Punugulu Recipe: ಇಡ್ಲಿ ಹಿಟ್ಟು ಹೆಚ್ಚಿಗೆ ಉಳಿದಿದ್ಯಾ..ಸಂಜೆ ಸ್ನಾಕ್ಸ್‌ಗೆ ಆಂಧ್ರ ಫೇಮಸ್ ರೆಸಿಪಿ ತಯಾರಿಸಿ..ಸಖತ್ ರುಚಿ ಈ ಸ್ನಾಕ್ಸ್
ಸಾಮಾನ್ಯವಾಗಿ ಆಂಧ್ರ ಟಿಫನ್ ಸೆಂಟರ್‌ಗಳಲ್ಲಿ ನೀವು ಪುನುಗುಲು ಟೇಸ್ಟ್ ಮಾಡಿರುತ್ತೀರಿ. ಬೆಳಗ್ಗೆ ಮಾಡಿದ ಇಡ್ಲಿಹಿಟ್ಟನ್ನು ಸ್ವಲ್ಪ ಉಳಿಸಿಕೊಂಡು ಸಂಜೆಗೆ ಈ ರುಚಿಯಾದ ಸ್ನಾಕ್ಸ್ ತಯಾರಿಸಲಾಗುತ್ತದೆ. ಚಳಿ ಇರಲಿ, ಬಿಸಿಲು, ಮಳೆ ಇರಲಿ ಸಂಜೆ ತಿನ್ನಲು ಇಂತಹ ರೆಸಿಪಿಗಳನ್ನು ಕಲಿಯಲೇಬೇಕು. ಪುನುಗುಲು ತಯಾರಿಸಲು ಬೇಕಾಗುವ ಸಾಮಗ್ರಿಗಳು, ಅದನ್ನು ತಯಾರಿಸುವ ವಿಧಾನ ಇಲ್ಲಿದೆ.
ಊಟಕ್ಕೆ ತಯಾರಿಸಿರುವ ಅನ್ನ, ಹೊರಗಿನಿಂದ ಕೊಂಡು ತಂದ ಬ್ರೆಡ್, ಬಿಸ್ಕೆಟ್‌ಗಳು, ದೋಸೆ ಹಿಟ್ಟು, ಇಡ್ಲಿಹಿಟ್ಟು ಆಗ್ಗಾಗ್ಗೆ ಉಳಿದುಬಿಡುತ್ತದೆ. ಇದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟರೂ ಕೆಲವೊಮ್ಮೆ ಮರೆತುಹೋಗಿ ಅದು ವೇಸ್ಟ್ ಆಗುತ್ತದೆ. ಆದರೆ ಈ ಉಳಿದ ಪದಾರ್ಥಗಳಿಂದಲೇ ಸ್ನಾಕ್ಸ್ ತಯಾರಿಸಿದರೆ ವೇಸ್ಟ್ ಆದ ಬೇಸರವೂ ಇರುವುದಿಲ್ಲ. ಹೊಸ ರುಚಿ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ.
