Best Bike in India: ಇದು ಭಾರತದ ಅತ್ಯುತ್ತಮ 'ಆಲ್ ರೌಂಡರ್' ಬೈಕ್! ಕಡಿಮೆ ಬೆಲೆ- ಅಧಿಕ ಫೀಚರ್ಸ್, ಹೆಚ್ಚಿನ ಮೈಲೇಜ್...
Best bike in India : ಭಾರತದ ಅತ್ಯುತ್ತಮ ಬೈಕ್ ಹುಡುಕುತ್ತಿದ್ದೀರಾ? ಹಾಗಾದ್ರೆ ಒಮ್ಮೆ ಹೊಸ ಬಜಾಜ್ ಪಲ್ಸರ್ N125 ಅನ್ನು ಪರಿಶೀಲಿಸಿ. ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಗಳೊಂದಿಗೆ ಬರುವ ಈ ಬೈಕ್ ನ ಸಂಪೂರ್ಣ ಫೀಚರ್ ಗಳನ್ನು ತಿಳಿದುಕೊಳ್ಳಿ.
ಬಜಾಜ್ ಪಲ್ಸರ್ ಎನ್125 ವಿಮರ್ಶೆ: ಬಜಾಜ್ ಆಟೋ ಇತ್ತೀಚೆಗೆ ತನ್ನ ಅತ್ಯಂತ ಕಡಿಮೆ ಬೆಲೆಯ ಹೊಸ ಪೀಳಿಗೆಯ ಪಲ್ಸರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಹೆಸರು ಪಲ್ಸರ್ ಎನ್125. ಇದು ದೇಶದ ಇತರ 125 ಸಿಸಿ ಸ್ಪೋರ್ಟಿ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ. ಬಜಾಜ್ ಪಲ್ಸರ್ N125 ಒದಗಿಸುವ ಎಲ್ಲಾ ಫೀಚರ್‌ಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಬಜಾಜ್ ಕಂಪನಿಯು ತನ್ನ ಪಲ್ಸರ್ ಸರಣಿಯ ಬೈಕ್‌ಗಳನ್ನು ಹೆಚ್ಚಿಸುತ್ತಿದೆ. ಹೊಸ ತಲೆಮಾರಿನ ಪಲ್ಸರ್ ಬೈಕ್‌ಗಳನ್ನು ಪರಿಚಯಿಸುತ್ತಿದೆ. ಕಂಪನಿಯು ಮೊದಲು N250 ಮತ್ತು F250 ಬೈಕ್‌ಗಳನ್ನು ಪರಿಚಯಿಸಿತ್ತು. ಬಳಿಕ ಕಳೆದ ವರ್ಷ N160 ಪರಿಚಯಿಸಿತ್ತು. ಇದೀಗ ಕಂಪನಿಯು ಹೊಸ ಪಲ್ಸರ್ N150 ಪರಿಚಯಿಸಿದೆ.
ನೂತನ ಬೈಕ್‌ನ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯಾಗಿದೆ. ಎಂಜಿನ್ ಈ ಹಿಂದಿನ ಪಲ್ಸರ್ P150ನಲ್ಲಿರುವುದೇ ಆಗಿದೆ. ಆದರೆ, ಇವೆರಡು ಬೈಕ್‌ಗಳ ನಡುವೆ ಮೊದಲ ನೋಟಕ್ಕೆ ಹಲವು ವ್ಯತ್ಯಾಸಗಳನ್ನು ಗುರುತಿಸಬಹುದು. ಇತರೆ ಪಲ್ಸರ್‌ಗಳಿಂದ ಪಡೆದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಕಂಪನಿಯು ಇದನ್ನು ಇನ್ಫಿನಿಟಿ ಡಿಸ್ಪ್ಲೇ ಕನ್ಸೋಲ್ ಎಂದು ಕರೆದಿದೆ. ಅನಲಾಗ್ ಟ್ಯಾಕೋಮೀಟರ್ ಇದರಲ್ಲಿದೆ. ಗಿಯರ್ ಸ್ಥಾನ ಸೂಚಕ ಇತ್ಯಾದಿಗಳನ್ನು ಡಿಸ್‌ಪ್ಲೇಯಲ್ಲಿ ನೋಡಬಹುದು. ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳಿಂದ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಹೊಂದಿದೆ. ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ.ಬೈಕ್‌ಗೆ ಸದೃಢ ಲುಕ್ ನೀಡುವ ಇಂಧನ ಟ್ಯಾಂಕ್ ಇದೆ. ಇದು 14 ಲೀಟರ್ ಪೆಟ್ರೊಲ್ ತುಂಬಿಡುವ ಸಾಮರ್ಥ್ಯ ಇದೆ. ಇದು ಪ್ರತಿಲೀಟರ್‌ಗೆ 45-50 ಕಿ.ಮೀ. ಮೈಲೇಜ್ ನೀಡಲಿದೆ. ಬಜಾಜ್ ಆಟೋ 17-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ 90/90 17 ಟೈರ್ ಮತ್ತು ಹಿಂಭಾಗದಲ್ಲಿ 120/80 17 ಟೈರಿದೆ. 149.68 cc, ನಾಲ್ಕು-ಸ್ಟ್ರೋಕ್, ಸಿಂಗಲ್-ಸಿಲಿಂಡರ್-FI, ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಇದು 8,500 ಆವರ್ತನಕ್ಕೆ 14.3 ಬಿಎಚ್‌ಪಿ ಮತ್ತು 6,000 ಆವರ್ತನಕ್ಕೆ 13.5 ಎನ್‌ಎಂ ಟಾರ್ಕ್ ಒದಗಿಸುತ್ತದೆ.
