ಕನ್ನಡ ಸುದ್ದಿ  /  Lifestyle  /  Astrological Prediction For 23 September 2022

September 23rd Daily Horoscope: ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಇಂದು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ..!

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

23 ಸೆಪ್ಟೆಂಬರ್‌ 2022 ರಾಶಿಭವಿಷ್ಯ
23 ಸೆಪ್ಟೆಂಬರ್‌ 2022 ರಾಶಿಭವಿಷ್ಯ (PC: Freepik)

ಸೂರ್ಯೋದಯ: ಬೆಳಗ್ಗೆ06:10

ಸೂರ್ಯಾಸ್ತ: ಸಾಯಂಕಾಲ 06:17

ತಿಥಿ: ಕೃಷ್ಣ ತ್ರಯೋದಶಿ

ನಕ್ಷತ್ರ: ಮಾಘ (03:51 ಬೆಳಗ್ಗೆವರಗೆ), ಸೆಪ್ಟೆಂಬರ್ 24, ಪೂರ್ವ ಫಲ್ಗುಣಿ

ಮೇಷ (Aries)

ಹಣಕಾಸಿನ ವಿಷಯದಲ್ಲಿ ಅಹಿತಕರ ಆಶ್ಚರ್ಯವು ನಿಮ್ಮನ್ನು ಕಾಯುತ್ತಿದೆ. ಇಂದು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವೃತ್ತಿಪರ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ. ನಿಮ್ಮಲ್ಲಿ ಕೆಲವರು ರಜೆ ಪಡೆಯಲಿದ್ದೀರಿ. ಶೈಕ್ಷಣಿಕ ರಂಗದಲ್ಲಿ ಯೋಜನೆ ಮಾಡಿದರೆ ಮುಂದಿನ ಕೆಲಸ ಸುಲಭವಾಗಲಿದೆ.

ಅದೃಷ್ಟ ಸಂಖ್ಯೆ: 18

ಅದೃಷ್ಟ ಬಣ್ಣ: ಕೆಂಪು

ವೃಷಭ ರಾಶಿ (Taurus)

ನಿರೀಕ್ಷಿತ ಮೂಲದಿಂದ ನಿಮಗೆ ಹಣಕಾಸಿನ ಬೆಂಬಲ ಬರುತ್ತದೆ. ಕೆಲಸದ ವಿಚಾರದಲ್ಲಿ ಉದ್ವಿಗ್ನತೆಗಳು ಮನೆಯ ವಾತಾವರಣವನ್ನು ಹಾಳುಮಾಡಬಹುದು. ಆರೋಗ್ಯ ಸಮಸ್ಯೆಯಿಂದ ಬಳಲುವವರು ಚೇತರಿಸಿಕೊಳ್ಳುತ್ತಾರೆ. ಕುಟುಂಬದೊಂದಿಗೆ ಸಮಯ ಕಳೆಯುವುದು ನಿಮಗೆ ಖುಷಿ ನೀಡಲಿದೆ. ಆಧ್ಯಾತ್ಮದಲ್ಲಿ ಆಸಕ್ತಿ ಇರುವವರು ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ನೀಲಿ

ಮಿಥುನ (Gemini)

ವೃತ್ತಿಯಲ್ಲಿ ನೀವು ಕೈಗೊಳ್ಳುವ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಆಹಾರದ ಬಗ್ಗೆ ಎಚ್ಚರವಿರಲಿ, ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ರಜೆ ಪಡೆದು ಕುಟುಂಬದೊಂದಿಗೆ ಕಾಲ ಕಳೆಯಿದ್ದೀರಿ. ನೀವು ಶೈಕ್ಷಣಿಕ ರಂಗದಲ್ಲಿ ಅನುಕೂಲಕರವಾಗಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಅದೃಷ್ಟ ಸಂಖ್ಯೆ: 2

ಅದೃಷ್ಟ ಬಣ್ಣ: ಬಿಳಿ

ಕರ್ಕ (Cancer)

ನೀವು ಫಿಟ್ನೆಸ್‌ಗೆ ಆದ್ಯತೆ ನೀಡಲಿದ್ದೀರಿ. ನಷ್ಟದ ಮುನ್ಸೂಚನೆ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ಕೆಲಸದ ಸ್ಥಳದಲ್ಲಿ ಕೂಡಾ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಿ. ಸಣ್ಣ ಸಮಸ್ಯೆಯು ಮನೆಯ ವಾತಾವರಣವನ್ನು ಹಾಳುಮಾಡಲು ಬಿಡಬೇಡಿ. ಶೈಕ್ಷಣಿಕ ರಂಗದಲ್ಲಿ ಪ್ರಯತ್ನಗಳನ್ನು ಮಾಡುವವರಿಗೆ ಅನುಕೂಲಕರ ಸಮಯವನ್ನು ನಿರೀಕ್ಷಿಸಲಾಗಿದೆ.

