ಉನ್ನತ ಮಟ್ಟದ ಜೀವನಶೈಲಿಯನ್ನು ಬೆನ್ನಟ್ಟುತ್ತಾ ಈ ಕ್ಷಣದ ಸರಳ ಸಂತೋಷವನ್ನು ಮರೆಯುತ್ತಿದ್ದೀವಾ; ಬೆಂಗಳೂರು ಟೆಕ್ಕಿ ಪೋಸ್ಟ್ ವೈರಲ್
ಕನ್ನಡ ಸುದ್ದಿ  /  ಜೀವನಶೈಲಿ  /  ಉನ್ನತ ಮಟ್ಟದ ಜೀವನಶೈಲಿಯನ್ನು ಬೆನ್ನಟ್ಟುತ್ತಾ ಈ ಕ್ಷಣದ ಸರಳ ಸಂತೋಷವನ್ನು ಮರೆಯುತ್ತಿದ್ದೀವಾ; ಬೆಂಗಳೂರು ಟೆಕ್ಕಿ ಪೋಸ್ಟ್ ವೈರಲ್

ಉನ್ನತ ಮಟ್ಟದ ಜೀವನಶೈಲಿಯನ್ನು ಬೆನ್ನಟ್ಟುತ್ತಾ ಈ ಕ್ಷಣದ ಸರಳ ಸಂತೋಷವನ್ನು ಮರೆಯುತ್ತಿದ್ದೀವಾ; ಬೆಂಗಳೂರು ಟೆಕ್ಕಿ ಪೋಸ್ಟ್ ವೈರಲ್

ನಗರ ಜೀವನದಲ್ಲಿ ಸಂಪಾದನೆ ಹೆಚ್ಚಾದಷ್ಟು ಜೀವನಶೈಲಿ ಬದಲಾಗುತ್ತಾ ಹೋಗುತ್ತದೆ. ದಿನಗಳು ಕಳೆದಂತೆ ಮತ್ತಷ್ಟು ಹೊಸತನಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಅರ್ಹವಾದದ್ದನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಟೆಕ್ಕಿಯೊಬ್ಬರು ಎಲ್ಲರ ಮುಂದಿಟ್ಟಿದ್ದಾರೆ. ಜಾಲತಾಣಗಳಲ್ಲಿ ವೈರಲ್ ಆಗಿರುವ ಇವರ ಪೋಸ್ಟ್ ಹಾಗೂ ಕಾಳಜಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಬದಲಾದ ಜೀವನಶೈಲಿಯಿಂದ ಏನೆಲ್ಲಾ ಸಂಬಂಧಗಳು, ಸಂಪರ್ಕಗಳು ದೂರವಾಗುತ್ತವೆ ಎಂಬುದನ್ನು ಈ ಟೆಕ್ಕಿ ವಿವರಿಸಿದ್ದಾರೆ.
ಬದಲಾದ ಜೀವನಶೈಲಿಯಿಂದ ಏನೆಲ್ಲಾ ಸಂಬಂಧಗಳು, ಸಂಪರ್ಕಗಳು ದೂರವಾಗುತ್ತವೆ ಎಂಬುದನ್ನು ಈ ಟೆಕ್ಕಿ ವಿವರಿಸಿದ್ದಾರೆ.

ಕಡಿಮೆ ಸಂಬಳದ ಕಾರಣದಿಂದಾಗಿ ತುಂಬಾ ಕಷ್ಟದ ದಿನಗಳನ್ನು ನೋಡಿರುತ್ತೇವೆ. ಆದರೆ ದಿನ ಕಳೆದಂತೆ ಸಂಬಳ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ ಕಷ್ಟಗಳು ಕಡಿಮೆಯಾಗಿ ಮನೆ, ಊಟ ಸೇರಿದಂತೆ ಇಡೀ ಜೀವನ ಶೈಲಿಯೇ ಬದಲಾಗಿ ಹೋಗುತ್ತದೆ. ಕೆಲವರು ಸಂಬಳ ಹೆಚ್ಚಾದಷ್ಟು ಐಷಾರಾಮಿ ಜೀವನಕ್ಕೆ ಹೊಂದಿಕೊಂಡಿರುತ್ತಾರೆ. ಆದರೆ ಇದರ ನಡುವೆ ಕೆಲವೊಂದು ಸಂಬಂಧಗಳ ಸಂಪರ್ಕವೇ ಇಲ್ಲದಂತಾಗುತ್ತದೆ. ಇದೇ ವಿಚಾರವಾಗಿ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶದ ಅಪಾರ್ಮೆಂಟ್ ನಲ್ಲಿ ವಾಸ ಮಾಡುತ್ತಿರುವ ಟೆಕ್ಕಿಯೊಬ್ಬರು ಪ್ರಶ್ನೆಯೊಂದನ್ನು ಎತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಟೆಕ್ಕಿಯ ಪ್ರಶ್ನೆ ಮತ್ತು ಕಾಳಜಿ ಏನು ಎಂಬುದನ್ನು ಅವರೇ ವಿವರಿಸಿದ್ದಾರೆ.

