ಡೆಂಗ್ಯೂ ತಡೆಗಟ್ಟಲು 5 ಪರಿಣಾಮಕಾರಿ ಆಯುರ್ವೇದ ಪದಾರ್ಥಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಡೆಂಗ್ಯೂ ತಡೆಗಟ್ಟಲು 5 ಪರಿಣಾಮಕಾರಿ ಆಯುರ್ವೇದ ಪದಾರ್ಥಗಳು

ಡೆಂಗ್ಯೂ ತಡೆಗಟ್ಟಲು 5 ಪರಿಣಾಮಕಾರಿ ಆಯುರ್ವೇದ ಪದಾರ್ಥಗಳು

Home Remedies For Dengue: ಡೆಂಗ್ಯೂ ಬರದಂತೆ ಮುನ್ನೆಚ್ಚರಿಕೆ ವಹಿಸಿ, ಡೆಂಗ್ಯೂವನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಲು ವಿಧಾನವನ್ನು ಹುಡುಕುತ್ತಿದ್ದರೆ ಇಲ್ಲಿದೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ 5 ಆಯುರ್ವೇದ ಪದಾರ್ಥಗಳು. (ಬರಹ: ಅರ್ಚನಾ ವಿ. ಭಟ್‌)

ಡೆಂಗ್ಯೂ ತಡೆಗಟ್ಟಲು ಪರಿಣಾಮಕಾರಿಯಾಗಿರುವ 5 ಆಯುರ್ವೇದ ಪದಾರ್ಥಗಳು
ಡೆಂಗ್ಯೂ ತಡೆಗಟ್ಟಲು ಪರಿಣಾಮಕಾರಿಯಾಗಿರುವ 5 ಆಯುರ್ವೇದ ಪದಾರ್ಥಗಳು

ಈ ವರ್ಷ ನಮ್ಮ ದೇಶದಲ್ಲಿ, ಮಳೆಗಾಲದ ಅವಧಿಯಲ್ಲಾದ ಏರುಪೇರಿನಿಂದಾಗಿ ಡೆಂಗ್ಯೂ ಅಪಾಯ ಹೆಚ್ಚಾಗಿದೆ. ಅಪಾಯಕಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಸೊಳ್ಳೆ ಕಡಿತದಿಂದ ಬರುವ ಡೆಂಗ್ಯೂ ಒಂದು ಗಂಭೀರ ಕಾಯಿಲೆಯಾಗಿದ್ದು, ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಡೆಂಗ್ಯೂ ತಡೆಗಟ್ಟವಲ್ಲಿ ಮತ್ತು ಚಿಕಿತ್ಸೆಯಲ್ಲಿ ರಾಸಾಯನಿಕಯುಕ್ತ ನಿವಾರಕಗಳು ಮತ್ತು ಔಷಧಗಳ ಬಳಕೆಯಾಗುತ್ತದೆ. ಆದರೆ ನಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಯಾವಾಗಲೂ ನೈಸರ್ಗಿಕ ಪರಿಹಾರ ಮತ್ತು ಆಹಾರಗಳನ್ನು ಬಳಸುವುದೇ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.

