ಬಿಳಿಯಲ್ಲ, ಹಳದಿಯಲ್ಲ; ಕಪ್ಪು ಬಣ್ಣದ ಹಾಲು ನೀಡುವ ಪ್ರಾಣಿಯಿದು: ಆಫ್ರಿಕನ್ ಕಪ್ಪು ಘೇಂಡಾಮೃಗದ ಹಾಲೇಕೆ ಕಪ್ಪು, ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಳಿಯಲ್ಲ, ಹಳದಿಯಲ್ಲ; ಕಪ್ಪು ಬಣ್ಣದ ಹಾಲು ನೀಡುವ ಪ್ರಾಣಿಯಿದು: ಆಫ್ರಿಕನ್ ಕಪ್ಪು ಘೇಂಡಾಮೃಗದ ಹಾಲೇಕೆ ಕಪ್ಪು, ಇಲ್ಲಿದೆ ಮಾಹಿತಿ

ಬಿಳಿಯಲ್ಲ, ಹಳದಿಯಲ್ಲ; ಕಪ್ಪು ಬಣ್ಣದ ಹಾಲು ನೀಡುವ ಪ್ರಾಣಿಯಿದು: ಆಫ್ರಿಕನ್ ಕಪ್ಪು ಘೇಂಡಾಮೃಗದ ಹಾಲೇಕೆ ಕಪ್ಪು, ಇಲ್ಲಿದೆ ಮಾಹಿತಿ

ಹಾಲನ್ನು ಬಳಸದೇ ಇರುವವರು ಬಹಳ ಕಡಿಮೆ ಎನ್ನಬಹುದು. ಬಹುತೇಕ ಎಲ್ಲರೂ ಹಾಲನ್ನು ಬಳಸುತ್ತಾರೆ.ಹಾಲು ಎಂದರೆ ನೆನಪಾಗುವುದು ಅದರ ಬಿಳಿ ಬಣ್ಣ. ಆದರೆ, ಕಪ್ಪು ಬಣ್ಣದ ಹಾಲನ್ನು ನೀಡುವ ಪ್ರಾಣಿಯೂ ಇದೆ ಎಂಬುದನ್ನು ಎಂದಾದರೂ ಕೇಳಿದ್ದೀರಾ?ಆಫ್ರಿಕಾದ ಕಪ್ಪು ಘೇಂಡಾಮೃಗವು ಕಪ್ಪು ಹಾಲನ್ನು ನೀಡುತ್ತದೆ. ಈ ಪ್ರಾಣಿಯನ್ನು ಆಫ್ರಿಕನ್ ಬ್ಲಾಕ್ ರೈನೋ ಅಂತಲೂ ಕರೆಯುತ್ತಾರೆ.

ಕಪ್ಪು ಬಣ್ಣದ ಹಾಲು ನೀಡುವ ಪ್ರಾಣಿಯಿದು: ಆಫ್ರಿಕನ್ ಕಪ್ಪು ಘೇಂಡಾಮೃಗದ ಹಾಲೇಕೆ ಕಪ್ಪು, ಇಲ್ಲಿದೆ ಮಾಹಿತಿ
ಕಪ್ಪು ಬಣ್ಣದ ಹಾಲು ನೀಡುವ ಪ್ರಾಣಿಯಿದು: ಆಫ್ರಿಕನ್ ಕಪ್ಪು ಘೇಂಡಾಮೃಗದ ಹಾಲೇಕೆ ಕಪ್ಪು, ಇಲ್ಲಿದೆ ಮಾಹಿತಿ (PC: Canva)

ಬಹುತೇಕ ಎಲ್ಲರ ಮನೆಗಳಲ್ಲಿ ಹಾಲನ್ನು ದಿನನಿತ್ಯ ಬಳಸುತ್ತಾರೆ. ಈ ಹಾಲು ಹಸು, ಎಮ್ಮೆ ಅಥವಾ ಆಡುವಿನದ್ದಾಗಿರಬಹುದು. ಸಾಮಾನ್ಯವಾಗಿ ಬಹುತೇಕ ಮಂದಿ ಹಾಲಿನಿಂದ ಚಹಾ ಅಥವಾ ಕಾಫಿ ತಯಾರಿಸಿ ಕುಡಿಯುತ್ತಾರೆ. ಆರೋಗ್ಯಕರ ಜೀವನಕ್ಕೆ ಹಾಲು ಬಹಳ ಮುಖ್ಯ. ಮಕ್ಕಳು ಬೆಳೆದಾಗ ಹಸು ಅಥವಾ ಎಮ್ಮೆಯ ಹಾಲು ಕುಡಿಯುವುದು ಬಹಳ ಮುಖ್ಯ. ಮಗುವಿನ ಪೋಷಣೆಗೆ ಹಾಲು ಅತ್ಯಂತ ಮುಖ್ಯವಾಗಿದೆ. ವಯಸ್ಕರಿಗೂ ಹಾಲು ಕುಡಿಯುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಈ ಅಮೃತದಂತಹ ಹಾಲು ಎಂದರೆ ನೆನಪಾಗುವುದು ಅದರ ಬಿಳಿ ಬಣ್ಣ. ಆದರೆ, ಕಪ್ಪು ಬಣ್ಣದ ಹಾಲನ್ನು ನೀಡುವ ಪ್ರಾಣಿಯೂ ಇದೆ ಎಂಬುದನ್ನು ಎಂದಾದರೂ ಕೇಳಿದ್ದೀರಾ? ಅಚ್ಚರಿಯೆನಿಸಿದರೂ ಇದು ಸತ್ಯ. ಆಫ್ರಿಕಾದ ಘೇಂಡಾಮೃಗ ಕಪ್ಪು ಹಾಲನ್ನು ನೀಡುತ್ತದೆ.

