ಬಂದೇ ಬಿಡ್ತು ಬ್ಲಾಕ್ ಫ್ರೈಡೇ, ಶಾಪಿಂಗ್‌ಪ್ರಿಯರಿಗಾಗಿ ಭರ್ಜರಿ ಆಫರ್ ; ರಿಯಾಯಿತಿ ದರದಲ್ಲಿ ನೀವೂ ಖರೀದಿಸಿ ನಿಮ್ಮವರಿಗೂ ಕೊಂಡೊಯ್ಯಿರಿ
Black Friday Sale: ಸ್ಪೋರ್ಟ್ಸ್‌ವೇರ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಅಡಿಡಸ್ ತನ್ನ ಎಲ್ಲಾ ಉತ್ಪನ್ನಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿ ನೀಡುತ್ತಿದೆ. ಫ್ರೈಡೇ ಬ್ಲಾಕ್ ಸೇಲ್‌ನಲ್ಲಿ ಹೆಚ್ಚುವರಿ ಶೇ 20ರಷ್ಟು ರಿಯಾಯಿತಿ ನೀಡುತ್ತಿದೆ.
Black Friday Sale: ಪ್ರತಿ ವರ್ಷವೂ ಕ್ರಿಸ್‌ಮಸ್ ಆಚರಣೆಗೂ ಮುನ್ನ ಅಮೆರಿಕದಲ್ಲಿ ಬ್ಲಾಕ್ ಫ್ರೈಡೇ ಡೀಲ್ ಪ್ರಯುಕ್ತ ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಾರಿಯೂ ಬ್ಲಾಕ್ ಫ್ರೈಡೇ ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ. ಬ್ಲಾಕ್ ಫ್ರೈಡೇ ಡೀಲ್‌ನಲ್ಲಿ ಅಮೆಜಾನ್, ನೈಕಾ, ಮಿಂತ್ರ, ಪುಮಾ, ಅಡಿದಾಸ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್‌ಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿದೆ.
ನವೆಂಬರ್ 24, ಶುಕ್ರವಾರ ಬ್ಲಾಕ್ ಫ್ರೈಡೇ ಸೇಲ್ ಇದೆ. ಯುಕೆ, ಯುಎಸ್, ಯೂರೋಪ್‌ನಂತ ಸ್ಥಳಗಳಲ್ಲಿ ಜನರು ಭರ್ಜರಿ ಶಾಪಿಂಗ್ ಮಾಡುತ್ತಿದ್ಧಾರೆ. ಈ ಮೂಲಕ ಇಂದಿನಿಂದ ಕ್ರಿಸ್‌ಮಸ್ ಶಾಪಿಂಗ್ ಆರಂಭವಾಗುತ್ತದೆ. ಭಾರತದ ಮಾರುಕಟ್ಟೆಗೂ ಇದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಗ್ಯಾಜೆಟ್‌ಗಳು, ಬ್ಯೂಟಿ ಪ್ರಾಡಕ್ಟ್‌ಗಳು, ಡ್ರೆಸ್‌ಗಳನ್ನು ಉಚಿತ ಶಿಪ್ಪಿಂಗ್ ಹಾಗೂ ಈಸಿ ಟು ರಿಟರ್ನ್ ಪಾಲಿಸಿ ಮೂಲಕ ಮಾರಾಟ ಮಾಡಲಾಗುತ್ತಿದೆ.
ಭಾರತದಲ್ಲಿ ಬ್ಲಾಕ್ ಫ್ರೈಡೇ ಪ್ರಯುಕ್ತ ಏನೆಲ್ಲಾ ಆಫರ್ ಇದೆ?
ಕ್ರೋಮಾ
ಎಲೆಕ್ಟ್ರಾನಿಕ್ ಹಾಗೂ ಡ್ಯುರಬಲ್ ಬ್ರ್ಯಾಂಡ್‌ಗೆ ಹೆಸರುವಾಸಿಯಾದ ಕ್ರೋಮಾ, ಈ ಬಾರಿ ಬ್ಲಾಕ್ ಫ್ರೈಡೇ ಡೀಲ್ ಅಂಗಳಕ್ಕೆ ಕಾಲಿಟ್ಟಿದೆ. ಮಾರಾಟವು ನವೆಂಬರ್ 24 ರಿಂದ 26 ವರಗೂ ಇರುತ್ತದೆ. ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಗ್ಯಾಜೆಟ್‌ಗಳ ಮೇಲೆ ಕ್ರೋಮಾ ವಿಶೇಷ ಆಫರ್ ನೀಡುತ್ತಿದೆ.
ಅಮೆಜಾನ್
ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಆನ್‌ಲೈನ್ ಜಾಹೀರಾತು, ಡಿಜಿಟಲ್ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಅಮೆಜಾನ್ ಈ ಬಾರೀ ಕೂಡಾ ಬ್ಲಾಕ್ ಫ್ರೈಡೇ ಡೀಲ್‌ನಲ್ಲಿ ತನ್ನ ಉತ್ಪನ್ನಗಳನ್ನ ಮಾರಾಟಕ್ಕೆ ಇಟ್ಟಿದೆ. ಟಾಬ್ಲೆಟ್‌ಗಳು, ಸ್ಪೀಕರ್‌ಗಳು, ವಾಚ್, ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರ ಗೆಜೆಟ್‌ಗಳನ್ನು ಮಾರಾಟಕ್ಕೆ ಇರಿಸಿದೆ.