ನಿರೋಗ್‌ಸ್ಟ್ರೀಟ್‌ನ ಟೆಲಿಕನ್ಸಲ್ಟೇಶನ್‌ ಮ್ಯಾನೇಜರ್‌ ಡಾ. ಇಪ್ಸಾ ಸಿಂಗ್‌ ಅವರು ಹಿಂದೂಸ್ಥಾನ ಟೈಮ್ಸ್‌ ಗೆ ನೀಡಿದ ಸಂದರ್ಶನದಲ್ಲಿ ನೈಸರ್ಗಿಕ ಪದಾರ್ಥಗಳನ್ನು ಆಧರಿಸಿರುವ ಆಯುರ್ವೇದ ವಿಧಾನವು ಡೆಂಗ್ಯೂ ತಡೆಗಟ್ಟುವುದಷ್ಟೆ ಅಲ್ಲದೇ ಅದರ ವಿರುದ್ದ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಪರಿಣಾಮಕಾರಿಯಾಗಿದೆ. ಕೆಲವು ವೈದ್ಯಕೀಯ ಪದ್ಧತಿಗಳು ದೇಹವನ್ನು ದುರ್ಬಲಗೊಳಿಸುತ್ತವೆ. ಅದರಲ್ಲಿ ರೋಗ ಮತ್ತು ಔಷಧಗಳಿಂದ ಚೇತರಿಸಿಕೊಳ್ಳುವುದೇ ಸವಾಲಾಗಿರುತ್ತವೆ. ಆಯುರ್ವೇದವು ದೇಹಕ್ಕೆ ಪೋಷಣೆಯ ಅಗತ್ಯಗಳನ್ನು ಒದಗಿಸುವುದರ ಜೊತೆಗೆ ರೋಗ ಗುಣಪಡಿಸುವ ಪ್ರಕ್ರಿಯೆಯಲ್ಲಿ ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ಸಹ ಹಾಕದು. ನೀಲಗಿರಿ ಎಣ್ಣೆ, ತುಳಸಿ ಎಣ್ಣೆ, ಬೇವಿನ ಎಣ್ಣೆ, ಕಾಳುಮೆಣಸಿನ ಕಡ್ಡಿ ಧೂಪ ಮುಂತಾದವುಗಳು ಸೊಳ್ಳೆಗಳನ್ನು ದೂರವಿಡಲು ಪರಿಣಾಮಕಾರಿಯಾಗಿದೆ.

ಆಯುರ್ವೇದ ತಜ್ಞರು ಹೇಳುವಂತೆ ಆಯುವೇದದಲ್ಲಿ ಶಿಫಾರಸು ಮಾಡಲಾದ ಸರಳ ಔಷಧ ಮತ್ತು ವಿಧಾನಗಳು ಅಷ್ಟೇನು ಪರಿಹಾರ ಒದಗಿಸದು ಎಂದು ಅಂದಾಜು ಮಾಡಲಾಗುತ್ತದೆ. ಆದರೆ ಸಮರ್ಪಕ ಆಹಾರ ಪದ್ಧತಿಯ ಅಳವಡಿಕೆ ಮತ್ತು ನಿಯಮಿತ ವ್ಯಾಯಾಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಲ್ಲದು. ನಮ್ಮ ದೇಹ ಉತ್ತಮ ಸ್ಥಿತಿಯಲ್ಲಿದ್ದರೆ ಚಿಕಿತ್ಸೆಗೂ ಉತ್ತಮವಾಗಿಯೇ ಸ್ಪಂದಿಸುತ್ತದೆ. ಇಲ್ಲದಿದ್ದರೆ ಡೆಂಗ್ಯೂವಿನಂತಹ ಅಪಾಯಕಾರಿ ಕಾಯಿಲೆಯಿಂದ ಚೇತರಿಸಿಕೊಳ್ಳುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಅಸಹಜ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಸರಿಯಾದ ಚಿಕಿತ್ಸೆಗಾಗಿ ಆಯುರ್ವೇದ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಯಾರಾದರೂ ಡೆಂಗ್ಯೂ ಸೋಂಕಿಗೆ ತುತ್ತಾಗಿದ್ದರೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ಈ ಕೆಳಗಿನ ಆಯುರ್ವೇದ ಪದಾರ್ಥಗಳನ್ನು ಶಿಫಾರಸು ಮಾಡುತ್ತಾರೆ ಡಾ. ಇಪ್ಸಾ ಸಿಂಗ್‌.

ಡೆಂಗ್ಯೂ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ 5 ಆಯುರ್ವೇದ ಪದಾರ್ಥಗಳು

1. ಪಪ್ಪಾಯಿ ಎಲೆಗಳು: ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳಲು ಪಪ್ಪಾಯಿ ಎಲೆಯಿಂದ ತೆಗೆದ ರಸವು ಬಹಳ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ.

2. ಮೆಂತ್ಯ ಸೊಪ್ಪು: ಮೆಂತ್ಯ ಎಲೆಗಳನ್ನು ರಾತ್ರಿಯಿಡಿ ನೆನೆಸಿ, ಬೆಳಿಗ್ಗೆ ನೀರನ್ನು ಸೋಸಿಕೊಂಡು ಕುಡಿಯಿರಿ. ಇದು ನೋವು ನಿವಾರಣೆಗೆ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.