ಬೆಂಗಳೂರಿನ ಉನ್ನತ ಶ್ರೇಣಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದು ತಿಂಗಳಿಗೆ 65,000 ರೂಪಾಯಿ ಬಾಡಿಗೆಯಲ್ಲಿ ತಮ್ಮ ಪಾಲು 25 ಸಾವಿರ ರೂಪಾಯಿಗಳನ್ನು ಪಾವತಿ ಮಾಡುತ್ತಾರೆ. ನಿವರ್ಹಣೆಗೆ ಅಂತ 10,000, ಅಡುಗೆಯವರಿಗೆ 8000 ಹಾಗೂ ಒಬ್ಬ ಮನೆ ಕೆಲಸದವರಿಗೆ 4 ಸಾವಿರ ಪಾವತಿ ಮಾಡುತ್ತಾರೆ. ಇವಿಷ್ಟೂ ಮನೆಗೆ ಸಂಬಂಧಿಸಿದ ಖರ್ಚುಗಳಾದರೆ, ಇನ್ನೂ ಫಿಟ್ನೆಸ್ ಗೆ ಸಂಬಂಧಿಸಿದಂತೆ ಟೆನಿಸ್ ತರಬೇತುದಾರರಿಗೆ ತಿಂಗಳಿಗೆ 3000 ರೂಪಾಯಿ ನೀಡುತ್ತಾರೆ. ಇದಕ್ಕೆ ಸಂಬಂಧಿಸಿದ ಕೆಲವು ವಸ್ತುಗಳು, ಆಹಾರ ಪದಾರ್ಥಗಳಿಗೆ ವೆಚ್ಚವಾಗುತ್ತದೆ. ತಮ್ಮ ಅನುಕೂಲಕ್ಕಾಗಿ ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತಾರೆ. ಹೊರಗಡೆ ಊಟದ ಖರ್ಚು, ಸ್ಟ್ರೀಮಿಂಗ್ ಚಂದಾದಾರಿಕೆ, ಇತರೆ ವೆಚ್ಚಗಳು ಸೇರಿಸಿದರೆ ತಿಂಗಳಿಗೆ ಖರ್ಚಿನ ಮೊತ್ತ ಮತ್ತಷ್ಟು ಹೆಚ್ಚಾಗುತ್ತದೆ. ಇವುಗಳಲ್ಲಿ ಯಾವುದೂ ಕಟ್ಟುನಿಟ್ಟಿನ ಅಗತ್ಯವಲ್ಲದಿದ್ದರೂ ಇವು ಅನುಕೂಲತೆ ಮತ್ತು ಸೌಕರ್ಯದ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ಇಷ್ಟೆಲ್ಲಾ ಖರ್ಚು ಮಾಡುತ್ತಿರುವ ಟೆಕ್ಕಿಗೆ ಒಂದು ಪ್ರಶ್ನೆ ಕಾಡುತ್ತಿದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಈ ರೀತಿಯಲ್ಲಿ ಖರ್ಚು ಮಾಡುತ್ತಿದ್ದರೂ ನನ್ನ ನಿರ್ಣಾಯಕ ಪ್ರಶ್ನೆಯೆಂದರೆ ನಾವು ನಮ್ಮ ಜೀವನಶೈಲಿಯನ್ನು ನಿಯಂತ್ರಿಸುತ್ತಿದ್ದೀವಾ ಅಥವಾ ಅವರು ನಮ್ಮನ್ನು ನಿಯಂತ್ರಿಸುತ್ತಿದ್ದಾರಾ ಎಂಬುದು. ದೈನಂದಿನ ಜೀವನದ ಅವಿಭಾಜ್ಯ ಅಂಶಗಳಾಗಿರುವ ಅಡುಗೆ ಮತ್ತು ಮನೆಯ ಕೆಲಸವನ್ನು ತಮ್ಮ ಅನುಕೂಲಕ್ಕಾಗಿ ಹೊರಗುತ್ತಿಗೆ ನೀಡಲಾಗಿದೆ. ಇದು ನಮ್ಮ ಮನೆಯ ಕೆಲಸವನ್ನು ಕಡಿಮೆ ಮಾಡಿಸುತ್ತದೆ. ಆದರೆ ಈ ವಿಧಾನ ನಮ್ಮ ಜೀವನದ ಮೂಲಭೂತ ಅಂಶಗಳ ಸಂಪರ್ಕದಿಂದ ನಮ್ಮನ್ನು ದೂರ ಮಾಡುತ್ತದೆ. ಈ ಬದಲಾವಣೆಯೂ ನಮ್ಮನ್ನು ಸಂಪನ್ಮೂಲಗಳೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುವಂತೆ ಮಾಡುತ್ತದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಟೆಕ್ಕಿಯ ಮತ್ತೊಂದು ಕಾಳಜಿಯ ವಿಷಯವೆಂದರೆ ಫುಡ್ ಡೆಲಿವರಿಗೆ 100 ರೂಪಾಯಿ ಅಥವಾ ಟೆನ್ನಿಸ್ ಪಾಠ ಕೇಳಲು 500 ರೂಪಾಯಿ ಖರ್ಚು ಮಾಡುವುದು ಹೆಚ್ಚಿನ ಆದಾಯದ ಜೀವನಶೈಲಿಯ ಮಹಾಯೋಜನೆಯಲ್ಲಿ ಅತ್ಯಲ್ಪವೆಂದು ಭಾವಿಸಬಹುದು. ಖರ್ಚು ಮಾಡಲು ಈ ಹಣ ತುಂಬಾ ಕಡಿಮೆ ಇರಬಹುದು. ಆದರೆ ಜನರು ತಮ್ಮ ನಿಜವಾಗಿಯೂ ಅರ್ಹವಾದದ್ದನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. 100 ರೂಪಾಯಿ ಕೊಟ್ಟು ಹೊರಗಡೆಯಿಂದ ಆಹಾರ ಅಥವಾ ಇತರೆ ವಸ್ತುಗಳನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡಿಸಿಕೊಳ್ಳುವ ಬದಲು ನಾವೇ ಒಂದು ಹೋಟೆಲ್ ಹೋಗಿ ಊಟ ಮಾಡುವುದು ಅಥವಾ ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವ ಅನುಭವ, ಸಂಪರ್ಕಗಳು ಹೇಗಿರುತ್ತವೆ ಎಂದಿದ್ದಾರೆ.