ಕಪ್ಪು ಬಣ್ಣದ ಹಾಲು ನೀಡುವ ಆಫ್ರಿಕನ್ ಕಪ್ಪು ಘೇಂಡಾಮೃಗ ರೈನೋ

ಪ್ರಪಂಚದ ಬಹುತೇಕ ಪ್ರಾಣಿಗಳ ಹಾಲಿನ ಬಣ್ಣ ಬಿಳಿಯಾಗಿರುತ್ತದೆ. ಹಸು, ಎಮ್ಮೆ, ಮೇಕೆ ಮುಂತಾದ ಎಲ್ಲಾ ಪ್ರಾಣಿಗಳ ಹಾಲು ಬಿಳಿಯಾಗಿರುತ್ತದೆ. ಇನ್ನೂ ಕೆಲವು ಪ್ರಾಣಿಗಳ ಹಾಲು ಗುಲಾಬಿ, ನೀಲಿ ಮತ್ತು ಹಳದಿ ಬಣ್ಣದಲ್ಲಿರುತ್ತದೆ. ಆದರೆ, ಕೆಂಪು ಮಿಶ್ರಿತ ಕಪ್ಪು ಹಾಲು ನೀಡುವ ಪ್ರಾಣಿಯೊಂದಿದೆ ಎಂಬುದನ್ನು ಎಂದಾದರೂ ಕೇಳಿದ್ದೀರಾ? ಅಚ್ಚರಿಯಾದ್ರೂ ಇದು ಸತ್ಯ. ಆಫ್ರಿಕಾದ ಕಪ್ಪು ಘೇಂಡಾಮೃಗವು ಕಪ್ಪು ಹಾಲನ್ನು ನೀಡುತ್ತದೆ. ಈ ಪ್ರಾಣಿಯನ್ನು ಆಫ್ರಿಕನ್ ಬ್ಲಾಕ್ ರೈನೋ ಅಂತಲೂ ಕರೆಯುತ್ತಾರೆ.

ಕಪ್ಪು ಘೇಂಡಾಮೃಗದ ಹಾಲು ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ. ಇದರ ಹಾಲು ನೀರಿನಂತೆ ತೆಳುವಾಗಿದ್ದು, ಇದು ಕೇವಲ 0.2 ರಷ್ಟು ಕೊಬ್ಬನ್ನು ಹೊಂದಿರುತ್ತದೆ. ಸಂತಾನೋತ್ಪತಿ ಚಕ್ರ ನಿಧಾನವಾಗಿರುವುದರಿಂದ ಕಪ್ಪು ಘೇಂಡಾಮೃಗದ ಹಾಲು ತೆಳುವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕಪ್ಪು ಘೇಂಡಾಮೃಗ ನಾಲ್ಕರಿಂದ ಐದು ವರ್ಷಗಳ ವಯಸ್ಸನ್ನು ತಲುಪಿದ ನಂತರವೇ ಸಂತಾನೋತ್ಪತ್ತಿ ಮಾಡಬಹುದು. ಅದರ ಗರ್ಭಧಾರಣೆಯ ಅವಧಿ 15 ರಿಂದ 16 ತಿಂಗಳವರೆಗೆ ಹೊಂದಿದೆ. ಒಂದು ಬಾರಿಗೆ ಕೇವಲ ಒಂದು ಕರುವಿಗೆ ಜನ್ಮ ನೀಡುತ್ತವೆ. ನಂತರ ತಮ್ಮ ಕರುವನ್ನು ಬೆಳೆಸಲು ಸಾಕಷ್ಟು ಸಮಯ ಕಳೆಯುತ್ತವೆ.

ನಾವು ಸಾಮಾನ್ಯವಾಗಿ ನೋಡಿರುವ ಪ್ರಾಣಿಗಳ ಹಾಲಿನ ಬಣ್ಣ ಬಿಳಿಯಾಗಿರುತ್ತವೆ. ಬಿಳಿ ಹಾಲನ್ನೇ ಹೆಚ್ಚಾಗಿ ಬಳಸುವುದು ಕೂಡ. ಬಹುತೇಕ ಪ್ರಾಣಿಗಳ ಹಾಲಿನ ಬಣ್ಣವು ಬಿಳಿಯಾಗಿರಲು ಕಾರಣವೇನೆಂದರೆ ಅದರಲ್ಲಿರುವ ಕ್ಯಾಸಿನ್ ಅಂಶ. ಇದು ಸಣ್ಣ ಕಣಗಳಿಂದ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‍ನಿಂದ ರೂಪುಗೊಳ್ಳುತ್ತದೆ. ಇವನ್ನು ಮೈಕೆಲ್ ಎಂದು ಕರೆಯುತ್ತಾರೆ. ಹೀಗಾಗಿ ಹಾಲಿನ ಬಣ್ಣವು ಬಿಳಿಯಾಗಿರುತ್ತದೆ. ಆದರೆ, ಆಫ್ರಿಕನ್ ಕಪ್ಪು ಘೇಂಡಾಮೃಗದ ಹಾಲಿನ ಬಣ್ಣ ಕಪ್ಪಗಿರಲು ಕಾರಣ ಕಡಿಮೆ ಕೊಬ್ಬಿನಾಂಶವಿರುವುದು ಎಂದು ಹೇಳಲಾಗಿದೆ.

Whats_app_banner