Anti Valentine Week: ಇಂದಿನಿಂದ ಪ್ರೇಮಿಗಳ ವಿರೋಧಿ ದಿನ ಆರಂಭ; ಮಾಜಿ ಪ್ರೇಮಿಗೆ ಕಪಾಳ ಮೋಕ್ಷ, ಕಿಕ್ ಮಾಡಲು ರೆಡಿನಾ?
Anti Valentine Week 2024: ಫೆಬ್ರವರಿ 15 ರಂದು ಸ್ಲ್ಯಾಪ್ ಡೇ, ಫೆ 16 ರಂದು ಕಿಕ್ ಡೇ, ಫೆ 17ಕ್ಕೆ ಪರ್ಫೂಮ್ ಡೇ, ಫೆ 18ಕ್ಕೆ ಫ್ಲರ್ಟ್ ಡೇ, ಫೆ 19ಕ್ಕೆ ಕನ್ಫೆಷನ್ ಡೇ, ಫೆ 20ಕ್ಕೆ ಮಿಸ್ಸಿಂಗ್ ಡೇ ಹಾಗೂ ಫೆಬ್ರವರಿ 21 , ಕೊನೆಯ ದಿನಕ್ಕೆ ಬ್ರೇಕ್ ಅಪ್ ಡೇ ಆಚರಿಸಲಾಗುತ್ತಿದೆ.
ಪ್ರೇಮಿಗಳ ವಿರೋಧಿ ದಿನ: ನಿನ್ನೆ (ಫೆ 14) ಯಷ್ಟೇ ಪ್ರೇಮಿಗಳ ದಿನ ಮುಗಿದಿದೆ. ಪ್ರೀತಿಸುವವರು ತಮ್ಮ ಸಂಗಾತಿಗೆ ಪ್ರಪೋಸ್ ಮಾಡಿದ್ದಾರೆ. ಕೆಲವರ ಪ್ರೀತಿ ಯಶಸ್ವಿಯಾದರೆ, ಇನ್ನೂ ಕೆಲವರು ಪ್ರೀತಿಯಲ್ಲಿ ಸೋತು ನಿರಾಸೆ ವ್ಯಕ್ತಪಡಿಸಿದ್ದಾರೆ. ಪ್ರೇಮಿಗಳ ದಿನಕ್ಕೂ ಒಂದು ವಾರ ಮುನ್ನ ರೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಪೋಸ್ ಡೇ, ಹಗ್ ಡೇ, ಕಿಸ್ ಡೇ ಸೇರಿದಂತೆ ಒಂದು ವಾರ ಪೂರ್ತಿ ವಿವಿಧ ದಿನಗಳನ್ನು ಆಚರಿಸಲಾಗಿದೆ.
ಫೆಬ್ರವರಿ 14 ರಂದು ರೆಸ್ಟೋರೆಂಟ್, ಬೀಚ್ , ರೆಸಾರ್ಟ್ ಎಲ್ಲಿ ನೋಡಿದರೂ ಪ್ರೇಮಿಗಳದ್ದೇ ಕಾರು ಬಾರು, ಕೇಕ್, ಗಿಫ್ಟ್, ಚಾಕೊಲೇಟ್, ಐಸ್‌ಕ್ರೀಮ್ ತಯಾರಿಕರಿಗೆ ನಿನ್ನೆ ಭರ್ಜರಿ ಬ್ಯುಸ್ನೆಸ್ ಕೂಡಾ ನಡೆದಿದೆ. ಆದರೆ ಪ್ರೇಮಿಗಳ ದಿನ ಮುಗಿದ ನಂತರ ಪ್ರೇಮಿ ವಿರೋಧಿ ದಿನವನ್ನೂ ಆಚರಿಸಲಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ? ಫೆಬ್ರವರಿ 15 ರಿಂದ 21 ವರೆಗೆ ಒಂದೊಂದು ದಿನ ಒಂದೊಂದು ಥೀಮ್‌ನಲ್ಲಿ ಪ್ರೇಮಿಗಳ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿಯನ್ನು ಇಷ್ಟಪಡದ, ಏಕಾಂಗಿ ಹೃದಯಗಳು ಈ ಪ್ರೇಮಿಗಳ ವಿರೋಧಿ ದಿನವನ್ನು ಇಂದಿನಿಂದ ಆಚರಿಸಲು ಆರಂಭಿಸಿದ್ದಾರೆ.
