Symptoms of Diabetes: ಸಕ್ಕರೆ ಕಾಯಿಲೆ ಬಂದಿದೆಯಾ ಎಂಬುದನ್ನು ತಿಳಿಯುವುದು ಹೇಗೆ?: ಮಿಡ್‌ 30ʼsನರವರು ಓದಲೇಬೇಕಾದ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Symptoms Of Diabetes: ಸಕ್ಕರೆ ಕಾಯಿಲೆ ಬಂದಿದೆಯಾ ಎಂಬುದನ್ನು ತಿಳಿಯುವುದು ಹೇಗೆ?: ಮಿಡ್‌ 30ʼsನರವರು ಓದಲೇಬೇಕಾದ ಮಾಹಿತಿ

Symptoms of Diabetes: ಸಕ್ಕರೆ ಕಾಯಿಲೆ ಬಂದಿದೆಯಾ ಎಂಬುದನ್ನು ತಿಳಿಯುವುದು ಹೇಗೆ?: ಮಿಡ್‌ 30ʼsನರವರು ಓದಲೇಬೇಕಾದ ಮಾಹಿತಿ

ಮಧುಮೇಹ ಕಾಯಿಲೆ ಇಂದು ಬಹುತೇಕ 30ರ ಆಸುಪಾಸಿನಲ್ಲಿರುವ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಧುಮೇಹಕ್ಕೆ ಹಲವು ಕಾರಣಗಳಿವೆಯಾದರೂ, ಈ ರೋಗ ತಗುಲಿರುವ ಬಗ್ಗೆ ಆರಂಭದಲ್ಲೇ ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಹಾಗಾದರೆ ಮಧುಮೇಹದ ಆರಂಭಿಕ ಲಕ್ಷಣಗಳನ್ನು ನೋಡುವುದಾದರೆ...

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (MINT_PRINT)

ಬೆಂಗಳೂರು: ಮಧುಮೇಹ ಅಥವಾ ಆಡು ಭಾಷೆಯಲ್ಲಿ ಕರೆಯುವಂತೆ ಸಕ್ಕರೆ ಕಾಯಿಲೆ, ಇಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಚಿಕ್ಕ ಮಕ್ಕಳು, ಹದಿಹರೆಯದವರು, ವಯಸ್ಸಾದವರು ಹೀಗೆ ಎಲ್ಲರಿಗೂ ಈ ಕಾಯಿಲೆ ಅಂಟಿಕೊಳ್ಳುತ್ತಿದೆ. ಮಧುಮೇಹವನ್ನು ಕೇವಲ ನಿಯಂತ್ರಿಸಬಹುದೇ ಹೊರತು, ಈ ಕಾಯಿಲೆಯಿಂದ ಸಂಫೂರ್ಣವಾಗಿ ಗುಣಮುಖವಾಗುವುದು ಸಾಧ್ಯವಿಲ್ಲ ಎನ್ನುತ್ತದೆ ಆಧುನಿಕ ವೈದ್ಯ ವಿಜ್ಞಾನ.

ಅದೆನೆ ಇರಲಿ, ಮಧುಮೇಹ ಕಾಯಿಲೆ ಇಂದು ಬಹುತೇಕ 30ರ ಆಸುಪಾಸಿನಲ್ಲಿರುವ ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಧುಮೇಹಕ್ಕೆ ಹಲವು ಕಾರಣಗಳಿವೆಯಾದರೂ, ಈ ರೋಗ ತಗುಲಿರುವ ಬಗ್ಗೆ ಆರಂಭದಲ್ಲೇ ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಹಾಗಾದರೆ ಮಧುಮೇಹದ ಆರಂಭಿಕ ಲಕ್ಷಣಗಳನ್ನು ನೋಡುವುದಾದರೆ...

ಸಕ್ಕರೆ ಕಾಯಿಲೆ ಸಹ ಎರಡು ವಿಧಗಳಿವೆ. ಮೊದಲನೆಯದನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದಾಗಿದ್ದರೆ, ಎರಡನೇಯದನ್ನು ನಿಯಂತ್ರಣದಲ್ಲಿಡಲು ಅತ್ಯಂತ ಕಷ್ಟ ಪಡಬೇಕಾಗುತ್ತದೆ. ಒಂದೊಂದು ಬಗೆಯ ಸಕ್ಕರೆ ಕಾಯಿಲೆಗೆ ಒಂದೊಂದು ತರಹದ ರೋಗ ಲಕ್ಷಣಗಳು ಇರುತ್ತವೆ. ಸಕ್ಕರೆ ಕಾಯಿಲೆಗೆ ಪುರುಷರು, ಮಹಿಳೆಯರು ಎಂಬ ಭೇದಭಾವವಿಲ್ಲ ಎಂಬುದನ್ನು ಮರೆಯಬಾರದು.

