ಕನ್ನಡ ಸುದ್ದಿ  /  Lifestyle  /  Andhra Pradesh Famous Madata Kaja Recipe

Madata Kaja Recipe: ಆಂಧ್ರ ಫೇಮಸ್‌ ಮಡತ ಕಾಜಾ ರೆಸಿಪಿ..ಈ ಜ್ಯೂಸಿ ಸ್ವೀಟನ್ನು ನೀವೂ ತಯಾರಿಸಿ

ಮಡತ ಕಾಜಾ ನೋಡಲು ಬಹಳ ಆಕರ್ಷಕ. ಪದರದಂತೆ ಕಾಣುವ ಈ ಸಿಹಿ ತಿನ್ನಲು ಬಹಳ ರುಚಿ. ಮೈದಾಹಿಟ್ಟು ಹಾಗೂ ಸಕ್ಕರೆ ಪಾಕದಿಂದ ತಯಾರಿಸುವ ಈ ಸಿಹಿ ತೆಲುಗು ಜನರ ಮೋಸ್ಟ್‌ ಫೇವರೆಟ್.‌ ಆಂಧ್ರ, ತೆಲಂಗಾಣಕ್ಕೆ ಹೋದ ಪ್ರವಾಸಿಗರು ತಪ್ಪದೆ ಈ ಸಿಹಿಯನ್ನು ಖರೀದಿಸಿ ತರುತ್ತಾರೆ.

ಆಂಧ್ರ ಫೇಮಸ್‌ ಮಡತ ಕಾಜಾ
ಆಂಧ್ರ ಫೇಮಸ್‌ ಮಡತ ಕಾಜಾ (PC: pixabay.com)

ಧಾರವಾಡ ಪೇಡ, ಬೆಳಗಾವಿ ಕುಂದಾ, ಮೈಸೂರು ಪಾಕ್‌, ಮದ್ದೂರು ವಡೆ, ಉತ್ತರ ಕರ್ನಾಟಕದ ಗಿರ್‌ಮಿಟ್‌ ಹೀಗೆ ಪ್ರತಿಯೊಂದು ರಾಜ್ಯದಲ್ಲೂ ಪ್ರತಿ ಜಿಲ್ಲೆಯಲ್ಲೂ ಒಂದೊಂದು ತಿಂಡಿ ಫೇಮಸ್‌ ಇರುತ್ತದೆ. ಹಾಗ್ ಆಂಧ್ರ ಹಾಗೂ ತೆಲಂಗಾಣದಲ್ಲಿ ಕೂಡಾ ಮಡತ ಕಾಜಾ ಬಹಳ ಫೇಮಸ್.‌

ಮಡತ ಕಾಜಾ ನೋಡಲು ಬಹಳ ಆಕರ್ಷಕ. ಪದರದಂತೆ ಕಾಣುವ ಈ ಸಿಹಿ ತಿನ್ನಲು ಬಹಳ ರುಚಿ. ಮೈದಾಹಿಟ್ಟು ಹಾಗೂ ಸಕ್ಕರೆ ಪಾಕದಿಂದ ತಯಾರಿಸುವ ಈ ಸಿಹಿ ತೆಲುಗು ಜನರ ಮೋಸ್ಟ್‌ ಫೇವರೆಟ್.‌ ಆಂಧ್ರ, ತೆಲಂಗಾಣಕ್ಕೆ ಹೋದ ಪ್ರವಾಸಿಗರು ತಪ್ಪದೆ ಈ ಸಿಹಿಯನ್ನು ಖರೀದಿಸಿ ತರುತ್ತಾರೆ. ನೀವೂ ಕೂಡಾ ಮನೆಯಲ್ಲಿ ಮಡತ ಕಾಜಾ ತಯಾರಿಸಬಹುದು. ಮಡತ ಕಾಜ ತಯಾರಿಸಲು ಬೇಕಾದ ಪದಾರ್ಥಗಳು ಹಾಗೂ ತಯಾರಿಸುವ ವಿಧಾನ ಇಲ್ಲಿದೆ.

