Kodagu News: ಕೊಡಗಿನಲ್ಲಿ ಕಾಡಾನೆ ಸಾವು; ಕೆಪಿಟಿಸಿಎಲ್‌ ಸಿಬ್ಬಂದಿ ವಿರುದ್ದ ಮೊಕದ್ದಮೆ ಸಾಧ್ಯತೆ
ಕನ್ನಡ ಸುದ್ದಿ  /  latest news  /  Kodagu News: ಕೊಡಗಿನಲ್ಲಿ ಕಾಡಾನೆ ಸಾವು; ಕೆಪಿಟಿಸಿಎಲ್‌ ಸಿಬ್ಬಂದಿ ವಿರುದ್ದ ಮೊಕದ್ದಮೆ ಸಾಧ್ಯತೆ

Kodagu News: ಕೊಡಗಿನಲ್ಲಿ ಕಾಡಾನೆ ಸಾವು; ಕೆಪಿಟಿಸಿಎಲ್‌ ಸಿಬ್ಬಂದಿ ವಿರುದ್ದ ಮೊಕದ್ದಮೆ ಸಾಧ್ಯತೆ

ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಎಸ್ಟೇಟ್‌ಗೆ ಆಗಮಿಸಿದ ಸುಮಾರು 30 ವರ್ಷದ ಆನೆ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ಸಂಪರ್ಕಿಸಿ ಜೀವ ಬಿಟ್ಟಿದೆ. ಆನೆ ಸತ್ತಿರುವ ಮಾಹಿತಿ ತಿಳಿದು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು. ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ಹಾಗೂ ತಂಡ ಸ್ಥಳಕ್ಕೆ ಧಾವಿಸಿ ಆನೆ ಮಹಜರು ಕೈಗೊಂಡರು.

ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಬಳಿ ಎಸ್ಟೇಟ್‌ ಒಂದರಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಸಿಲುಕಿ ಗಂಡಾನೆ ಮೃತಪಟ್ಟಿದೆ.
ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಬಳಿ ಎಸ್ಟೇಟ್‌ ಒಂದರಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಸಿಲುಕಿ ಗಂಡಾನೆ ಮೃತಪಟ್ಟಿದೆ.

ವೀರಾಜಪೇಟೆ: ಕೊಡಗಿನನಲ್ಲಿ ನಾಲ್ಕು ದಿನದ ಕಾಡಾನೆ ಗುಂಡೇಟಿಗೆ ಬಲಿಯಾದ ಘಟನೆ ನೆನಪಿರುವಾಗಲೇ ಭಾರೀ ಗಾತ್ರದ ಗಂಡಾನೆ ವಿದ್ಯುತ್‌ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿದೆ.

ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಎಸ್ಟೇಟ್‌ಗೆ ಆಗಮಿಸಿದ ಸುಮಾರು 30 ವರ್ಷದ ಆನೆ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ಸಂಪರ್ಕಿಸಿ ಜೀವ ಬಿಟ್ಟಿದೆ.

ಆನೆ ಸತ್ತಿರುವ ಮಾಹಿತಿ ತಿಳಿದು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು. ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ಹಾಗೂ ತಂಡ ಸ್ಥಳಕ್ಕೆ ಧಾವಿಸಿ ಆನೆ ಮಹಜರು ಕೈಗೊಂಡರು. ವನ್ಯಜೀವಿ ಪಶು ವೈದ್ಯಾಧಿಕಾರಿಗಳ ತಂಡ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ಗ್ರಾಮದ ಪ್ರವರ್ಧನ್‌ ಪೂಜಾರಿ ಎಂಬುವವರಿಗೆ ಸೇರಿದ ಎಸ್ಟೇಟ್‌ನಲ್ಲಿ ವಿದ್ಯುತ್‌ ತಂತಿ ಕಡಿದು ಬಿದ್ದಿತ್ತು. ಇದನ್ನು ತೆಗೆದು ಎತ್ತರಿಸುವಂತೆ ಕೆಪಿಟಿಸಿಎಲ್‌ಗೆ ತಿಳಿಸಿದ್ದರೂ ಕ್ರಮ ಆಗಿರಲಿಲ್ಲ. ಈಗ ಆನೆ ಇದಕ್ಕೆ ಬಲಿಯಾಗಿದೆ ಎಂದು ಡಿಎಫ್‌ಒ ಶರಣಬಸಪ್ಪ ತಿಳಿಸಿದ್ದಾರೆ.

ಕೆಪಿಟಿಸಿಎಲ್‌ ಅಧಿಕಾರಿಗಳ ವಿರುದ್ದ ಮೊಕದ್ದಮೆ ದಾಖಲಿಸಲು ಅರಣ್ಯ ಇಲಾಖೆ ಮುಂದಾಗಿದ್ದು. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಡಿಎಫ್‌ಒ ತಿಳಿಸಿದ್ದಾರೆ.

ಕೊಡಗಿನ ಎಸ್ಟೇಟ್‌ಗಳತ್ತ ಆಹಾರ ಅರಸಿ ಬರುವ ಕಾಡಾನೆಗಳು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಕುಶಾಲನಗರ ಸಮೀಪದ ಎಸ್ಟೇಟ್‌ನಲ್ಲಿ ಗರ್ಭಿಣಿ ಆನೆಯನ್ನು ಗುಂಡಿಕ್ಕಿ ಕೊಂದಿದ್ದ ಪ್ರಕರಣ ಮೂರು ದಿನದ ಹಿಂದೆ ನಡೆದಿತ್ತು. ಆ ಪ್ರಕರಣದಲ್ಲಿ ಎಸ್ಟೇಟ್‌ ಮಾಲೀಕರು ತಲೆಮರೆಸಿಕೊಂಡಿದ್ದು ಪತ್ತೆಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ಕಳೆದ ಹತ್ತು ವರ್ಷದಲ್ಲಿ 93 ಆನೆಗಳು ವಿದ್ಯುತ್‌ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿವೆ ಎಂದು ಅರಣ‍್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ..

ಕಾಡಾನೆಗಳ ಸಂಖ್ಯೆ ಅಧಿಕವಾಗಿರುವ ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ದಶಕದಲ್ಲೇ ಹೆಚ್ಚು. ಒಂದು ಸಾವಿರ ಆನೆಗಳು ನಾನಾ ಕಾರಣದಿಂದ ಸಾವು.

Whats_app_banner

ವಿಭಾಗ