ಕನ್ನಡ ಅಂಕಲಿಪಿ: ಬಣ್ಣ ಬಣ್ಣದ ಚಿತ್ತಾರದಿಂದಲೇ ಮಕ್ಕಳಿಗೆ ಕನ್ನಡ ಕಲಿಸಿ; 1ರಿಂದ 5 ವರ್ಷದ ಪುಟಾಣಿಗಳಿಗೆ ಇದು ಹೇಳಿ ಮಾಡಿಸಿದ ಪುಸ್ತಕ
ಓದೋದಿಲ್ಲ ಎಂದು ಹಟ ಮಾಡುವ ಮಕ್ಕಳಿಗೂ ಇಷ್ಟವಾಗುತ್ತೆ ಈ ಪುಸ್ತಕ. ಬಣ್ಣ ಬಣ್ಣದ ಪುಟಗಳನ್ನು ಕಂಡು ಮಕ್ಕಳೇ ಇದನ್ನು ಕೈಯ್ಯಲ್ಲಿ ಹಿಡಿದು ನೋಡುತ್ತಾರೆ. ಇಂಗ್ಲೀಷ್‌ನಲ್ಲಿ ಮಾತ್ರವಲ್ಲ ನಮ್ಮ ಕನ್ನಡದಲ್ಲೂ ಇರಬೇಕು ಇಂತಹ ಪುಸ್ತಕ ಎಂದು ಕಾರ್ಟೂನ್ ಚಿತ್ರಗಳಿಂದ ಮಕ್ಕಳ ಕಲಿಕೆಗಾಗಿ ಅಶ್ವಿನಿ ಶಾನಭಾಗ್ ಬರೆದ ಪುಸ್ತಕದಲ್ಲಿ ಏನಿದೆ ನೋಡಿ.
ಪುಟಾಣಿ ಮಕ್ಕಳಿಗೆ ಮೊದಲ ಗುರು ತಾಯಿಯಾಗಿರುತ್ತಾಳೆ. ಅದೇ ರೀತಿ ತಾಯಿಯೊಬ್ಬರು ತಮ್ಮ ಮಗುವಿಗೆ ಕನ್ನಡ ಕಲಿಸಲು ಬೇಸಿಕ್ ಪುಸ್ತಕ ಹುಡುಕುವಾಗ ಕನ್ನಡದಲ್ಲಿ ಎಲ್ಲ ವಿಷಯಗಳನ್ನೂ ಒಂದರಲ್ಲೇ ಒಳಗೊಂಡಿರುವ ಪುಸ್ತಕ ಸಿಗಲಿಲ್ಲ. ಇನ್ನು ಬೇಸಿಕ್ ಇಂಗ್ಲೀಷ್ ಪುಸ್ತಕಗಳು ಸಾಕಷ್ಟಿದ್ದವು ಹಾಗಾಗಿ ಇವರು ತಮ್ಮ ಮಗವಿಗೆ ಹೇಗೆ ಕನ್ನಡ ಕಲಿಯಲು ಒಂದು ಉತ್ತಮ ಪುಸ್ತಕ ಬೇಕೋ ಹಾಗೇ ಇನ್ನೂ ಹಲವರಿಗೆ ಇದರ ಅವಶ್ಯಕತೆ ಇರುತ್ತದೆ ಎಂದು ಅರಿತು ಪುಸ್ತಕ ಬರೆದಿದ್ದಾರೆ. ಇದರಲ್ಲಿ ಮಕ್ಕಳಿಗೆ ಸಾಮಾನ್ಯವಾಗಿ ಬೇಕಾದ ಎಲ್ಲಾ ವಿಷಯಗಳ ಮಾಹಿತಿಯನ್ನು ನೀಡಲಾಗಿದೆ. ಮಕ್ಕಳಿಗೆ ಬೇಗ ಆಕರ್ಷಣೆಯಾಗುವುದು ಬಣ್ಣಗಳು.
ಸಾಕಷ್ಟು ಮಕ್ಕಳು ಕಾರ್ಟೂನ್‌ಬಗ್ಗೆ ಹೆಚ್ಚು ಕುತೂಹಲ ಹೊಂದಿರಲು ಕಾರಣವೇ ಈ ಬಣ್ಣಗಳು. ಅದರಂತೆ ಈ ಪುಸ್ತಕದಲ್ಲೂ ಬಣ್ಣಗಳನ್ನು ಬಳಸಿ ಅಂದವಾದ ಚಿತ್ರಗಳನ್ನು ರಚಿಸಿ ಮಕ್ಕಳಿಗೆ ಆಕರ್ಷಣೆಯೊಂದಿಗೆ ಕಲಿಕೆಯಾಗುವಂತೆ ಮಾಡಲಾಗಿದೆ. ಈ ‘ಕನ್ನಡ ಅಂಕಲಿಪಿ’ ಯಾವ ವಿಷಯಗಳನ್ನು ಒಳಗೊಂಡಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ವಾರ
ತಿಂಗಳು
ಋತು
ಗ್ರಹ
ಸೌರವ್ಯೂಹ
ಮಗ್ಗಿ
ಒಂದ್ ರಿಂದ ಹತ್ತು - ಕನ್ನಡ ಸಂಖ್ಯೆಗಳು
ಮರಗಳು
ಪಕ್ಷಿ
ಕಾಡುಪ್ರಾಣಿ
ಸಾಕುಪ್ರಾಣಿ
ಕಸುಬಗಳು / ವೃತ್ತಿ
ಕಟ್ಟಡಗಳ ಹೆಸರು
ವರ್ಣಮಾಲೆ
ಕಾಗುಣಿತ
ಹೂವುಗಳ ಹೆಸರು
ಹಣ್ಣುಗಳು
ಇದನ್ನೂ ಓದಿ: Inspiring Quotes: ಜೀವನಕ್ಕೆ ಈ ಮಾತುಗಳೇ ಸ್ಪೂರ್ತಿ; ನಿಮ್ಮ ಇಡೀ ವಾರಕ್ಕೆ ಪ್ರೇರಣೆ ನೀಡಬಲ್ಲ ಸುಭಾಷಿತಗಳನ್ನು ಇಲ್ಲಿ ಡೌನ್ಲೋಡ್ ಮಾಡಿ
ತರಕಾರಿ
ಬಣ್ಣಗಳು
ಆಕಾರಗಳು
ದೇಹದ ಅಂಗಾಂಗಳು
ವಾರಗಳು
ಕಾಲಗಳು
ಗಾದೆಗಳು
ದಿಕ್ಕುಗಳು
ನಮ್ಮ ಸೌರ ಮಂಡಲ
ಕರ್ನಾಟಕ ನಕಾಶೆ
ಭಾರತದ ನಕಾಶೆ
ವಿಶ್ವದ ಭೂಪಟ (ಖಂಡಗಳು)
ಇವೆಲ್ಲವನ್ನೂ ನೀಡಲಾಗಿದೆ. 28 ಪುಟಗಳ ಈ ಪುಸ್ತಕವನ್ನು ಮಕ್ಕಳು ತುಂಬಾ ಇಷ್ಟಪಟ್ಟು ಓದುವಂತಿದೆ. 1 ರಿಂದ 5 ವರ್ಷದ ಮಕ್ಕಳಿಗೆ ಕನ್ನಡ ಕಲಿಯಲು ತುಂಬಾ ಉಪಯುಕ್ತವಾಗುವಂತಿದೆ. ಸಾಮಾನ್ಯವಾಗಿ ಎಲ್ಲರೂ ಆಂಗ್ಲ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಕಲಿಸಲು ನೋಡುವ ಈ ದಿನಗಳಲ್ಲಿ ಕನ್ನಡದ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸುವುದು ಈ ಮೇಲಿನ ಎಲ್ಲಾ ವಿಷಯಗಳ ಕುರಿತು ಅವರಿಗೆ ಸಾಮಾನ್ಯ ಮಾಹಿತಿಯನ್ನು ನೀಡುವುದು ಪ್ರತಿ ಪಾಲಕರ ಕರ್ತವ್ಯ.
“ಹಿಂದೆಲ್ಲ ಸಂಜೆ ಆಗುತ್ತಿದ್ದಂತೆ ಎಲ್ಲರೂ ಕೂಡು ಕುಟುಂಬದಲ್ಲಿ ಒಟ್ಟಾಗಿ ಕೂತು ಮಗ್ಗಿ, ಬಾಯಿಪಾಠ ಹೇಳುವ ದಿನವೊಂದಿತ್ತು. ಆದರೆ ಈಗ ಪ್ರತಿ ಮನೆಯಲ್ಲಿ ಒಂದೇ ಮಗು ಎಂಬಂತಾಗಿದೆ. ಇಂತಹ ದಿನಗಳಲ್ಲಿ ಈ ರೀತಿಯೊಂದು ಪುಸ್ತಕದ ಅವಶ್ಯಕತೆ ಇದೆ” ಎನ್ನುತ್ತಾರೆ ಲೇಖಕಿ: ಅಶ್ವಿನಿ ಶಾನಭಾಗ
ಪುಸ್ತಕ ಎಲ್ಲಿ ದೊರೆಯುತ್ತದೆ?
ಹರಿವು ಪ್ರಕಾಶನ ಈ ಪುಸ್ತಕವನ್ನು ಹೊರ ತಂತಿದೆ. ವೀರಲೋಕ, ಸ್ವಪ್ನ ಬುಕ್‌ಹೌಸ್, ಅಮೇಜಾನ್, ಪ್ಲೀಪ್ಕಾರ್ಟ್ ಎಲ್ಲ ಕಡೆ ನೀವು ಈ ಪುಸ್ತಕ ಕೊಂಡುಕೊಳ್ಳಬಹುದು.
ಬೆಲೆ
- 200 ರೂ
ಅಶ್ವಿನಿ ಶಾನಭಾಗ್ ಈ ಪುಸ್ತಕವನ್ನು ಬರೆದಿದ್ಧಾರೆ.