಬರುತ್ತಿವೆ. ಚಿಕ್ಕ ಇಲಿ ಎಂದುಕೊಂಡ ಘಟನೆ ನಾನಾ ಬೀಲಗಳನ್ನು ಹೊಂದಿದ್ದು, ಎಲ್ಲಾ ಆಯಾಮಗಳಿಂದ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಸಾಕಷ್ಟು ಊಹಾಪೋಹಾಗಳೂ ಹರಿದಾಡುತ್ತಿದ್ದು, ಪೊಲೀಸರು ಹಲವು ವಿಷಯಗಳ ಕುರಿತೂ ಇನ್ನೂ ಅಧಿಕೃತವಾಗಿ ಮಾಹಿತಿ ಪ್ರಕಟಿಸಿಲ್ಲ.

ವರದಿಗಳ ಪ್ರಕಾರ ಶಂಕಿತ ಉಗ್ರ ಶಾರೀಕ್‌ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪ್ರಮುಖ ದೇಗುಲಗಳನ್ನು ಟಾರ್ಗೆಟ್‌ ಮಾಡಿದ್ದನಂತೆ. ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬಾಂಬ್‌ ಸ್ಫೋಟಿಸಲು ಯೋಜನೆ ರೂಪಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

ಇದೇ ರೀತಿ, ಮಂಗಳೂರಿನ ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಮತ್ತು ಮಂಗಳದೇವಿ ದೇವಾಲಯದಲ್ಲಿಯೂ ಬಾಂಬ್‌ ಸ್ಪೋಟಿಸಲು ಸ್ಕೆಚ್‌ ಹಾಕಿದ್ದ ಎಂಬ ಅನುಮಾನವೂ ಇದೆ. ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದು, ಈ ಮೂರು ದೇಗುಲಗಳು ಶಾರೀಕ್‌ನ ಪ್ರಮುಖ ಟಾರ್ಗೆಟ್‌ ಆಗಿತ್ತು ಎನ್ನಲಾಗುತ್ತಿದೆ.

Mangalore Blast Case: ಕರಾವಳಿಯ ಪ್ರಮುಖ ದೇಗುಲಗಳು ಶಾರೀಕ್‌ ಟಾರ್ಗೆಟ್‌ ಆಗಿತ್ತೆ?
Mangalore Blast Case: ಕರಾವಳಿಯ ಪ್ರಮುಖ ದೇಗುಲಗಳು ಶಾರೀಕ್‌ ಟಾರ್ಗೆಟ್‌ ಆಗಿತ್ತೆ?

Thu, 24 Nov 202210:15 AM IST

ಮುಸ್ಲಿಂ ಬಹುಪತ್ನಿತ್ವ, ನಿಕಾಹ್‌-ಹಲಾಲಾ ವಿಚಾರಣೆಗೆ ಹೊಸ ಪೀಠ ರಚಿಸಲು ಸುಪ್ರೀಂ ಕೋರ್ಟ್‌ ಸಮ್ಮತಿ

ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು ನಿಕಾಹ್‌-ಹಲಾಲಾಗೆ ಸಂಬಂಧಪಟ್ಟ ಅರ್ಜಿಗಳ ವಿಚಾರಣೆ ನಡೆಸಲು ಹೊಸ ಸಂವಿಧಾನ ಪೀಠ ರಚಿಸಲು ಸುಪ್ರೀಂ ಕೋರ್ಟ್‌ ಇಂದು ಸಮ್ಮತಿ ನೀಡಿದೆ. ಈ ವಿಷಯಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪೀಠ ರಚಿಸುವುದಾಗಿ ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ಬಹುಪತ್ನಿತ್ವ ಮತ್ತು ನಿಕಾಹ್‌ ಹಲಾಲಾ ನಿಷೇಧಿಸುವಂತೆ ಕೋರಿ ಅಶ್ವಿನಿ ಉಪಾಧ್ಯಾಯ ಇಂದು ಮನವಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯವು ಹೊಸ ಪೀಠ ರಚಿಸುವ ಕುರಿತು ತಿಳಿಸಿದೆ. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ನಿವೃತ್ತರಾಗಿದ್ದು, ಹೊಸ ಪೀಠವನ್ನು ರಚಿಸಬೇಕಾಗಿದೆ ಎಂದು ವಕೀಲ, ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ) (HT_PRINT)

Thu, 24 Nov 202207:33 AM IST

ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಗುಜರಾತ್‌ ವಿಧಾನಸಭಾ ಚುನಾವಣೆ ಗೆಲ್ಲಲು ರಾಷ್ಟ್ರೀಯ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. 