ಸಕ್ಕರೆ ಕಾಯಿಲೆ ಎಂಬುದು ಧೀರ್ಘಕಾಲ ಕಾಡುವ ಒಂದು ಮೆಟಬೋಲಿಕ್ ಆರೋಗ್ಯ ಸಮಸ್ಯೆಯಾಗಿದ್ದು, ನಿಮ್ಮ ರಕ್ತದ ಗ್ಲುಕೋಸ್ ಮಟ್ಟ ಏರಿಕೆ ಅಥವಾ ಇಳಿಕೆ ಮಾಡುತ್ತಾ, ಅಂತಿಮವಾಗಿ ನಿಮ್ಮ ಹೃದಯದ ಕಾರ್ಯಾಚರಣೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಧುಮೇಹ ರೋಗಕ್ಕೆ ತುತ್ತಾಗಿರುವ ವ್ಯಕ್ತಿಯ ಕಿಡ್ನಿ, ಕಣ್ಣುಗಳು, ರಕ್ತನಾಳ ಮತ್ತು ನರಮಂಡಲ ಭಾರೀ ತೊಂದರೆಗೆ ಗುರಿಯಾಗುತ್ತವೆ.

ಸಕ್ಕರೆ ಕಾಯಿಲೆ ಬಂದ ನಂತರದಲ್ಲಿ ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಕಾಲಾನಂತರದಲ್ಲಿ ಈ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದು, ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗಾಗಿ ಸಕ್ಕರೆ ಕಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ನೀವು ಎಚ್ಚರದಿಂದ ಇರಬೇಕು.

ಮಧುಮೇಹದ ಆರಂಭಿಕ ಲಕ್ಷಣಗಳು:

ಇದಕ್ಕಿದಂತೆ ಹೊಟ್ಟೆ ಹಸಿವಾಗುವುದು, ಬಾಯಾರಿಕೆ, ಚರ್ಮ ಸಂಬಂಧಿ ಸಮಸ್ಯೆಗಳು, ದವಡೆ ಮತ್ತು ವಸಡಿನ ಭಾಗದಲ್ಲಿ ಊತ ಕಂಡುಬರುವುದು ಹೀಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಮಧುಮೇಹದ ಆರಂಭಿಕ ಲಕ್ಷಣಗಳಾಗಿವೆ.

ಆಹಾರದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಸೇರಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನಿಮಗೆ ಕೈಕಾಲುಗಳ ಉರಿ ಮತ್ತು ಊತ ಸಹ ಕಂಡು ಬರಬಹುದು. ಇದು ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

ನಿಮ್ಮ ದೇಹದ ಮೇಲೆ ಒಂದು ವೇಳೆ ಎಲ್ಲಾದರೂ ಸಣ್ಣ ಪುಟ್ಟ ಗಾಯಗಳು ಉಂಟಾಗಿ ಬೇಗನೆ ವಾಸಿಯಾಗದಿದ್ದರೆ, ಇದು ಖಂಡಿತವಾಗಿಯೂ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು ಎಂಬುದನ್ನು ನೀವು ಮರೆಯಬಾರದು. ನಿಮ್ಮ ದೇಹದ ತೂಕ ನಿಯಂತ್ರಣ ಕೂಡ ಏಕಾಏಕಿ ಏರಿಳಿತ ಕಂಡರೆ ಅದೂ ಕೂಡ ಮಧುಮೇಹದ ಅಪಾಯದ ಕರೆಗಂಟೆ ಮೊಳಗಿಸುತ್ತಿದೆ ಎಂದೇ ಅರ್ಥ.

ಕಣ್ಣು ಮಂಜಾಗುವುದು, ವಿಪರೀತ ಆಯಾಸವಾಗುವುದು, ಮೂತ್ರನಾಳದ ಸೋಂಕುಗಳು ಎದುರಾಗುವುದು, ವಿಪರೀತ ಮೂತ್ರ ವಿಸರ್ಜನೆ ಮಾಡುವುದು ಕೂಡ ಸಕ್ಕರೆ ಕಾಯಿಲೆಯ ಆರಂಭಿಕ ಲಕ್ಷಣವಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ.

ಇಂದಿನ ಪ್ರಮುಖ ಸುದ್ದಿ

Angkor wat Temple: ಭಾರತದಿಂದ ಕಾಂಬೋಡಿಯಾದಲ್ಲಿರುವ ಜಗತ್ತಿನ ಬೃಹತ್‌ ಹಿಂದೂ ದೇಗುಲದ ಜೀರ್ಣೋದ್ಧಾರ - ಜೈಶಂಕರ್‌ ಮಾಹಿತಿ

ಕಾಂಬೋಡಿಯಾದಲ್ಲಿರುವ ಅಂಕೋರ್‌ ವಾಟ್‌ ಹಿಂದೂ ದೇಗುಲವಾಗಿದ್ದು ಸುಮಾರು 402 ಎಕರೆಗಳಲ್ಲಿ ಹರಡಿಕೊಂಡಿದೆ. ಇದನ್ನು ಚಕ್ರವರ್ತಿ 2ನೇ ಸೂರ್ಯವರ್ಮನ್‌ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Whats_app_banner