Herbal Camphor: ಕರ್ಪೂರದಿಂದ ಕೀಲುನೋವಿನಿಂದ ಗಾಯದವರೆಗೆ ಆರೋಗ್ಯ ಪರಿಹಾರ; ಆದ್ರೆ ಇದೇ ಕರ್ಪೂರ ಬಳಸಬೇಕಂತೆ!
Health Remedy: ನಿಮ್ಮ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಕರ್ಪೂರ ಪರಿಹಾರ ನೀಡುತ್ತದೆ. ಆದರೆ ನೀವು ಮೊದಲು ರಾಸಾಯನಿಕ ಕರ್ಪೂರ ಯಾವುದು ಮತ್ತು ನೈಸರ್ಗಿಕ ಕರ್ಪೂರ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು. ಎಷ್ಟೆಲ್ಲ ಆರೋಗ್ಯ ಪ್ರಯೋಜನವನ್ನು ಇದು ನೀಡುತ್ತದೆ ಎಂಬುದನ್ನು ನಾವು ಈ ಕೆಳಗೆ ತಿಳಿಸಿದ್ದೇವೆ ಗಮನಿಸಿ.
ತಿನ್ನಬಹುದಾದ ಕರ್ಪೂರ ಉಪಯೋಗಿಸಿ
ಕರ್ಪೂರವನ್ನು ಕರ್ಪೂರದ ಲಾರೆಲ್ ಎಂಬ ಮರದ ಎಲೆಗಳು ಮತ್ತು ಕೊಂಬೆಗಳಿಂದ ತಯಾರಿಸಲಾಗುತ್ತದೆ. ಅಲ್ಲದೆ ಕೆಲವು ಕರ್ಪೂರವನ್ನು ತುಳಸಿ ಗಿಡಗಳ ಹಾಲಿನಿಂದ ತಯಾರಿಸಲಾಗುತ್ತದೆ. ಎಲೆಗಳು ಮತ್ತು ಕೊಂಬೆಗಳನ್ನು ನೀರಿನಲ್ಲಿ ಕುದಿಸಿ ಕರ್ಪೂರವನ್ನು ಬಟ್ಟಿ ಇಳಿಸುವ ವಿಧಾನದಿಂದ ಮಾಡುತ್ತಾರೆ. ಇದನ್ನು ಆಯುರ್ವೇದ ಔಷಧ ಮತ್ತು ಆಹಾರದಲ್ಲಿ ಬಳಸಲಾಗುತ್ತದೆ. ಇದನ್ನು ಹಸಿರು ಕರ್ಪೂರ ಎಂದು ಕರೆಯಲಾಗುತ್ತದೆ.
ಪೂಜೆಗೆ ಬಳಸುವ ಕರ್ಪೂರ
ಆರತಿ ಕರ್ಪೂರ ಮತ್ತು ನೈಸರ್ಗಿಕ ಕರ್ಪೂರ ಒಂದೇ ಅಲ್ಲ. ಆರತಿ ಕರ್ಪೂರ ಬಿಲ್ಲೆಗಳನ್ನು ತಯಾರಿಸಲು ಟರ್ಪಂಟೈನ್ ಎಣ್ಣೆಯನ್ನು ಬೆರೆಸಲಾಗುತ್ತದೆ. ಅದಕ್ಕಾಗಿಯೇ ಅದು ಬೇಗನೆ ಬೆಂಕಿಯನ್ನು ಹಿಡಿದುಕೊಳ್ಳು. ಹಾಗಾಗಿ ಈ ಆರತಿ ಕರ್ಪೂರಗಳನ್ನು ಆಹಾರಗಳಲ್ಲಿ ಬಳಸಬಾರದು.