ಆಂಧ್ರ, ತೆಲಂಗಾಣ ಫುಡ್ ಕಲ್ಚರ್ ಬಗ್ಗೆ ಗೊತ್ತಿರುವವರಿಗೆ ಈ ಪುನುಗುಲು ಸ್ನಾಕ್ಸ್ ಬಗ್ಗೆ ಕೂಡಾ ತಿಳಿದಿರುತ್ತದೆ. ಸಾಮಾನ್ಯವಾಗಿ ಟಿಫನ್ ಸೆಂಟರ್‌ಗಳಲ್ಲಿ ನೀವು ಪುನುಗುಲು ಟೇಸ್ಟ್ ಮಾಡಿರುತ್ತೀರಿ. ಬೆಳಗ್ಗೆ ಮಾಡಿದ ಇಡ್ಲಿಹಿಟ್ಟನ್ನು ಸ್ವಲ್ಪ ಉಳಿಸಿಕೊಂಡು ಸಂಜೆಗೆ ಈ ರುಚಿಯಾದ ಸ್ನಾಕ್ಸ್ ತಯಾರಿಸಲಾಗುತ್ತದೆ. ಚಳಿ ಇರಲಿ, ಬಿಸಿಲು, ಮಳೆ ಇರಲಿ ಸಂಜೆ ತಿನ್ನಲು ಇಂತಹ ರೆಸಿಪಿಗಳನ್ನು ಕಲಿಯಲೇಬೇಕು. ಪುನುಗುಲು ತಯಾರಿಸಲು ಬೇಕಾಗುವ ಸಾಮಗ್ರಿಗಳು, ಅದನ್ನು ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಇಡ್ಲಿ ಹಿಟ್ಟು - 2 ಕಪ್
ಮೈದಾಹಿಟ್ಟು - 1 ಟೇಬಲ್ ಸ್ಪೂನ್
ಅಕ್ಕಿ ಹಿಟ್ಟು - 2 ಟೇಬಲ್ ಸ್ಪೂನ್
ಜೀರ್ಗೆ - 1 ಟೀ ಸ್ಪೂನ್
ಹಸಿಮೆಣಸಿನಕಾಯಿ - 10
ಈರುಳ್ಳಿ - 2
ಕೊತ್ತಂಬರಿ ಸೊಪ್ಪು - 1 ಕಟ್ಟು
ಅಡುಗೆ ಸೋಡಾ - ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಪುನುಗುಲು ತಯಾರಿಸುವ ವಿಧಾನ
ಒಂದು ದೊಡ್ಡ ಬೌಲ್‌ಗೆ ಇಡ್ಲಿ ಹಿಟ್ಟನ್ನು ವರ್ಗಾಯಿಸಿಕೊಳ್ಳಿ.
ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ.
ಜೊತೆಗೆ ಅಕ್ಕಿ ಹಿಟ್ಟು, ಮೈದಾಹಿಟ್ಟು, ಜೀರ್ಗೆ, ಅಡುಗೆ ಸೋಡಾ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಆಗಲು ಇಡಿ, ಎಣ್ಣೆಯನ್ನು ಅತಿಯಾಗಿ ಬಿಸಿ ಮಾಡಬಿಡಿ.
ಪುನುಗುಲು ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
ತೆಂಗಿನ ಚಟ್ನಿ ಅಥವಾ ಕೆಂಪು ಚಟ್ನಿಯೊಂದಿಗೆ ಈ ಟೇಸ್ಟಿ ಸ್ನಾಕ್ಸ್ ಎಂಜಾಯ್ ಮಾಡಿ
ಗಮನಿಸಿ: ಇಡ್ಲಿಹಿಟ್ಟು ಗಟ್ಟಿಯಾಗಿ ಇದ್ದರೆ ಈ ಸ್ನಾಕ್ಸ್ ಮಾಡಲು ಚೆನ್ನ.
2 ದಿನಗಳು ಸ್ಟೋರ್ ಮಾಡಿದ ಇಡ್ಲಿಹಿಟ್ಟನ್ನು ಬಳಸಿದರೆ ಬಹಳ ರುಚಿಯಾಗಿರುತ್ತದೆ.
ದೋಸೆ ಹಿಟ್ಟಿನಿಂದ ಕೂಡಾ ಈ ರೆಸಿಪಿ ತಯಾರಿಸಬಹುದು. ಆದರೆ ಅದಕ್ಕೆ ಹೆಚ್ಚಿನ ಪ್ರಮಾಣದ ಅಕ್ಕಿಹಿಟ್ಟು, ಮೈದಾಹಿಟ್ಟು ಸೇರಿಸಬೇಕು. ಆದ್ದರಿಂದ ಬ್ಯಾಟರ್ ಗಟ್ಟಿಯಾಗಿದ್ದರೆ ಒಳ್ಳೆಯದು.
ವಿಭಾಗ