ಮುಖೇಶ್ ಅಂಬಾನಿಯ ಈ 3 ಹೊಸ ಐಷಾರಾಮಿ ಕಾರುಗಳನ್ನು ನೋಡಿದ್ರೆ ನೀವು ಬೆರಗಾಗ್ತೀರಿ: ಬೆಲೆ-ಫೀಚರ್ಸ್ ನೋಡಿ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಐಷಾರಾಮಿ ಕಾರುಗಳನ್ನು ಹೊಂದಿದೆ. ಇತ್ತೀಚೆಗಷ್ಟೆ ಲ್ಯಾಂಡ್ ರೋವರ್ ರೇಂಜ್ ರೋವರ್, ಬೆಂಟ್ಲಿ ಮತ್ತು ಫೆರಾರಿಯಂತಹ ಕಂಪನಿಗಳಿಂದ 3 ಹೊಸ ಐಷಾರಾಮಿ ಕಾರುಗಳನ್ನು ಖರೀದಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂಬಾನಿ ಕುಟುಂಬದ ಐಷಾರಾಮಿ ಕಾರುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ಮುಖೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಪುತ್ರರಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಅವರು ಮುಂಬೈನ ಜಾಮ್‌ನಗರದ ರಸ್ತೆಗಳಲ್ಲಿ ವಿಭಿನ್ನ ಐಷಾರಾಮಿ ಕಾರುಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಂಬಾನಿ ಕುಟುಂಬ 3 ಹೊಸ ದುಬಾರಿ ಬೆಲೆಯ ಕಾರುಗಳನ್ನು ಖರೀದಿಸಿದೆ. ಅವುಗಳು ಯಾವುವು, ಎಷ್ಟು ಬೆಲೆ, ಏನೆಲ್ಲ ಫೀಚರ್ಸ್ ಇವೆ? ಎಂಬುದನ್ನು ನೋಡೋಣ.
ಅಂಬಾನಿ ಕುಟುಂಬದ ಹೊಸ ಫೆರಾರಿ ಪುರೋಸಾಂಗ್ಯೂ
ದೇಶದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಒಂದಾದ ಅಂಬಾನಿ ಫ್ಯಾಮಿಲಿಯು ಇತ್ತೀಚೆಗೆ ತಮ್ಮ ಗ್ಯಾರೇಜ್‌ಗೆ ಫೆರಾರಿ ಪುರೋಸಾಂಗ್ಯೂ ಎಂಬ ಐಷಾರಾಮಿ ಸೂಪರ್ ಕಾರನ್ನು ಸೇರಿಸಿದೆ. ಈ ಫೆರಾರಿ ಎಸ್ಯುವಿ ಬೆಲೆ 10 ಕೋಟಿ ರೂಪಾಯಿಗೂ ಹೆಚ್ಚು. 6.5-ಲೀಟರ್ V12 ಎಂಜಿನ್‌ನೊಂದಿಗೆ 715bhp ಮತ್ತು 716Nm ಟಾರ್ಕ್ ಅನ್ನು ನೀಡುತ್ತದೆ. 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿರುವ ಈ ಐಷಾರಾಮಿ SUV ಕೇವಲ 3.3 ಸೆಕೆಂಡುಗಳಲ್ಲಿ 0-100 kmph ವರೆಗೆ ಓಡಿಸಬಹುದು ಮತ್ತು ಇದರ ಗರಿಷ್ಠ ವೇಗ 310 kmph ಆಗಿದೆ.
ಬೆಂಟ್ಲಿ ಬೆಂಟೈಗಾ
ಬೆಂಟ್ಲಿ 2022ರಲ್ಲಿ ಹೊಸ ಬೆಂಟೈಗಾವನ್ನು ಬಿಡುಗಡೆ ಮಾಡಿತು. ಇದರ ಬೆಲೆ 7 ಕೋಟಿ ರೂಪಾಯಿ. ಅಂಬಾನಿ ಕುಟುಂಬ ಇತ್ತೀಚೆಗೆ ಈ ಐಷಾರಾಮಿ ಕಾರನ್ನು ಖರೀದಿಸಿದೆ. ಅಂಬಾನಿ ಅವರ ಈ ಕಾರಿನಲ್ಲಿ ಮೊನ್ನೆಯಷ್ಟೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಇದು 4.0 ಲೀಟರ್ V8 ಟ್ವಿನ್ ಟರ್ಬೊ ಎಂಜಿನ್ ಅನ್ನು ಹೊಂದಿದೆ. 542 HP ಗರಿಷ್ಠ ಶಕ್ತಿಯನ್ನು ಮತ್ತು 770 ನ್ಯೂಟನ್ ಟಾರ್ಕ್ ಅನ್ನು ನೀಡುತ್ತದೆ. 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಬೆಂಟೈಗಾವನ್ನು ಕೇವಲ 4.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದು.
ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ
ಅಂಬಾನಿ ಕುಟುಂಬವು ಇತ್ತೀಚೆಗೆ ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿಯನ್ನು ಖರೀದಿಸಿದೆ. ಇದರ ಬೆಲೆ ಬರೋಬ್ಬರಿ 5 ಕೋಟಿ ರೂ. ಈ ಐಷಾರಾಮಿ ಎಸ್‌ಯುವಿಯಲ್ಲಿ ಆಕಾಶ್ ಅಂಬಾನಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ರೇಂಜ್ ರೋವರ್ ಆಟೋಬಯೋಗ್ರಫಿಯು ಶಕ್ತಿಯುತ 4.4 ಲೀಟರ್ ಎಂಜಿನ್ ಅನ್ನು ಹೊಂದಿದೆ. ಇದು 523 HP ಯ ಗರಿಷ್ಠ ಶಕ್ತಿಯನ್ನು ಮತ್ತು 750 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿರುವ ಈ ಎಸ್‌ಯುವಿಯಲ್ಲಿ ಕೇವಲ 4.6 ಸೆಕೆಂಡುಗಳಲ್ಲಿ 0-100 kmph ವೇಗದಲ್ಲಿ ಚಲಿಸಬಹುದು.
ವರದಿ: ವಿನಯ್ ಭಟ್
ಆಟೋಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | CMF Phone 1: ಸಿಎಮ್ಎಫ್ ಬ್ರ್ಯಾಂಡ್ನ ಚೊಚ್ಚಲ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ; ಖರೀದಿಗೆ ಕ್ಯೂ ಗ್ಯಾರಂಟಿ