ಚಳಿಗಾಲದಲ್ಲಿ ಕಾರಿನ ಬ್ಯಾಟರಿ ಬೇಗನೆ ಹಾಳಾಗಬಹುದು; ದೊಡ್ಡ ನಷ್ಟ ತಪ್ಪಿಸಲು ಹೀಗೆ ಮಾಡಿ -Auto Tips
Auto Tips: ಚಳಿಗಾಲದಲ್ಲಿಯೂನಿಮ್ಮ ಕಾರ್ ಬ್ಯಾಟರಿಯನ್ನು ನೀವು ಚೆನ್ನಾಗಿ ಇಡಬಹುದು. ಕೆಲವೊಂದು ಸರಳ ಟ್ರಿಕ್ಸ್ ಅನುಸರಿಸುವ ಮೂಲಕ ಬ್ಯಾಟರಿಯನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ನಿಮಗಾಗಿ ಸಲಹೆಗಳು ಇಲ್ಲಿವೆ.
ಶೀತ ವಾತಾವರಣದಲ್ಲಿ ಕಾರ್ ಬ್ಯಾಟರಿಗಳು ಬೇಗನೆ ಖಾಲಿಯಾಗುತ್ತವೆ. ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ ಹವಾಮಾನ ಹಠಾತ್ ಬದಲಾವಣೆ ಆಗುವುದರಿಂದ ಕಾರಿನಲ್ಲಿ ಬ್ಯಾಟರಿ ಸಮಸ್ಯೆ ಬೇಗನೆ ಕಾಣಿಸಿಕೊಳ್ಳುತ್ತದೆ. ತಾಪಮಾನ ಕಡಿಮೆಯಾದಂತೆ, ಬ್ಯಾಟರಿ ಸಾಮರ್ಥ್ಯವೂ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹೀಗಾದಾಗ ಕಾರನ್ನು ಸ್ಟಾರ್ಟ್ ಮಾಡಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ಚಳಿಗಾಲದಲ್ಲೂ ಸಹ ನಿಮ್ಮ ಕಾರ್ ಬ್ಯಾಟರಿಯನ್ನು ಆರೋಗ್ಯಕರವಾಗಿಡಲು ಕೆಲವು ಸುಲಭ ಮಾರ್ಗಗಳಿವೆ.
1. ನಿಯಮಿತ ಪರಿಶೀಲಿಸುತ್ತಿರಿ
ಚಳಿಗಾಲದಲ್ಲಿ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು, ಸರಿಯಾದ ಕಾಳಜಿ ತೆಗೆದುಕೊಳ್ಳುವುದು ಮುಖ್ಯ. ಮೊದಲನೆಯದಾಗಿ, ಬ್ಯಾಟರಿಯ ಟರ್ಮಿನಲ್‌ಗಳನ್ನು ಪರಿಶೀಲಿಸಿ ಮತ್ತು ಅಲ್ಲಿ ಯಾವುದೇ ತುಕ್ಕು ಇದೆಯೇ ಎಂದು ನೋಡಿ. ತುಕ್ಕು ಇದ್ದರೆ, ಅದನ್ನು ಅಡಿಗೆ ಸೋಡಾ ಮತ್ತು ನೀರಿನಿಂದ ಸ್ವಚ್ಛಗೊಳಿಸಿ. ಇದು ಕಾರಿನ ಬ್ಯಾಟರಿಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾರು ಸುಲಭವಾಗಿ ಸ್ಟಾರ್ಟ್ ಆಗುತ್ತದೆ.
2. ಬ್ಯಾಟರಿ ವಾರ್ಮರ್ ಬಳಸಿ
ನೀವು ಶೀತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಬ್ಯಾಟರಿ ವಾರ್ಮರ್ ಅನ್ನು ಖರೀದಿಸುವುದು ಪ್ರಯೋಜನಕಾರಿ. ಇದು ಬ್ಯಾಟರಿಯನ್ನು ಬೆಚ್ಚಗಾಗಿಸುತ್ತದೆ. ಜೊತೆಗೆ ಅದರ ಕಾರ್ಯಕ್ಷಮತೆಯನ್ನು ನಿರ್ವಹಿಸುತ್ತದೆ ಮತ್ತು ಬ್ಯಾಟರಿ ತ್ವರಿತವಾಗಿ ಬರಿದಾಗುವುದಿಲ್ಲ. ಅದರಲ್ಲೂ ತಾಪಮಾನ ತುಂಬಾ ಕಡಿಮೆ ಇರುವ ಪ್ರದೇಶದಲ್ಲಿ ಬ್ಯಾಟರಿ ವಾರ್ಮರ್ ಬಳಕೆ ತುಂಬಾ ಸಹಕಾರಿ ಆಗಿದೆ.