ಅದೃಷ್ಟ ಸಂಖ್ಯೆ: 17

ಅದೃಷ್ಟ ಬಣ್ಣ: ಹಸಿರು

ಸಿಂಹ (Leo)

ಹಣವನ್ನು ಖರ್ಚು ಮಾಡುವತ್ತ ಜಾಗರೂಕರಾಗಿರಬೇಕು. ಎಲ್ಲಾ ಕಡೆಯಿಂದ ನಿಮಗೆ ಸಹಾಯ ಸಿಗುವುದರಿಂದ ಹೊಸ ಯೋಜನೆಯು ಸುಗಮವಾಗಿ ಮುಂದುವರಿಯುತ್ತದೆ. ದೈಹಿಕವಾಗಿ ಸದೃಢವಾಗಿರಲು ನೀವು ಹೆಚ್ಚು ಗಮನ ನೀಡಲಿದ್ದೀರಿ. ಕುಟುಂಬ ಜೀವನವು ಉತ್ತಮವಾಗಿ ಸಾಗುತ್ತದೆ, ಆದರೆ ಸ್ವಲ್ಪ ಉತ್ಸಾಹ ಬೇಕಾಗಬಹುದು. ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಸೂಕ್ತ ನಿರ್ಧಾರವು ಶೈಕ್ಷಣಿಕ ರಂಗದಲ್ಲಿ ಯಶಸ್ಸು ನೀಡಲಿದೆ.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ನೀಲಿ

ಕನ್ಯಾ (Virgo)

ಹಣಕಾಸಿನ ವಿಚಾರದಲ್ಲಿ ಸದೃಢರಾಗಲಿದ್ದೀರಿ. ನಿಯಮಿತ ಆಹಾರ ಸೇವನೆ ಮೂಲಕ ಆರೋಗ್ಯದ ವಿಚಾರದಲ್ಲಿ ಕೂಡಾ ನಿಗಾ ವಹಿಸಿ. ದೀರ್ಘಾವಧಿಯ ಕೆಲಸದ ಮಧ್ಯೆ ಕುಟುಂಬಕ್ಕೆ ಸ್ವಲ್ಪ ಸಮಯ ನೀಡಿ. ಈ ರಾಶಿಯ ಕೆಲವರಿಗೆ ವಿದೇಶ ಪ್ರಯಾಣ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ: 1

ಅದೃಷ್ಟ ಬಣ್ಣ: ಗಾಢ ಹಳದಿ

ತುಲಾ (Libra)

ನೀವು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಸಾಧ್ಯತೆಯಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಜಂಕ್‌ ಫುಡ್‌ಗಳನ್ನು ತಪ್ಪಿಸಿ. ವೃತ್ತಿಪರ ಚಿಂತೆಗಳು ನಿಮ್ಮನ್ನು ಮಾನಸಿಕವಾಗಿ ಉದ್ವಿಗ್ನಗೊಳಿಸುವ ಸಾಧ್ಯತೆಯಿದೆ. ಶುಭ ಸುದ್ದಿ ಕೇಳಲಿದ್ದೀರಿ. ಕೆಲಸದಲ್ಲಿರುವ ಸಹೋದ್ಯೋಗಿಗೆ ಸಹಾಯ ಹಸ್ತವನ್ನು ನೀಡುವುದು ಶೈಕ್ಷಣಿಕ ರಂಗದಲ್ಲಿ ನಿಮ್ಮ ಇಮೇಜ್ ಹೆಚ್ಚಿಸಲು ಸಹಾಯ ಮಾಡುತ್ತದೆ.

ಅದೃಷ್ಟ ಸಂಖ್ಯೆ: 9

ಅದೃಷ್ಟದ ಬಣ್ಣ: ಕೇಸರಿ

ವೃಶ್ಚಿಕ (Scorpio)

ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ಆರೋಗ್ಯ ಸುಧಾರಿಸಲಿದೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕೆಲವು ಆತಂಕದ ಕ್ಷಣಗಳು ಎದುರಾಗಬಹುದು. ಕುಟುಂಬದೊಂದಿಗೆ ಸಮಯ ಕಳೆಯಲಿದ್ದೀರಿ. ದೂರ ಪ್ರಯಾಣ ಸಾಧ್ಯತೆ ಇದೆ. ಸಾಮಾಜಿಕ ರಂಗದಲ್ಲಿ ಅಗತ್ಯ ಇರುವವರಿಗೆ ಉಪಕಾರ ಮಾಡುವುದರಿಂದ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ.