ಮಡತ ಕಾಜಾ ತಯಾರಿಸಲು ಬೇಕಾದ ಪದಾರ್ಥಗಳು

ಮೈದಾ ಹಿಟ್ಟು - 1/4 ಕಿಲೋ

ತುಪ್ಪ - 1/2 ಕಪ್‌

ಸಕ್ಕರೆ - 1/2 ಕಿಲೋ

ಸೋಡಾ - 1/4 ಟೀ ಸ್ಪೂನ್‌

ಎಣ್ಣೆ - ಕರಿಯಲು

ಮಡತ ಕಾಜಾ ತಯಾರಿಸುವ ವಿಧಾನ

ಮೈದಾವನ್ನು ಜರಡಿ ಮಾಡಿ ಅದರೊಂದಿಗೆ ಸೋಡಾ ಸೇರಿಸಿ ಮಿಕ್ಸ್‌ ಮಾಡಿ

2 ಟೇಬಲ್‌ ಸ್ಪೂನ್‌ ಕರಗಿಸಿದ ತುಪ್ಪ ಸೇರಿಸಿ ಮಿಕ್ಸ್‌ ಮಾಡಿ, ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ

ಹಿಟ್ಟನ್ನು 3-4 ನಿಮಿಷ ನಾದಿ, ಮೇಲೆ ಒದ್ದೆ ಬಟ್ಟೆ ಮುಚ್ಚಿ 30 ನಿಮಿಷ ಬಿಡಿ

ಸಕ್ಕರೆ ಪಾಕ ತಯಾರಿಸಲು, ಒಂದು ದಪ್ಪ ತಳದ ಪಾತ್ರೆಗೆ ಸಕ್ಕರೆ, ಅದು ಮುಳುಗುವಷ್ಟು ನೀರು ಸೇರಿಸಿ ಸ್ಟೋವ್‌ ಹಚ್ಚಿ

ಸಕ್ಕರೆ ಕರಗಿ ಒಂದೆಳೆ ಪಾಕ ಬರುತ್ತಿದ್ದಂತೆ ಸ್ಟೋವ್‌ ಆಫ್‌ ಮಾಡಿ

ಮೈದಾಹಿಟ್ಟನ್ನು ಸ್ವಲ್ಪ ಡಸ್ಟ್‌ ಮಾಡಿ ಎಷ್ಟು ತೆಳುವಾಗಿ ಸಾಧ್ಯವೋ ಅಷ್ಟು ಚೌಕಾಕಾರವಾಗಿ ಒತ್ತಿಕೊಳ್ಳಿ (ಒತ್ತಲು ಸಾಧ್ಯವಾಗದಿದ್ದರೆ ಅಂಚುಗಳನ್ನು ಕತ್ತರಿಸಿ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ)

ನಂತರ ಉಳಿದ ತುಪ್ಪವನ್ನು ಒತ್ತಿಕೊಂಡು ಹಿಟ್ಟಿನ ಮೇಲೆ ಸುತ್ತಲೂ ಸವರಿ ಅದರ ಮೇಲೆ ಸ್ವಲ್ಪ ಮೈದಾ ಹಿಟ್ಟು ಉದುರಿಸಿ

ಹಿಟ್ಟನ್ನು ನಿಧಾನವಾಗಿ ರೋಲ್‌ ಮಾಡಿಕೊಂಡು ಅಂಚು ಬಿಡದಂತೆ ಅಂಟಿಸಿ ರೋಲನ್ನು ಮೃದುವಾಗಿ ಕೈಯಿಂದ ಒತ್ತಿ

ಮೈದಾಹಿಟ್ಟಿನ ರೋಲನ್ನು ಚಾಕುವಿನ ಸಹಾಯದಿಂದ ಅರ್ಧ ಇಂಚುಗಳನ್ನಾಗಿ ಕತ್ತರಿಸಿಕೊಳ್ಳಿ

ಈಗ ಮತ್ತೆ ಒಂದೊಂದೇ ಚೂರುಗಳನ್ನು ಲಟ್ಟಣಿಗೆ ಸಹಾಯದಿಂದ ಮೃದುವಾಗಿ ಸ್ವಲ್ಪ ಮಾತ್ರ ಒತ್ತಿ ಫ್ಲಾಟ್‌ ಮಾಡಿ

ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕಾಜಾವನ್ನು ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ

ಫ್ರೈ ಮಾಡಿಕೊಂಡ ಕಾಜಾವನ್ನು ಬಿಸಿ ಇರುವಾಗಲೇ ಸಕ್ಕರೆ ಪಾಕದೊಂದಿಗೆ ಸೇರಿಸಿ

5 ನಿಮಿಷದ ನಂತರ ಸಕ್ಕರೆ ಪಾಕದಿಂದ ಕಾಜಾಗಳನ್ನು ಹೊರಗೆ ತೆಗೆದರೆ ಮಡತ ಕಾಜಾ ತಿನ್ನಲು ರೆಡಿ

ನೀವು ಹಬ್ಬಗಳಿಗೆ ಕೂಡಾ ಈ ರುಚಿಯಾದ ಸಿಹಿಯನ್ನು ತಯಾರಿಸಬಹುದು.

ಗಮನಿಸಿ: ತುಪ್ಪದ ಬದಲಿಗೆ ಡಾಲ್ಡಾ ಕೂಡಾ ಬಳಸಬಹುದು.

ವಿಭಾಗ