ನಿಮ್ಮ ಕ್ರಶ್ ನಿಮಗೆ ರಾಖಿ ಕಟ್ಟಲು ಬಂದ್ರೆ ಅಂತ ಭಯಾನ? ತಲೆಕೆಡಿಸಿಕೊಳ್ಬೇಡಿ ಈ ಮಾತುಗಳನ್ನು ಹೇಳಿ ಅವರೇ ಸುಮ್ಮನಾಗ್ತಾರೆ
ಈ ರಕ್ಷಾಬಂಧನದಂದು ನೀವು ಪ್ರೀತಿಸಬೇಕೆಂದಿರುವ ಹುಡುಗಿ ಬಂದು ನಿಮ್ಮ ಕೈಗೆ ರಾಖಿ ಕಟ್ಟಲು ಪ್ರಯತ್ನಿಸಿದರೆ ನೀವು ಅದನ್ನು ಖಂಡಿತ ಇಷ್ಟ ಪಡುವುದಿಲ್ಲ. ಅದರ ಬದಲಾಗಿ ನೀವು ಅವರಿಗೆ ಸತ್ಯ ಹೇಳೋದಕ್ಕೂ ಧೈರ್ಯ ಇಲ್ಲ ಎಂದಾದರೆ ಇಲ್ಲಿ ಕೆಲವು ಸಲಹೆಗಳಿದೆ ಗಮನಿಸಿ. ಈ ರಕ್ಷಾ ಬಂಧನದಂದು ಪ್ರಯೋಜನಕ್ಕೆ ಬರುತ್ತದೆ.
ಈ ರಕ್ಷಾಬಂಧನದಂದು ನೀವು ಪ್ರೀತಿಸುವ ಹುಡುಗಿ ಬಂದು ನಿಮಗೆ ರಾಖಿ ಕಟ್ಟುತ್ತೇನೆ ಎಂದು ಹಠ ಹಿಡಿದರೆ ನಿಮಗೆ ಏನು ಮಾಡಬೇಕು ಎಂದು ತಕ್ಷಣಕ್ಕೆ ತೋಚುವುದಿಲ್ಲ. ಆ ಕಾರಕ್ಕಾಗಿ ಮೊದಲೇ ನೀವು ಕೆಲವು ಉಪಾಯಗಳನ್ನು ಹುಡುಕಿಕೊಂಡಿರಬೇಕು. ಮೊದಲನೆಯದಾಗಿ ರಕ್ಷಾ ಬಂಧನದ ರಾಖಿಯ ಮಹತ್ವವನ್ನು ನೀವು ತಿಳಿದುಕೊಳ್ಳಬೇಕು. ಇದು ರಕ್ತ ಸಂಬಂಧ ಅಂದರೆ ಅಣ್ಣ, ತಮ್ಮ ಈ ರೀತಿ ಸಹೋದರತ್ವದವರಿಗೆ ಮಾತ್ರ ಕಟ್ಟಬೇಕಾಗಿದ್ದು. ಇತ್ತೀಚಿನ ದಿನಗಳಲ್ಲಿ ಯಾರು ಯಾರಿಗೆ ಬೇಕಾದರೂ ಕಟ್ಟುತ್ತಾರೆ. ಆದರೆ ಅದು ಸರಿ ಅಲ್ಲ. ಇನ್ನು ಕೆಲವರು ತುಂಬಾ ಪ್ರೀತಿಯಿಂದ ರಕ್ತ ಸಂಬಂಧಿ ಅಲ್ಲದವರನ್ನೂ ತನ್ನವರೇ ಎಂದು ಭಾವಿಸಿ ಕಟ್ಟುತ್ತಾರೆ.
ಯಾಕೆ ಕಟ್ಟುತ್ತಾರೆ?
ಆದರೆ ನಿಜವಾಗಿ ಇದು ಹಾಗಲ್ಲ. ಇದು ಒಡಹುಟ್ಟಿದವರು ಪರಸ್ಪರರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವ ದಿನವಾಗಿದೆ. ನನ್ನ ರಕ್ಷಣೆ ಮಾಡು ಸದಾಕಾಲ ಜೊತೆಗಿರು ಎಂಬ ಅರ್ಥದಲ್ಲಿ ಸಹೋದರಿ ಅಣ್ಣ ಅಥವ ತಮ್ಮನಿಗೆ ರಾಖಿಯನ್ನು ಕಟ್ಟುತ್ತಾಳೆ. ಪರಸ್ಪರರ ಸಂತೋಷ ಮತ್ತು ಒಳ್ಳೆಯತನಕ್ಕಾಗಿ ಹಾರೈಸಲಾಗುತ್ತದೆ. ಒಬ್ಬರನ್ನೊಬ್ಬರು ಪ್ರೇಮದಿಂದ ಕಾಣುವ ಮತ್ತು ಜವಾಬ್ಧಾರಿಗಳನ್ನು ನೆನಪಿಸಿಕೊಳ್ಳುವ ದಿನ ಇದು.
ಆದರೆ ಈಗ ಯಾರು ಬೇಕಾದರೂ ಕಟ್ಟುತ್ತಾರೆ. ಅಂತೆಯೇ ನಿಮ್ಮ ಕ್ರಶ್ ಕೂಡ ಅದರಲ್ಲಿ ಒಬ್ಬಳಾಗುವ ಸಾಧ್ಯತೆ ಇರಬಹುದು. ಆ ಬಲೆಯಿಂದ ಪಾರಾಗಲು ನೀವು ಬಳಸಬಹುದಾದ ಕೆಲವು ಸಾಲುಗಳು ಇಲ್ಲಿದೆ ಗಮನಿಸಿ.
ನೀವು ಬಳಸಬೇಕಿರುವ ಸಾಲುಗಳು
1) ನನಗೆ ಇದರಲ್ಲಿ ನಂಬಿಕೆ ಇಲ್ಲ ಹಾಗಾಗಿ ನಾನು ಕಟ್ಟಿಸಿಕೊಳ್ಳುವುದಿಲ್ಲ. ನೀನು ನನಗೆ ರಾಖಿ ಕಟ್ಟುವುದು ಬೇಡ.
2) ನಾನು ನಿನ್ನಂತ ಸುಂದರಿ ಹತ್ತಿರ ರಾಖಿ ಕಟ್ಟಿಸಿಕೊಳ್ಳಲು ಇಷ್ಟಪಡುವುದಿಲ್ಲ.
3) ನನ್ನನ್ನು ಕ್ಷಮಿಸಿ, ನಾನು ನಿನ್ನ ಬಗ್ಗೆ ಅಷ್ಟೊಂದು ಪವಿತ್ರ ಭಾವನೆ ಹೊಂದಿಲ್ಲ. ನನ್ನ ಭಾವನೆಗಳೇ ಬೇರೆ ಇದೆ.
4) ನಮ್ಮ ಸಂಬಂಧವನ್ನು ಇಷ್ಟಕ್ಕೆ ಸೀಮಿತಗೊಳಿಸಬೇಡ. ನಮ್ಮ ಸಂಬಂಧ ಇದಕ್ಕಿಂತ ಬೇರೆಯದು
5) ಸಹೋದರ ಮತ್ತು ಸಹೋದರಿ ಎನ್ನುವುದು ದೇವರು ಮಾಡಿದ್ದು, ಆದರೆ ನಾನು ನೀನು ಹಾಗಾಗಲು ಸಾಧ್ಯವಿಲ್ಲ. ಅದೇ ದೇವರು ನಮ್ಮಿಬ್ಬರ ಸಂಬಂಧವನ್ನು ಬೇರೆ ರೀತಿ ಸೃಷ್ಟಿ ಮಾಡಿದ್ದಾನೆ.
6) ಒಂದು ದಿನ ರಜಾ ಹಾಕಿ ಮನೆಯಲ್ಲಿದ್ದರೂ ಹೊರಬರಲೇಬೇಡಿ.
ಇದನ್ನೂ ಓದಿ: ಆರೋಗ್ಯಕ್ಕೂ ಹಿತ ಎನ್ನಿಸಿ, ಫಿಟ್ನೆಸ್ ಕಾಯ್ದುಕೊಳ್ಳಲು ನೆರವಾಗುವ ಸ್ಪೆಷಲ್ ರೆಸಿಪಿಯಿದು; ಓಟ್ಸ್-ಬೀಟ್ರೂಟ್ ಮಸಾಲಾ ದೋಸೆ ಮಾಡೋದು ಹೇಗೆ ನೋಡಿ
7) ನಾನು ನಿನ್ನನ್ನು ಪ್ರೀತಿಸುತ್ತೇನೆ, ರಕ್ಷಿಸುತ್ತೇನೆ ಆದರೆ ಅಣ್ಣನ ರೀತಿ ಅಲ್ಲ.
8) ನನಗೆ ನಿನ್ನ ಅಣ್ಣ ಎಂದು ಹೇಳಿಸಿಕೊಳ್ಳುವ ಆಸೆಯಿಲ್ಲ, ನಿನ್ನ ಮಕ್ಕಳ ಹತ್ತಿರ ಅಪ್ಪ ಎನಿಸಿಕೊಳ್ಳುವ ಆಸೆ ಇದೆ.
9) ನೀನು ಈಗ ರಾಖಿ ತಂದೆ ಅಲ್ವ? ನಾನು ನಾಳೆ ತಾಳಿ ತಂದ್ರೆ ಕಟ್ಟಿಸ್ಕೊತೀಯಾ? ಇಲ್ಲ ತಾನೆ? ಇದೂ ಹಾಗೇ
10) ಕಟ್ಟುವುದಾದರೆ ಕಟ್ಟಲಿ ಬಿಡಿ ಅವಳು ಸಿಗಲಿಲ್ಲ ಅಂದ್ರೂ ಅವಳ ಕೈ ಸೋಕಿದ ಅನುಭವವಾದರೂ ನಿಮ್ಮ ಜೀವನದಲ್ಲಿ ಉಳಿದುಕೊಳ್ಳಲಿ
11) ಅವಳು ರಾಖಿ ಕಟ್ಟಲಿ. ಅಲ್ಲಿಂದ ಸ್ನೇಹ ಆರಂಭಿಸಿ ನಂತರ ಪ್ರೀತಿ, ಆಮೇಲೆ ಮದುವೆ. ಹೀಗೆ ಆದವರು ಎಷ್ಟು ಜನ ಇದ್ದಾರೋ ಯಾರಿಗೆ ಗೊತ್ತು?
12) ನೀನು ರಾಖಿ ಕಟ್ಟಿದ ಮಾತ್ರಕ್ಕೆ ನಾನು ನಿನ್ನ ಅಣ್ಣನಾಗುವುದಿಲ್ಲ. ನೀನು ನನ್ನ ತಂಗಿಯೂ ಆಗುವುದಿಲ್ಲ.
ವಿಭಾಗ