ಗಾಯವನ್ನು ಕಡಿಮೆ ಮಾಡುತ್ತದೆ
ನೈಸರ್ಗಿಕ ಕರ್ಪೂರವನ್ನು ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಕರ್ಪೂರದ ಪುಡಿಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಶಮನವಾಗುತ್ತದೆ. ಅಷ್ಟೇ ಅಲ್ಲ, ಕರ್ಪೂರ ಸ್ನಾಯು ಮತ್ತು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪುಡಿ ಮಾಡಿದ ಕರ್ಪೂರವನ್ನು ನೀರಿಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು ಅದನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಗಾಯವು ಬೇಗ ವಾಸಿಯಾಗುತ್ತದೆ.
ತುರಿಕೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ
ಕರ್ಪೂರದ ಪುಡಿಯನ್ನು ದೇಹದ ಯಾವುದೇ ಭಾಗಕ್ಕೆ ಹಚ್ಚಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ತುರಿಕೆ ಹೋಗಲಾಡಿಸಲು ತೆಂಗಿನ ಎಣ್ಣೆಯಲ್ಲಿ ಕರ್ಪೂರ ಸೇರಿಸಿ ತುರಿಕೆ ಇರುವ ಜಾಗಕ್ಕೆ ಮಸಾಜ್ ಮಾಡಿ. ಅಷ್ಟೇ ಅಲ್ಲ, ಕೂದಲಿನಲ್ಲಿರುವ ತಲೆಹೊಟ್ಟು ಹೋಗಲಾಡಿಸಲು ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ತಲೆಗೆ ಮಸಾಜ್ ಮಾಡಿ. ಡ್ಯಾಂಡ್ರಫ್ ನಿಂದ ಶೀಘ್ರ ಪರಿಹಾರ ಸಿಗುತ್ತದೆ. ಆಯುರ್ವೇದವೂ ಈ ಸಲಹೆಯನ್ನು ನೀಡುತ್ತದೆ.
ಒಳ್ಳೆಯ ನಿದ್ರೆ ಮಾಡಲು ಸಹಕಾರಿ
ನೀವು ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ, ನೈಸರ್ಗಿಕ ಕರ್ಪೂರವು ನಿಮಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ರಾತ್ರಿ ಮಲಗುವ ಮುನ್ನ ದಿಂಬಿನ ಮೇಲೆ ಕೆಲವು ಹನಿ ಕರ್ಪೂರದ ಎಣ್ಣೆಯನ್ನು ಚಿಮುಕಿಸಿ. ಕರ್ಪೂರದ ಎಣ್ಣೆಯ ಸುವಾಸನೆಯು ಮನಸ್ಸನ್ನು ಶಾಂತಗೊಳಿಸುತ್ತದೆ. ಶೀತ ಮತ್ತು ಮೂಗು ಕಟ್ಟುವಿಕೆಯಂತಹ ಸಮಸ್ಯೆಗಳನ್ನು ತಪ್ಪಿಸಲು ಇದು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ನೈಸರ್ಗಿಕ ಕರ್ಪೂರವು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಕಡಿಮೆ ರಕ್ತದೊತ್ತಡ (ಲೋ ಬಿಪಿ) ಸಮಸ್ಯೆ ಇರುವವರು ಖಂಡಿತವಾಗಿ ಕರ್ಪೂರವನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಬಿರುಕು ಬಿಟ್ಟ ಪಾದಗಳಿಗೆ
ಕರ್ಪೂರದ ಎಣ್ಣೆಯನ್ನು ಬಳಸುವುದರಿಂದ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದಲ್ಲದೇ ಬಿಸಿನೀರಿನಲ್ಲಿ ಕರ್ಪೂರವನ್ನು ಸೇರಿಸಿ ಹತ್ತಿಯ ಸಹಾಯದಿಂದ ಒಡೆದ ಹಿಮ್ಮಡಿಗಳ ಮೇಲೆ ಹಚ್ಚಿದರೆ ಪಾದಗಳ ಬಿರುಕು ಕಡಿಮೆಯಾಗಿ ಮೃದುವಾಗುತ್ತದೆ.