ಪ್ರಾಣಿ ಲೋಕದ ಅಚ್ಚರಿ! ಜಗತ್ತಿನಲ್ಲಿ ಅತಿ ಉದ್ದದ ಬಾಲ ಇರುವ ಪ್ರಾಣಿಗಳಿವು, ಇವುಗಳ ದೇಹಕ್ಕಿಂತ ಬಾಲ ದುಪ್ಪಟ್ಟು ಉದ್ದ ಇರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಾಣಿ ಲೋಕದ ಅಚ್ಚರಿ! ಜಗತ್ತಿನಲ್ಲಿ ಅತಿ ಉದ್ದದ ಬಾಲ ಇರುವ ಪ್ರಾಣಿಗಳಿವು, ಇವುಗಳ ದೇಹಕ್ಕಿಂತ ಬಾಲ ದುಪ್ಪಟ್ಟು ಉದ್ದ ಇರುತ್ತೆ

ಪ್ರಾಣಿ ಲೋಕದ ಅಚ್ಚರಿ! ಜಗತ್ತಿನಲ್ಲಿ ಅತಿ ಉದ್ದದ ಬಾಲ ಇರುವ ಪ್ರಾಣಿಗಳಿವು, ಇವುಗಳ ದೇಹಕ್ಕಿಂತ ಬಾಲ ದುಪ್ಪಟ್ಟು ಉದ್ದ ಇರುತ್ತೆ

ಈ ಜಗತ್ತಿನಲ್ಲಿ ಹಲವು ವಿಸ್ಮಯಗಳಿವೆ. ಪ್ರಾಣಿಲೋಕದಲ್ಲೂ ವಿಸ್ಮಯ, ಅಚ್ಚರಿಗಳಿಗೆ ಕೊರತೆ ಇಲ್ಲ. ಜಗತ್ತಿನಲ್ಲಿ ಅತೀ ಉದ್ದದ ಪ್ರಾಣಿಗಳು ಯಾವುವು ಎಂದು ನಿಮಗೆ ಗೊತ್ತಾ, ಈ ಪ್ರಾಣಿಗಳ ಬಾಲ ಉದ್ದದ ಬಗ್ಗೆ ಕೇಳಿದ್ರೆ ನೀವು ಅಚ್ಚರಿಪಡ್ತೀರಿ. ಜಗತ್ತಿನ ಅತಿ ಉದ್ದದ ಬಾಲ ಇರುವ ಪ್ರಾಣಿಗಳ ಪರಿಚಯ ಇಲ್ಲಿದೆ.

 ಜಗತ್ತಿನಲ್ಲಿ ಅತಿ ಉದ್ದದ ಬಾಲ ಇರುವ ಪ್ರಾಣಿಗಳಿವು, ಇವುಗಳ ಬಾಲ ದೇಹಕ್ಕಿಂತ ದುಪ್ಪಟ್ಟು ಉದ್ದ ಇರುತ್ತೆ
ಜಗತ್ತಿನಲ್ಲಿ ಅತಿ ಉದ್ದದ ಬಾಲ ಇರುವ ಪ್ರಾಣಿಗಳಿವು, ಇವುಗಳ ಬಾಲ ದೇಹಕ್ಕಿಂತ ದುಪ್ಪಟ್ಟು ಉದ್ದ ಇರುತ್ತೆ (PC: National Geographic)

ಜಗತ್ತಿನ ಪ್ರತಿ ಅಚ್ಚರಿಗಳಂತೆ ಪ್ರಾಣಿ ಲೋಕದಲ್ಲೂ ಅಚ್ಚರಿಗಳಿರುವುದು ಸಹಜ. ಜಗತ್ತಿನಲ್ಲಿ ಅತೀ ದೊಡ್ಡ ಹಾಗೂ ಅತಿ ಚಿಕ್ಕ ಪ್ರಾಣಿಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಇಲ್ಲಿರುವುದು ಅತೀ ಉದ್ದದ ಬಾಲ ಇರುವ ಪ್ರಾಣಿಗಳು. ಈ ಪ್ರಾಣಿಗಳ ದೇಹಕ್ಕಿಂತ ಬಾಲವು ಮೂರು ಪಟ್ಟು, ಎರಡು ಪಟ್ಟು ಉದ್ದ ಇರುತ್ತದೆ. ಇದರಲ್ಲಿ ಪಕ್ಷಿಗಳು, ಮೀನು ಕೂಡ ಇರುವುದು ಸುಳ್ಳಲ್ಲ. ಅಂತಹ ಪ್ರಾಣಿಗಳ ಕುರಿತು ಇಲ್ಲಿದೆ ಮಾಹಿತಿ.