ಆಂಟಿ-ವ್ಯಾಲೆಂಟೈನ್ಸ್ ವೀಕ್ 2024ರ ಅರ್ಥ
ಸ್ಲ್ಯಾಪ್ ಡೇ - ಫೆಬ್ರವರಿ 15
ಸ್ಲ್ಯಾಪ್ ಡೇ ಎಂದರೆ ಪ್ರೇಮಿಗಳ ವಿರೋಧಿ ವಾರದ ಮೊದಲ ದಿನ. ಇದು ಫೆಬ್ರವರಿ 15 ರಂದು ಬರುತ್ತದೆ. ತಮಗೆ ಮೋಸ ಮಾಡಿದ, ಅವರನ್ನು ಕೀಳರಿಮೆಗೆ ಒಳಪಡಿಸಿದ ಅಥವಾ ಮಾನಸಿಕ ಯಾತನೆ ಉಂಟುಮಾಡಿದ ತಮ್ಮ ಮಾಜಿ ಪ್ರೇಮಿಗಳಿಗೆ ಕಪಾಳಮೋಕ್ಷ ಮಾಡಲು ಬಯಸುವ ಜನರಿಗೆ ಈ ದಿನವನ್ನು ಮೀಸಲಿಡಲಾಗಿದೆ. ಹಾಗೆಂದ ಮಾತ್ರಕ್ಕೆ ಕಪಾಳಮೋಕ್ಷ ಮಾಡುತ್ತಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ಜೀವನದಿಂದ ಅವರ ಎಲ್ಲಾ ನೆನಪುಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಹತಾಶೆಯನ್ನು ನೀವು ತೊಡೆದುಹಾಕಬಹುದು.
ಕಿಕ್ ಡೇ - ಫೆಬ್ರವರಿ 16
ಕಿಕ್ ಡೇ ಆ್ಯಂಟಿ ವ್ಯಾಲೆಂಟೈನ್ಸ್ ವೀಕ್‌ನ 2ನೇ ದಿನವಾಗಿದೆ. ಇದು ಫೆಬ್ರವರಿ 16 ರಂದು ಬರುತ್ತದೆ. ಸ್ಲ್ಯಾಪ್ ಡೇ ನಂತೆ, ಕಿಕ್ ಡೇ ಎಂದರೆ ನೀವು ಅದನ್ನು ನಿಮ್ಮ ಮಾಜಿಗೆ ಮಾಡಬೇಕು ಎಂದಲ್ಲ. ಅವರ ನೆನಪುಗಳನ್ನು ಮತ್ತು ಅವರು ನಿಮ್ಮ ಜೀವನದಿಂದ ಹರಡುವ ನಕಾರಾತ್ಮಕತೆಯನ್ನು ಕಿಕ್ ಮಾಡಬೇಕು. ಹೆಚ್ಚುವರಿಯಾಗಿ, ಅವರಿಂದ ನೀವು ಹೊಂದಿರುವ ಎಲ್ಲಾ ಉಡುಗೊರೆಗಳು ಅಥವಾ ನೆನಪುಗಳನ್ನು ಕಿಕ್ ಮಾಡಿ.
ಪರ್ಫೂಮ್ ಡೇ - ಫೆಬ್ರವರಿ 17
ಕಿಕ್ ದಿನದ ನಂತರ ಪರ್ಫೂಮ್ ಡೇ ಬರುತ್ತದೆ. ಇದು ಪ್ರೇಮಿಗಳ ವಿರೋಧಿ ವಾರದ 3ನೇ ದಿನ. ಇದು ಫೆಬ್ರವರಿ 17 ರಂದು ಬರುತ್ತದೆ. ಕಿಕ್ ಡೇ ಮತ್ತು ಸ್ಲ್ಯಾಪ್ ಡೇ ನಿಮ್ಮ ಜೀವನದಲ್ಲಿ ನಿಮ್ಮ ಮಾಜಿ ಸೇರಿಸಿದ ಎಲ್ಲಾ ಋಣಾತ್ಮಕತೆಯನ್ನು ತೆಗೆದುಹಾಕುತ್ತದೆ, ಸುಗಂಧ ದ್ರವ್ಯ ದಿನವು ನಿಮ್ಮ ಮೇಲೆ ಕೇಂದ್ರೀಕರಿಸುತ್ತದೆ. ಈ ದಿನವು ನಿಮ್ಮನ್ನು ಚೆನ್ನಾಗಿ ಪರಿಗಣಿಸುವುದರ ಜೊತೆಗೆ ಅದರ ಬಗ್ಗೆ ಒಳ್ಳೆಯದನ್ನು ಅನುಭವ ನೀಡುತ್ತದೆ. ಹೊರಗೆ ಹೋಗಿ ಆಹ್ಲಾದಕರ ವಾತಾವರಣದ ಸುಗಂಧವನ್ನು ಅನುಭವಿಸಿ.
