Best Family Cars: ನೀವು ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸುವಿರಾ? ಸಣ್ಣ ಕುಟುಂಬಕ್ಕೆ ಸೂಕ್ತವಾಗುವ ಈ ಕಾರುಗಳನ್ನು ನೋಡಿ
Best Family Cars: 2025ರ ಹೊಸ ವರ್ಷದ ಸಂಭ್ರಮ ಹೆಚ್ಚಿಸಿಕೊಳ್ಳಲು ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದೀರಾ? ಹಾಗಾದ್ರೆ ನಿಮಗಾಗಿ ಮಾರುಕಟ್ಟೆಯಲಿ ಹಲವು ಕಾರುಗಳು ಕಾಯುತ್ತಿವೆ. ವಿಶೇಷವಾಗಿ ಸಣ್ಣ ಕಾರು ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.
Best Family Cars: ಈಗ ಹೆಚ್ಚಾಗಿ ನಾಲ್ಕು ಸೀಟಿನ ಸಣ್ಣ ಕಾರು ಖರೀದಿ ಬಹುತೇಕರ ಆಯ್ಕೆ. ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳು ಮಾತ್ರವಲ್ಲದೇ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ವಾಸಿಸುವವರು ಈಗ ಪುಟ್ಟ ಕಾರು ಖರೀದಿಸಲು ಬಯಸುತ್ತಾರೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ನೀಡುವ ಕಾರು ಖರೀದಿಸಲು ಆದ್ಯತೆ ನೀಡುತ್ತಾರೆ. 2025ರ ಹೊಸ ವರ್ಷದಲ್ಲಿಯಾದರೂ ತಮ್ಮ ಬಹುನಿರೀಕ್ಷೆಯ ಕಾರು ಖರೀದಿ ಕನಸನ್ನು ಈಡೇರಿಸಿಕೊಳ್ಳಬೇಕೆಂದು ಬಯಸುವವರಿಗೆ ಇಲ್ಲೊಂದಿಷ್ಟು ಆಯ್ಕೆಗಳಿವೆ.
ಮಾರುತಿ ಸುಜುಕಿ ಡಿಜೈರ್
ಮಾರುತಿ ಸುಜುಕಿ ಡಿಜೈರ್ ಬಹುಬೇಡಿಕೆಯ ಕಾರು. ಈ ಕಾರಿನ ಬೆಲೆ 6.79 ಲಕ್ಷ ರೂ.ನಿಂದ 10.14 ಲಕ್ಷ ರೂ.ವರೆಗಿದೆ (ಎಕ್ಸ್ ಶೋ ರೂಂ). ಇದು 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 24.79 ರಿಂದ 33.73 ಕಿಮೀ ಮೈಲೇಜ್ ನೀಡುತ್ತದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್, ಆಟೋ ಎಸಿ ಮುಂತಾದ ಹಲವು ಫೀಚರ್‌ಗಳನ್ನು ಹೊಂದಿದೆ.
ಮಾರುತಿ ಸುಜುಕಿ ವ್ಯಾಗನಾರ್
ಮಾರುತಿ ಸುಜುಕಿ ವ್ಯಾಗನಾರ್ ಹ್ಯಾಚ್‌ಬ್ಯಾಕ್ 5.54 ಲಕ್ಷ ರೂಪಾಯಿಯಿಂದ 7.33 ಲಕ್ಷ ರೂ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 1-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನಲ್ಲಿ ಲಭ್ಯ. 23.56 ರಿಂದ 34.05 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 7 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಸೇರಿದಂತೆ ವಿವಿಧ ಫೀಚರ್‌ಗಳನ್ನು ಹೊಂದಿದೆ.
ಹುಂಡೈ ಐ20
ಹುಂಡೈ ಐ20 ಹ್ಯಾಚ್‌ಬ್ಯಾಕ್ ದರ 7.04 ಲಕ್ಷ ರೂನಿಂದ 11.21 ಲಕ್ಷ (ಎಕ್ಸ್ ಶೋ ರೂಂ) ರೂ.ವರೆಗಿದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 16 ರಿಂದ 20 ಕಿ.ಮೀ. ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ಹೊಂದಿದೆ.
ರೆನೊ ಕ್ವಿಡ್
ರೆನೊ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಎಕ್ಸ್ ಶೋ ರೂಂ ದರ 4.70 ಲಕ್ಷದಿಂದ 6.45 ಲಕ್ಷ ರೂ. ಇದೆ. ಇದು ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 1-ಲೀಟರ್ ಗೆ 21.46 ರಿಂದ 22.3 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ಫೀಚರ್‌ಗಳನ್ನು ಹೊಂದಿದೆ.
ಟಾಟಾ ಆಲ್ಟ್ರೋಜ್
ಟಾಟಾ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಇದರ ಬೆಲೆ 6.50 ಲಕ್ಷ ರೂನಿಂದ 11.16 ಲಕ್ಷ (ಎಕ್ಸ್ ಶೋ ರೂಂ) ರೂ.ವರೆಗಿದೆ. 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ, 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯ. ಇದು 19.33 ರಿಂದ 26.20 ಕಿ.ಮೀ. ಮೈಲೇಜ್ ನೀಡುತ್ತದೆ.
ಟಾಟಾ ಟಿಯಾಗೊ
ಟಾಟಾ ಟಿಯಾಗೊ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಸಣ್ಣ ಕುಟುಂಬಕ್ಕೆ ಹೆಚ್ಚು ಸೂಕ್ತವಾಗಿದೆ. ಇದರ ಎಕ್ಸ್‌ಶೋರೂಂ ದರ. 5 ಲಕ್ಷ ರೂ.ನಿಂದ 8.75 ಲಕ್ಷ ರೂ.ವರೆಗಿದೆ. ಇದು 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಹೊಂದಿದೆ. ಇದು 19.43 ರಿಂದ 28.06 ಕಿ.ಮೀ. ಮೈಲೇಜ್ ನೀಡುತ್ತದೆ. ಇದು ಅನೇಕ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.