ಅದೃಷ್ಟ ಸಂಖ್ಯೆ: 3

ಅದೃಷ್ಟ ಬಣ್ಣ: ಕಡುಗೆಂಪು

ಧನು (Sagittarius)

ಉತ್ತಮ ಆರೋಗ್ಯವು ನಿಮ್ಮನ್ನು ಶಕ್ತಿಯುತವಾಗಿ ಮತ್ತು ಸಕಾರಾತ್ಮಕ ಮನಸ್ಸಿನ ಚೌಕಟ್ಟಿನಲ್ಲಿ ಇರಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ನೀವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ವೃತ್ತಿಪರ ರಂಗದಲ್ಲಿ ನಿಮ್ಮ ಶ್ರಮ ಇತರರಿಗೆ ತಿಳಿಯಲಿದೆ.

ಅದೃಷ್ಟ ಸಂಖ್ಯೆ: 8

ಅದೃಷ್ಟ ಬಣ್ಣ: ಗ್ರೇ

ಮಕರ ( Capricorn)

ನಿಮ್ಮ ಕೈಲಾದದ್ದನ್ನು ಮಾಡುವ ಗುರಿಯನ್ನು ಹೊಂದಿ. ನಿಮ್ಮ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತದೆ. ಬೇಡವಾದ ವಿಚಾರಗಳ ಬದಲು ಕೆಲಸದ ಬಗ್ಗೆ ಪ್ರಾಮುಖ್ಯತೆ ನೀಡಿ. ತೂಕ ಇಳಿಸುವತ್ತ ಕೆಲವರು ಗಮನ ಹರಿಸಲಿದ್ದಾರೆ. ವಾದ ವಿವಾದದಿಂದ ಮನೆಯ ವಾತಾವರಣ ಹಾಳು ಮಾಡಬೇಡಿ. ಆಸ್ತಿಯಿಂದ ನಿಮ್ಮ ಆರ್ಥಿಕ ವ್ಯವಸ್ಥೆ ಬಲವಾಗಲಿದೆ.

ಅದೃಷ್ಟ ಸಂಖ್ಯೆ: 18

ಅದೃಷ್ಟದ ಬಣ್ಣ: ಕಡು ಕಂದು

ಕುಂಭ (Aquarius)

ನಿಮಗೆ ಬರಬೇಕಿದ್ದ ಬಾಕಿ ಹಣ ಶೀಘ್ರದಲ್ಲೇ ವಾಪಸ್‌ ದೊರೆಯುವ ಸಾಧ್ಯತೆ ಇದೆ. ವೃತ್ತಿಪರ ವಿಚಾರದಲ್ಲಿ ಹೆಚ್ಚಿನ ಕೆಲಸ ನಿಮಗೆ ಹೊರೆಯಾಗಲಿದೆ. ಫಿಟ್ನೆಸ್‌ನತ್ತ ಗಮನ ಹರಿಸಿ. ನಿಮ್ಮ ಆತ್ಮೀಯರನ್ನು ಭೇಟಿಯಾಗುವುದು ನಿಮಗೆ ಖುಷಿ ನೀಡಲಿದೆ. ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ಶ್ರಮ ನಿಮಗೆ ಯಶಸ್ಸು ನೀಡಲಿದೆ.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ಕಡು ನೀಲಿ

ಮೀನ (Pisces)

ವೃತ್ತಿಯಲ್ಲಿಉತ್ತಮ ಗುಣಮಟ್ಟದ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲಿದ್ದೀರಿ. ನಿಮ್ಮ ಆರೋಗ್ಯ ಸುಧಾರಿಸಲಿದೆ. ಕಚೇರಿ ಒತ್ತಡದಿಂದ ಮನೆಯಲ್ಲಿನ ಶಾಂತಿ ಹಾಳುಮಾಡಬೇಡಿ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ನೀವು ಸ್ವಲ್ಪ ಎಚ್ಚರದಲ್ಲಿರುವುದು ಉತ್ತಮ.

ಅದೃಷ್ಟ ಸಂಖ್ಯೆ: 15

ಅದೃಷ್ಟ ಬಣ್ಣ: ಬಿಳಿ

ವಿಭಾಗ