ಸಿಎನ್‌ಜಿ ಅಥವಾ ಪೆಟ್ರೋಲ್ ಕಾರು; ಚಳಿಗಾಲದಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರು ಯಾವುದು? ಇಲ್ಲಿದೆ ಸಲಹೆ
CNG or Petrol Car: ಚಳಿಗಾಲದಲ್ಲಿ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಗ್ಯಾಸ್ ಫ್ರೀಜ್ ಆಗುವಂತೆ ಸಿಎನ್‌ಜಿ ಕಾರ್‌ಗಳ ಗ್ಯಾಸ್ ಕೂಡ ಫ್ರೀಜ್ ಆಗುತ್ತದೆ. ಈ ಕಾರಣದಿಂದ ಚಳಿಗಾಲದಲ್ಲಿ ಪೆಟ್ರೋಲ್‌ಗೆ ಹೋಲಿಸಿದರೆ, ಸಿಎನ್‌ಜಿ ಕಾರುಗಳು ಕಡಿಮೆ ಮೈಲೇಜ್ ನೀಡುತ್ತವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿವೆ. ಇದರಿಂದಾಗಿ ಇಂದು ಹೆಚ್ಚಿನ ಜನರು ಸಿಎನ್‌ಜಿ ಕಾರುಗಳತ್ತ ಮುಖ ಮಾಡಿದ್ದಾರೆ. ಕಂಪನಿಗಳು ತಮ್ಮ ಜನಪ್ರಿಯ ಮಾದರಿಗಳ ಸಿಎನ್‌ಜಿ ರೂಪಾಂತರಗಳನ್ನು ಪ್ರಾರಂಭಿಸಲು ಇದು ಕಾರಣವಾಗಿದೆ. ನೀವೂ ಹೊಸ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಸಿಎನ್‌ಜಿ ಅಥವಾ ಪೆಟ್ರೋಲ್ ಪೈಕಿ ಚಳಿಗಾಲದಲ್ಲಿ ಯಾವ ಕಾರು ಉತ್ತಮ ಮೈಲೇಜ್ ನೀಡುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು.
ಯಾವ ವಾಹನವು ಉತ್ತಮ ಮೈಲೇಜ್ ನೀಡುತ್ತದೆ ಎಂಬುದು ಅನೇಕ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಸಿಎನ್‌ಜಿ ವಾಹನಗಳು ಭರ್ಜರಿ ಮಾರಾಟ ಕಾಣಲು ಮುಖ್ಯ ಕಾರಣ ಎಂದರೆ ಈ ವಾಹನಗಳು ಕಡಿಮೆ ಮಾಲಿನ್ಯವನ್ನು ಹರಡುತ್ತವೆ ಮತ್ತು ಉತ್ತಮ ಮೈಲೇಜ್ ನೀಡುತ್ತವೆ.
ಪೆಟ್ರೋಲ್ ಕಾರು vs CNG ಕಾರು: ಮೈಲೇಜ್‌ನಲ್ಲಿ ಯಾರು ಮುಂದು?
ಚಳಿಗಾಲದಲ್ಲಿ, ನಿಮ್ಮ ಮನೆಯಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಗ್ಯಾಸ್ ಫ್ರೀಜ್ ಆಗುವಂತೆ ಸಿಎನ್‌ಜಿ ಸಿಲಿಂಡರ್‌ನಲ್ಲಿರುವ ಗ್ಯಾಸ್ ಕೂಡ ಫ್ರೀಜ್ ಆಗುತ್ತದೆ. ಚಳಿಗಾಲದಲ್ಲಿ ಪೆಟ್ರೋಲ್‌ಗೆ ಹೋಲಿಸಿದರೆ ಸಿಎನ್‌ಜಿ ಕಾರುಗಳು ಕಡಿಮೆ ಮೈಲೇಜ್ ನೀಡಲು ಇದೇ ಕಾರಣ. ಚಳಿಗಾಲದಲ್ಲಿ ಪೆಟ್ರೋಲ್ ಫ್ರೀಜ್ ಆಗುವುದಿಲ್ಲ. ಇದರಿಂದಾಗಿ ಪೆಟ್ರೋಲ್ ಮೂಲಕ ಚಲಿಸುವ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ.
ಚಳಿಗಾಲದಲ್ಲಿಯೂ ನಿಮ್ಮ ಕಾರು ಹೆಚ್ಚು ಮೈಲೇಜ್ ನೀಡಬೇಕೆಂದು ನೀವು ಬಯಸಿದರೆ, ಕಾರನ್ನು ನಿಯಮಿತವಾಗಿ ಚಾಲನೆ ಮಾಡಿ. ಅದನ್ನು ಸರ್ವಿಸ್ ಮಾಡಿ ಮತ್ತು ಸರಿಯಾಗಿ ಚಾಲನೆ ಮಾಡಿ. ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಕಳಪೆ ಚಾಲನೆಯು ಮೈಲೇಜ್ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಚಳಿಗಾಲದಲ್ಲಿ ಯಾವುದೇ ಸಮಸ್ಯೆಯನ್ನು ತಪ್ಪಿಸಲು, ನೀವು ಯಾವಾಗಲೂ ನಿಮ್ಮ ಸಿಎನ್‌ಜಿ ಟ್ಯಾಂಕ್ ಅನ್ನು ಪೂರ್ಣವಾಗಿ ಇಟ್ಟುಕೊಳ್ಳಬೇಕು ಅಥವಾ ಕನಿಷ್ಠ ಅರ್ಧಕ್ಕಿಂತ ಹೆಚ್ಚು ಮಾಡಿ ಇಟ್ಟಿರಿ. ಇದು ನಿಮ್ಮ ವಾಹನದಲ್ಲಿ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆ.
CNG ಕಾರುಗಳ ಮೈನಸ್ ಪಾಯಿಂಟ್
ನೀವು ಸಿಎನ್‌ಜಿ ಕಾರನ್ನು ಖರೀದಿಸುತ್ತಿದ್ದರೆ, ನಿಮಗೆ ಬೂಟ್ ಸ್ಪೇಸ್ ಸಿಗುವುದಿಲ್ಲ. ಅಂದರೆ ನಿಮ್ಮ ಕಾರಿನ ಸಿಎನ್‌ಜಿ ಸಿಲಿಂಡರ್ ಬೂಟ್ ಸ್ಪೇಸ್‌ನ ಜಾಗದಲ್ಲಿ ಇರುವುದರಿಂದ ಈ ವಿಚಾರದಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಇಂದು ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಸಿಎನ್‌ಜಿ ಕಂಪನಿ ಈ ಸಮಸ್ಯೆಯನ್ನು ತೆಗೆದುಹಾಕಿವೆ. ಈ ಎರಡೂ ಕಂಪನಿಗಳು ಸಿಎನ್‌ಜಿ ಸಿಲಿಂಡರ್‌ನೊಂದಿಗೆ ಪೂರ್ಣ ಬೂಟ್ ಸ್ಥಳವನ್ನು ಸಹ ಒದಗಿಸಲಾಗುತ್ತಿದೆ. ಆದರೆ ಪ್ರಸ್ತುತ, ಈ ಎರಡು ಕಂಪನಿಗಳನ್ನು ಹೊರತುಪಡಿಸಿ, ಇತರ ಕಂಪನಿಗಳ ಸಿಎನ್‌ಜಿ ಕಾರುಗಳು ಬೂಟ್ ಸ್ಪೇಸ್ ಸಮಸ್ಯೆಯನ್ನು ಎದುರಿಸುತ್ತಿದೆ.
ವಾಹನಗಳಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