ಟೆಕ್ಕಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ತಮ್ಮ ಅನುಭಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಜನರು ಎಷ್ಟು ಬೇಗ ವಿಲಾಸಿ ಜೀವನಕ್ಕೆ ಹೊಂದಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ನೆಟ್ಟಿಗರೊಬ್ಬರು ತಾನು ಚಿಕ್ಕವನಿದ್ದಾಗ ವಾರದಲ್ಲಿ ಒಮ್ಮೆ ಚಿಪ್ಸ್ ತಿನ್ನುತ್ತಿದ್ದೆ. ಆದರೆ ಈಗ ನಿತ್ಯ ಪಾಪ್ ಕಾರ್ನ್, ಚಿಪ್ಸ್ ಇಲ್ಲದೆ ಊಟ ಸೇರಲ್ಲ. ಇದೆಲ್ಲಾ ಹಣದ ಬದಲಾವಣೆಯನ್ನು ತೋರಿಸುತ್ತೆ ಎಂದಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಒಮ್ಮೆ ಐಷಾರಾಮಿ ಜೀವನಕ್ಕೆ ಹೊಂದಿಕೊಂಡರೆ ಖರ್ಚಿನ ಬಗ್ಗೆ ಹೆಚ್ಚು ಯೋಚಿಸಲು ಹೋಗುವುದಿಲ್ಲ. ಬಾಲ್ಯದ ಜೀವನಕ್ಕೂ ಈಗಿನ ಜೀವನಕ್ಕೆ ಎಷ್ಟೆಲ್ಲಾ ಬದಲಾವಣೆಗಳಿವೆ, ವ್ಯತ್ಯಾಸಗಳಿವೆ ಎಂಬುದನ್ನು ಮೆಲುಕು ಹಾಕಿದ್ದಾರೆ.

Whats_app_banner