ಈ ನಡುವೆ ಬಿಜೆಪಿ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪಕ್ಷ ಹಂಚಿಕೊಂಡಿರುವ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ಪರ ಪ್ರಚಾರ ‘ವಿದೇಶೀ’ ಪ್ರಜೆಗಳು ಪ್ರಚಾರ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇದರ ವಿರುದ್ಧ ಕ್ರಮಕ್ಕೆ ಟಿಎಂಸಿ ಮುಖಂಡರು ಆಗ್ರಹಿಸಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತ ಮತ್ತು ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಪಕ್ಷದ ಸ್ಕಾರ್ಫ್ ಧರಿಸಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Thu, 24 Nov 202205:49 AM IST

ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಚಾರಣೆ

ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ವಿಚಾರಣೆಗೆ ಬಂದಿದ್ದ ನಟಿ ಜಾಕ್ವೆಲಿನ್ ಫರ್ನಾಂಡೀಸ್, ವಿಚಾರಣೆ ಮುಗಿಸಿ ಮರಳಿದ್ದಾರೆ. 

ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇವರು ಆರೋಪಿಯಾಗಿದ್ದಾರೆ.

Thu, 24 Nov 202205:47 AM IST

ಶಬರಿಮಲೆಗೆ ಭಕ್ತರ ದಂಡು

ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

Thu, 24 Nov 202203:42 AM IST

ಭಾರತ್ ಜೋಡೋ ಯಾತ್ರೆ ಸೇರಿಕೊಂಡ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಇಂದು ಭಾರತ್ ಜೋಡೋ ಯಾತ್ರೆ ಸೇರಿಕೊಂಡಿದ್ದಾರೆ.

ಯಾತ್ರೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಪ್ರಿಯಾಂಕಾ ರಾಹುಲ್‌ ಜತೆಗೆ ಕಾಣಿಸಿಕೊಂಡಿದ್ದಾರೆ. 

ಅವರ ಪುತ್ರ ರೈಹಾನ್ ವಾದ್ರಾ ಕೂಡ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Thu, 24 Nov 202201:18 AM IST

ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆ

ರಾಜ್ಯದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 27ರವರೆಗೂ ಮಳೆ ಸಾಧ್ಯತೆ

ಹವಾಮಾನ ಇಲಾಖೆ ಮಾಹಿತಿ

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲೂ ಮಳೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ

Thu, 24 Nov 202201:17 AM IST

ಇಂಡೋನೇಷ್ಯಾ ಭೂಕಂಪ; ಸಾವಿನ ಸಂಖ್ಯೆ 271ಕ್ಕೇರಿಕೆ

ಇಂಡೋನೇಷ್ಯಾ ಭೂಕಂಪ

ಸಾವಿನ ಸಂಖ್ಯೆ 271ಕ್ಕೇರಿಕೆ

ಇಂಡೋನೇಷ್ಯಾದ ಸಿಯಾಂಜರ್‌ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ

ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

Thu, 24 Nov 202201:13 AM IST

ಶಾಲೆಯ ಗೋಡೆ ಕುಸಿತ, ವಾಹನಗಳು ಜಖಂ

ತಮಿಳುನಾಡಿನ ರಾಜಧಾನಿ ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿರುವ ಬಾಲಕಿಯರ ಪ್ರೌಢಶಾಲೆಯ ಗೋಡೆ ಕುಸಿತ.

ವ್ಯಕ್ತಿಗೆ ಗಾಯ

ಹಲವಾರು ವಾಹನಗಳು ಜಖಂ.

ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

Thu, 24 Nov 202201:12 AM IST

ಮೇಘಾಲಯದಲ್ಲಿ ಭೂಕಂಪ

ಇಂದು ಮುಂಜಾನೆ 03:46ರ ಸುಮಾರಿಗೆ ಕಂಪಿಸಿದ ಭೂಮಿ

ತುರಾದಿಂದ 37 ಕಿಮೀ ಪೂರ್ವ-ಈಶಾನ್ಯಕ್ಕೆ 3.4 ತೀವ್ರತೆಯಲ್ಲಿ ಭೂಕಂಪನ.

ಭೂಕಂಪದ ಆಳವು ನೆಲದಿಂದ 5 ಕಿಮೀ ಆಳದಲ್ಲಿದೆ ಎಂದು ತಿಳಿಸಿದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ

Thu, 24 Nov 202201:11 AM IST

ಫುಟ್ಬಾಲ್‌ ವಿಶ್ವಕಪ್‌

ಬುಧವಾರದ ನಾಲ್ಕು ಪಂದ್ಯಗಳಲ್ಲಿ ಅಚ್ಚರಿಯ ಫಲಿತಾಂಶ

ಕ್ರೊಯೇಷಿಯಾ ವಿರುದ್ಧ ಡ್ರಾ ಸಾಧಿಸಿದ ಮೊರಾಕೊ.

ನಾಲ್ಕು ಬಾರಿಯ ಚಾಂಪಿಯನ್‌ ಜರ್ಮನಿ ವಿರುದ್ಧ ಜಪಾನ್‌ಗೆ‌ ಗೆಲುವು

ಕೋಸ್ಟರಿಕಾ ವಿರುದ್ಧ ಸ್ಪೇನ್ನ್‌ಗೆ ಭರ್ಜರಿ ಜಯ.

ಕೆನಡಾ ವಿರುದ್ಧ ಬೆಲ್ಜಿಯಂ ಜಯಭೇರಿ.

ಹಂಚಿಕೊಳ್ಳಲು ಲೇಖನಗಳು

  • twitter