ಬಜಾಜ್ ಪಲ್ಸರ್ N125: ಫೀಚರ್‌ಗಳು
ಬಜಾಜ್ N125 ನ ಆರಂಭಿಕ ಆವೃತ್ತಿಗೆ "ಬೇಸ್ LED ಡಿಸ್ಕ್" ಎಂದು ಹೆಸರಿಸಲಾಗಿದೆ. ಮೂಲ ರೂಪಾಂತರವು ಸಣ್ಣ ಎಲ್‌ಸಿಡಿ ಕ್ಲಸ್ಟರ್ ಅನ್ನು ಪಡೆಯುತ್ತದೆ. ಇದು ಎಡಭಾಗದಲ್ಲಿದೆ. ಟೆಲ್ಟೇಲ್ ದೀಪಗಳು ಬಲಕ್ಕೆ ಇದೆ. ಇದು ದೂರಮಾಪಕ, ಇಂಧನ ಗೇಜ್, ಸ್ಪೀಡೋಮೀಟರ್ ಮುಂತಾದ ಮಾಹಿತಿಯನ್ನು ತೋರಿಸುತ್ತದೆ. ಇದಾದ ಬಳಿಕ ಟಾಪ್ ಎಂಡ್ ಎಲ್ಇಡಿ ಡಿಸ್ಕ್ ಬಿಟಿ ಪಲ್ಸರ್ ಆವೃತ್ತಿ ಬಿಡುಗಡೆ ಮಾಡಲಾಗಿದೆ. ಇದು ದೊಡ್ಡ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಇದು ಸಮಯ, ಇಂಧನ ಗೇಜ್, ಓಡೋಮೀಟರ್, ಸ್ಪೀಡೋಮೀಟರ್ ಅನ್ನು ತೋರಿಸುತ್ತದೆ. ಇದು ಬ್ಲೂಟೂತ್ ಸಂಪರ್ಕವನ್ನು ಪಡೆದಿದೆ. ಆದರೆ, ಟ್ಯಾಕೋಮೀಟರ್-ಗೇರ್ ಸೂಚಕ ಮಿಸ್ ಆಗಿದೆ.
ಎಲ್ಇಡಿ ಡಿಸ್ಕ್ ವರ್ಷನ್ ಪಲ್ಸರ್ ಸಾಂಪ್ರದಾಯಿಕ ಕಿಕ್ ಮತ್ತು ಆಟೋ ಸ್ಟಾರ್ಟ್ ಹೊಂದಿದೆ. ಆದರೆ ಎಲ್ಇಡಿ ಡಿಸ್ಕ್ ಬಿಟಿ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಹೊಂದಿದೆ. ಎರಡೂ ವರ್ಷನ್‌ಗಳು ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲೈಟ್ ಮತ್ತು ಎಲ್ಇಡಿ ಹೆಡ್‌ಲೈಟ್‌ಗಳನ್ನು ಹೊಂದಿವೆ.
ಬಜಾಜ್ ಪಲ್ಸರ್ N125 ಸ್ಪೆಸಿಫಿಕೇಷನ್‌ಗಳು
ಪಲ್ಸರ್ ಎನ್125 ಬೈಕ್‌ಗಾಗಿ ಬಜಾಜ್ ಆಟೋ ಹೊಸ 124.58 ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಇದು 8,500 rpm ನಲ್ಲಿ 11.83 bhp ಪವರ್ ಮತ್ತು 6,000 ಆರ್‌ಪಿಎಂನಲ್ಲಿ 11 ಎನ್‌ಎಮ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್ ಬಾಕ್ಸ್‌ಗೆ ಸಂಪರ್ಕ ಹೊಂದಿದೆ.
ಬಜಾಜ್ ಪಲ್ಸರ್ ಎನ್125 ಬೆಲೆ ಎಷ್ಟು?
ಬಜಾಜ್ ಪಲ್ಸರ್ N125 ಬೆಲೆ 94,707 ಮತ್ತು 98,707 ರೂ. ಎರಡೂ ಬೆಲೆಗಳು ಎಕ್ಸ್ ಶೋರೂಂ ಆಗಿದೆ. ಈ ಬೈಕಿನ ಮೈಲೇಜ್ ಸುಮಾರು 60 kmpl ಆಗಿದೆ.
ಬಜಾಜ್ ಪಲ್ಸರ್ N125 ಹಾರ್ಡ್‌ವೇರ್
ಬಜಾಜ್ ಆಟೋ ಪಲ್ಸರ್ N125 ಗಾಗಿ ಎಲ್ಲಾ-ಹೊಸ ಫ್ರೇಮ್ ಅನ್ನು ಬಳಸುತ್ತದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಹೊಂದಿದೆ. ಬ್ರೇಕಿಂಗ್‌ಗಾಗಿ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಇದೆ. ಇದರಲ್ಲಿ ಎಬಿಎಸ್ ಇಲ್ಲ. ಗ್ರಾಹಕರು ಸಿಬಿಎಸ್ ಮಾತ್ರ ಪಡೆಯುತ್ತಾರೆ. ಬಜಾಜ್ ಪಲ್ಸರ್ ಎನ್ 125 ಹೋಂಡಾ ಶೈನ್ ಎಸ್‌ಪಿ 125, ಟಿವಿಎಸ್ ರೈಡರ್ 125 ಮತ್ತು ಹೀರೋ ಎಕ್ಸ್‌ಟ್ರೀಮ್ 125 ಆರ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ.