Kannada Jokes: ಇವತ್ತಿನ ದಿನ ನಿಮಗೆ ತುಂಬಾ ಬೋರಿಂಗ್ ಅನಿಸ್ತಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ನಕ್ಕು ಹಗುರಾಗಿಸುವ ಜೋಕುಗಳು
Kannada Jokes: ಇವತ್ತಿನ ದಿನ ನಿಮಗೆ ತುಂಬಾ ಬೋರಿಂಗ್ ಅನಿಸ್ತಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ನಕ್ಕು ಹಗುರಾಗಿಸುವ ಜೋಕುಗಳು. ಒಮ್ಮೆ ನೀವೂ ಓದಿ.
1) ಗಣೇಶನ ಮಾತಿಗೆ ರಾಣಿ ಶಾಕ್
ರಾಣಿ-ಗಣೇಶ ವರ್ಷಗಟ್ಟಲೆ ಲವ್ ಮಾಡಿ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿಗೆ ಏನೋ ಜಗಳವಾಗಿ ರಾಣಿ ತವರು ಮನೆಗೆ ಹೋದವಳು ಬರಲೇ ಇಲ್ಲ. ಕೊನೆಗೆ ಗಣೇಶನೇ ಸೋತು ಕಾಲ್ ಮಾಡಿ ಮಾತನಾಡಿಸಿದ.
ಗಣೇಶ: ಚಿನ್ನಾ, ಇನ್ನೂ ಎಷ್ಟು ದಿನ ಅಂತ ಹೀಗೆ. ನಾನಿಲ್ಲಿ-ನೀನಲ್ಲಿ ಇರೋದಕ್ಕೆ ಮದುವೆಯಾಗಿದ್ದು? ಪ್ಲೀಸ್ ಅರ್ಥ ಮಾಡ್ಕೋ, ನೀನು ಇಲ್ಲದಿದ್ರೆ ನನಗೆ ಬದುಕೋಕೇ ಆಗಲ್ಲ. ಸಾವಿರ ಸಲ ಸಾರಿ ಕೇಳ್ತೀನಿ, ಬಂದುಬಿಡು.
ರಾಣಿ: ನಿನ್ನ ಪಕ್ಕ ಏನಿದೆ?
ಗಣೇಶ: ಗಾಜಿನ ಲೋಟ
ರಾಣಿ: ಅದನ್ನು ಎತ್ತಿ ಕೆಳಗೆ ಹಾಕು (ಫಳ್ ಅಂತ ಶಬ್ದ ಬಂತು)
ಗಣೇಶ: ಹಾಕಿದೆ ಕಣೆ
ರಾಣಿ: ಈಗ ಆ ಗಾಜಿನ ಚೂರೆಲ್ಲ ಸೇರಿಸಿ ಮತ್ತೆ ಲೋಟ ಮಾಡೋಕೆ ಆಗುತ್ತಾ? ನನ್ನ ಮನಸ್ಸೂ ಹಾಗೆಯೇ. ಒಡೆದು ಹೋದ ಮನಸ್ಸನ್ನು ಮತ್ತೆ ಒಂದು ಮಾಡೋಕೆ ಆಗಲ್ಲ. ನಿನ್ನ ಮೇಲೆ ನನಗೆ ಸಿಟ್ಟು ಹೋಗಿಲ್ಲ.
ಗಣೇಶ: ಹೋಗಲಿ ಬಿಡೆ
ರಾಣಿ: ಏನೋ ಹಾಗಂದ್ರೆ
ಗಣೇಶ: ಒಡೆದ ಲೋಟ ಒಂದು ಮಾಡೋಕೆ ಆಗಲ್ಲ. ಹೊಸ ಲೋಟ ತರ್ತೀನಿ. ಒಡೆದ ಮನಸ್ಸು ಒಂದು ಮಾಡೋಕೆ ಆಗಲ್ಲ. ಹೊಸ…
ರಾಣಿ: ಏಯ್, ನಿಲ್ಸೋ ಸಾಕು. ನೀನೇ ಬಂದು, ಎದುರಿಗೆ ಸಾರಿ ಕೇಳಿ ಕರ್ಕೊಂಡು ಹೋಗು.
2) ಇಡೀ ಮನೆ ಕ್ಲೀನ್ ಆದ್ರೂ…
ಟಿವಿ ಹಿಂದಿನ ಧೂಳ ಜಾಡ ತಗದೀರಿಲ್ಲಪ? ಹಬ್ಬಕ್ಕ ಇಡೀ ಮನೆ ಕ್ಲೀನ್ ಆದರೂ ಅದೊಂದು ಮಾತ್ರ ಹಂಗ ಇರುತ್ತ.
3) ಗಂಡ ಒಪ್ಪಲ್ಲ
ಪೊಲೀಸ್: ಪಾರ್ಕ್‌ನಲ್ಲಿ ಈ ಥರ ಕೂರಲು ಅನುಮತಿ ಇಲ್ಲ.
ಆಕೆ: ನಮಗೆ ಮದ್ವೆ ಆಗಿದೆ ಕಣ್ರೀ, ನಮ್ಮಿಷ್ಟ. ನೀವ್ಯಾರು ಕೇಳೋಕೆ?
ಪೊಲೀಸ್: ನಿಮ್ ಮನೆಯಲ್ಲಿ ಹೇಗೆ ಬೇಕಾದ್ರು ಇರಿ, ಯಾರು ಕೇಳ್ತಾರೆ?
ಅವನು: ಅದೇ ಸಮಸ್ಯೆ ಬಾಸು. ಇವಳ ಗಂಡ ಒಪ್ಪಲ್ಲ
4) ಬಸ್‌ನಲ್ಲಿ ಸೀಟೇ ಸಿಗೋದಿಲ್ಲ
ಮಹಿಳೆಯೊಬ್ಬರು ಬಸ್‌ನಿಲ್ದಾಣದಲ್ಲಿ ಯಾವುದೋ ಸಮೀಕ್ಷೆ ಮಾಡುತ್ತಿರುತ್ತಾರೆ. ಒಬ್ಬ ಪುರುಷನ ಬಳಿ ಮಾತು ಆರಂಭಿಸುತ್ತಾರೆ.
ಮಹಿಳೆ: ನಮಸ್ತೆ ಸರ್, ನಾನೊಂದು ಚಿಕ್ಕ ಸರ್ವೇ ಮಾಡುತ್ತಿದ್ದೇನೆ ,ನಿಮ್ಮ ಬಳಿ ಒಂದು ಪ್ರಶ್ನೆ ಕೇಳಬಹುದಾ???
ಪುರುಷ: ಕೇಳಿ ಮೇಡಂ
ಮಹಿಳೆ: ನೀವು ಬಸ್ ಹತ್ತಿದ್ದೀರಿ ಅಂದ್ಕೊಳಿ, ಸೀಟ್ ಸಿಕ್ಕಿದೆ ಅಂದ್ಕೊಳಿ. ಬಸ್ ಫುಲ್ ರಶ್ ಆಗಿದೆ ಅಂದ್ಕೊಳಿ. ಆಗ ಒಬ್ಬ ಮಹಿಳೆ ಬಸ್ ಹತ್ತುತ್ತಾಳೆ. ಆಕೆಗೆ ನೀವು ಸೀಟ್ ಕೊಡ್ತೀರಾ?
ಪುರುಷ: ಇಲ್ಲ ಮೇಡಂ, ಕೊಡಲ್ಲ
ಮಹಿಳೆ: ಆಕೆ ಗರ್ಭಿಣಿ ಆಗಿದ್ರೆ? ಅವಳ ಕಂಕುಳಲ್ಲಿ ಮಗು ಇದ್ರೆ? ಆಕೆಗೆ ಹೆಚ್ಚು ವಯಸ್ಸಾಗಿದ್ರೆ?
ಪುರುಷ: ಇಲ್ಲ ಮೇಡಂ, ನಾನು ಕೊಡಲ್ಲ
ಮಹಿಳೆ: ಎಷ್ಟು ಕೆಟ್ಟೋರು ನೀವು. ಅಬ್ಬಾ ಅದೆಷ್ಟು ಸ್ವಾರ್ಥ ನಿಮ್ಮದು. ನಿಮ್ಮಂಥವರನ್ನು ಏನಂತ ಕರೀಬೇಕು ಅಂತ್ಲೇ ಗೊತ್ತಾಗ್ತಿಲ್ಲ.
ಪುರುಷ: ನನ್ನಂಥವರನ್ನ ಬಸ್ ಡ್ರೈವರ್ ಅಂತಾರೆ ಮೇಡಂ. ಬಸ್ ಎಷ್ಟೇ ರಶ್ ಆದ್ರೂ ನಾವು ಯಾರಿಗೂ ಸೀಟ್ ಕೊಡೋಕೆ ಆಗಲ್ಲ.
5) ಮದುವೆ ಆಗ್ತಿದ್ದೆ ಆದ್ರೆ! ಹೀಗಾಗೋಯ್ತಲ್ಲೇ
ರಕ್ಷಾ ಬಂಧನದ ದಿನ ರಾಣಿ ವಿಪರೀತ ಡಲ್ ಆಗಿದ್ದಳು. ಅವಳ ಗೆಳತಿ ಅಶ್ವಿನಿ ಬಂದು, "ಏನೇ ರಾಣಿ ಇಷ್ಟು ಡಲ್ ಆಗಿದ್ದೀ ಇವತ್ತು? ಏನಾಯ್ತೇ ಅಂತ ಕೇಳಿದ್ಳು.
ರಾಣಿ: ರಕ್ಷಾ ಬಂಧನ ಕಣೆ. ನಾನೊಂದು ತಪ್ಪು ಮಾಡಿಬಿಟ್ಟೆ. ಅದಕ್ಕೇ ಬೇಜಾರಾಗ್ತಿದೆ.
ಅಶ್ಚಿನಿ: ಏನೇ ಅಂಥದ್ದು? ಏನು ಎಡವಟ್ಟು ಮಾಡಿಕೊಂಡೆ?
ರಾಣಿ: ಅದೇ, ಆ ರಾಜೇಶ ಇದ್ದಾನಲ್ಲ
ಅಶ್ವಿನಿ: ಹೌದು ಇದ್ದಾನೆ, ಕ್ಲಾಸ್ ಹುಡುಗೀರಿಗೆಲ್ಲ ಅವನು ಗೊತ್ತು. ನೀನು ಆಗಾಗ ಅವನ ಕಡೆ ನೋಡ್ತಾ ಇರ್ತೀಯಾ ಅಂತ ನನಗೂ ಗೊತ್ತು. ಏನಿವಾಗ?
ರಾಣಿ: ಅದೇ ಕಣೆ, ಅವನನ್ನ ಟೆಸ್ಟ್ ಮಾಡೋಣ ಅಂತ, ರಾಖಿ ತಗೊಂಡು ಹೋಗಿ ಮುಂದೆ ನಿಂತೆ. ಅವನು ಕೈ ಮುಂದೆ ಚಾಚಿದ, ಎಲ್ರೂ ನೋಡ್ತಾ ಇದ್ರೂ, ಅನ್ಯಾಯವಾಗಿ ರಾಖಿ ಕಟ್ಟಿಯೇಬಿಟ್ಟೆ.
ಅಶ್ವಿನಿ: ಹೋಗಲಿ ಬಿಡು. ಆಗಿದ್ದು ಆಗೋಯ್ತು
ರಾಣಿ: ವಿಷಯ ಅದಲ್ವೇ, ರಾಖಿ ಕಟ್ಟಿದ್ದಕ್ಕೆ ಅವನು 2 ಸಾವಿರ ರೂಪಾಯಿ ಗಿಫ್ಟ್ ಕೊಟ್ಟ. ನಾನು ಆತುರ ಪಡದಿದ್ರೆ ಅವನೇ ಪ್ರಪೋಸ್ ಮಾಡ್ತಿದ್ನೋ ಏನೋ, ಇನ್ನೂ ಏನೆಲ್ಲ ಗಿಫ್ಟ್ ಕೊಡ್ತಿದ್ನೋ ಅಂತ ಯೋಚನೆ ಮಾಡಿಮಾಡಿ ಬೇಜಾರಾಗ್ತಿದೆ.
6) ಮರೆವು ಮತ್ತು ಮದ್ದು
ಮನಃಶಾಸ್ತ್ರಜ್ಞೆ: ನಿಮಗೆ ಮರೆವು ಬರುವ ಸಂದರ್ಭ ಯಾವುದು? ಪದೇಪದೆ ಮರೆತುಹೋಗುವ ಮೂರು ವಿಷಯಗಳನ್ನು ನೆನಪಿಸಿಕೊಳ್ಳಲು ಸಾಧ್ಯವೇ
ರಮೇಶ: ಚಂದದ ಹುಡುಗಿ ನನ್ನ ಕಡೆಗೆ ಪ್ರೀತಿಯಿಂದ ನೋಡಿ ಮುಗುಳ್ನಕ್ಕಾಗ ಮರೆವು ಬರುತ್ತದೆ. ನನಗೆ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ ಎನ್ನುವುದು ಮರೆತು ಹೋಗುತ್ತೆ.
ಮನಃಶಾಸ್ತ್ರಜ್ಞೆ: ಈ ಸಮಸ್ಯೆಗೊಂದು ಮದ್ದು ಇದೆ. ಸುಲಭವಾಗಿ ಪರಿಹರಿಸಬಹುದು.
ರಮೇಶ: ಏನದು ಮೇಡಂ?
ಮನಃಶಾಸ್ತ್ರಜ್ಞೆ: ಮುಂದಿನ ಸಲ ಬರುವಾಗ ನಿಮ್ಮ ಹೆಂಡತಿ ಮತ್ತು ಮಗಳನ್ನು ಕರೆದುಕೊಂಡು ಬನ್ನಿ. ನಾನು ಇದೇ ಪ್ರಶ್ನೆ ಕೇಳ್ತೀನಿ, ನೀವು ಇದೇ ಉತ್ತರ ಕೊಡಿ. ಅವರಿಬ್ಬರು ಸೇರಿ ಇಲ್ಲಿಯೇ ಔಷಧ ಕೊಡ್ತಾರೆ.
8) ಅಲರಾಂ ಒಬ್ಬರದು, ಶಿಸ್ತು ಮತ್ತೊಬ್ಬರದು
ರಮೇಶ, ಸುರೇಶ ಒಂದೇ ರೂಮ್ ಶೇರ್ ಮಾಡಿಕೊಂಡಿದ್ದರು. ರಮೇಶ ಅಚ್ಚುಕಟ್ಟಿನ ಹುಡುಗ, ಶಿಸ್ತು. ಸುರೇಶ ಇಷ್ಟಬಂದಂತೆ ಬದುಕುವವ. ಆದರೆ ಪ್ರತಿದಿನ ಅಲಾರಾಂ ಇಡೋದು ಮಾತ್ರ ಮಿಸ್ ಮಾಡ್ತಾ ಇರಲಿಲ್ಲ. ಅದನ್ನು ಅಫ್ ಕೂಡ ಮಾಡ್ತಾ ಇರಲಿಲ್ಲ.
ರಮೇಶ: ಅಲ್ವೋ, ನೀನು ಏಳಲ್ಲ, ಮಾಡಲ್ಲ. ಅಲಾರಾಂ ಯಾಕೋ ಇಡ್ತೀಯಾ? ಪ್ರತಿದಿನ ನಾನೇ ಆಫ್ ಮಾಡಬೇಕು.
