Mysore News: ನಾಗರಹೊಳೆ ಅರಣ್ಯ ಗಡಿಯ ಜಮೀನಿನಲ್ಲಿ ಬೆಳೆ ಕಾಯುತ್ತಿದ್ದ ರೈತ ಕಾಡಾನೆ ತುಳಿದು ಸಾವು-mysore news farmer died in farmland when elephant attacked in sargur mysore district border to nagarahole kub ,latest news ಸುದ್ದಿ
ಕನ್ನಡ ಸುದ್ದಿ  /  latest news  /  Mysore News: ನಾಗರಹೊಳೆ ಅರಣ್ಯ ಗಡಿಯ ಜಮೀನಿನಲ್ಲಿ ಬೆಳೆ ಕಾಯುತ್ತಿದ್ದ ರೈತ ಕಾಡಾನೆ ತುಳಿದು ಸಾವು

Mysore News: ನಾಗರಹೊಳೆ ಅರಣ್ಯ ಗಡಿಯ ಜಮೀನಿನಲ್ಲಿ ಬೆಳೆ ಕಾಯುತ್ತಿದ್ದ ರೈತ ಕಾಡಾನೆ ತುಳಿದು ಸಾವು

ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಸರಗೂರು ತಾಲ್ಲೂಕಿನಲ್ಲಿ ಸಮಸ್ಯೆ ಹೆಚ್ಚಾಗಿದೆ. ಆಹಾರ ಅರಸಿ ಆನೆಗಳು ಗುಂಪು ಗುಂಪಾಗಿ ಊರುಗಳತ್ತ ನುಗ್ಗುತ್ತಿವೆ. ಆನೆ ದಾಳಿಯಿಂದ ಜನರಿಗೆ ತೊಂದರೆಯಾಗುತ್ತಿದೆ. ಕೆಲಸಕ್ಕೆ ಹೋಗುವವರು. ವಿದ್ಯಾರ್ಥಿಗಳಿ ಭಯದಿಂದಲೇ ಮನೆಯಿಂದ ಹೊರ ಬರುವ ವಾತಾವರಣ ನಿರ್ಮಾಣವಾಗಿದೆ.

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಿರೆಹಳ್ಳಿಯಲ್ಲಿ ಕಾಡಾನೆ ತುಳಿದು ಮೃತಪಟ್ಟ  ರೈತ ರವಿ
ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಿರೆಹಳ್ಳಿಯಲ್ಲಿ ಕಾಡಾನೆ ತುಳಿದು ಮೃತಪಟ್ಟ ರೈತ ರವಿ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತಿರುವ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ರೈತನೊಬ್ಬ ಮೃತಪಟ್ಟಿದ್ಧಾನೆ.

ಸರಗೂರು ತಾಲೂಕಿನ ಹಿರೇಹಳ್ಳಿ ಬಳಿ ಕಾಡಾನೆ ದಾಳಿಗೆ ರೈತ ರವಿ(42) ಸಾವನ್ನಪ್ಪಿದ್ದಾನೆ.

ಈತ ಬೆಳೆ ಕಾಯಲು ಜಮೀನಿಗೆ ಹೋಗಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತದೇಹವನ್ನು ಹೆಚ್ ಡಿ ಕೋಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತನ ಕುಟುಂಬಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರದ ಭರವಸೆ ನೀಡಿದ್ದು, ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಗಿರಿಜನ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದು ಜನ ಆಕ್ರೋಶ ಹೊರ ಹಾಕಿದ್ದರು.

ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಎಚ್‌ಡಿಕೋಟೆ, ನಂಜನಗೂಡು, ಸರಗೂರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕಿನ ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ.

ಅದರಲ್ಲೂ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಸರಗೂರು ತಾಲ್ಲೂಕಿನಲ್ಲಿ ಸಮಸ್ಯೆ ಹೆಚ್ಚಾಗಿದೆ. ಆಹಾರ ಅರಸಿ ಆನೆಗಳು ಗುಂಪು ಗುಂಪಾಗಿ ಊರುಗಳತ್ತ ನುಗ್ಗುತ್ತಿವೆ.

ಆನೆ ದಾಳಿಯಿಂದ ಜನರಿಗೆ ತೊಂದರೆಯಾಗುತ್ತಿದೆ. ಕೆಲಸಕ್ಕೆ ಹೋಗುವವರು. ವಿದ್ಯಾರ್ಥಿಗಳಿ ಭಯದಿಂದಲೇ ಮನೆಯಿಂದ ಹೊರ ಬರುವ ವಾತಾವರಣ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ಗಸ್ತು ಹೆಚ್ಚಿಸುವ ಜತೆಗೆ ಆನೆಗಳು ಹೊರಗೆ ಬಂದಾಗ ಪ್ರಕಟಣೆ ಹೊರಡಿಸಬೇಕು. ಸಂದೇಶ ರವಾನಿಸುವ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

mysore-dasara_Entry_Point

ವಿಭಾಗ