3. ಕಡಿಮೆ ದೂರದ ಪ್ರಯಾಣ ತಪ್ಪಿಸಿ
ಆಗಾಗ ಕಾರನ್ನು ಸ್ಟಾರ್ಟ್ ಮಾಡಿ ಕಡಿಮೆ ದೂರ ಕ್ರಮಿಸಿದರೆ ಬ್ಯಾಟರಿ ಬೇಗ ಖಾಲಿಯಾಗಬಹುದು. ಸಣ್ಣ ಪ್ರಯಾಣದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸಮಯ ಸಿಗದಿರುವುದು ಇದಕ್ಕೆ ಕಾರಣ. ಆದ್ದರಿಂದ, ಬ್ಯಾಟರಿಯನ್ನು ಸರಿಯಾಗಿ ಚಾರ್ಜ್ ಮಾಡಲು ದೀರ್ಘ ಪ್ರಯಾಣವನ್ನು ಮಾಡಲು ಪ್ರಯತ್ನಿಸಿ.
4. ಅಗತ್ಯವಾಗಿರುವುದನ್ನು ಮಾತ್ರ ಬಳಸಿ
ಕಾರಿನಲ್ಲಿ ಲೈಟ್‌ಗಳು, ಹೀಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳಂತಹ ಅನೇಕ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳಿವೆ. ಇದು ಬ್ಯಾಟರಿ ಶಕ್ತಿಯನ್ನು ಅನಗತ್ಯವಾಗಿ ಸೆಳೆಯುತ್ತದೆ. ಕಾರನ್ನು ಸ್ವಿಚ್ ಆಫ್ ಮಾಡುವ ಮೊದಲು ಇದನ್ನೆಲ್ಲ ಸ್ವಿಚ್ ಆಫ್ ಮಾಡಿ, ಇದರಿಂದ ಬ್ಯಾಟರಿಯ ಮೇಲೆ ಯಾವುದೇ ಒತ್ತಡವಿರುವುದಿಲ್ಲ ಮತ್ತು ಬಾಳಿಕೆ ಹೆಚ್ಚಾಗುತ್ತದೆ.
5. ಸಿಂಥೆಟಿಕ್ ತೈಲವನ್ನು ಬಳಸಿ
ಶೀತ ವಾತಾವರಣದಲ್ಲಿ ಕಾರ್ ಎಂಜಿನ್‌ಗಳಿಗೆ ಸಿಂಥೆಟಿಕ್ ಆಯಿಲ್ ಉತ್ತಮವಾಗಿದೆ. ಏಕೆಂದರೆ ಅದು ನಯವಾಗಿ ಹರಿಯುತ್ತದೆ ಮತ್ತು ಶೀತ ವಾತಾವರಣದಲ್ಲಿ ಎಂಜಿನ್ ಅನ್ನು ಬೇಗನೆ ಸ್ಟಾರ್ಟ್ ಮಾಡಲು ಸಹಕರಿಸುತ್ತದೆ. ಇದು ಬ್ಯಾಟರಿಯ ಮೇಲಿನ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ಇದು ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
6. ಬ್ಯಾಟರಿಯನ್ನು ಚಾರ್ಜ್ ಮಾಡಿ
ನಿಮ್ಮ ಕಾರು ದೀರ್ಘಕಾಲದವರೆಗೆ ಚಾಲನೆಯಲ್ಲಿಲ್ಲದಿದ್ದರೆ, ಬ್ಯಾಟರಿಯನ್ನು ಚಾರ್ಜ್ ಮಾಡಲು ಟ್ರಿಕಲ್ ಚಾರ್ಜರ್ ಅನ್ನು ಬಳಸಿ. ಇದು ಬ್ಯಾಟರಿಯನ್ನು ಆನ್ ಮಾಡದೆಯೇ ಚಾರ್ಜ್ ಮಾಡುತ್ತದೆ. ಇದರಿಂದ ಬ್ಯಾಟರಿ ಸಂಪೂರ್ಣವಾಗಿ ಬರಿದಾಗುವುದಿಲ್ಲ.
ಈ ಸುಲಭ ಸಲಹೆಗಳೊಂದಿಗೆ, ಚಳಿಗಾಲದಲ್ಲಿಯೂ ಸಹ ನಿಮ್ಮ ಕಾರ್ ಬ್ಯಾಟರಿಯನ್ನು ನೀವು ಚೆನ್ನಾಗಿ ಇಡಬಹುದು. ಈ ಮೂಲಕ ಬ್ಯಾಟರಿಯನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು.