ತೂಕ ಇಳಿಸಿಕೊಳ್ಳಲು ಸಕ್ಕರೆ ಬದಲಿಗೆ ಜೇನುತುಪ್ಪ, ಬೆಲ್ಲ ಉಪಯೋಗಿಸ್ತಾ ಇದ್ದೀರಾ? ಹಾಗಾದ್ರೆ ಇವೆರಡರಲ್ಲಿ ಯಾವುದು ಬೆಸ್ಟ್ - ಇಲ್ಲಿದೆ ಮಾಹಿತಿ
Jaggery vs honey: ಜೇನುತುಪ್ಪ ಮತ್ತು ಬೆಲ್ಲ ಎರಡರಲ್ಲೂ ಹೆಚ್ಚಿನ ಕ್ಯಾಲೋರಿಗಳಿವೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಸಕ್ಕರೆ ತಿನ್ನುವುದನ್ನು ನಿಲ್ಲಿಸುತ್ತಾರೆ. ಆದರೆ ಬೆಲ್ಲ ಮತ್ತು ಜೇನುತುಪ್ಪ ಬಳಕೆ ಮಾಡುತ್ತಾರೆ. ಇದೆರಡರಲ್ಲಿ ಯಾವುದು ಉತ್ತಮ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಬಯಸುವವರು ಮೊದಲು ಮಾಡಬೇಕಾದ ಕೆಲಸವೆಂದರೆ ಸಕ್ಕರೆಯನ್ನು ತ್ಯಜಿಸುವುದು. ಆದರೆ ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಜೇನುತುಪ್ಪವನ್ನು ಆಯ್ಕೆ ಮಾಡಬಹುದು. ಈ ಎರಡನ್ನೂ ಹೋಲಿಕೆ ಮಾಡಿ ಮತ್ತು ಯಾವುದನ್ನು ಬಳಸುವುದು ಉತ್ತಮ? ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಕೊಳ್ಳಿ.
1. ಕ್ಯಾಲೋರಿಗಳು:
ಜೇನುತುಪ್ಪವು ಬೆಲ್ಲಕ್ಕಿಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಒಂದು ಚಮಚ ಜೇನುತುಪ್ಪದಲ್ಲಿ 64 ಕ್ಯಾಲೋರಿಗಳಿದ್ದರೆ, ಬೆಲ್ಲದಲ್ಲಿ 65 ರಿಂದ 70 ಕ್ಯಾಲೋರಿಗಳಿವೆ. ವ್ಯತ್ಯಾಸವು ಚಿಕ್ಕದಾಗಿದೆ ಆದರೆ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡಾಗ ಪರಿಣಾಮವು ಹೆಚ್ಚಾಗಿರುತ್ತದೆ.
2. ಪೋಷಕಾಂಶಗಳು:
ಜೇನುತುಪ್ಪವು ಆಂಟಿಆಕ್ಸಿಡೆಂಟ್‌ಗಳು, ಕಿಣ್ವಗಳು, ಕ್ಯಾಲ್ಸಿಯಂ , ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳನ್ನು ಹೊಂದಿದೆ . ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತಾರೆ. ಇದು ನೈಸರ್ಗಿಕವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕೂಡ ಇದೆ. ಇದು ಜೇನುತುಪ್ಪದಲ್ಲಿರುವ ಎಲ್ಲ ಗುಣಗಳನ್ನು ಹೊಂದಿರುವುದಿಲ್ಲ.
3. ಸಿಹಿ:
ಜೇನು ಬೆಲ್ಲಕ್ಕಿಂತ ಸಿಹಿಯಾಗಿದೆ . ಹಾಗಾಗಿ ಸ್ವಲ್ಪವೇ ಸಾಕು. ಇದು ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ.
4. ಗ್ಲೈಸೆಮಿಕ್ ಇಂಡೆಕ್ಸ್:
ಜೇನುತುಪ್ಪದ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಬೆಲ್ಲಕ್ಕಿಂತ ಕಡಿಮೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು, ಜಿಐ ಕಡಿಮೆ ಇರಬೇಕು.
5. ಜೀರ್ಣಕ್ರಿಯೆ:
ಜೇನುತುಪ್ಪವು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಜೀರ್ಣಕ್ಕೆ ಸುಲಭ. ಇದರಲ್ಲಿರುವ ಕಿಣ್ವಗಳಿಂದಾಗಿ ಚಯಾಪಚಯ ಕ್ರಿಯೆಯೂ ವೇಗವಾಗಿರುತ್ತದೆ ಮತ್ತು ಕೊಬ್ಬು ಕೂಡ ಬೇಗನೆ ಕರಗುತ್ತದೆ. ಬೆಲ್ಲವು ಇದರಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ಕೊಬ್ಬು ಸುಲಭವಾಗಿ ಕರಗುವುದಿಲ್ಲ.
ಮೇಲಿನ ಎಲ್ಲಾ ವಿಷಯಗಳನ್ನು ಓದಿದ ನಂತರ, ಜೇನುತುಪ್ಪದ ಪ್ರಯೋಜನಗಳು ಹೆಚ್ಚು ಎಂದು ನೀವು ಅರ್ಥ ಮಾಡಿಕೊಂಡಿರುತ್ತೀರಿ. ಆದರೆ ಜೇನುತುಪ್ಪ ಮತ್ತು ಬೆಲ್ಲ ಯಾವ ಪ್ರಮಾಣದಲ್ಲಿ ಒಳ್ಳೆಯದು ಎಂದು ತಿಳಿಸಿದ್ದೇವೆ ನೋಡಿ.
ಜೇನುತುಪ್ಪ ಅಥವಾ ಬೆಲ್ಲ? ಯಾವ ಪ್ರಮಾಣದಲ್ಲಿ ಸೇವಿಸಬೇಕು
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನೀವು ದಿನಕ್ಕೆ ಒಂದು ಅಥವಾ ಎರಡು ಟೀಚಮಚ ಅಥವಾ 5 ರಿಂದ 10 ಗ್ರಾಂ ಜೇನುತುಪ್ಪವನ್ನು ತೆಗೆದುಕೊಳ್ಳಬಹುದು . ಬೆಲ್ಲವನ್ನು 10 ರಿಂದ 12 ಗ್ರಾಂಗಳ ನಡುವೆ ಮಾತ್ರ ತೆಗೆದುಕೊಳ್ಳಬೇಕು.
ಹೇಗೆ ಬಳಸುವುದು?
ಜೇನುತುಪ್ಪ ಮತ್ತು ಬೆಲ್ಲ ಎರಡರಲ್ಲೂ ಹೆಚ್ಚಿನ ಕ್ಯಾಲೋರಿಗಳಿವೆ. ಆದ್ದರಿಂದ ದಿನಕ್ಕೆ ಒಂದಕ್ಕಿಂತ ಹೆಚ್ಚು ಟೀಚಮಚವನ್ನು ತೆಗೆದುಕೊಳ್ಳಬೇಡಿ.
ಇವು ಸಕ್ಕರೆಯ ಎರಡೂ ರೂಪಗಳಾಗಿವೆ. ನೈಸರ್ಗಿಕ ಸಕ್ಕರೆಗಳು ಸಹ ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ ಇದನ್ನು ಮಿತವಾಗಿ ತೆಗೆದುಕೊಳ್ಳಬೇಕು.
ಸ್ಮೂಥಿಗಳು, ಸಿಹಿತಿಂಡಿಗಳು ಮತ್ತು ಸಿರಿಧಾನ್ಯಗಳಂತಹ ಬ್ರೇಕ್‌ಫಾಸ್ಟ್‌ಗಳಲ್ಲಿ ಜೇನುತುಪ್ಪ ಬಳಸಿ
ಪೋಷಕಾಂಶಗಳ ದೃಷ್ಟಿಯಿಂದ ಜೇನುತುಪ್ಪ ಮತ್ತು ಬೆಲ್ಲ ಎರಡೂ ಆರೋಗ್ಯಕರ. ಆದರೆ ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಹೆಚ್ಚು ತಿಂದರೂ ಪ್ರಯೋಜನವಿಲ್ಲ.