ಸುರೇಶ: ನನ್ನ ಜೊತೆ ಸೇರಿ ನೀನು ಹಾಳಾದೆ ಅಂತ ಯಾರು ಅನ್ನಬಾರದು ಅಲ್ವಾ? ಅದಕ್ಕೆ ಪ್ರತಿದಿನ ನಿನಗಾಗಿ ನಾನೇ ಅಲಾರಾಂ ಇಡ್ತೀನಿ. ನೀನು ಕಾಫಿ ಬೆರೆಸಿದ ಪರಿಮಳ ಬಂದ ಮೇಲೆಯೇ ಏಳ್ತೀನಿ.
9) ಪವರ್‌ಬ್ಯಾಂಕ್
ಕಾಲೇಜಿನಲ್ಲಿ ಎಲ್ಲ ಅಕೌಂಟ್ ಮಾಡಿಸೋಕೆ ಪರದಾಡ್ತಾ ಇದ್ದಾಗ ರಮೇಶ ಮಾತ್ರ "ನನ್ಹತ್ರಾನೇ ಬ್ಯಾಂಕ್ ಇದೆ ಕಣ್ರೋ" ಅನ್ನುತ್ತಿದ್ದ. ಕುತೂಹಲ ತಡೆಯೋಕೆ ಆಗದೆ ಸುರೇಶ ಕೇಳಿಯೇ ಬಿಟ್ಟ. "ಮಗಾ, ನಿನ್ನದು ಯಾವ ಬ್ಯಾಂಕೋ". ತಾಳೋ ತೋರಿಸ್ತೀನಿ ಅಂತ ಕಿಸೆಗೆ ಕೈಹಾಕಿದ ರಮೇಶ ಪವರ್‌ಬ್ಯಾಂಕ್ ತೆಗೆದುತೋರಿಸಿದ.
10) ಪಾಸ್‌ವರ್ಡ್
ಹೆಂಡತಿ: ರೀ, ನಿಮ್ಮ ಇಮೇಲ್ ಪಾಸ್‌ವರ್ಡ್ ಕೊಡ್ರೀ.
ಗಂಡ: ಯಾಕೆ? ಯಾರಿಗಾದ್ರೂ ನನ್ನ ಇಮೇಲ್ ಕೊಟ್ಟಿದ್ಯಾ? ನಿನ್ನದೇ ಕೊಡಬಹುದಿತ್ತು.
ಹೆಂಡತಿ: ರೀ, ನಿಮ್ಮ ಇಮೇಲ್ ಕಟ್ಕೊಂಡು ಏನಾಗಬೇಕು? ಪಾಸ್‌ವರ್ಡ್ ಏನಿಟ್ಟೀರಿ ಹೇಳಿ ಸಾಕು.
ಗಂಡ: ಅದು, ಅದು, ಅದು
ಹೆಂಡತಿ: ಎಲ್ರೀ ಇದೆ ಫೋನು, ನನ್ನ ಹೆಸರು ಪಾಸ್‌ವರ್ಡ್ ಇರಬೇಕು. ಇನ್ನೂ ಅವಳ ಹೆಸರೇ ಇದ್ರೆ ನಾಳೆ ಫೋನ್ ಒಡೆದು ಹಾಕ್ತೀನಿ ಅಷ್ಟೇ.
11) ಓಡೋಗ್ಬಿಟ್ರು
ರಮೇಶ: ಅವರದ್ದೇ ಮಗಾ ಚಾನ್ಸು. ಕೊನೆಗೂ ಅಂದುಕೊಂಡಿದ್ದು ಸಾಧಿಸಿಯೇ ಬಿಟ್ರು.
ಸುರೇಶ: ಏನೋ ಅದು? ಅರ್ಥ ಆಗೋ ಥರ ಹೇಳು.
ರಮೇಶ: ನೋಡಿದ್ಯಾ, ಕೊನೆಗೂ ಇಷ್ಟಪಟ್ಟವರು ಊರುಬಿಟ್ಟು ಓಡಿಹೋದ್ರು.