ಹಲ್ಲಿ

ಹಲ್ಲಿಗೆ ಉದ್ದ ಬಾಲ ಎಲ್ಲಿರುತ್ತೆ ಅಂತ ಪ್ರಶ್ನೆ ಕೇಳಿಕೊಳ್ಳಬೇಡಿ. ಖಂಡಿತ ಉದ್ದ ಬಾಲ ಇರುವ ಹಲ್ಲಿಗಳಿವೆ. ಅದರಲ್ಲೂ ಏಷ್ಯಾದಲ್ಲೇ ಉದ್ದ ಬಾಲದ ಹಲ್ಲಿಗಳು ಸಿಗುತ್ತವೆ ಎನ್ನುವುದು ಸುಳ್ಳಲ್ಲ. ಏಷ್ಯನ್ ಹುಲ್ಲಿನ ಹಲ್ಲಿ ಪ್ರಪಂಚದ ಅತಿ ಉದ್ದದ ಬಾಲವನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಪೋರ್ಟ್‌ಲ್ಯಾಂಡ್‌ನ ಒರೆಗಾನ್ ಮೃಗಾಲಯದ ನಿರ್ದೇಶಕ ಡಾನ್ ಮೂರ್ ಹೇಳುತ್ತಾರೆ ಎಂದು ನ್ಯಾಷನಲ್‌ ಜಿಯಾಗ್ರಫಿ ತಿಳಿಸಿದೆ. ಈ ಸಣ್ಣ ಸರೀಸೃಪವು 10-ಇಂಚಿನ (25-ಸೆಂಟಿಮೀಟರ್) ಬಾಲವನ್ನು ಹೊಂದಿದೆ, ಅದರ ದೇಹದ ಉದ್ದಕ್ಕಿಂತ ಬಾಲವು ಮೂರು ಪಟ್ಟು ಹೆಚ್ಚಿರುತ್ತದೆ. ಈ ಪ್ರಾಣಿಗಳು ಇವುಗಳ ಮೇಲೆ ದಾಳಿ ಮಾಡಲು ಬಾಲ ಹಿಡಿದರೆ ಬಾಲವು ಅರ್ದಕ್ಕೆ ತುಂಡಾಗುತ್ತದೆ. ಇದರಿಂದ ಅದು ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ.

ಜೆರ್ಬೋವಾ

ಇದೊಂದು ಇಲಿ ರೀತಿಯ ಪ್ರಾಣಿ. ಉತ್ತರ ಆಫ್ರಿಕಾ ಮತ್ತು ಏಷ್ಯಾ ಖಂಡದಲ್ಲಿ ಸಾಮಾನ್ಯವಾಗಿರುವ ಈ ಇಲಿ ರೂಪದ ಪ್ರಾಣಿ ದೇಹ ಪುಟ್ಟದಿದ್ದರೂ ದೊಡ್ಡ ಬಾಲವನ್ನು ಹೊಂದಿರುತ್ತದೆ. ಇದರ ಕಿವಿಗಳು ಉದ್ದವಾಗಿದ್ದು, ದೇಹ 3.5 ಇಂಚುಗಳು (8.9 ಸೆಂಟಿಮೀಟರ್) ಉದ್ದವಿದ್ದರೆ, ಅದರ ಬಾಲವು 6.4 ಇಂಚುಗಳಷ್ಟು (16 ಸೆಂಟಿಮೀಟರ್) ಅಂದರೆ ದೇಹಕ್ಕಿಂತ ಎರಡು ಪಟ್ಟು ಉದ್ದವಾಗಿದೆ.

ಸ್ಪೈಡರ್‌ ಮಂಕಿ

ಕೋತಿ ಜಾತಿಯ ಈ ಪ್ರಾಣಿ ತನ್ನ ದೇಹದ ಉದ್ದಕ್ಕಿಂತ 1.9 ರಷ್ಟು ಉದ್ದದ ಬಾಲವನ್ನು ಹೊಂದಿರುತ್ತದೆ.

ರಕ್ತಪಿಶಾಚಿ ಅಳಿಲು

ವ್ಯಾಂಫೈಯರ್‌ ಅಳಿಲು ಪುಟ್ಟ ದೇಹ ಹೊಂದಿದ್ದರೂ ತನ್ನ ದೇಹದ ಪರಿಮಾಣಕ್ಕಿಂತ 130 ಪ್ರತಿಶತದಷ್ಟು ದೊಡ್ಡ ಬಾಲವನ್ನು ಹೊಂದಿರುತ್ತದೆ. ಇದು ಈ ಪುಟ್ಟ ಜೀವಿಯನ್ನು ಪರಭಕ್ಷಕಗಳಿಂದ ರಕ್ಷಿಸುತ್ತದೆ.

ಸ್ಪ್ಲಾಶ್‌

ಇದು ಒಂದು ಜಾತಿ ಮೀನು. ಸಮುದ್ರದಲ್ಲಿ ಇರುವ ಈ ಮೀನು ದೇಹಕ್ಕಿಂತ ಉದ್ದದ ಬಾಲವನ್ನು ಹೊಂದಿರುತ್ತದೆ. ಈ ಮೀನು ದೇಹಕ್ಕಿಂತ 3 ಪಟ್ಟು ಉದ್ದ ಇರುವ ಮುಳ್ಳಿನ ಬಾಲವನ್ನು ಹೊಂದಿರುತ್ತದೆ.

ಬೌಂಟಿಫುಲ್ ಬರ್ಡ್ಸ್

ಪ್ರಾಣಿಗಳು ಮಾತ್ರವಲ್ಲ ಪಕ್ಷಿಗಳು ಉದ್ದನೆಯ ಬಾಲವನ್ನು ಹೊಂದಿವೆ. ನ್ಯೂ ಗಿನಿಯಾದ ರಿಬ್ಬನ್-ಟೈಲ್ಡ್ ಅಸ್ಟ್ರಾಪಿಯಾ ಎಂಬ ಹಕ್ಕಿಯು ಮೂರು-ಅಡಿ (0.9-ಮೀಟರ್) ಬಾಲವನ್ನು ಹೊಂದಿದ್ದು ಅದು ಅದರ ದೇಹದ ಉದ್ದವನ್ನು ಸುಮಾರು ನಾಲ್ಕು ಪಟ್ಟು ಹೆಚ್ಚು. ಇದು ಆಫ್ರಿಕನ್ ಹುಲ್ಲುಗಾವಲು ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತದೆ.

Whats_app_banner