ನೈಕಾ
ಖ್ಯಾತ ಬ್ಯೂಟಿ ಪ್ಲಾಟ್‌ಫಾರ್ಮ್ ನೈಕಾ, ಬ್ಲಾಕ್ ಫ್ರೈಡೇಯನ್ನು ಭಾರತದಲ್ಲಿ ಪಿಂಕ್ ಫ್ರೈಡೇ ಎಂದು ಘೋಷಿಸಿದೆ. ಪಿಂಕ್ ಫ್ರೈಡೇ ಅಡಿಯಲ್ಲಿ ನೈಕಾ ಸುಮಾರು 2,100 ಬ್ರಾಂಡ್‌ಗಳಿಗೆ 50%ರಷ್ಟು ರಿಯಾಯಿತಿ ನೀಡುತ್ತಿದೆ. ಲ್ಯಾಕ್ಮೆ, ಮೆಬಿಲಿನ್ ನ್ಯೂಯಾರ್ಕ್, ಲೊರಿಯಲ್ ಪ್ಯಾರಿಸ್ ಸೇರಿದಂತೆ ಇತರ ಬ್ರಾಂಡ್‌ಗಳ ಪ್ರಾಡೆಕ್ಟ್‌ಗಳು ನಿಮಗೆ ಅರ್ಧ ಬೆಲೆಯಲ್ಲಿ ದೊರೆಯುತ್ತಿದೆ.
ಅಡಿಡಸ್
ಸ್ಪೋರ್ಟ್ಸ್‌ವೇರ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಅಡಿಡಸ್ ತನ್ನ ಎಲ್ಲಾ ಉತ್ಪನ್ನಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿ ನೀಡುತ್ತಿದೆ. ಫ್ರೈಡೇ ಬ್ಲಾಕ್ ಸೇಲ್‌ನಲ್ಲಿ ಹೆಚ್ಚುವರಿ ಶೇ 20ರಷ್ಟು ರಿಯಾಯಿತಿ ನೀಡುತ್ತಿದೆ.
ಹೆಚ್&ಎಂ
ಫ್ಯಾಷನ್ ಉತ್ಪನ್ನಗಳಿಗೆ ಹೆಸರಾದ ಹೆಚ್&ಎಂ ತನ್ನ ಉತ್ಪನ್ನಗಳಿಗೆ ಶೇಕಡಾ 20 ರಿಂದ 60 ಡಿಸ್ಕೌಂಟ್ ನೀಡುತ್ತಿದೆ. ಆನ್‌ಲೈನ್, ಆಫ್‌ಲೈನ್ ಎರಡಕ್ಕೂ ಈ ರಿಯಾಯಿತಿ ಅನ್ವಯವಾಗುತ್ತದೆ.
ಅಜಿಯೊ
ಬಟ್ಟೆ, ಫ್ಯಾಷನ್ ಆಕ್ಸೆಸರಿ, ಪಾದರಕ್ಷೆ, ಐವೇರ್ ( ಸನ್‌ಗ್ಲಾಸ್) ಸೇರಿದಂತೆ ಖ್ಯಾತ ಫ್ಯಾಷನ್ ಬ್ರಾಂಡ್ ಅಜಿಯೋ ಕೂಡಾ ತನ್ನ ವಿವಿಧ ಪ್ರಾಡಕ್ಟ್‌ಗಳ ಮೇಲೆ ಶೇ 50 ರಿಂದ 90 ರಿಯಾಯಿತಿ ನೀಡುತ್ತಿದೆ. ನವೆಂಬರ್ 24 ರಿಂದ 27ವರೆಗೆ ಈ ಆಫರ್ ಜಾರಿಯಲ್ಲಿರುತ್ತದೆ.
ಜಾರಾ
ಕ್ಲಾತಿಂಗ್ ಬ್ರಾಂಡ್ ಜಾರಾ ಕೂಡಾ ಆಫ್‌ಲೈನ್ ಹಾಗೂ ಆನ್‌ಲೈನ್ ಶಾಪಿಂಗ್ ಮೂಲಕ ಶೇ 40ರಷ್ಟು ರಿಯಾಯಿತಿ ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಇದರೊಂದಿಗೆ ವಿಜಯ್ ಸೇಲ್ಸ್, ಟಾಟಾ ಕ್ಲಿಕ್ ಬ್ರ್ಯಾಂಡ್‌ಗಳು ಕೂಡಾ ಬ್ಲಾಕ್ ಫ್ರೈಡೇ ಡೀಲ್‌ನಲ್ಲಿ ವಿವಿಧ ರಿಯಾಯಿತಿ ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.