ಸುರೇಶ: ಅಯ್ಯೋ, ಅವರೆಲ್ಲೋ ಓಡೋದ್ರು. ನಡ್ಕೊಂಡೇ ಹೋಗಿ ಬಸ್ ಹತ್ತಿದ್ರು. ಇವನು ಹಿಂದೆ ಬಾಗಿಲಿಗೆ ಹತ್ತಿದ, ಅವಳು ಮುಂದೆ ಬಾಗಿಲಿಗೆ ಹತ್ತಿದ್ಲು. ನಾನೇ ನೋಡಿದೆ.
ಹೆಂಡತಿಗೆ ದೇವರು ಕೊಟ್ಟ ವರ
ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು. ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.
ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.
1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.
2) ನನ್ನ ಗಂಡನ ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.
3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.
4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.
5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.
ದೇವರು: ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.
ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.
ದೇವರು: ತಥಾಸ್ತು.
ಹೆಂಡತಿಯು ಒಂದು ಮೊಬೈಲ್ ಫೋನ್ ಆಗಿ ಬದಲಾದಳು.
13) WHATS APP STATUS
ನಮ್ಮ ನೋವಿಗೆ ಸ್ಪಂದಿಸುವವರು ಯಾರು ಇಲ್ಲ ಅಂತ ದೇವರು "WHATS APP STATUS" ಕೊಟ್ಟಿದ್ದಾನೆ. ಕೆಲವೊಂದು ನೋವುಗಳನ್ನು ಹಂಚಲೆಂದೇ ಫೇಸ್‌ಬುಕ್‌ನಲ್ಲಿ ಶೇರ್ ಆಪ್ಷನ್ ಕೊಟ್ಟಿದ್ದಾನೆ.
14) ಕನ್ನಡಿ
ಒಬ್ಬಳು ಯುವತಿ ಸನ್ಯಾಸಿ ಹತ್ತಿರ ಹೋಗಿ ತುಂಬಾ ಬೇಸರದಿಂದ ತನ್ನ ನೋವು ತೋಡಿಕೊಂಡಳು.
ಯುವತಿ: ಸ್ವಾಮಿ, ಅಹಂಕಾರ ತಪ್ಪು ಅಂತ ಗೊತ್ತು. ಆದರೆ ಏನು ಮಾಡೋದು, ಕನ್ನಡಿ ಎದುರು ನಿಂತರೆ ನನ್ನಷ್ಟು ಸುಂದರಿ ಯಾರೂ ಇಲ್ಲ ಅನ್ನಿಸುತ್ತೆ. ಹೊರಗೆ ಓಡಾಡುವಾಗ ಎಲ್ಲರೂ ನನ್ನನ್ನೇ ನೋಡ್ತಿದ್ದಾರೆ ಅನ್ನಿಸುತ್ತೆ.
ಸನ್ಯಾಸಿ: ಮಗಳೇ, ಇದು ಅಹಂಕಾರವಲ್ಲ ತಪ್ಪು ತಿಳುವಳಿಕೆ ಮತ್ತು ಭ್ರಮೆ. ಕ್ರಮೇಣ ಸರಿಯಾಗುತ್ತೆ, ಯೋಚಿಸಬೇಡ.
15) ವ್ಯತ್ಯಾಸ ಏನು?
ಕಾರಕ್ಕೂ ಅಹಂಕಾರಕ್ಕೂ ಏನು ವ್ಯತ್ಯಾಸ
ಕಾರ ತಿಂದ್ರೆ ನಾವೇ ನೀರು ಕುಡಿತೀವೆ, ಅಹಂಕಾರಿ ಆದ್ರೆ ಸುತ್ತಲೂ ಇರುವವರು ನೀರು ಕುಡಿಸ್ತಾರೆ.
ಗಮನಿಸಿ: ಈ ಜೋಕ್‌ಗಳು ಫಾರ್ವರ್ಡ್ ಜೋಕುಗಳಾಗಿದ್ದು ಸಾಮಾಜಿಕ ಜಾಲತಾಣಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ವಿಭಾಗ