3. ಎಳನೀರು: ಯಾರಾದರೂ ಹೆಚ್ಚಿನ ಜ್ವರದಿಂದ ಬಳಲಿ ದುರ್ಬಲರಾಗಿದ್ದರೆ, ಎಳನೀರು ಅಥವಾ ತೆಂಗಿನ ನೀರನ್ನು ಶಿಫಾರಸು ಮಾಡಲಾಗುತ್ತದೆ. ಇದು ದೇಹವನ್ನು ಹೈಡ್ರೇಟ್‌ ಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ.

4. ವಿಟಮಿನ್‌ ಸಿ: ವಿಟಮಿನ್‌ ಸಿ ಯು ಉತ್ತಮ ರೋಗನಿರೋಧಕ ಬೂಸ್ಟರ್‌ ಆಗಿದೆ. ಡೆಂಗ್ಯೂವಿನಿಂದ ಬಳಲುತ್ತಿರುವವರಿಗೆ ನೆಲ್ಲಿಕಾಯಿ, ನೆಲ್ಲಿಕಾಯಿಯ ಜ್ಯೂಸ್‌, ಕಿತ್ತಳೆ ಹಣ್ಣಿನ ಜ್ಯೂಸ್‌ ಮತ್ತು ವಿಟಮಿನ್‌ ಸಿ ಯಿಂದ ಸಮೃದ್ಧವಾಗಿರುವ ಇತರೆ ಆಹಾರಗಳನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ.

5. ಬೇವಿನ ಎಲೆಗಳು: ಬೇವು ಅಗಾಧವಾದ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೆಸರುವಾಸಿಯಾಗಿದೆ. ಬೇವಿನ ಎಲೆಗಳಿಂದ ತಯಾರಿಸಿದ ಕಷಾಯ ಸೇವೆನೆಯು ದೇಹದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುತ್ತದೆ.

ರೋಗಿಯ ಸ್ಥಿತಿಯನ್ನು ನಿರ್ವಹಣೆ ಮಾಡಲು ಅನುಭವಿ ಆಯುರ್ವೇದ ತಜ್ಞರ ಮಾರ್ಗದರ್ಶನದಲ್ಲಿ ಅಶ್ವಗಂಧ, ಮೂಲೇತಿ ಮುಂತಾದ ಆಯುರ್ವೇದ ಗಿಡಮೂಲಿಕೆಗಳನ್ನು ಸಹ ಬಳಸಬಹುದು.

ಈ ಆಹಾರ ಸಲಹೆಗಳ ಜೊತೆಗೆ ಅವರು ಡೆಂಗ್ಯೂವಿನಂತಹ ಅತಿರೇಕದ ಅಪಾಯಗಳ ಸಂದರ್ಭದಲ್ಲಿ ರೋಗಿಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಜಾಗರೂಕರಾಗಿಬೇಕು. ನಿಯಮಿತ ವ್ಯಾಯಾಮ, ವಿಶೇಷವಾಗಿ ಯೋಗ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಮೂಲಾಧಾರವಾಗಿದೆ. ಅರಿಶಿಣದಿಂದ ತಯಾರಿಸಿದ ಗೋಲ್ಡನ್‌ ಮಿಲ್ಕ್‌, ಚವನಪ್ರಾಶ, ಋತುಮಾನದ ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವುದು, ಒಣ ಹಣ್ಣುಗಳಾದ ಬಾದಾಮಿ, ಒಣದ್ರಾಕ್ಷಿ, ವಾಲ್‌ನಟ್ಸ್ ಮುಂತಾದವುಗಳನ್ನು ಸೇವಿಸುವುದು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಉತ್ತಮ ನಿದ್ರೆಯನ್ನು ಕಾಪಾಡಿಕೊಳ್ಳುವುದು ಇವೆಲ್ಲವೂ ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಒಳಗಿನಿಂದ ಬಲಪಡಿಸಲು ಉತ್ತಮ ಮಾರ್ಗಗಳಾಗಿವೆ ಎಂದು ಸಲಹೆ ನೀಡುತ್ತಾರೆ.

(ಬರಹ: ಅರ್ಚನಾ ವಿ. ಭಟ್‌)

Whats_app_banner