ಫ್ಲರ್ಟ್ ಡೇ - ಫೆಬ್ರವರಿ 18
ಫ್ಲರ್ಟ್ ಡೇ ಎಂಬುದು ಪ್ರೇಮಿಗಳ ವಿರೋಧಿ ವಾರದ 4ನೇ ದಿನವಾಗಿದೆ. ಇದು ಫೆಬ್ರವರಿ 18 ರಂದು ಬರುತ್ತದೆ. ಈ ದಿನವು ಎಲ್ಲಾ ಸಿಂಗಲ್ಸ್ ತಮ್ಮ ಎಲ್ಲಾ ಆತಂಕಗಳನ್ನು ಮರೆತು ಅವಕಾಶಗಳನ್ನು ಪಡೆಯಲು, ನೀವು ದೀರ್ಘಕಾಲದಿಂದ ಮೋಹ ಹೊಂದಿರುವ ವ್ಯಕ್ತಿಯನ್ನು ಸಮೀಪಿಸಲು ಅಥವಾ ಅವಕಾಶಗಳನ್ನು ಪಡೆದುಕೊಳ್ಳಲು ಮತ್ತು ನೀವು ಇಷ್ಟಪಡುವ ಯಾರಿಗಾದರೂ ನಿಮ್ಮ ಭಾವನೆಗಳನ್ನು ತಿಳಿಸಬಹುದಾಗಿದೆ.
ತಪ್ಪೊಪ್ಪಿಗೆ ದಿನ - ಫೆಬ್ರವರಿ 19
ಕನ್ಫೆಷನ್ ಡೇ ಎಂದರೆ ಪ್ರೇಮಿಗಳ ವಿರೋಧಿ ವಾರದ 5ನೇ ದಿನ. ಇದು ಫೆಬ್ರವರಿ 19 ರಂದು ಬರುತ್ತದೆ. ಹೆಸರೇ ಸೂಚಿಸುವಂತೆ, ಈ ದಿನವು ನಿಮ್ಮ ಭಾವನೆಗಳನ್ನು ನೀವು ಇಷ್ಟಪಡುವರೊಂದಿಗೆ ಹೇಳಿಕೊಳ್ಳುವ ಅವಕಾಶ ನೀಡುತ್ತದೆ. ಈ ಹಿಂದೆ ನೀವು ಇಷ್ಟಪಡುವ ವ್ಯಕ್ತಿಯನ್ನು ನೀವು ನೋಯಿಸಿದ್ದರೆ, ಬಹುಶಃ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಕ್ಷಮಿಸಿ ಎಂದು ಹೇಳಿ.
ಮಿಸ್ಸಿಂಗ್ ಡೇ - ಫೆಬ್ರವರಿ 20
ಮಿಸ್ಸಿಂಗ್ ಡೇ ಆ್ಯಂಟಿ ವ್ಯಾಲೆಂಟೈನ್ಸ್ ವೀಕ್‌ನ 6ನೇ ದಿನವಾಗಿದೆ. ಇದು ಫೆಬ್ರವರಿ 20 ರಂದು ಬರುತ್ತದೆ. ನೀವು ಪ್ರೀತಿಸುವವರಿಗೆ ನೀವು ಅವರನ್ನು ಕಳೆದುಕೊಳ್ಳುತ್ತೀರಿ ಎಂದು ಹೇಳುವ ದಿನವಾಗಿದೆ.
ಬ್ರೇಕಪ್ ಡೇ - ಫೆಬ್ರವರಿ 21
ಬ್ರೇಕಪ್ ಡೇ ಆ್ಯಂಟಿ ವ್ಯಾಲೆಂಟೈನ್ಸ್ ವೀಕ್‌ನ ಕೊನೆಯ ದಿನವಾಗಿದೆ. ಇದು ಫೆಬ್ರವರಿ 21 ರಂದು ಬರುತ್ತದೆ. ನಿಮ್ಮ ಸಂಬಂಧದಲ್ಲಿ ನೀವು ಬಹಳ ನೊಂದಿದ್ದರೆ ಅವರ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳಲು ಹಾಗೂ ಸ್ವಾತಂತ್ರ್ಯವನ್ನು ಆಯ್ಕೆ ಮಾಡಿಕೊಳ್ಳಲು ಸರಿಯಾದ ಅವಕಾಶವಾಗಿದೆ.
ಪ್ರೇಮಿಗಳ ವಿರೋಧಿ ದಿನದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ
ವಿಭಾಗ